ಸರಿಗಮಪ 14 : ಎರಡನೇ ಸ್ಥಾನವನ್ನು ಹಂಚಿಕೊಂಡ ಕೀರ್ತನ, ಜ್ಞಾನೇಶ್
Recommended Video

ಈ ಬಾರಿಯ ಸರಿಗಮಪ ಕಾರ್ಯಕ್ರಮ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಒಬ್ಬರಿಗಿಂತ ಒಬ್ಬರು ಪೈಪೋಟಿ ನೀಡುವಂತೆ ಹಾಡುತ್ತಿದ್ದ ಮಕ್ಕಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಇತ್ತು. ಇನ್ನು ನಿನ್ನೆ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ವಿಶ್ವ ಪ್ರಸಾದ್ ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ.
ವಿಶೇಷ ಅಂದರೆ, ಸರಿಗಮಪ ಸೀಸನ್ 14 ಕಾರ್ಯಕ್ರಮದಲ್ಲಿ ಇಬ್ಬರು ಸ್ಪರ್ಧಿಗಳು ಎರಡನೇ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಹುಡುಗಿ ಕೀರ್ತನ ಹಾಗೂ ಉತ್ತರ ಕರ್ನಾಟಕದ ಹುಡುಗ ಜ್ಞಾನೇಶ್ವರ್ ರನ್ನರ್ ಅಪ್ ಆಗಿದ್ದಾರೆ. ಮೂರನೇ ಸ್ಥಾನವನ್ನು ರದ್ದು ಮಾಡಿ ಎರಡನೇ ಸ್ಥಾನವನ್ನು ಈ ಇಬ್ಬರು ಮಕ್ಕಳಿಗೆ ನೀಡಲಾಗಿದೆ.
ಕೀರ್ತನ ಫೈನಲ್ ಗೆ ಆಯ್ಕೆ ಆದ ಏಕೈಕ ಹುಡುಗಿ ಆಗಿದ್ದರು. ಫೈನಲ್ ನಲ್ಲಿನ ಎರಡು ಸುತ್ತಿಗಳಲ್ಲಿ ಕಷ್ಟದ ಹಾಡನ್ನು ಆಯ್ಕೆ ಮಾಡಿ ಸುಂದರವಾಗಿ ಹಾಡಿ ತೀರ್ಪುಗಾರರ ಮೆಚ್ಚುಗೆ ಗಳಿಸಿದರು. ಜ್ಞಾನೇಶ್ ಸಹ ಗ್ರಾಂಡ್ ಫಿನಾಲೆಗೆ ತಕ್ಕಂತೆ ಹಾಡಿ ಗೋಲ್ಡನ್ ಬಜಾರ್ ಪಡೆದರು. ಈ ಇಬ್ಬರ ಪ್ರತಿಭೆಯನ್ನು ಪರಿಗಣಿಸಿ ಇಬ್ಬರನ್ನು ರನ್ನರ್ ಆಪ್ ಮಾಡಲಾಗಿದೆ.

ರನ್ನರ್ ಅಪ್ ಆಗಿರುವ ಕೀರ್ತನ ಹಾಗೂ ಜ್ಞಾನೇಶ್ ಟ್ರೋಫಿಯ ಜೊತೆಗೆ ತಲ ಎರಡು ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದಿದ್ದಾರೆ.


Click it and Unblock the Notifications











