ಜೇನುಗೂಡು: ಮಾಯಾಳಿಗಾಗಿ ಸಂಬಂಧದಲ್ಲಿ ಬಿರುಕು ಮೂಡುವಂತೆ ಮಾಡಿಕೊಳ್ಳುತ್ತಾನಾ ಶಶಾಂಕ್..?
ಅವಾರ್ಡ್ ಫಂಕ್ಷನ್‌ನಲ್ಲಿ ಅದ್ಯಾವಾಗ ದಿಯಾ ಮತ್ತು ಮಾಯಾ ಎದುರು ಬದುರು ಆದರೋ ಏನೋ ಅಂದಿನಿಂದ ಇಬ್ಬರ ನಡುವೆ ಜಗಳ ಆಗ್ತಾನೆ ಇದೆ. ಅದರಲ್ಲೂ ಮಾಯಾ ಬೇಕಂತಲೇ ಕಿತಾಪತಿ ಮಾಡುತ್ತಾ ಇರುತ್ತಾಳೆ. ದಿಯಾಳಿಗೆ ಉರಿಸಬೇಕು ಎಂದೇ ಶಶಾಂಕ್ ಬಳಿ ಕ್ಲೋಸ್ ಆಗುತ್ತಿದ್ದಾಳೆ. ಶಶಾಂಕ್ ಅವಳನ್ನು ಬಿಟ್ಟು ಬಿಡಲಿ ಎಂಬ ಕಾರಣದಿಂದಲೇ ದಿಯಾಳ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹೇಳುತ್ತಾ ಇರುತ್ತಾಳೆ. ಆದರೆ ಅದೆಲ್ಲವನ್ನು ಮೀರಿ ದಿಯಾ ಮತ್ತು ಶಶಾಂಕ್ ಮದುವೆ ದಿಬ್ಬಣ ಹೊರಟಿದೆ.
ಮದುವೆ ಸಂಭ್ರಮದಲ್ಲೂ ದಿಯಾಳ ಎಂಟ್ರಿ ಮತ್ತದೇ ಜಗಳಗಳಿಗೆ ಕಾರಣವಾಗಿದೆ. ಮದುವೆಯ ಶಾಸ್ತ್ರದಲ್ಲಿ ಬೇಕಂತಲೇ ಮೂಗು ತೂರಿಸುತ್ತಿದ್ದಾಳೆ. ಇದು ದಿಯಾಗೆ ಒಂದಷ್ಟು ಕೋಪ ತರಿಸಲು ಕಾರಣವಾಗಿದೆ. ಆದರೆ ದಿಯಾ ಕೂಡ ಅದಕ್ಕೆ ಸರಿಯಾದ ಉತ್ತರವನ್ನೇ ನೀಡುತ್ತಿದ್ದಾಳೆ. ಮಾಯಾಳಿಗೆ ಎಲ್ಲಿಯೂ ಸಲಿಗೆ ಬಿಟ್ಟುಕೊಟ್ಟಿಲ್ಲ. ಆದರೆ ಮಾಯಾ ಕೂಡ ಎಲ್ಲಿಯೂ ಬಗ್ಗುವ ಹೆಣ್ಣಲ್ಲ.

ಮಾಯಾಳಿಂದ ಎಲ್ಲರಿಗೂ ಕಿರಿಕ್
ಇನ್ನೇನು ಮದುವೆಯ ಸಂಭ್ರಮ ಹತ್ತಿರ ಬಂದಾಗಿದೆ. ಶಾಸ್ತ್ರಗಳೆಲ್ಲಾ ಮುಗಿಯುತ್ತಾ ಬಂದಿದ್ದು, ಕಳೆದ ಎರಡು ವಾರಗಳಿಂದಲೂ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ಹಾಡಿ, ಕುಣಿದು, ನಕ್ಕು ನಲಿಯುವಾಗ ಮಾಯಾ ಎಲ್ಲರ ಮನಸ್ಸನ್ನು ಹಾಳು ಮಾಡಿದ್ದಾಳೆ. ಸಾರಿಕಾ ಮಾತನಾಡಿಸಲು ಬಂದಾಗ ಮುಖ ಕೊಟ್ಟು ಮಾತನಾಡದೆ, ಮತ್ತೆ ಮನಸ್ಸಿಗೆ ನೋವುಂಟು ಮಾಡಿದ್ದಾಳೆ. ಇದನ್ನು ಕಂಡ ಶಶಾಂಕ್ ಇಬ್ಬರಿಗೂ ಸಮಾಧಾನ ಮಾಡಲು ನೋಡಿದ್ದಾನೆ. ಇದಕ್ಕೆ ದಿಯಾ ಕೋಪಗೊಂಡಿದ್ದಾಳೆ.

ದಿಯಾಳನ್ನು ಬಿಟ್ಟುಕೊಡ್ತಾನಾ ಶಶಾಂಕ್?
ಈ ಸಂದರ್ಭ ಸಾಕಷ್ಟು ಸಲ ಎದುರಾಗಿದೆ. ದಿಯಾಳನ್ನು ಯಾವತ್ತಿಗೂ ಶಶಾಂಕ್ ಸಪೋರ್ಟ್ ಮಾಡಿಕೊಂಡೇ ಇಲ್ಲ. ಇದು ದಿಯಾಳಿಗೆ ತುಂಬಾನೇ ಬೇಸರದ ಸಂಗತಿಯಾಗಿದೆ. ಅದರಲ್ಲೂ ಮಾಯಾ ಮುಂದೆ ಯಾವಾಗಲೂ ಬಿಟ್ಟುಕೊಡುತ್ತಾನೆ ಎಂಬುದೇ ಆಕೆಯ ನೋವಾಗಿದೆ. ಸಂಗೀತ ಕಾರ್ಯಕ್ರಮದಲ್ಲೂ ಅದು ಮುಂದುವರೆದಿದೆ. ಇಬ್ಬರೇ ಮಾತನಾಡುವುದನ್ನು ಕಂಡ ದಿಯಾ, ಶಶಾಂಕ್‌ನನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದಾಳೆ. ಆದರೆ ಶಶಾಂಕ್ ಆ ಕ್ಷಣ ಹೋಗಿಲ್ಲ. ಮತ್ತೆ ಮಾಯಾಳ ಪರವೇ ಮಾತನಾಡಿದ್ದಾನೆ. ಇದು ಆಕೆಯ ಬೇಸರ, ಕೋಪಕ್ಕೆ ಕಾರಣವಾಗಿದೆ.

ಟ್ರಿಪ್ ಹೋದಾಗಲೂ ಮಾಯಾಳಿಂದ ತೊಂದರೆ
ದಿಯಾ ಮತ್ತು ಶಶಾಂಕ್ ನಡುವೆ ಸಿಕ್ಕಾಗಲೆಲ್ಲಾ ಜಗಳ ಕಾಮನ್ ಆಗೋಗಿದೆ. ಬೆರೆತರೆ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ ಎಂಬುದು ಇಬ್ಬರಿಗೂ ಗೊತ್ತಿದೆ. ಆದರೂ ಮತ್ತೆ ಮತ್ತೆ ಜಗಳವನ್ನೇ ಆಡುತ್ತಾ, ಪ್ರೀತಿಯನ್ನು ಮರೆಮಾಚುತ್ತಿದ್ದಾರೆ. ಅದಕ್ಕೆಂದೇ ಕುಕ್ಕಿ ಅಂಡ್ ಗ್ಯಾಂಗ್ ದಿಯಾ ಮತ್ತು ಶಶಾಂಕ್‌ನನ್ನು ಸಕಲೇಶಪುರಕ್ಕೆ ಕರೆದುಕೊಂಡು ಹೋಗಿತ್ತು. ಆದರೆ ಅಲ್ಲಿಗೂ ಮಾಯಾ ಎಂಟ್ರಿ ಕೊಟ್ಟಿದ್ದಳು. ಕಾಳಜಿಯ ವಿಚಾರಕ್ಕೆ ಮತ್ತೆ ಮಾಯಾಳ ಮುಂದೆ ದಿಯಾಳನ್ನು ನೆಗ್ಲೆಕ್ಟ್ ಮಾಡಿದ್ದ. ಅಂದು ಕೂಡ ಮನಸ್ತಾಪಗಳಿಗೆ ಕಾರಣವಾಗಿತ್ತು. ಇದೀಗ ಸಂಗೀತ ಕಾರ್ಯಕ್ರಮದಲ್ಲಿ ಅದು ಮುಂದುವರೆದಿದೆ.
ಇದೇ ನಡವಳಿಕೆ ಸಂಬಂಧ ಹಾಳು ಮಾಡುತ್ತಾ?
ಮಾಯಾಳಿಗೆ ಶಶಾಂಕ್ ಮೇಲೆ ಪ್ರೀತಿಯಾಗಿದೆ. ಅದನ್ನು ಈ ಹಿಂದೆ ಸಾಕಷ್ಟು ಬಾರಿ ಸೂಕ್ಷ್ಮವಾಗಿ ಹೇಳಿದ್ದಳು. ಶಶಾಂಕ್ ಅದನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಹೀಗೆ ಮುಂದುವರೆದರೆ ಸರಿಯಾಗಲ್ಲ ಎಂದು ಅರಿತ ಮಾಯಾ, ಕಡೆಗೂ ಸಂಗೀತ ಕಾರ್ಯಕ್ರಮದಲ್ಲಿ ಶಶಾಂಕ್‌ಗೆ ನೇರವಾಗಿಯೇ ಹೇಳಿದ್ದಾಳೆ. ಇದು ಶಶಾಂಕ್‌ಗೆ ಒಂದು ಕ್ಷಣ ಗಾಬರಿಯನ್ನು ತರಿಸಿದೆ. ಆದರೆ ಈ ವೇಳೆ ಮಾಯಾಳಿಗೆ ಬುದ್ಧಿ ಮಾತು ಹೇಳಿದ್ದಾನೆ. ಅಲ್ಲಿಗೆ ದಿಯಾ ಕೂಡ ಬಂದಾಗ ಸ್ವಲ್ಪ ಮನಸ್ತಾಪ, ಜಗಳ ಆಗಿದೆ. ಆಗಲೂ ಮಾಯಾಳ ಪರವೇ ನಿಂತ ಶಶಾಂಕ್ ಕಂಡು ದಿಯಾಗೆ ಬೇಸರವಾಗಿದೆ. ಕಣ್ಣೀರು ಹಾಕಿಕೊಂಡು ಹೋಗಿದ್ದಾಳೆ. ಮುಂದೆ ಇದೇ ರೀತಿ ನಡೆದರೆ ದಿಯಾ ಮತ್ತು ಶಶಾಂಕ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಬಹುದು.


Click it and Unblock the Notifications











