Jenugoodu: 'ಜೇನುಗೂಡು' ತೊರೆಯುತ್ತಿರೋ ಮೂಲಂಗಿ ಮಾದವ್ವ? ಮುಂದಿನ ಬದಲಾವಣೆ ಯಾರು?

By ಎಸ್ ಸುಮಂತ್

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ಜೇನುಗೂಡು' ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ತಪ್ಪಾಗುವುದಿಲ್ಲ. ಯಾಕಂದ್ರೆ, ಆ ಧಾರಾವಾಹಿಯಲ್ಲಿ ಕೌಟುಂಬಿಕ ಸಂಬಂಧದ ಸಾಕಷ್ಟು ಮೌಲ್ಯವನ್ನು ವೀಕ್ಷಕರ ಮುಂದಿಡುತ್ತಿದೆ. ಅವಿಭಕ್ತ ಕುಟುಂಬದ ಅಂದವನ್ನು ತೆರೆದಿಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅದನ್ನು ನೋಡುವುದಕ್ಕೂ ಸಿಗುವುದಿಲ್ಲ. ಆದರೆ, ಒಂದೇ ಮನೆಯಲ್ಲಿ ಅಣ್ಣ-ತಮ್ಮಂದಿರು, ಸೊಸೆಯಂದಿರು ಸೇರಿದಂತೆ ಮಕ್ಕಳು ಮರಿ ಎಲ್ಲಾ ಇರೋದು ಇದೊಂದೇ ಧಾರಾವಾಹಿಯಲ್ಲಿ. ಒಗ್ಗಟ್ಟಾಗಿದ್ದಾಗ ಇನ್ನೊಬ್ಬರ ಮನಸ್ಸಿಗೆ ನೋವು ಕೊಡದಂತೆ ನಡೆದುಕೊಳ್ಳುವುದು ಹೇಗೆ? ಅವರ ಕಷ್ಟಗಳಿಗೆ ಸ್ಪಂದಿಸೋದು ಹೇಗೆ? ಎಂಬುದೆಲ್ಲಾ ಈ ಧಾರಾವಾಹಿಯಲ್ಲಿ ಅಡಕವಾಗಿದೆ. ಆದರೆ, ಈಗ ಬಹು ಮುಖ್ಯ ಘಟ್ಟದಲ್ಲಿ ಮನೆಯ ಮುದ್ದಿನ ಸೊಸೆ ಬದಲಾಗುತ್ತಿದ್ದಾಳೆ. ಅದೇ ನೋಡುಗರಿಗೆ ಬೇಸರದ ವಿಚಾರ.

Jenugoodu Female Lead charecter Diya Fame Nithya Gowda Leaving serial

ನಡುಕೋಟೆ ಮನೆಯಲ್ಲಿ ದಿಯಾ -ಶಶಾಂಕ್

ನಡುಕೋಟೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಹೆಚ್ಚಾಗಿತ್ತು. ಮನೆಯಲ್ಲಿ ಎಲ್ಲರನ್ನು ಸಮಾನವಾಗಿಯೇ ಕಾಣುತ್ತಾರೆ. ಅದರಲ್ಲೂ ಶಶಾಂಕ್ ಮತ್ತು ದಿಯಾ ಎಂದರೆ ಎಲ್ಲರಿಗೂ ಕೊಂಚ ಪ್ರೀತಿ ಜಾಸ್ತಿಯೇ ಇದೆ. ಯಾಕಂದ್ರೆ, ಕಡೆಯ ತಮ್ಮ ಎಂಬ ಕಾರಣಕ್ಕೆ. ಹೀಗಾಗಿ ಕುಕ್ಕಿ ಗ್ಯಾಂಗ್ ದಿಯಾ ಮತ್ತು ಶಶಾಂಕ್‌ನನ್ನು ಯಾವಾಗಲೂ ರೇಗಿಸುತ್ತಾ, ಕಾಡುತ್ತಾ ನೋಡುಗರಿಗೂ ನಗು ತರಿಸುತ್ತಾ ಇರುತ್ತೆ.

ದಿಯಾ ಬಂದ್ಮೇಲೆ ಹೆಚ್ಚಾಯ್ತು ಮನೆಯ ನಗು

ದಿಯಾಳಿಗೆ ಓದು ಅಂದ್ರೆ ಆಗಲ್ಲ. ಶಶಾಂಕ್ ಸೈಂಟಿಸ್ಟ್. ಇಬ್ಬರ ಯೋಚನೆಯೂ ವಿರುದ್ಧ ದಿಕ್ಕು. ಆದರೂ ಮನೆಯವರೆಲ್ಲ ಸೇರಿ ಮಾಡಿದ ಮದುವೆಯಿದು. ಈಗೀಗ ಇಬ್ಬರ ಮನಸ್ಸಲ್ಲೂ ಪ್ರೀತಿ ಹುಟ್ಟುತ್ತಾ ಇದೆ. ಬದಲಾವಣೆ ಆಗ್ತಾ ಇದೆ. ಆದರೆ, ಇದರ ಬದಲಾವಣೆಯ ಸಂದರ್ಭದಲ್ಲಿ ದಿಯಾಳನ್ನು ಕಾಪಾಡಲೂ ಹೋದವ ಚಾಕು ಚುಚ್ಚಿಸಿಕೊಂಡು, ದಿಯಾಳ ಪ್ರಾರ್ಥನೆಯಿಂದ ಬದುಕಿ ಮನೆಗೆ ಬಂದಿದ್ದಾನೆ. ಪ್ರೀತಿ ಹೆಚ್ಚಾಗಬೇಕಾದ ಸಂದರ್ಭದಲ್ಲಿ ದಿಯಾಳ ಅಮ್ಮ, ಶುಭಾಂಗಿಯಿಂದ ಮತ್ತೆ ಮನಸ್ಸು ಒಡೆಯುತ್ತಿದೆ. ಶಶಾಂಕ್ ಹತ್ತಿರ ಬಂದ ದಿಯಾಳನ್ನು ದೂರ ತಳ್ಳುತ್ತಿದ್ದಾನೆ. ದಿಯಾಳದ್ದು ತಪ್ಪೇ ಇಲ್ಲವಾದರೂ ಶಶಾಂಕ್‌ಗೆ ಅದು ಅರ್ಥವೇ ಆಗುತ್ತಿಲ್ಲ.

ದಿಯಾಳ ಪಾತ್ರ ನಿಭಾಯಿಸುತ್ತಿರುವ ನಿತ್ಯಾ

'ಜೇನುಗೂಡು' ಸಾಕಷ್ಟು ಎಪಿಸೋಡ್‌ಗಳನ್ನು ದಾಟಿ ಮುಂದೆ ಸಾಗುತ್ತಿದೆ. ಈ ಧಾರಾವಾಹಿ ಉತ್ತರ ಕರ್ನಾಟಕದ ಚೆಂದದ ಭಾಷೆಯಲ್ಲಿಯೇ ಸಾಗಿ ಬರುತ್ತಿದೆ. ಕೇಳೋಕು ಚೆಂದ. ಉತ್ತರ ಕರ್ನಾಟಕದ ಮಂದಿ ಮನೆಗೆ ಅಪ್ಪಟ ಬೆಂಗಳೂರಿನ ಹುಡುಗಿ ಸೊಸೆಯಾಗಿ ಹೋಗುತ್ತಾಳೆ. ಆಕೆಯೇ ದಿಯಾ. ಇದೂವರೆಗೂ ಆ ದಿಯಾ ಪಾತ್ರವನ್ನು ನಿತ್ಯಾ ಗೌಡ ನಿಭಾಯಿಸಿಕೊಂಡು ಬಂದಿದ್ದಾರೆ. ಆದ್ರೀಗ ಧಾರಾವಾಹಿಯನ್ನು ತೊರೆಯುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

Jenugoodu Female Lead charecter Diya Fame Nithya Gowda Leaving serial

ದಿಯಾ ಧಾರಾವಾಹಿ ತೊರೆಯುತ್ತಿರುವುದೇಕೆ?

ಧಾರಾವಾಹಿಯಲ್ಲಿ ಪಾತ್ರ ಬದಲಾವಣೆಯಾಗುವುದು ಸಾಮಾನ್ಯ. ಒಂದು ಕಥೆಗೆ ಆ ಪಾತ್ರಧಾರಿ ಹೊಂದಾಣಿಕೆಯಾಗದೆ ಇರುವುದು ಅಥವಾ ಧಾರಾವಾಹಿ ಸಾಗುತ್ತಾ ಸಾಗುತ್ತಾ ಆರ್ಟಿಸ್ಟ್‌ಗಳಿಗೆ ಸಮಯವೇ ಸಿಗದೆ ಇರುವುದು. ಹೀಗೆ ಅನೇಕ ಕಾರಣಗಳಿಂದ ಪಾತ್ರಧಾರಿಗಳ ಬದಲಾವಣೆಯಾಗುತ್ತದೆ. 'ಜೇನುಗೂಡು' ಧಾರಾವಾಹಿಯಲ್ಲೂ ಈಗಾಗಲೇ ಸಾಕಷ್ಟು ಪಾತ್ರಗಳು ಬದಲಾವಣೆಯಾಗಿದೆ. ಮಾಯಿ, ಸುಮಿ, ನಯನಾ ಹೀಗೆ. ಈಗ ಮತ್ತೊಂದು ಬಹಳ ಮುಖ್ಯವಾದ ದಿಯಾ ಪಾತ್ರ ಬದಲಾಗುತ್ತಿದೆ. ಆ ಬಬ್ಲಿ ಕ್ಯಾರೆಕ್ಟರ್ ಗೆ, ಶಶಾಂಕ್‌ನ ಕೋಪಕ್ಕೆ ತಕ್ಕನಾದ ಹೆಂಡತಿಯಾಗಿ ನಿತ್ಯಾ ಗೌಡ ಮ್ಯಾಚ್ ಆಗಿದ್ದರು. ಮೂಲಗಳ ಪ್ರಕಾರ ನಿತ್ಯಾಗೌಡ ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ ಎನ್ನಲಾಗಿದೆ. ಒಂದ್ವೇಳೆ ಅವರು ಧಾರಾವಾಹಿ ತೊರೆದರೆ, ಆ ಪಾತ್ರಕ್ಕೆ ಯಾರು ಬರುತ್ತಾರೆ..? ಅನ್ನೋದು ವೀಕ್ಷಕರ ಕುತೂಹಲ.

More from Filmibeat

English summary
Star suvarna Jenugoodu Female Lead charecter Diya Fame Nithya Gowda Leaving serial, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X