ನನ್ನ ರೂಮ್‌ಗೆ ಬಾ 'ವಿಸ್ಕಿ' ಕುಡಿಯೋಣ, ನಿರ್ಮಾಪಕನ ಮುಖವಾಡ ಕಳಚಿದ ನಟಿ..!
ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ. ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ.
ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಎಡಗಾಲಿನಲ್ಲಿ ಒದ್ದು ಬರುತ್ತಾರೆ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ''ಜೆನ್ನಿಫರ್ ಮಿಸ್ತ್ರೀ ಬನ್ಸಿವಾಲ್'' ಸದ್ಯದ ಉದಾಹರಣೆ.

ಹೌದು.. ಜೆನ್ನಿಫರ್ ಮಿಸ್ತ್ರೀ ಬನ್ಸಿವಾಲ್, ಹಿಂದಿ ಕಿರುತೆರೆಯ ಚೆಲುವೆ. ಹಿಂದಿಯ ಜಗದ್ವಿಖ್ಯಾತ ಧಾರಾವಾಹಿ '' ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'' ನೋಡಿದವರು ಇವರನ್ನು ಮರೆಯಲು ಅಸಾಧ್ಯ. ಹಲವಾರು ವರ್ಷಗಳ ಕಾಲ ಈ ಧಾರಾವಾಹಿಯಿಂದನೇ ಗುರುತಿಸಿಕೊಂಡ.. ಈ ಧಾರಾವಾಹಿಯ ಮೂಲಕವೇ ಅನೇಕರ ಹೃದಯವನ್ನು ಗೆದ್ದ.. ಜೆನ್ನಿಫರ್ ಮಿಸ್ತ್ರೀ ಬನ್ಸಿವಾಲ್ ಸದ್ಯ ಇದೇ ಧಾರಾವಾಹಿಯ ಸೃಷ್ಟಿಕರ್ತ ಮತ್ತು ನಿರ್ಮಾಪಕ ''ಅಸಿತ್ ಕುಮಾರ್ ಮೋದಿ'' ವಿರುದ್ಧ ಮತ್ತೊಮ್ಮೆ ಕೆಂಡ ಕಾರಿದ್ದಾರೆ.
''ಪಿಂಕ್‌ವಿಲ್ಲಾ''ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಕಹಿ ಅನುಭವ ನೆನಪು ಮಾಡಿಕೊಂಡಿರುವ ಜೆನ್ನಿಫರ್ ಮಿಸ್ತ್ರೀ, 2018ರಲ್ಲಿ '' ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'' ಧಾರಾವಾಹಿಯ ಆಪರೇಷನ್ ಹೆಡ್ ಸೊಹೈಲ್ ರಮಣಿ ಫೋನ್‌ನಲ್ಲಿ ನನಗೆ ನಿಂದಿಸಿದ್ದರು. ಆ ಸಮಯದಲ್ಲಿ ನಾನು ಸಹಾಯವನ್ನು ಕೇಳಿಕೊಂಡು ನಿರ್ಮಾಪಕ ಅಸಿತ್ ಕುಮಾರ್ ಮೋದಿ ಅವರ ಬಳಿ ಹೋಗಿದ್ದೇ ಎಂದು ಹೇಳಿದ್ದಾರೆ.

ಆಗ ಅಸಿತ್ ನನಗೆ ಸಹಾಯ ಮಾಡುವ ಬದಲು ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು ಎಂದು ಹೇಳಿರುವ ಜೆನ್ನಿಫರ್ ಮಿಸ್ತ್ರೀ ಏನ್ ಮಾಡ್ತಿದ್ದೀಯಾ, ನಿನ್ನ ರೂಮ್‌ಮೇಟ್ ಹೊರಗಡ ಹೋಗುತ್ತಾಳೆ,ಒಬ್ಬಳೇ ಬೋರ್ ಆಗ್ತಿದೆಯಾ? ನನ್ನ ರೂಮ್‌ಗೆ ಬಾ ವಿಸ್ಕಿ ಕುಡಿಯೋಣ ಎಂದು ಹೇಳಿದ್ದರು ಎಂದು ಹೇಳಿದ್ದಾರೆ.
ಮುಂದುವರೆದು ಮಾರನೇ ದಿನ ಕಾಫಿ ಶಾಪ್‌ನಲ್ಲಿ ಅಸಿತ್ ನನ್ನ ಹತ್ತಿರ ಬಂದು ಕುಂತಿದ್ದರು, ನಿನ್ನ ತುಟಿ ತುಂಬಾ ಸೆ*ಕ್ಸಿಯಾಗಿದೆ, ಅದನ್ನು ಹಿಡಿದು ಕಿಸ್ ಮಾಡಬೇಕಂತ ಅನಿಸುತ್ತಿದೆ ಎಂದು ಹೇಳಿದ್ದರು ಎಂದು ಹೇಳಿರುವ ಜೆನ್ನಿಫರ್ ಭಿಡೆ ಪಾತ್ರದಲ್ಲಿ ಅಭಿನಯಿಸಿದ್ದ ನನ್ನ ಸ್ನೇಹಿತ ಮಂದರ್ ಚಂದ್ವಾಡಕರ್ ಕೂಡ ಈ ವಿಚಾರದಲ್ಲಿ ನನ್ನ ಪರವಾಗಿ ನಿಲ್ಲಲಿಲ್ಲ ಎಂದು ಹೇಳಿದ್ದಾರೆ.
ಇನ್ನು ಅಸಿತ್ ಮೋದಿ ನನ್ನ ಹತ್ತಿರ ಬಂದು ಕೂರುವಾಗೆಲ್ಲ ನನ್ನ ಸಹನಟ ಗುರುಚರಣ್ ಸಿಂಗ್ ಬಂದು ನಮ್ಮ ನಡುವೆ ಕುಳಿತುಕೊಳ್ಳುತ್ತಿದ್ದರು ಈ ಮೂಲಕ ಅವರು ನನ್ನ ರಕ್ಷಣೆಯನ್ನು ಮಾಡುತ್ತಿದ್ದರು ಎಂದು ಕೂಡ ಹೇಳಿರುವ ಜೆನ್ನಿಫರ್ ನಾನು ಮೊದಲು ಆ ವ್ಯಕ್ತಿಯ ವರ್ತನೆಯನ್ನು, ಆ ವ್ಯಕ್ತಿಯ ಮಾತುಗಳನ್ನು ಕಡೆಗಣಿಸುತ್ತಿದ್ದೆ ಆದರೆ ಆ ನಂತರ ಇನ್ನೂ ಸಹಿಸಿಕೊಳ್ಳಲು ಸಾಧ್ಯ ಇಲ್ಲ ಅನಿಸಲು ಶುರುವಾಯ್ತು, ನನ್ನ ಮೌನ ನನ್ನನ್ನು ಚುಚ್ಚಲು ಶುರುವಾಯ್ತು, ಹೀಗಾಗಿಯೇ 2023ರಲ್ಲಿ ನಾನು ಆ ಧಾರಾವಾಹಿಯಿಂದ ಹೊರ ಬಂದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಜೆನ್ನಿಫರ್ ಈ ಹಿಂದೆ 2023ರಲ್ಲಿ ಧಾರಾವಾಹಿಯಿಂದ ಹೊರಬಂದ ನಂತರ ಕೂಡ ಅಸಿತ್ ಮೋದಿ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅಸಿತ್ ವಿರುದ್ದ ದೂರು ಕೂಡ ದಾಖಲಿಸಿದ್ದರು. ಆಗಲೂ ಕೂಡ ಜೆನ್ನಿಫರ್ ಅವರ ಮಾತು ಕಿರುತೆರೆಯಲ್ಲಿ ಕಂಪನಕ್ಕೆ ಕಾರಣವಾಗಿತ್ತು. ಈಗಲೂ ಕೂಡ ಹಿಂದಿ ಕಿರುತೆರೆ ಮತ್ತೊಮ್ಮೆ ಕಂಪಿಸುತ್ತಿದೆ.


Click it and Unblock the Notifications











