ಜೇನುಗೂಡು: ಮಾಯಾ ಮನದೊಳಗಿನ ಪ್ರೀತಿಯನ್ನು ಹೇಳಿಯೇ ಬಿಟ್ಟಳು: ಶಶಾಂಕ್ ಉತ್ತರವೇನು?

By ಎಸ್ ಸುಮಂತ್

ಶಶಾಂಕ್ ಮತ್ತು ದಿಯಾಳ ಮದುವೆಯ ಸಂಭ್ರಮಕ್ಕೆ ನಡುಕೋಟೆ ಮತ್ತು ಶ್ರೀಧರ್ ಮನೆ ಸಜ್ಜಾಗಿದೆ. ಮುಹೂರ್ತಕ್ಕೂ ಮುನ್ನ ನೆರವೇರಿಸಬೇಕಾದ ಎಲ್ಲಾ ಶಾಸ್ತ್ರಗಳು ಮುಗಿಯುತ್ತಾ ಬರುತ್ತಿವೆ. ಎಲ್ಲಾ ಶಾಸ್ತ್ರದಲ್ಲೂ ಮನೆ ಮಂದಿಯೆಲ್ಲಾ ಕೂಡಿ ಸಂಭ್ರಮ, ಸಡಗರ ಪಟ್ಟಿದ್ದಾರೆ. ಈ ಶಾಸ್ತ್ರಗಳ ನಡುವೆ ದಿಯಾ ಮತ್ತು ಶಶಾಂಕ್ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಪ್ರೀತಿ ಚಿಗುರೊಡೆಯುವುದಕ್ಕೆ ಶುರುವಾಗಿದೆ. ಇದರ ನಡುವೆ ಮಾಯಾ ಬಿರುಗಾಳಿಯಂತೆ ಬಂದಿದ್ದಾಳೆ.

ದಿಯಾ ಮತ್ತು ಶಶಾಂಕ್ ನಡುವೆ ಮಾಯಾ ಬರುವುದು ಇದೇನು ಹೊಸದೇನು ಅಲ್ಲ. ಅವರಿಬ್ಬರ ಸಂತೋಷ ಹಾಳು ಮಾಡಲು ಆಗಾಗ ಸಮಯ ಹುಡುಕುತ್ತಲೇ ಇರುತ್ತಾಳೆ. ಆದರೆ ಈ ಬಾರಿ ಬೇರೆ ರೀತಿಯಾಗಿಯೇ ಎಂಟ್ರಿ ಕೊಟ್ಟಿದ್ದಾಳೆ. ಮಾಯಾಳ ಮಾತು ಕೇಳಿ ಶಶಾಂಕ್‌ಗೆ ದಿಗಿಲು ಬಡಿದಂತಾಗಿದೆ. ಇನ್ನು ಅದೇ ಮಾತು ದಿಯಾಳ ಕಿವಿಗೆ ಬಿದ್ದರೆ ಶಶಾಂಕ್ ಗ್ರಹಚಾರ ಕೆಟ್ಟಿದೆ ಎಂದೇ ಅರ್ಥ.

ಖುಷಿಯಾಗಿದ್ದವರ ನಡುವೆ ಬಂದ ಮಾಯಾ

ಖುಷಿಯಾಗಿದ್ದವರ ನಡುವೆ ಬಂದ ಮಾಯಾ

ಸದ್ಯ ಶಾಸ್ತ್ರಗಳೆಲ್ಲಾ ಮುಗಿದಿದ್ದು, ಸಂಗೀತ ಕಾರ್ಯಕ್ರಮ ಶುರುವಾಗಿದೆ. ಬಳಿಕ ಮೆಹಂದಿ, ಅರಿಶಿನ, ಮುಹೂರ್ತ ಬಂದೇ ಬಿಡುತ್ತದೆ. ಆದರೆ ಮಾಯಾ ಈಗ ಎಲ್ಲವನ್ನು ಹಾಳು ಮಾಡಲು ಹೊರಟಿದ್ದಾಳೆ. ಸಂಗೀತ ಕಾರ್ಯಕ್ರಮದಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ. ಹೊಸದಾಗಿ ಮದುವೆಯಾಗುತ್ತಿರುವ ದಿಯಾ-ಶಶಾಂಕ್ ಕೂಡ ಮಸ್ತ್ ಎಂಜಾಯ್ ಮಾಡಿದ್ದಾರೆ. ಇದೇ ವೇಳೆ ಮಾಯಾ ಬಂದು ಶಶಾಂಕ್‌ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಶಶಾಂಕ್ ಒಂದು ಕ್ಷಣ ಗಾಬರಿಯಾಗಿದ್ದಾನೆ.

ಶಶಾಂಕ್‌ಗೆ ಸೂಕ್ಷ್ಮತೆಗಳ ಅರಿವಿತ್ತು

ಶಶಾಂಕ್‌ಗೆ ಸೂಕ್ಷ್ಮತೆಗಳ ಅರಿವಿತ್ತು

ಮಾಯಾ ಕೆಲಸದಲ್ಲಿ ನಿಷ್ಠೆ ಇರುವವಳು, ಬುದ್ಧಿವಂತೆ ಅಂತ ಶಶಾಂಕ್ ಅಸಿಸ್ಟೆಂಟ್‌ಗೆ ಕೊಡುವ ಸಲಿಗೆಗಿಂತ ತುಸು ಹೆಚ್ಚಿಗೇನೆ ಕೊಟ್ಟಿದ್ದ. ಆದರೆ ಆಕೆಯ ಮನಸ್ಸಲ್ಲಿ ಸೀನಿಯರ್ ಎಂಬುದಕ್ಕಿಂತ ತನ್ನ ಬಗ್ಗೆ ಬೇರೆನೋ ಭಾವನೆ ಇದೆ ಎಂಬುದು ಈಗಾಗಲೇ ಶಶಾಂಕ್ ಅರಿವಿಗೆ ಬಂದಿತ್ತು. ಸಕಲೇಶಪುರಕ್ಕೆ ಹೋದಾಗಲೇ ಮಾಯಾ ಕುಡಿದು ಆಡಿದ ಮಾತುಗಳ ಅದರ ಸೂಕ್ಷ್ಮತೆಯನ್ನು ತೋರಿಸಿತ್ತು. ಬಳಿಕ ಶಶಾಂಕ್, ಮಾಯಾಗೆ ಬುದ್ದಿ ಮಾತನ್ನು ಹೇಳಿದ್ದ. ನಿನ್ನ ತಲೆಯಲ್ಲಿ ಬೇರೆ ಏನೇನೋ ಓಡುತ್ತಿದೆ‌. ಎಲ್ಲವನ್ನು ಬದಿಗಿರಿಸಿ ಕೆಲಸದ ಕಡೆ ಗಮನ ಕೊಡು ಎಂದಿದ್ದ. ಆದರೆ ಈಗ ನೇರವಾಗಿಯೇ ಪ್ರಪೋಸ್ ಮಾಡಿದ್ದಾಳೆ ಮಾಯಾ.

ಸಾರಿಕಾಳನ್ನ ಬಳಸಿಕೊಳ್ಳಲು ಯತ್ನಿಸಿದ್ದ ಮಾಯಾ

ಸಾರಿಕಾಳನ್ನ ಬಳಸಿಕೊಳ್ಳಲು ಯತ್ನಿಸಿದ್ದ ಮಾಯಾ

ಮಾಯಾಗೆ ಸಾರಿಕಾಳನ್ನು ಕಂಡರೆ ಆಗುವುದಿಲ್ಲ. ಹೆತ್ತ ತಾಯಿ ಎಂಬುದನ್ನು ಮರೆತು ಸಾರಿಕಾಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾಳೆ. ಆದರೆ ತನ್ನ ಸ್ವಾರ್ಥಕ್ಕಾಗಿ ಸಾರಿಕಾಳನ್ನು ಅಮ್ಮ ಎಂದು ಕರೆದಿದ್ದಳು. ಈ ಅಮ್ಮ-ಮಗಳ ಪ್ರೀತಿ ಮುಂದುವರೆಯಬೇಕೆಂದರೆ ನೀನು ದಿಯಾ ಶಶಾಂಕ್ ಮದುವೆಯನ್ನು ನಿಲ್ಲಿಸಬೇಕು ಎಂದಿದ್ದಳು. ಮಗಳ ಪ್ರೀತಿಗಾಗಿ ಹಾತೊರೆಯುತ್ತಿದ್ದ ಸಾರಿಕಾ ಅಂತ ಕೆಲಸ ಮಾಡಲು ಮನಸ್ಸು ಮಾಡಲಿಲ್ಲ. ಮಗಳ ಪ್ರೀತಿಗಿಂತ ಮಗಳಂತಿರುವ ದಿಯಾಳ ಜೀವನ ಮುಖ್ಯ ಎಂದೇ ಹೇಳಿದಳು. ಶಶಾಂಕ್‌ ಪ್ರೀತಿ ಮಾಡ್ತಾ ಇರುವುದು ತಪ್ಪು ಅಂತಾನೂ ಸಲಹೆ ನೀಡಿದಳು.

ಮಾಯಾಳ ಪ್ರೀತಿ ದಿಯಾಳಿಗೆ ಗೊತ್ತಾಗುತ್ತಾ?

ಮಾಯಾಳನ್ನು ಕಂಡರೆ ದಿಯಾಳಿಗೆ ಸಹಿಸಲು ಆಗುವುದಿಲ್ಲ. ಕಾರಣ ಸಾರಿಕಾಳ ಭಾವನೆಗೆ ಮಾಯಾ ಬೆಲೆ ಕೊಡಲ್ಲ ಎಂಬ ಬೇಸರ ದಿಯಾಳದ್ದು. ಅದರ ಜೊತೆಗೆ ಶಶಾಂಕ್ ವಿಚಾರದಲ್ಲೂ ಪೊಸೆಸಿವ್ ಆಗಿದ್ದಾಳೆ. ದಿಯಾ ಮತ್ತು ಶಶಾಂಕ್ ಜೊತೆಯಾಗಿದ್ದರೇನೆ ಸಹಿಸಲ್ಲ. ಯಾವಾಗಲೂ ಮಾಯಾಳ ಹೆಸರೇಳಿ ರೇಗಿಸುತ್ತಾ ಇರುತ್ತಾಳೆ. ಏನಾದರೂ ಆ ಪ್ರೀತಿ ನಿಜ ಎಂದು ಗೊತ್ತಾದರೆ ದಿಯಾ ಸುಮ್ಮನೆ ಇರುತ್ತಾಳಾ ಅಥವಾ ಅತ್ತೆಗಾಗಿ ಶಶಾಂಕ್‌ನ ಬಿಟ್ಟುಕೊಡುತ್ತಾಳಾ ಎಂಬ ಪ್ರಶ್ನೆ ಕಾಡುತ್ತಿದೆ.

More from Filmibeat

English summary
Star Suvarna Serial Jeenugoodu Written Update On July 25th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X