'ಜೊತೆಜೊತೆಯಲಿ' ಧಾರಾವಾಹಿಗೆ 'ಜೋಡಿಹಕ್ಕಿ' ಎಂಟ್ರಿ: ಚೈತ್ರಾ ಮೇಡಂ ಎಂಟ್ರಿಗೆ ರೆಸ್ಪಾನ್ಸ್ ಹೇಗಿದೆ?

By ಎಸ್ ಸುಮಂತ್

'ಜೊತೆ ಜೊತೆಯಲಿ' ಧಾರಾವಾಹಿ ಇದೀಗ ತನ್ನ ಸಮಯವನ್ನೇ ಬದಲಾಯಿಸಿಕೊಂಡಿದ್ದು, ದಿನೇ ದಿನೇ ಹೊಸರೂಪದಲ್ಲಿ ಮುನ್ನುಗ್ಗುತ್ತಿದೆ. ಸಂಜುಗೆ ಆಗಾಗ ಆರ್ಯನ ನೆನಪುಗಳು ಕಾಡುತ್ತಿವೆ. ಏನು ಸ್ಪಷ್ಟತೆ ಇಲ್ಲದೆ ಹೋದರೂ ಅನುಳನ್ನು ಸಂಜು ಮನಸ್ಸು ಬಯಸುತ್ತಿದೆ. ಇದು ಅನುಗೆ ಮುಜುಗರದ ಜೊತೆಗೆ ಕೋಪವನ್ನು ತರಿಸುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಅನು ಬೇರೆಯದ್ದೇ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದಾರೆ.

ಆರ್ಯವರ್ಧನ್ ದೇಹಕ್ಕೆ ವಿಶ್ವಾಸ್ ದೇಸಾಯಿ ಮುಖವನ್ನು ಜೋಡಿಸಲಾಗಿದೆ. ಈ ಸತ್ಯ ಪ್ರಿಯದರ್ಶಿನಿಗೆ ಮಾತ್ರ ಗೊತ್ತಿರುವುದು. ಜೊತೆಗೆ ಆಕ್ಸಿಡೆಂಟ್ ಆದ ರಭಸಕ್ಕೆ ಆರ್ಯನ ನೆನಪುಗಳು ಅಳಿಸಿ ಹೋಗಿದೆ. ಹೀಗಾಗಿ ಸತ್ಯಾಂಶ ಗೊತ್ತಿರುವ ಪ್ರಿಯದರ್ಶಿನಿ, ಆತನ ಹೆಸರನ್ನು ಆರ್ಯನ ಮೊದಲ ಹೆಸರಾದ ಸಂಜಯ್ ಪಾಟೀಲ್ ಹೆಸರಿನಲ್ಲಿಯೇ ಹೇಳಿ ಬಿಟ್ಟು ಹೋಗಿದ್ದಾಳೆ.

ಸಂಜಯ್ ಶಾಕ್ ಕೊಟ್ಟ ಅನು

ಸಂಜಯ್ ಶಾಕ್ ಕೊಟ್ಟ ಅನು

ಅನು ಎಂದರೆ ಏನೋ ಒಂಥರಾ ಸ್ಪೆಷಲ್ ಅಟ್ರಾಕ್ಷನ್ ರೀತಿ ಸಂಜು ವರ್ತಿಸುತ್ತಿದ್ದಾನೆ. ಇದು ಮನೆಯವರಿಗೂ ಕೊಂಚ ವಿಚಿತ್ರ ಎಂದೇ ಎನಿಸುತ್ತದೆ. ಆದರೆ, ಸಂಜು ಅದನ್ನೆಲ್ಲಾ ಗಮನಕ್ಕೆ ತೆಗೆದುಕೊಳ್ಳದೆ ತಾನೂ ಅನುಗಾಗಿ ಏನು ಮಾಡಬಹುದು ಎಂಬುದನ್ನಷ್ಟೇ ಗಮನ ಹರಿಸಿದ್ದಾನೆ. ಅನು ತವರಿಗೆ ಹೋಗಿ, ಎಷ್ಟೋ ದಿನಗಳಾದ ಮೇಲೆ ಮನೆಗೆ ಬಂದಿದ್ದಾಳೆ. ಅದಕ್ಕಾಗಿ ಇಡೀ ಮನೆಯನ್ನು ಅಲಂಕಾರ ಮಾಡಿ, ಕೇಕ್ ಕೂಡ ತರಿಸಿದ್ದಾನೆ ಸಂಜು. ಆದರೆ, ಅನು ಹಿಂತಿರುವಾಗ ಕರೆದುಕೊಂಡು ಬಂದ ವ್ಯಕ್ತಿ ಸಂಜುಗೆ ಶಾಕ್ ನೀಡಿದ್ದಾರೆ.

ಆರಾಧನಾ ಆಗಿ ಮನೆಗೆ ಬಂದ ಚೈತ್ರಾ ರಾವ್

ಆರಾಧನಾ ಆಗಿ ಮನೆಗೆ ಬಂದ ಚೈತ್ರಾ ರಾವ್

ಆರ್ಯನ ಮುಖ ವಿಶ್ವಾಸ್ ದೇಸಾಯಿಯ ಮುಖವನ್ನು ಹೋಲುತ್ತಿದೆ. ಜೊತೆಗೆ ಸಂಜುಗೆ ಹೆಂಡತಿ ಇರುವ ವಿಚಾರ ಮನೆಯವರಿಗೆಲ್ಲ ಗೊತ್ತಿದೆ. ಸಂಜು ಅನು ಜೊತೆ ನಡೆದುಕೊಳ್ಳುವ ರೀತಿಗೆ ಅನು ಕಿರಿಕಿರಿ ಅನುಭವಿಸುತ್ತಿದ್ದಾಳೆ. ಪದೇ ಪದೇ ಆರಾಧನಾ ಬಗ್ಗೆಯೇ ಕೇಳುತ್ತಿರುತ್ತಾಳೆ. ಆದರೆ ಕೇಳಿದಾಗೆಲ್ಲಾ ಯಾಮಾರಿಸುವ ಸಂಜುಗೆ ಅನುನೇ ಶಾಕ್ ನೀಡಿದ್ದಾಳೆ. ಸಂಜಯ್ ಮುಂದೆ ಆರಾಧನಾಳನ್ನು ಕರೆ ತಂದು ನಿಲ್ಲಿಸಿದ್ದಾರೆ.

ಸಂಜು ಸತ್ಯ ಬಿಚ್ಚಿಟ್ಟ ಆರಾಧನಾ

ಸಂಜು ಸತ್ಯ ಬಿಚ್ಚಿಟ್ಟ ಆರಾಧನಾ

ಆರ್ಯವರ್ಧನ್ ಮತ್ತೊಂದು ಹೆಸರು ಸಂಜಯ್ ಪಾಟೀಲ್. ಆ ಹೆಸರಿನ ಹಿನ್ನೆಲೆ ಅನು, ಝೇಂಡೆ, ಆರ್ಯವರ್ಧನ್, ಪ್ರಿಯದರ್ಶಿನಿಗೆ ಮಾತ್ರ ಗೊತ್ತಿತ್ತು. ಈಗ ಆರ್ಯನೇ ಮನೆಯಲ್ಲಿರುವ ಸಂಜು ಎಂಬುದು ಪ್ರಿಯದರ್ಶಿನಿಗೆ ಮಾತ್ರ ಗೊತ್ತಿರುವ ಕಾರಣ ಸಂಜು ಅಂತಾನೆ ಹೆಸರಿಟ್ಟಿದ್ದಾರೆ. ಆರಾಧನಾಳ ಮುಂದೆ ಸಂಜು ಎಂದು ಕರೆದಾಗ, ಇವರ ಹೆಸರು ಸಂಜು ಅಲ್ಲ ವಿಶ್ವಾಸ್ ದೇಸಾಯಿ ಎಂದೇ ಹೇಳಿದ್ದಾಳೆ. ಆದರೆ ಮನೆಯವರಿಗೆ ಆ ಬಗ್ಗೆ ಅರ್ಥವೇ ಆಗಿಲ್ಲ. ಅನುಗೂ ಹಳೆಯ ವಿಚಾರ ನೆನಪಾಗಿಲ್ಲ.

'ಜೋಡಿಹಕ್ಕಿ' ಟೀಚರ್ ಕಂಡು ಖುಷಿ

'ಜೋಡಿಹಕ್ಕಿ' ಟೀಚರ್ ಕಂಡು ಖುಷಿ

ಇನ್ನು 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಆರ್ಯವರ್ಧನ್ ಹೊರ ಹೋದ ಮೇಲೆ ಹಲವರು ಧಾರಾವಾಹಿ ಮೇಲಿನ ಆಸಕ್ತಿ ಕಳೆದುಕೊಂಡಿದ್ದಾರೆ. ಆದರೂ ಕಥೆಯಲ್ಲಿ ಎಕ್ಸ್ ಟ್ರಾ ಪಾತ್ರಗಳನ್ನು ಕರೆ ತರುತ್ತಿರುವುದಿಂದ ನೋಡುಗರು ರೊಚ್ಚಿಗೆದ್ದಿದ್ದಾರೆ. ಇನ್ನು ಹಲವರು ಟೀಚರಮ್ಮನನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಏನು ಜಾನಕಿ ಟೀಚರ್ ಇಲ್ಲ? ಅವಳಿಗೆ ಬ್ರೇಕ್ ಬೇಕಾಗಿದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಧಾರಾವಾಹಿಯನ್ನು ಹಾಳು ಮಾಡಿಬಿಟ್ಟಿದ್ದಾರೆ. ಅನು ಇನ್ನು ಎಷ್ಟು ತಿಂಗಳು ಪ್ರೆಗ್ನೆಂಟ್ ಆಗಿ ಇರುತ್ತಾರೆ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

More from Filmibeat

English summary
Jodi Hakki Actress Chaitra Rao Entered In Jothe Jotheyali Serial . Here is the details about Chaitra Rao Entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X