ಜೇನುಗೂಡು: ದಿಯಾ ಕುಡಿದು ರಂಪಾಟ? ಗಿರಿಜಮ್ಮ ಬಂದ್ಮೇಲೆ ನಡುಕೋಟೆಯಲ್ಲಿ ಏನಾಗ್ತಿದೆ?

By ಎಸ್ ಸುಮಂತ್

ಹಲವು ಸವಾಲುಗಳ ನಡುವೆ ದಿಯಾ ಮತ್ತು ಶಶಾಂಕ್ ಮದುವೆ ಆಗಿದೆ. ದಿಯಾಳಿಗೆ ಯೋಚನೆ ಮಾಡಿ ಮಾತನಾಡಬೇಕು ಎಂಬುದೆಲ್ಲಾ ಗೊತ್ತಿಲ್ಲ. ತನಗೆ ಏನು ಅನ್ನಿಸುತ್ತದೆಯೋ ಅದನ್ನೇ ಮಾಡುವುದು. ಯಾರಿಗೂ ನೋವು ಕೊಡುವ ಉದ್ದೇಶ ಆಕೆಯದ್ದಾಗಿರುವುದಿಲ್ಲ. ಕಷ್ಟ ಎಂದು ಬಂದಾಗ ಅವರ ಸಹಾಯಕ್ಕೆ ನಿಲ್ಲುತ್ತಾಳೆ. ಆದರೆ ಶಶಾಂಕ್ ಕೋಪ, ಆಕೆಯ ಮನಸ್ಸಿಗೆ ಯಾವಾಗಲೂ ನೋವನ್ನೇ ಕೊಡುತ್ತಿರುತ್ತೆ.

ಸದ್ಯ ನಡುಕೋಟೆ ಮನೆಗೆ ಗಿರಿಜಮ್ಮನ ಎಂಟ್ರಿಯಾಗಿದೆ. ವಿನಾಯಕ್ ದಾದಾನ ಅಕ್ಕ. ದೊಡ್ಡಮ್ಮನ ಮಗಳು ಗಿರಿಜಮ್ಮ. ಗಿರಿಜಕ್ಕ ಬರುತ್ತಿದ್ದಾಳೆ ಎಂದರೆ ಸಾಕು ಎಲ್ಲರೂ ಭಯಗೊಂಡಿದ್ದರು. ಆದರೂ ಗಿರಿಜಕ್ಕನ ಎಂಟ್ರಿ ಆಗಿ ಬಿಟ್ಟಿದೆ. ಇದರಿಂದ ತೊಂದರೆಗೆ, ಅವಮಾನಕ್ಕೆ ಒಳಗಾಗುತ್ತಿರುವುದು ದಿಯಾಗೆ.

ದಿಯಾ -ಶಶಾಂಕ್ ದೂರ ಮಾಡ್ತಿದ್ಯಾ ಗಿರಿಜಕ್ಕನ ಮಾತು?

ದಿಯಾ -ಶಶಾಂಕ್ ದೂರ ಮಾಡ್ತಿದ್ಯಾ ಗಿರಿಜಕ್ಕನ ಮಾತು?

ನಡುಕೋಟೆ ಮನೆಯಲ್ಲಿ ಏನಿರುತ್ತೋ ಅಷ್ಟರಲ್ಲಿಯೇ ತುಂಬಿದ ಕುಟುಂಬ ತುಂಬ ಸಂತೋಷವಾಗಿದೆ. ಆದರೆ ಗಿರಿಜಕ್ಕ ಪ್ರತಿಯೊಂದರಲ್ಲೂ ಕೊಂಕು ಹುಡುಕುತ್ತಿದ್ದಾರೆ. ಇದು ಮನೆಯವರಿಗೂ ಒಮ್ಮೊಮ್ಮೆ ಕಿರಿಕಿರಿ ತಂದೊಡ್ಡಿದೆ. ಈಗ ದಿಯಾ ಪಾಲಿಗೂ ಮುಳ್ಳಾಗಿದ್ದಾರೆ. ಈಕೆ ಈ ಕುಟುಂಬಕ್ಕೆ ಸರಿಯಾದವಳಲ್ಲ. ಹೊರಗೆ ಕಳುಹಿಸಿ ಎನ್ನುತ್ತಿದ್ದಾಳೆ. ಇದಕ್ಕೆ ಸೊಪ್ಪು ಹಾಕಿದ ಶಶಾಂಕ್ ಕೂಡ ಗಿರಿಜಕ್ಕನ ತಾಳಕ್ಕೆ ಕುಣಿಯುತ್ತಿದ್ದಾನೆ.

ಡಾ. ಶ್ರೀಧರ್ ಎದುರು ಪಂಚಾಯತಿ

ಡಾ. ಶ್ರೀಧರ್ ಎದುರು ಪಂಚಾಯತಿ

ಮದುವೆಗೂ ಮುಂಚೆ ಪಬ್ ಗೆಲ್ಲಾ ಹೋಗುತ್ತಿದ್ದ ದಿಯಾ ಮದುವೆಯಾದ ಮೇಲೂ ಅದನ್ನೇ ಮುಂದುವರೆಸಿದ್ದಾಳೆ ಎಂದು ನಡುಕೋಟೆ ಮನೆಯವರು ಬೇಸರ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಈಗ ದಿಯಾ ತನ್ನ ಅಪ್ಪ ಶ್ರೀಧರ್‌ನನ್ನು ಮನೆಗೆ ಕರೆಸಿದ್ದಾರೆ. ನಿಮ್ಮ ಮಗಳಿಗೆ ಬುದ್ದಿ ಹೇಳಿ ಅಂತ ಮನೆಯವರು ಹೇಳಿದರೆ. ಶಶಾಂಕ್ ಮಾತ್ರ ಅವಳನ್ನು ಕರೆದುಕೊಂಡು ಹೊರಟು ಬಿಡಿ ಎನ್ನುತ್ತಿದ್ದಾನೆ. ಶ್ರೀಧರ್ ಇದನ್ನೆಲ್ಲಾ ಕೇಳಿ ಮಗಳನ್ನು ಕರೆದುಕೊಂಡು ಹೋಗುವ ನಾಟಕವಾಡುತ್ತಿದ್ದಾರೆ.

ವೀಣಾ ಮದುವೆಗೆ ಒಡವೆ ಕೊಡಿಸುತ್ತಿರುವ ಶ್ರೀಧರ್

ವೀಣಾ ಮದುವೆಗೆ ಒಡವೆ ಕೊಡಿಸುತ್ತಿರುವ ಶ್ರೀಧರ್

ಮನೆಯಲ್ಲಿ ಎಲ್ಲರಿಗಾಗಿ ವೀಣಾ ಒಂದಲ್ಲ ಒಂದು ರೀತಿಯಲ್ಲಿ ದುಡಿದಿದ್ದಾಳೆ. ಹೀಗಾಗಿ ವೀಣಾ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದುಕೊಂಡಿದ್ದಾರೆ ಮೂವರು ಅಣ್ಣ ತಮ್ಮಂದಿರು. ಆದರೆ ಬ್ಯಾಕ್ ಟು ಬ್ಯಾಕ್ ಮದುವೆಗಳು ಬಂದ ಕಾರಣ ಖರ್ಚು ವೆಚ್ಚವೆಲ್ಲಾ ಹೆಚ್ಚಾಗುತ್ತಿದ್ದು, ಅದ್ದೂರಿಯಾಗಿ ಮದುವೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಆದರೆ ಇಂಥ ಕಷ್ಟದ ಪರಿಸ್ಥಿತಿಯಲ್ಲಿಯೇ ಶ್ರೀಧರ್ ಕೈಜೋಡಿಸುತ್ತಿದ್ದಾರೆ. ಇದು ಮನೆಯವರಿಗೆ ಸ್ವಲ್ಪ ನೆಮ್ಮದಿಯನ್ನು ತಂದಿದೆ.

ದಿಯಾಳ ಪ್ಲ್ಯಾನ್ ಸುಲಭವಲ್ಲ

ದಿಯಾಳ ಪ್ಲ್ಯಾನ್ ಸುಲಭವಲ್ಲ

ವೀಣಾ ಮದುವೆ ಅದ್ದೂರಿಯಾಗಿ ಆಗಬೇಕು ಎಂಬುದು ದಿಯಾಳ ಆಸೆ ಕೂಡ. ಅಪ್ಪನ ಬಳಿ ಹಣ ಕೇಳೋಣಾ ಎಂದಾಗ ಬೇಡ ಎಂದು ಮನೆಯವರು ಹೇಳಿದರು. ನಮ್ಮ ಮನೆತನದ ಗೌರವಕ್ಕೆ ಧಕ್ಕೆಬಾರದು ಎಂದರು. ಅದಕ್ಕೆ ದಿಯಾ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಕುಡಿದು ಬಂದು ರಂಪಾಟ ಮಾಡುವಂತೆ ಮಾಡಿದರೆ, ಅಪ್ಪನನ್ನು ಕರೆಸುತ್ತಾರೆ ಎಂದು ದಿಯಾಳಿಗೆ ಗೊತ್ತಿತ್ತು. ಅದಕ್ಕೆ ಕುಡಿದವಳಂತೆ ನರ್ತಿಸಿದಳು. ಪಬ್‌ಗೆ ಅಂತ ಹೋದವಳು ಅಪ್ಪನ ಮನೆಗೆ ಹೋಗಿದ್ದಳು. ಕಂಠ ಪೂರ್ತಿ ಕುಡಿದವಳಂತೆ ಕುಡಿದು ಮನೆ ಮಂದಿ ಮುಂದೆಲ್ಲ ರಂಪಾಟ ಮಾಡಿದ್ದಳು. ಈಗ ಆಕೆಯ ಅಪ್ಪ ತಾನಾಗೆ ಬಂದಿದ್ದು, ತಾನಾಗಿಯೇ ಸಹಾಯ ಮಾಡಿದ್ದಾರೆ. ಇದರಿಂದ ನಡುಕೋಟೆ ಮನೆಯ ಮರ್ಯಾದೆಯೂ ಉಳಿದಿದೆ. ಮದುವೆಯೂ ಅಂದುಕೊಂಡಂತೆ ಆಗುತ್ತಿದೆ. ದಿಯಾ ಮಾಡಿದ ಪ್ಲ್ಯಾನ್ ಕುಕ್ಕಿ ಗ್ಯಾಂಗ್‌ಗೆ ಗೊತ್ತಿದ್ದ ಕಾರಣ ದಿಯಾ ಸಹಾಯಕ್ಕೆ ನಿಂತಿದ್ದಾರೆ.

More from Filmibeat

English summary
Jeenugoodu Serial October 19th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X