Spandan Prasad: 'ಜೇನುಗೂಡು' ಧಾರಾವಾಹಿಯ ಸಾರಿಕಾಗೆ ಲಿಪ್ ಸ್ಟಿಕ್ ಹಾಕೋದಕ್ಕೆ ಎಷ್ಟು ಸಮಯ ಬೇಕು?
ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು' ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದೆ. ಆ ಧಾರಾವಾಹಿಯಲ್ಲಿ ಫ್ಯಾಮಿಲಿ ಸಂಬಂಧಗಳಿಗೆ ಮಹತ್ವ ಕೊಡುವುದರ ಜೊತೆ ಜೊತೆಗೆ ಮನರಂಜನೆಯ ಮಹಾಪೂರವೇ ಅಲ್ಲಿ ಸಿಗುತ್ತದೆ. ಅದಕ್ಕಾಗಿಯೇ ದಿನೇ ದಿನೇ ತನ್ನ ವೀಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ 'ಜೇನುಗೂಡು' ಧಾರಾವಾಹಿ.
ಧಾರಾವಾಹಿಯಲ್ಲಿ ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ ಇದೆ. ಎಷ್ಟು ಸ್ವಚ್ಛವಾಗಿ ಮಾತನಾಡುತ್ತಾರೆ ಎಂದರೆ ಅಲ್ಲಿರುವ ಕಲಾವಿದರೆಲ್ಲರೂ ಉತ್ತರ ಕರ್ನಾಕಟದ ಮಂದಿಯೇನೋ ಎಂಬಂತೆ ಫೀಲ್ ಆಗದೆ ಇರದು. ಒಂದಷ್ಟು ಮಂದಿ ಪಕ್ಕಾ ಬೆಂಗಳೂರಿನ ಕಲಾವಿದರು ಸಹ ಆ ಧಾರಾವಾಹಿಯಲ್ಲಿದ್ದಾರೆ. ಕಲಾವಿದರು ಎಂದರೆ ಹಾಗೆ ಅಲ್ಲವೇ. ಯಾವ ನಟನೆಯಾದರೇನು? ಯಾವ ಭಾಷೆಯಾದರೇನು? ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಈ ಧಾರಾವಾಹಿಯಲ್ಲಿ ಡಾಕ್ಟರ್ ತಂಗಿ ಪಾತ್ರದಲ್ಲಿ ಸ್ಪಂದನಾ ಪ್ರಸಾದ್ ನಟಿಸಿದ್ದಾರೆ. ಅವರ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಸೀರೆಯಲ್ಲಿ ಮಿಂಚಿದ ಸ್ಪಂದನಾ ರಿಯಲ್ ಲೈಫ್‌ನಲ್ಲಿ ಮಾಡರ್ನ್
ಸ್ಪಂದನಾ ರಂಗಭೂಮಿ ಕಲಾವಿದೆ. ಈಗಾಗಲೇ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನೀನಾಸಂನಿಂದ ತರಬೇತಿಯನ್ನು ಪಡೆದಿದ್ದಾರೆ. ಈಗಾಗಲೇ ಅಚ್ಯುತ್ ಕುಮಾರ್, ಶರಣ್ ಸೇರಿದಂತೆ ಅನೇಕ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಸ್ಪಂದನಾ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ 'ಜೇನುಗೂಡು' ಮತ್ತು 'ಕಮಲಿ' ಧಾರಾವಾಹಿಯಲ್ಲಿ ಎಲ್ಲರ ಚಿತ್ತ ಕದಿಯುತ್ತಿರುವ ಸ್ಪಂದನಾ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಆದರೆ ನಟನಾ ಜಗತ್ತಿನ ಆಚೆ ನೋಡಿದರೆ ಅವರು ಸೀರೆಯಲ್ಲಿ ಮಾತ್ರವಲ್ಲ ವೆಸ್ಟರ್ನ್ ಡ್ರೆಸ್ ನಲ್ಲೂ ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಾಣುತ್ತಿದ್ದಾರೆ.

'ಜೇನುಗೂಡು' ಆಯ್ಕೆ ಬಗ್ಗೆ ಸ್ಪಂದನಾ ಮಾತು
ಮೊದಲೇ ಹೇಳಿದಂತೆ 'ಜೇನುಗೂಡು' ಧಾರಾವಾಹಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ಕುಟುಂಬ ಸಮೇತ ಕೂತು, ಒಂದು ಎಪಿಸೋಡ್ ಮಿಸ್ ಮಾಡಿಕೊಳ್ಳದೆ ನೋಡಿಸಿಕೊಳ್ಳುವ ಕಥೆ ಹೊಂದಿದೆ, ಡೈಲಾಗ್ ಕೂಡ ಅಷ್ಟೆ ಅಚ್ಚುಕಟ್ಟಾಗಿದೆ. ಈ ಧಾರಾವಾಹಿಯಲ್ಲಿ ಸ್ಪಂದನಾ, ಸಾರಿಕಾ ಎಂಬ ಪಾತ್ರ ಮಾಡುತ್ತಿದ್ದಾರೆ. ಹೆಚ್ಚು ಹೊತ್ತು ಬಾರದೆ ಇದ್ದರು, ಬಂದಷ್ಟು ಸಮಯ ಎಲ್ಲರ ಮನಸ್ಸಲ್ಲೂ ಸ್ಪಂದನಾ ಉಳಿಯುವುದರಲ್ಲಿ ಡೌಟೇ ಇಲ್ಲ. ಆ ಧಾರಾವಾಹಿಗೆ ಆಯ್ಕೆಯಾಗಿದ್ದರ ಬಗ್ಗೆ ಫಿಲಂಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ʻಕಿರುತೆರೆ ವೃತ್ತಿ ಆರಂಭಿಸಿದ್ದೆ ಸ್ಟಾರ್ ಸುವರ್ಣದಲ್ಲಿ. ಆಗ ತಾನೇ ನಿನಾಸಂ ಮುಗಿಸಿ ಬೆಂಗಳೂರಿಗೆ ಬಂದಿದ್ದ ನನಗೆ 'ಶ್ರೀರಾಘವೇಂದ್ರ ವೈಭವ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸುರೇಶ್ ಸರ್ ಅವಕಾಶ ಕೊಟ್ಟಿದ್ದರು. ನಂತರ 'ಸತ್ಯಂ ಶಿವಂ ಸುಂದರಂ' ಎಂಬ ಧಾರಾವಾಹಿಯಲ್ಲಿ ಸತತ 5 ವರ್ಷಗಳ ಕಾಲ ನಟಿಸಿದ್ದೆ. ನಂತರ ಮತ್ತೆ 'ವಸಂತ' ಧಾರಾವಾಹಿಯಲ್ಲಿ ನಟಿಸಿದ್ದೆ, ಇನ್ನೇನು 'ವಸಂತ'ದ ಜರ್ನಿ ಮುಗಿಯುವುದರೊಳಗೆ 'ಜೇನುಗೂಡು' ಧಾರಾವಾಹಿಗೆ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆʼ ಎಂದು 'ಜೇನುಗೂಡು' ಸೇರಿದ ದಾರಿಯನ್ನು ಹಂಚಿಕೊಂಡಿದ್ದಾರೆ.
ಲಿಪ್ ಸ್ಟಿಕ್ ಬಗ್ಗೆ ಸ್ಪೆಷಲ್ ವಿಡಿಯೋ
ಶೂಟಿಂಗ್ ಸೆಟ್ ಗೆ ಹೋದಾಗ ಮೊದಲು ಮೇಕಪ್ ಹಾಕಿಸಿಕೊಳ್ಳುವ ಕೆಲಸವನ್ನು ಎಲ್ಲಾ ಕಲಾವಿದರು ಮಾಡುತ್ತಾರೆ. ಆಗಾಗ ಟಚ್ ಅಪ್ ಕೂಡ ಇದ್ದೆ ಇರುತ್ತದೆ. ಇದೇನು ಹೊಸ ವಿಷಯವಲ್ಲ. ಆದರೆ ಸ್ಪಂದನಾ ವಿಡಿಯೋವೊಂದನ್ನು ಶೇರ್ ಮಾಡಿರೋದೆ ಹೊಸ ವಿಚಾರಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳಿಗೆ ಆಲ್ ಮೋಸ್ಟ್ ಲಿಪ್ ಸ್ಟಿಕ್ ಅಂದರೆ ಇಷ್ಟ. ವೆರೈಟಿ ವೆರೈಟಿ ಕಲೆಕ್ಷನ್ ಮಾಡಿಕೊಳ್ಳುವವರು ಇದ್ದಾರೆ. ಇನ್ನು ಲಿಪ್ ಸ್ಟಿಕ್ ಅಪ್ಲೈ ಮಾಡಿಕೊಳ್ಳುವಾಗಲೂ ಅಷ್ಟೆ ಪ್ರೀತಿಯಿಂದ ಹಚ್ಚಿಕೊಳ್ಳುತ್ತಾರೆ ಅಂತದ್ದೊಂದು ವಿಡಿಯೋವೊಂದನ್ನು ಸ್ಪಂದನಾ ಶೇರ್ ಮಾಡಿಕೊಂಡಿದ್ದಾರೆ. ಮೇಕಪ್ ಮ್ಯಾನ್ ಲಿಪ್ ಸ್ಟಿಕ್ ಹಚ್ಚುತ್ತಾ ಇದ್ದರೆ ಸ್ಪಂದನಾ ಫುಲ್ ಸೀರಿಯಸ್ ಆಗಿ ಕೂತಿರುತ್ತಾರೆ.

ಸಿನಿಮಾದಲ್ಲೂ ಬ್ಯುಸಿ
ಸ್ಪಂದನಾ ಸದ್ಯ ಧಾರಾವಾಹಿ ಜೊತೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದ 'ದಾರಿ ಯಾವುದಯ್ಯ ವೈಕುಂಠಕ್ಕೆ' ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದಾರೆ. ಸ್ಮಶಾನದಲ್ಲೆ ನಡೆಯುವ ಕಥೆಯಲ್ಲಿ ಸ್ಪಂದನಾ ಕೂಡ ಸ್ಮಶಾನದಲ್ಲಿಯೇ ತಮ್ಮ ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications











