twitter
    For Quick Alerts
    ALLOW NOTIFICATIONS  
    For Daily Alerts

    ಜೇನುಗೂಡು: ನಡುಕೋಟೆ ಮನೆಗೆ ಬಂದ ಹಿರಿಯ ನಟ ಡಿಂಗ್ರಿ ನಾಗರಾಜ್

    By ಎಸ್ ಸುಮಂತ್
    |

    ನಡುಕೋಟೆ ಮನೆಯಲ್ಲಿ ಮದುವೆ ಶಾಸ್ತ್ರಗಳ ಸಂಭ್ರಮ ಕಳೆಗಟ್ಟಿದೆ. ಒಂದೊಂದೆ ವಿಭಿನ್ನ ಶಾಸ್ತ್ರಗಳನ್ನು ತೋರಿಸುವುದರ ಮೂಲಕ ಅದರ ಹಿಂದಿನ ಅರ್ಥವನ್ನು ತಿಳಿಸುತ್ತಿದ್ದಾರೆ. ಇದೀಗ ಶಾವಿಗೆ ಒತ್ತುವ ಶಾಸ್ತ್ರ ಶುರುವಾಗಿದೆ. ಈ ಶಾಸ್ತ್ರ ಅದ್ಭುತವಾಗಿದ್ದು, ಅದರ ಹಿಂದಿನ ಅರ್ಥವು ಅರ್ಥಗರ್ಭಿತವಾಗಿದೆ. ಮುತ್ತೈದೆಯರೆಲ್ಲಾ ಸೇರಿ ಶಾವಿಗೆ ಒತ್ತುವುದರಿಂದ ಒಂದು ವರ್ಷದ ತನಕ ಮನೆಯಲ್ಲಿ ಶಾವಿಗೆ ಒತ್ತುವ ಆಗಿಲ್ಲ. ಇದೇ ಶಾವಿಗೆಯನ್ನೇ ಬಳಸಬೇಕಾಗುತ್ತದೆ.

    ಕುಕ್ಕಿ ಅಂಡ್ ಗ್ಯಾಂಗ್‌ನಿಂದಾಗಿ ಶುಭಾಂಗಿಯ ಒಂದಷ್ಟು ಅಹಂಕಾರ ಕರಗಿದೆ. ಆಗಾಗ ಕೆರಳಿಸುವ ಕುಕ್ಕಿ ಎಲ್ಲವನ್ನು ಒಪ್ಪಿಕೊಳ್ಳುವಂತೆ ಡಾಕ್ಟರ್ ಶ್ರೀಧರ್ ಮಾಡುತ್ತಿದ್ದಾರೆ. ಮಗಳಿಗಾಗಿ ಶುಭಾಂಗಿ ಇದೀಗ ಎಲ್ಲಾ ಶಾಸ್ತ್ರದಲ್ಲೂ ಭಾಗಿಯಾಗುತ್ತಿದ್ದಾಳೆ. ಆದರೆ ಕೋಪ ಮಾಡಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ. ಶಾವಿಗೆ ಒತ್ತುವ ಶಾಸ್ತ್ರಕ್ಕೆ ಕುಳಿತು, ಮಾಡುವುದಕ್ಕೆ ಬಾರದೆ ಎದ್ದು ಹೋಗಿದ್ದಾಳೆ. ಆದರೆ ದಿಯಾಳಿಗಾಗಿ ಶಶಾಂಕ್ ಕಲಿಸಿಕೊಟ್ಟಿದ್ದಾನೆ.

    ಪುಟ್ಟಕ್ಕನ ಮಕ್ಕಳು: ಸುಮಾ ಕ್ಲಾಸ್‌ಗೆ ಬಂದಿಲ್ಲ? ಮೇಷ್ಟ್ರ ಬಳಿ ಕ್ಷಮೆ ಯಾಚಿಸುತ್ತಾಳಾ?ಪುಟ್ಟಕ್ಕನ ಮಕ್ಕಳು: ಸುಮಾ ಕ್ಲಾಸ್‌ಗೆ ಬಂದಿಲ್ಲ? ಮೇಷ್ಟ್ರ ಬಳಿ ಕ್ಷಮೆ ಯಾಚಿಸುತ್ತಾಳಾ?

    ಪ್ರೀತಿಯ ಅಲೆಯಲ್ಲಿ ಮದುಮಕ್ಕಳು

    ಪ್ರೀತಿಯ ಅಲೆಯಲ್ಲಿ ಮದುಮಕ್ಕಳು

    ದಿಯಾಗೆ ಮೊದಲೇ ಶಾಸ್ತ್ರಗಳನ್ನು ನೋಡುವ, ಕಲಿಯುವ ಆಸೆ. ಅದಕ್ಕಾಗಿಯೇ ನಡುಕೋಟೆ ಮನೆಯಲ್ಲಿ‌ ನಡೆಯುವ ಎಲ್ಲಾ ಶಾಸ್ತ್ರಗಳಿಗೂ ಭಾಗಿಯಾಗುತ್ತಿದ್ದಾಳೆ. ಇದೀಗ ಶಾವಿಗೆ ಒತ್ತುವ ಶಾಸ್ತ್ರಕ್ಕೂ ದಿಯಾ ಬಂದಿದ್ದು, ಶಶಾಂಕ್ ಎಲ್ಲವನ್ನೂ ಹೇಳಿಕೊಟ್ಟಿದ್ದಾನೆ. ಶಾವಿಗೆ ಒತ್ತುವ ಆಸಕ್ತಿಗೆ ಕುಕ್ಕಿ ಗ್ಯಾಂಗ್ ಸಪೋರ್ಟ್ ಮಾಡಿದೆ. ದಿಯಾಗೆ ಶಾವಿಗೆ ಒತ್ತಲು ಹೋದಾಗ ಎಲ್ಲವೂ ಹಾಳಾಗಿದೆ.‌ ಇದೇ ವೇಳೆ ಶಶಾಂಕ್ ರೇಗಿಸುತ್ತಿದ್ದ. ಬಳಿಕ ಮನೆಯವರೆಲ್ಲಾ ನೀನೆ ಕಲಿಸಿಕೊಡು ಎಂದಾಗ, ಆಯ್ತು ಕಲಿಸಿ ಕೊಡುತ್ತೇನೆ ಎಂದು ಹೋದಾವ ಫುಲ್ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದ. ಅವರಿಬ್ಬರ ಪ್ರೀತಿ, ಪ್ರೇಮ ಕಂಡು ಕುಕ್ಕಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿತ್ತು. ದಾದಾ ಮತ್ತು ಅಪ್ಪ ಬಂದರು ಗಮನವೇ ಇಲ್ಲದೆ ಇಬ್ಬರು ಶಾವಿಗೆ ಒತ್ತುತ್ತಲೇ ಇದ್ದರು.

    ದಿಯಾಳಿಗೆ ಸರ ಹಾಕಿದ ಶಶಾಂಕ್

    ದಿಯಾಳಿಗೆ ಸರ ಹಾಕಿದ ಶಶಾಂಕ್

    ನಡುಕೋಟೆ ಮನೆಯಲ್ಲಿ ಬಳೆ ಶಾಸ್ತ್ರ ಆರಂಭವಾಗಿದೆ.‌ ಆದರೆ ದಿಯಾಳ ಮಾಡರ್ನ್‌ ಡ್ರೆಸ್ ಜೊತೆ ಬಳೆ ಹಾಕಿಸಿಕೊಂಡರೆ ಅಷ್ಟು ಚಂದ ಕಾಣುವುದಿಲ್ಲ. ದಿಯಾಳಿಗೆ ಬಳೆ ಹಾಕಿಸಿಕೊಳ್ಳುವ ಬಯಕೆಯಾಗಿದೆ. ಅದಕ್ಕೆ ನಯನಾ ಮತ್ತೆ ಪ್ರಾಚಿ ಇಳಕಲ್ ಸೀರೆಯುಟ್ಟು, ಬಳಿಕ ಬಳೆ ಹಾಕಿಸಿಕೊಂಡರೆ ಅದ್ಭುತವಾಗಿರುತ್ತೆ ಎಂದು ಹೇಳಿದಾಗ ದಿಯಾ ಓಕೆ ಎಂದಿದ್ದಾಳೆ. ನಯನಾ ಮತ್ತು ಪ್ರಾಚಿ ಸೇರಿ ಸೀರೆಯುಡಿಸಿ ಅಲಂಕಾರ ಮಾಡಿದ್ದಾರೆ. ಆದರೆ ಕಡೆಯಲ್ಲಿ ಮತ್ತೊಂದು ಸರ ಹಾಕುವುದನ್ನು ಬಿಟ್ಟಿದ್ದಾರೆ. ರೂಮಿಗೆ ಬಂದ ಶಶಾಂಕ್ ದಿಯಾಳ ಕೊರಳಿಗೆ ಸರ ಹಾಕಿದ್ದು, ಮದು ಮಕ್ಕಳ ಮನದಲ್ಲಿ ನಾಚಿಕೆ ಎದ್ದು ಕಾಣುತ್ತಿತ್ತು. ದಿಯಾಳ ಅಲಂಕಾರಕ್ಕೆ ಸೋತ ಶಶಾಂಕ್ ಹೆಚ್ಚು ಸಮಯ ನಿಲ್ಲದೆ ಹೊರಟೆ ಬಿಟ್ಟ.

    ದಿಯಾಳ ಕೈಗೆ ನೋವಾಗದಂತೆ ಬಳೆ ತೊಡಿಸಿದ

    ದಿಯಾಳ ಕೈಗೆ ನೋವಾಗದಂತೆ ಬಳೆ ತೊಡಿಸಿದ

    ನಡುಕೋಟೆ ಮನೆಯಲ್ಲಿ ಬಳೆ ಶಾಸ್ತ್ರ ಶುರುವಾಗಿದೆ. ಮುತ್ತೈದೆಯರೆಲ್ಲಾ ಸೇರಿ ಬಳೆ ಹಾಕಿಸಿಕೊಂಡಿದ್ದಾರೆ. ದಿಯಾ ಮಧು‌ಮಗಳು. ದಿಯಾಗೆ ಬಳೆ ಹಾಕುವುದು ಮುಖ್ಯವಾಗಿರುತ್ತದೆ. ಬಳೆ ತೊಡುವುದು ದಿಯಾಗೆ ಅಭ್ಯಾಸವೇ ಇಲ್ಲ. ತೊಡಿಸುವಾಗ ಸ್ವಲ್ಪ ಕೈ ನೋವಾಗಿದ್ದಕ್ಕೂ ದಿಯಾ ಗಾಬರಿಯಾಗಿದ್ದಾಳೆ. ಆದರೆ ನೋವು ಶಶಾಂಕ್ ಗೆ ಆಗಿದೆ. ಸಾವಧಾನವಾಗಿ ತೊಡಿಸಿ ಎಂದು ಬಾವಿ ಹೆಂಡತಿಯ ಪರ ಮಾತಾಡಿದಾಗ ಬಳೆಗಾರ ನೀನೆ ತೊಡಿಸು ಬಾರಪ್ಪ ಎಂದಿದ್ದಾರೆ. ಶಶಾಂಕ್ ಹೆಂಡತಿಗಾಗಿ ಬಳೆ ತೊಡಿಸಿದ್ದಾನೆ.

    ನಡುಕೋಟೆ ಮನೆಗೆ ಬಂದ ಡಿಂಗ್ರಿ ನಾಗರಾಜ್

    ನಡುಕೋಟೆ ಮನೆಗೆ ಬಂದ ಡಿಂಗ್ರಿ ನಾಗರಾಜ್

    ಧಾರಾವಾಹಿಗಳಲ್ಲಿ ಅತಿಥಿ ಪಾತ್ರಕ್ಕೆ ಕರೆಸುವಾಗ ಸ್ಪೆಷಲ್ ವ್ಯಕ್ತಿಗಳನ್ನೇ ಕರೆಸುತ್ತಾರೆ. ನಡುಕೋಟೆ ಮನೆಯಲ್ಲಿ ಒಂದೊಂದು ಶಾಸ್ತ್ರಕ್ಕೂ ಹಿರಿಯ ನಟರಿಗೆ ಪ್ರಾಶಸ್ತ್ಯ ನೀಡುತ್ತಾರೆ. ಕಳೆದ ಬಾರಿ ಜವಳಿ ಶಾಸ್ತ್ರ ನಡೆಸಿದ್ದರು. ಜವಳಿ ಶಾಸ್ತ್ರದಲ್ಲಿ ಉಮೇಶ್ ಎಂಟ್ರಿ ಕೊಟ್ಟಿದ್ದರು. ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಅವರ ಸಿಗ್ನೇಚರ್ ಡೈಲಾಗ್ ಹೊಡೆದು ಎಲ್ಲರನ್ನು ನಕ್ಕು ನಲಿಸಿದ್ದರು. ಇದೀಗ ಬಳೆ ಶಾಸ್ತ್ರಕ್ಕೆ ಡಿಂಗ್ರಿ ನಾಗಾರಾಜ್ ಎಂಟ್ರಿಯಾಗಿದ್ದಾರೆ. ಮನೆ ಮಂದಿಗೆಲ್ಲಾ ಬಳೆ ತೊಡಿಸಿ ಶುಭ ಹಾರೈಸಿದ್ದಾರೆ.

    English summary
    Jeenugoodu Serial Written Update on July 22nd Episode Here is the details.
    Friday, July 22, 2022, 20:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X