Jenugoodu Serial:'ಜೇನುಗೂಡಿ'ಗೆ ಆವನಿ ಎಂಟ್ರಿ : ನಡುಕೋಟೆ ಮನೆ ಸೇರುತ್ತಾಳಾ..?

By ಎಸ್ ಸುಮಂತ್

ನಡುಕೋಟೆ ಮನೆಯಲ್ಲಿ ದಿಯಾ ಬಂದ ಮೇಲೆ ಖುಷಿ ದುಪ್ಪಟ್ಟು ಆಗಿದೆ. ಆದರೆ ಆಗಾಗ ಈ ಖುಷಿಯನ್ನು ಹಾಳು ಮಾಡುವುದಕ್ಕೆಂದೇ ಮಾಯಾ ಎಂಟ್ರಿಯಾಗುತ್ತಾ ಇರುತ್ತಾಳೆ. ಅದನ್ನೆಲ್ಲಾ ಮೀರಿ ಮನೆಯ ಸಂತೋಷವನ್ನು ಹೇಗೆ ಇಟ್ಟುಕೊಳ್ಳಬೇಕು ಅಂತ ದಿಯಾಳಿಗೆ ಗೊತ್ತಿಲ್ಲದೆ ಹೋದರೂ, ಅವಳ ನಡವಳಿಕೆಯಿಂದಾನೇ ಎಲ್ಲವೂ ಒಳ್ಳೆಯದ್ದಾಗುತ್ತಿದೆ.

ಶಶಾಂಕ್ ಕೂಡ ಈಗ ತುಂಬಾ ಬದಲಾಗಿದ್ದಾನೆ. ಈ ಮೊದಲೆಲ್ಲಾ ಮಾಯಾಗೆ ಮೊದಲು ಪ್ರಾಶಸ್ತ್ಯ ನೀಡುತ್ತಿದ್ದ. ಆದರೆ ಮಾಯಾ, ಈಗ ದಿಯಾಳ ಬಗ್ಗೆ ಬೇರೆ ರೀತಿಯಾಗಿ ಮಾತನಾಡಿದರೆ ಸಾಕು ಅಲ್ಲಿಗೆ ನಿಲ್ಲಿಸುತ್ತಾನೆ. ದಿಯಾಳಿಗೆ ಅವಳ ಮುಂದೆ ಸಪೋರ್ಟ್ ಮಾಡುತ್ತಾನೆ. ಆದರೆ ಈಗ ನಡುಕೋಟೆಯಲ್ಲಿ ಅಡಗಿದ್ದ ಸತ್ಯವೊಂದು ಹೊರ ಬರುತ್ತಿದೆ.

ನಡುಕೋಟೆ ಮನೆಯಲ್ಲಿ ಆವನಿಯದ್ದೇ ಕುತೂಹಲ..!

ನಡುಕೋಟೆ ಮನೆಯಲ್ಲಿ ಆವನಿಯದ್ದೇ ಕುತೂಹಲ..!

ನಡುಕೋಟೆ ಮನೆಯದ್ದು ತುಂಬು ಸಂಸಾರ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರುತ್ತಾರೆ. ಒಬ್ಬರಿಗೆ ಕಷ್ಟ ಬಂದರೂ ಇಡೀ ಕುಟುಂಬಸ್ಥರು ಒದ್ದಾಡುತ್ತಾರೆ. ನನ್ನ ಹಣ, ನನ್ನ ಸಂಸಾರ, ನನ್ನ ಸುಖ ಅಂತ ಎಂದಿಗೂ ಅಂದುಕೊಳ್ಳುವುದಿಲ್ಲ. ಎಲ್ಲರೂ ನಮ್ಮವರು ಎಂದೇ ಬಾಳುತ್ತಿರುವುದು. ಸಂಬಂಧ ಅಂದ್ರೆ ಏನು..? ಸಂಬಂಧಗಳಿಗೆ ಯಾವ ರೀತಿಯಾದ ಬೆಲೆ ಕೊಡಬೇಕು ಎಂಬುದನ್ನು ನಡುಕೋಟೆ ಮನೆಯನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಆದರೆ ಈಗ ನಡುಕೋಟೆ ಮನೆಯಲ್ಲಿ ಬಚ್ಚಿಟ್ಟ ಸತ್ಯವೊಂದು ಹೊರ ಬರುವುದಕ್ಕೆ ಹೊಗೆಯಾಡುತ್ತಿದೆ.

ಆವನಿ ಹೆಸರೇಳಿದರೆ ಮಾಯಿ ಕಣ್ಣೀರು..!

ಆವನಿ ಹೆಸರೇಳಿದರೆ ಮಾಯಿ ಕಣ್ಣೀರು..!

ಈ ಮೊದಲಿನಿಂದಾನೂ ಜೇನುಗೂಡಿನಂತಿರುವ ನಡುಕೋಟೆಯಲ್ಲಿ ಆವನಿ ಹೆಸರು ಬಂದು ಹೋಗುತ್ತದೆ. ಬಂದಾಗೆಲ್ಲಾ ಮಾಯಿ ಕಣ್ಣಲ್ಲಿ ನೀರು ಬಿಟ್ಟರೆ ಆ ನೀರು ಯಾಕೆ ಬರುತ್ತಿದೆ ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಸುಮಿ ಮದುವೆ, ಶಶಾಂಕ್ ಮದುವೆ, ವೀಣಾ ಅತ್ತೆ ಮದುವೆ ಹೀಗೆ ಎಲ್ಲರ ಮದುವೆಯಲ್ಲೂ ಆವನಿಯ ಹೆಸರು ಮಾತ್ರ ಸುಳಿಯಿತು. ಅವಳು ಎಲ್ಲಿದ್ದಾಳೆ..? ಯಾಕೆ ದೂರ ಇಟ್ಟಿದ್ದಾರೆ..? ಇದ್ಯಾವುದರ ಸುಳಿವೇ ಇಲ್ಲದಂತೆ ಬದುಕುತ್ತಿದ್ದಾರೆ. ಇತ್ತೀಚೆಗೆ ಶರತ್ ತಂದೆಯಾಗುತ್ತಿದ್ದಾನೆ. ನಯನಾ ತಾಯಿ ಆಗುತ್ತಿರುವುದನ್ನು ಕೇಳಿ ಸಂತಸ ಪಟ್ಟರು. ಇದೇ ವೇಳೆ ಶಾಸ್ತ್ರವೊಂದನ್ನು ಮಾಡಬೇಕಾಗಿತ್ತು. ಆಗ ಆವನಿ ಹೆಸರು ಬಂದಾಗಲೂ ಮಾಯಿ ಕಣ್ಣಲ್ಲಿ ನೀರು.. ದಾದಾ ಕಣ್ಣಲ್ಲಿ ಕೋಪವೇ ಕಂಡಿತ್ತು.

ದಾದಾ ಕೋಪದ ಹಿಂದಿರೋ ಕಾರಣವೇನು..?

ದಾದಾ ಕೋಪದ ಹಿಂದಿರೋ ಕಾರಣವೇನು..?

ಮನೆಯಲ್ಲಿ ಎಷ್ಟೇ ನಗು ನಗುತ್ತಾ ಇದ್ದರು ಆವನಿ ಎಂಬ ಹೆಸರು ತೆಗೆದ ಕೂಡಲೇ ಮೃದುವಾಗಿದ್ದ ದಾದಾ ಕುಪಿತರಾಗಿ ಬಿಡುತ್ತಾರೆ. ಎಲ್ಲರ ಮೇಲೂ ರೇಗುವುದಕ್ಕೆ ಶುರು ಮಾಡುತ್ತಾರೆ. ಆ ಹೆಸರನ್ನು ಎತ್ತಬಾರದು ಎಂದು ಮಾಯಿಗೂ ಎಚ್ಚರಿಕೆ ನೀಡುತ್ತಾರೆ. ಇದು ಮನೆಯ ಮಕ್ಕಳಿಗೆ ಆಶ್ಚರ್ಯವಾಗಿದೆ. ಆವನಿಯ ಸತ್ಯ ಗೊತ್ತಿರುವುದು ಕೇವಲ ಮನೆಯ ದೊಡ್ಡವರಿಗೆ ಮಾತ್ರ. ಹೀಗಾಗಿ ಕುತೂಹಲವೂ ಎಲ್ಲರನ್ನು ಕಾಡುತ್ತಿದೆ.

ಆವನಿ ಕರೆತರಲು ರೆಡಿಯಾದ ದಿಯಾ

ಆವನಿ ಕರೆತರಲು ರೆಡಿಯಾದ ದಿಯಾ

ದಿಯಾ ತುಂಬಾ ಬುದ್ಧಿವಂತಳು ಅಲ್ಲ. ಆದರೂ ದಿಯಾಳಿಂದ ಸಂಸಾರದಲ್ಲಿ ಉಂಟಾಗಿದ್ದು ಎಷ್ಟೋ ಸಮಸ್ಯೆಗಳು ಕ್ಲಿಯರ್ ಆಗಿದ್ದಾವೆ. ಹೀಗಾಗಿ ದಿಯಾಳನ್ನು ಮನೆಯ ಮಹಾರಾಣಿ ಎಂದೇ ಎಲ್ಲರೂ ಸ್ವೀಕರಿಸಿದ್ದಾರೆ. ಹೀಗಾಗಿ ಸಣ್ಣ ಸಮಸ್ಯೆಯಾದರೂ ದಿಯಾಳನ್ನು ಕರೆಯುತ್ತಾರೆ. ದಿಯಾ ಕೂಡ ಮನೆಯ ಸುಖಕ್ಕಾಗಿ ಏನೂ ಬೇಕಾದರೂ ಮಾಡುವುದಕ್ಕೆ ಹೊರಡುತ್ತಾಳೆ. ಈಗ ಮಾಯಿಯ ದುಃಖ ನೋಡುವುದಕ್ಕೆ ಆಗದೆ, ಸಂಕಟಪಡುತ್ತಿದ್ದಾಳೆ. ಆವನಿ ಕೂಡ ಎಂಟ್ರಿಯಾಗಿ ಆಗಿದೆ. ಆವನಿಯನ್ನು ಭೇಟಿ ಮಾಡಿಸುತ್ತೀನಿ ಎಂದು ಪ್ರಾಮೀಸ್ ಮಾಡುವಾಗಲೇ ದಾದಾ ನಾನು ಬದುಕಿರುವ ತನಕ ಅದೇಗೆ ಸಾಧ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

More from Filmibeat

English summary
Jenugoodu Serial Written Update on January 24th Episode. Here Is The Details On Avani Entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X