For Quick Alerts
  ALLOW NOTIFICATIONS  
  For Daily Alerts

  ʻಜೇನುಗೂಡುʼ ಕುಟುಂಬಕ್ಕೆ ಬರುತ್ತಿದ್ದಾರೆ ಗಿರಿಜಮ್ಮ : ದಿಯಾಳಿಗೆ ಕಾದಿದೆಯಾ ಸಂಕಷ್ಟ..!

  By ಎಸ್ ಸುಮಂತ್
  |

  ಸ್ಟಾರ್ ಸುವರ್ಣ ವಾಹಿನಿ ಹಲವು ಧಾರಾವಾಹಿ ರಿಯಾಲಿಟಿ ಶೋಗಳ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಕೌಟುಂಬಿಕ ವಿಚಾರಗಳನ್ನು ಹೊಂದಿರುವ ಈ ಧಾರಾವಾಹಿಗಳು ಎಲ್ಲರಿಗೂ ತಮ್ಮ ಸುತ್ತ ಮುತ್ತಲಿನ ಕಥೆಯೇನೋ ಎಂಬಂತ ಫೀಲ್ ಕೊಡುತ್ತವೆ. ಅದರಲ್ಲೂ ತುಂಬು ಕುಟುಂಬ ಎಂದರೇನು? ತುಂಬು ಕುಟುಂಬದಲ್ಲಿ ಒಬ್ಬರಿಗೊಬ್ಬರು ಹೇಗೆಲ್ಲಾ ಸಹಾಯ ಮಾಡುತ್ತಾರೆ ಎಂಬುದನ್ನು ಈ ಧಾರಾವಾಹಿ ನೋಡಿ ಕಲಿಯಬೇಕಾಗಿದೆ. ಅಂತ ಅದ್ಭುತ ಸಂಬಂಧಗಳನ್ನು ಈ ಧಾರಾವಾಹಿ ನೀಡುತ್ತಿದೆ.

  ಯಡೆಯೂರು ಸಿದ್ದಲಿಂಗೇಶ್ವರ ಧಾರಾವಾಹಿ ಸ್ಟಾರ್ ಸುವರ್ಣ ರೇಟಿಂಗ್ ಪಾಯಿಂಟ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಸಿದ್ದಲಿಂಗೇಶ್ವರನ ಮಹಿಮೆಯನ್ನು ಅದು ತಿಳಿಸುತ್ತಿದೆ. ಇನ್ನು ಬೆಟ್ಟದ ಹೂ ಧಾರಾವಾಹಿ ಹಳ್ಳಿ ಹುಡುಗಿಯ ಹಠ-ಛಲ, ಶಿಕ್ಷಣವನ್ನು ಸಾರುವಂತದ್ದಾಗಿದೆ. ಹೀಗೆ 'ಮರಳಿ ಮನಸಾಗಿದೆ', 'ಮುದ್ದುಲಕ್ಷ್ಮೀಯ ಮುದ್ದುಮಣಿ'ಗಳು ಈ ಎಲ್ಲಾ ಧಾರಾವಾಹಿಗಳು ಎಲ್ಲರನ್ನೂ ಹಿಡಿದಿಟ್ಟುಕೊಂಡಿದೆ.

  ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!ಬೆಟ್ಟದ ಹೂವಿನ ಟೀಂ ನೋಡಿ ವಾವ್ ಎಂದ ಪ್ರೇಕ್ಷಕರು.. ಕಾರಣ ಆ ಒಂದು ಫೋಟೊ..!

  ವೀಣಾ ಮದುವೆಯಲ್ಲಿ ಎಲ್ಲರೂ ಬ್ಯುಸಿ

  ವೀಣಾ ಮದುವೆಯಲ್ಲಿ ಎಲ್ಲರೂ ಬ್ಯುಸಿ

  ನಡುಕೋಟೆ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಕಾರ್ಯಗಳು ನಡೆಯುತ್ತಿವೆ. ಸುಮಿ ಮದುವೆ ಆಯ್ತು, ಶಶಾಂಕ್ ಮದುವೆ ಆಯ್ತು. ಇದೀಗ ತುಂಬಾ ಮುಖ್ಯವಾದವರ ಮದುವೆ ಅದುವೇ ವೀಣಾ. ಭಾಸ್ಕರ್ ಮತ್ತು ವೀಣಾ ಇಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಾ ಇದ್ದರು. ಆದರೆ ಭಾಸ್ಕರ್ ಫಾರಿನ್ ಗೆ ಹೋಗಿ ಬೇರೊಂದು ಹುಡುಗಿಯ ಜೊತೆಗೆ ಇದ್ದ. ಇದರಿಂದ ಅಪಾರ್ಥವಾಗಿದ್ದೆಲ್ಲವೂ ಈಗ ಸರಿಯಾಗಿದೆ. ಹೀಗಾಗಿ ನಡುಕೋಟೆ ಮನೆಯವರು ಒಬ್ಬ ತಂಗಿ ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಲು ನಿಶ್ಚಯಿಸಿದ್ದಾರೆ.

  Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!

  ಮದುವೆಗೆ ಹಣದ ಕೊರೆತೆ

  ಮದುವೆಗೆ ಹಣದ ಕೊರೆತೆ

  ವೀಣಾ ಅತ್ತಿ ಎಂದರೆ ಮಕ್ಕಳಿಗೆಲ್ಲಾ ತುಂಬಾ ಮುದ್ದು. ಇನ್ನು ವೀಣಾ ಒಬ್ಬಳೆ ತಂಗಿಯಾಗಿರುವ ಕಾರಣ ವಿನಾಯಕ್, ಕುಕ್ಕಿ ಹಾಗೂ ಶಶಾಂಕ್ ತಂದೆ ಮದುವೆಯನ್ನು ಗ್ರ್ಯಾಂಡ್ ಆಗಿಯೇ ಮಾಡಬೇಕು ಎಂದುಕೊಂಡಿದ್ದಾರೆ. ಆದರೆ ಹಣದ ಸಮಸ್ಯೆ ಎದುರಾಗಿದೆ. ಇದಕ್ಕೆಲ್ಲಾ ಹೆಣ್ಣು ಮಕ್ಕಳು ನಾವೂ ಕೂಡ ಬೆಂಬಲವಾಗಿ ನಿಲ್ಲುತ್ತೀವಿ, ನಮ್ಮ ಒಡವೆಯನ್ನು ಅಡ ಇಟ್ಟು ಮದುವೆ ಮಾಡೋಣಾ ಎಂದಿದ್ದಾರೆ.

  ನಡುಕೋಟೆ ಮನೆಗೆ ಗಿರಿಜಮ್ಮ ಎಂಟ್ರಿ

  ನಡುಕೋಟೆ ಮನೆಗೆ ಗಿರಿಜಮ್ಮ ಎಂಟ್ರಿ

  ಹೀಗೆ ಜೇನುಗೂಡಿನಲ್ಲಿ ಬಡತನವಿದ್ದರು, ಯಾವುದೇ ಪ್ರೀತಿಗೆ ಕಡಿಮೆ ಇಲ್ಲ ಎಂಬುದನ್ನು ಸಾರಿದ್ದಾರೆ. ಎಲ್ಲರೂ ಅನ್ಯೋನ್ಯವಾಗಿದ್ದಾರೆ. ಇಂಥ ತುಂಬು ಕುಟುಂಬಕ್ಕೆ ಗಿರಿಜಾ ಲೋಕೇಶ್ ಎಂಟ್ರಿಯಾಗುತ್ತಿದ್ದಾರೆ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ರಂಜಿಸಿರುವ ಗಿರಿಜಮ್ಮ ಈಗ ಪೋಷಕ ಪಾತ್ರದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿದ್ದಾರೆ. ಜೇನುಗೂಡಿಗೆ ಗಿರಿಜಾ ಲೋಕೇಶ್ ಮದುವೆ ಸಂದರ್ಭದಲ್ಲಿ ಎಂಟ್ರಿಯಾಗುತ್ತಿದ್ದಾರೆ. ಹಾಗಾದರೆ ಮದುವೆ ಇನ್ನು ಅದ್ದೂರಿಯಾಗಿಯೂ ನಡೆಯುವ ನಿರೀಕ್ಷೆ ಇದೆ.

  ನಟಿ ಸಂಜನಾ ಬುರ್ಲಿ ಫಿಟ್‌ನೆಸ್ ಗುಟ್ಟೇನು ಗೊತ್ತಾ..?ನಟಿ ಸಂಜನಾ ಬುರ್ಲಿ ಫಿಟ್‌ನೆಸ್ ಗುಟ್ಟೇನು ಗೊತ್ತಾ..?

  ಗಿರಿಜಮ್ಮಳನ್ನು ಗೆಲ್ಲುತ್ತಾಳಾ ದಿಯಾ

  ಗಿರಿಜಮ್ಮಳನ್ನು ಗೆಲ್ಲುತ್ತಾಳಾ ದಿಯಾ

  ಸದ್ಯ ನಡುಕೋಟೆ ಮನೆಯಲ್ಲಿ ಎಲ್ಲಾ ಸಂಬಂಧಗಳು ಫುಲ್ ಫಿಲ್ ಆಗಿದೆ. ವೀಣಾ ಮದುವೆ ನಡೆಯುತ್ತಿರುವ ಕಾರಣ ವೀಣಾಳ ಅಮ್ಮನಾಗಿ ಅಥವಾ ಭಾಸ್ಕರ್ ಅಮ್ಮನಾಗಿ ಗಿರಿಜಮ್ಮ ಮನೆಗೆ ಎಂಟ್ರಿಯಾಗಬಹುದು. ಮೂಲಗಳ ಪ್ರಕಾರ ಗಿರಿಜಮ್ಮನ ಆಗಮನ ದಿಯಾಳಿಗೆ ಸವಾಲು ಎನ್ನಲಾಗುತ್ತಿದೆ. ಶಾಸ್ತ್ರ- ಸಂಪ್ರದಾಯ ಗೊತ್ತಿಲ್ಲದ ದಿಯಾ ಎಲ್ಲವನ್ನು ಕಲಿಯುತ್ತಿದ್ದಾಳೆ. ಆದರೆ ಗಿರಿಜಮ್ಮನ ಸವಾಲು ಹೇಗಿರುತ್ತೆ, ಆ ಸವಾಲನ್ನು ದಿಯಾ ಹೇಗೆ ಸ್ವೀಕರಿಸುತ್ತಾಳೆ ಎಂಬ ಕುತೂಹಲವಿದೆ. ಎಲ್ಲರನ್ನು ಗೆಲ್ಲುವ ದಿಯಾಳಿಗೆ ಗಿರಿಜಮ್ಮನನ್ನು ಗೆಲ್ಲುವುದು ಕಷ್ಟವೂ ಆಗುವುದಿಲ್ಲ.

  English summary
  Jeenugoodu Serial October 11th Episode Written Update. Here is the details.
  Tuesday, October 11, 2022, 22:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X