For Quick Alerts
  ALLOW NOTIFICATIONS  
  For Daily Alerts

  ಜೇನುಗೂಡು: ಶಶಾಂಕ್ ಅರಿಶಿಣ ಹಚ್ಚಿದ್ದು ಮಾಯಾಗಾ? ದಿಯಾ?

  By ಎಸ್ ಸುಮಂತ್
  |

  ಮದುವೆಯ ಸಂಭ್ರಮ ಎಂದರೆ ಹೇಗಿರಬೇಕು..? ಹೇಗಿರುತ್ತದೆ ಎಂಬುದನ್ನು 'ಜೇನುಗೂಡು' ಧಾರಾವಾಹಿ ನೋಡಿದರೆ ತಿಳಿಯುತ್ತದೆ. ಕಳೆದ ಎರಡ್ಮೂರು ವಾರದಿಂದಲೂ ನಡುಕೋಟೆ ಮನೆಯಲ್ಲಿ ಒಂದೊಂದೆ ಒಂದೊಂದೇ ಶಾಸ್ತ್ರಗಳು ಶುರುವಾಗಿವೆ. ಉತ್ತರ ಕರ್ನಾಟಕ ಭಾಗದ ಎಲ್ಲಾ ಶಾಸ್ತ್ರಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಈ ರೀತಿಯೆಲ್ಲಾ ಶಾಸ್ತ್ರ ಇದೆಯಾ ಎಂಬ ಆಶ್ಚರ್ಯದ ಜೊತೆಗೆ ನೋಡುಗರಿಗೂ ಖುಷಿ ಸಿಗುತ್ತಿದೆ. ಆದರೆ ಈಗ ಅರಿಶಿನ ಶಾಸ್ತ್ರದಲ್ಲಿ ನೋಡುಗರಿಗೂ ಗೊಂದಲ ಮೂಡಿದಂತಾಗಿದೆ.

  ಮದುವೆಯ ಮನೆಯಲ್ಲಿ ಶಾಸ್ತ್ರಗಳ ಖುಷಿ ಒಂದು ಕಡೆಯಾದರೆ ಕಸ್ಟ್ಯೂಮ್ ಖುಷಿ ಮತ್ತೊಂದು ಕಡೆ ಇರುತ್ತದೆ. ಆ ಶಾಸ್ತ್ರಕ್ಕೆ ತಕ್ಕಂತೆ ಕಾಸ್ಟ್ಯೂಮ್ ಹಾಕಿಕೊಳ್ಳುವುದು ಇದೆಯಲ್ಲ ಅದು ತುಂಬಾ ಮುಖ್ಯವಾಗುತ್ತದೆ. ನಡುಕೋಟೆ ಮನೆ ಮಂದಿ ಹಾಗೂ ಡಾಕ್ಟರ್ ಶ್ರೀಧರ್ ಮನೆಯವರ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಇಡೀ ಮಂದಿ ಮದುವೆಗೆಂದು ಅಲಂಕಾರ ಮಾಡಿರುವ ಸೆಟ್‌ಗೆ ಮ್ಯಾಚ್ ಆಗುವಂತಹ ಕಾಸ್ಟ್ಯೂಮ್ ಹಾಕಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  ಕ್ರಿಶ್ ಅಲ್ಲಿಗೆ ಬಂದಿದ್ದಾದರೂ ಏಕೆ?

  ಕ್ರಿಶ್ ಅಲ್ಲಿಗೆ ಬಂದಿದ್ದಾದರೂ ಏಕೆ?

  ಕ್ರಿಶ್‌ಗೆ ದಿಯಾ ಮೇಲೆ.. ಮಾಯಾಗೆ ಶಶಾಂಕ್ ಮೇಲೆ ಮನಸ್ಸಾಗಿದೆ. ಲೈಟ್ ಆಗಿ ಲವ್ವಾಗಿದೆ. ಶತ್ರುಗಳ ಶತ್ರು ನಮಗೆ ಮಿತ್ರ ಎಂಬ ಗಾದೆ ಮಾತೊಂದಿದೆಯಲ್ಲ ಮಾಯಾ ಮತ್ತು ಕ್ರಿಶ್ ಜೋಡಿ ಆ ರೀತಿಯಾಗಿದೆ. ಶಶಾಂಕ್ ನನ್ನು ಕಂಡರೆ ಕ್ರಿಶ್‌ಗೆ ಆಗಲ್ಲ. ದಿಯಾಳನ್ನು ಕಂಡರೆ ಮಾಯಾಳಿಗೆ ಆಗಲ್ಲ. ಸೋ ಇಬ್ಬರು ಸೇರಿ ಕಿತಾಪತಿ ಮಾಡಲು ಆರಂಭಿಸಿದ್ದಾರೆ. ಅದಕ್ಕೆಂದೆ ಕ್ರಿಶ್ ನೆಪ ಹುಡುಕಿ ದಿಯಾ ಮನೆಗೆ ಎಂಟ್ರಿ ಕೊಟ್ಡಿದ್ದಾನೆ. ಹೇಗಾದರೂ ಮಾಡಿ ಇಬ್ಬರ ಮದುವೆ ಮುರಿಯಲು ಹೊರಟಿದ್ದಾನೆ.

  ಕ್ರಿಶ್ ಮಾಡುತ್ತಿದ್ದಾನೆ ಕಿತಾಪತಿ

  ಕ್ರಿಶ್ ಮಾಡುತ್ತಿದ್ದಾನೆ ಕಿತಾಪತಿ

  ಮದುವೆಯಲ್ಲಿ ಅರಿಶಿನ ಶಾಸ್ತ್ರ ತುಂಬಾ ಮಹತ್ವದ್ದಾಗಿದೆ. ಇದು ಒಂದು ಜಿಲ್ಲೆ ಅಥವಾ ಒಂದು ರಾಜ್ಯಕ್ಕೆ ಸೀಮಿತವಲ್ಲ. 'ಜೇನುಗೂಡು' ಧಾರಾವಾಹಿಯಲ್ಲಿ ನಡೆಯುತ್ತಿರುವ ಒಂದೊಂದು ಶಾಸ್ತ್ರಗಳು ಉತ್ತರ ಕರ್ನಾಟಕಕ್ಕೆ ಸೀಮಿತವಾದರೂ ಅರಿಶಿನ ಶಾಸ್ತ್ರ ಮಾತ್ರ ಎಲ್ಲಾ ಕಡೆಗೂ ಬಳಕೆಯಲ್ಲಿದೆ. ಇದರಲ್ಲಿ ಮೊದಲು ಮಧುಮಗನಿಗೆ ಹಚ್ಚಿದ ಅರಿಶಿನದಲ್ಲಿಯೇ ಉಳಿಸಿ, ಅದಕ್ಕೆ ಒಂದಿಷ್ಟು ಬೆರೆಸಿ ಮಧುಮಗಳಿಗೆ ಹಚ್ಚಬೇಕಾಗುತ್ತದೆ. ಆಗ ಶಾಸ್ತ್ರ ಪೂರ್ತಿಯಾಗುತ್ತದೆ. ಈ ಶಾಸ್ತ್ರ ಪೂರ್ತಿ ಮಾಡಬಾರದು ಎಂದೇ ಕ್ರಿಶ್ ದಿಯಾ ಮನೆಗೆ ಬಂದಿರುವುದು. ಕುಕ್ಕಿ ಅಂಡ್ ಗ್ಯಾಂಗ್ ತಂದಿರುವ ಅರಿಶಿನವನ್ನು ಕದಿಯಲು ಹೊರಟಿರುವುದು.

  ಕ್ರಿಶ್ ಕೊಟ್ಟ ಅರಿಶಿನಕ್ಕೆ ಮಾಯಾ ಖುಷಿ

  ಕ್ರಿಶ್ ಕೊಟ್ಟ ಅರಿಶಿನಕ್ಕೆ ಮಾಯಾ ಖುಷಿ

  ಕಡೆಗೂ ಕ್ರಿಶ್ ತಾನಂದುಕೊಂಡಿದ್ದನ್ನು ಸಾಧಿಸಿದ್ದಾನೆ. ಡಾಕ್ಟರ್ ಶ್ರೀಧರ್ ಮನೆಯಿಂದ ಅರಿಶಿನದ ಡಬ್ಬಿಯನ್ನು ಕದ್ದಿದ್ದಾನೆ. ಅದನ್ನು ಮಾಯಾ ಕೈಗೆ ತಲುಪಿಸಿದ್ದಾನೆ. ಇದನ್ನು ಕಂಡ ಮಾಯಾ ಹಿರಿಹಿರಿ ಹಿಗ್ಗಿದ್ದಾಳೆ. ಶಾಸ್ತ್ರ ನನ್ನಿಂದ ಪೂರ್ಣ ಆಗುತ್ತೆ. ನಾನೇ ಶಶಾಂಕ್‌ನ ನಿಜವಾದ ಹೆಂಡತಿಯಾಗುತ್ತೀನಿ ಅಂತ ಹಗಲು ಕನಸು ಕಾಣುವುದರ ಜೊತೆಗೆ, ತಾನೇ ಆ ಅರಿಶಿನವನ್ನು ಮೈ ಕೈಗೆ ಹಚ್ಚಿಕೊಂಡಿದ್ದಾಳೆ. ಕ್ರಿಶ್ ಮಾಡಿದ ಕೆಲಸಕ್ಕೆ ಖುಷಿ ಪಟ್ಟಿದ್ದಾಳೆ.

  ನಿಜವಾದ ಅರಿಶಿನ ಸೇರಿದ್ದು ದಿಯಾಗೆ?

  ಕ್ರಿಶ್ ಅರಿಶಿನ ಡಬ್ಬ ತಂದುಕೊಟ್ಟ ತಕ್ಷಣ ಮಾಯಾ ಖುಷಿಯಾಗಿದ್ದಾಳೆ. ಆದರೆ ಅದು ನಿಜವಾದ ಅರಿಶಿನ ಆಗಿರಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಕುಕ್ಕಿ ಅಂಡ್ ಅಂಡ್ ಗ್ಯಾಂಗ್ ಅರಿಶಿನ ತಂದ ಬಾಕ್ಸ್ ಕ್ಯಾಪ್ ನೀಲಿ ಬಣ್ಣದ್ದು, ಆದರೆ ಮಾಯಾ ಕೈ ಸೇರಿದ ಡಬ್ಬಿ ಪಿಂಕ್ ಕಲರ್ ಆಗಿದೆ. ದಿಯಾಗೆ ಹಚ್ಚಲು ಸಾರಿಕಾ ಕಲಸಿ ಇಟ್ಟ ಅರಿಶಿನವನ್ನು ಕ್ರಿಶ್ ತೆಗೆದುಕೊಂಡು ಹೋಗಿರುವ ಸಾಧ್ಯತೆ ಹೆಚ್ಚಾಗಿದೆ. ಈ ಭ್ರಮೆಯಲ್ಲಿಯೇ ಮಾಯಾ ತೇಲುತ್ತಿದ್ದಾಳೆ.

  English summary
  Jeenugoodu Serial August 2nd Episode Written Update. Here is the details.
  Tuesday, August 2, 2022, 23:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X