Bhargavi LLB: ಭಾರ್ಗವಿ ಎಲ್‌ಎಲ್‌ಬಿ ಮೂಲಕ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿರೋ ಈ ನಟಿ ನೆನೆಪಿದೆಯೇ?

By ಅನಿತಾ ಬನಾರಿ

ಜಾನಕಿ ಟೀಚರ್ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಚೈತ್ರಾ ರಾವ್ ಇದೀಗ ಮರಳಿ ಬಂದಿದ್ದಾರೆ. ಹೌದು, ಆರು ವರ್ಷಗಳ ನಂತರ ಬೃಂದಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯಲು ಬಂದಿದ್ದಾರೆ ಜಾನಕಿ ಟೀಚರ್. ಹೌದು, ಸ್ವಪ್ನ ಕೃಷ್ಣ ಅವರ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಭಾರ್ಗವಿ ಎಲ್.ಎಲ್.ಬಿ' ಯಲ್ಲಿ ನಾಯಕಿ ಭಾರ್ಗವಿ ಅಕ್ಕ ಬೃಂದಾಳಾಗಿ ನಟಿಸುತ್ತಿದ್ದಾರೆ ಚೈತ್ರ ರಾವ್. ಆ ಮೂಲಕ ಆಕೆ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

ಕಿರುತೆರೆ ಜೊತೆಗೆ ಸಿನಿಮಾದಲ್ಲಿಯೂ ಸಕ್ರಿಯರಾಗಿರುವ ಚೈತ್ರಾ ರಾವ್ ಅವರ ನಟನಾ ಜರ್ನಿ ಶುರುವಾಗಿದ್ದು 'ಮನಸೇ ಓ ಮನಸೇ' ಧಾರಾವಾಹಿಯ ಮೂಲಕ. ಉದಯ ಟಿವಿಯಲ್ಲಿ ಟಿ.ಎಸ್. ನಾಗಾಭರಣ 'ಮನಸೇ ಓ ಮನಸೇ' ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರು. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು ಚೈತ್ರ ರಾವ್.

Jodi Hakki fame actress Chaitra Rao makes a comeback with the serial Bhargavi LLB

ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಬೆಡಗಿ ಚೈತ್ರಾ ರಾವ್. ನಾಟಕ, ನೃತ್ಯ ಎಂದು ಸಕ್ರಿಯರಾಗಿದ್ದ ಚೈತ್ರ ರಾವ್ ಅವರು ಇಂದು ನಟಿಯಾಗಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ನಾಟಕ ಎಂದು ಹೇಳಿದರೆ ತಪ್ಪಾಗಲಾರದು. ಮೃದು ಸ್ವಭಾವ ಹೊಂದಿದ್ದ ಚೈತ್ರ ರಾವ್ ಸಣ್ಣ ವಯಸ್ಸಿನಲ್ಲಿ ಇತರರೊಂದಿಗೆ ಬೆರೆಯುತ್ತಿದ್ದದ್ದು ತೀರಾ ಕಡಿಮೆಯೇ. ಮಗಳ ಈ ಸ್ವಭಾವ ಕಂಡ ತಂದೆ ಆಕೆಯನ್ನು ಉದ್ದೇಶಪೂರ್ವಕವಾಗಿ ನಾಟಕ ತಂಡಕ್ಕೆ ಸೇರಿಸಿದರು. ಮೊದಲ ನಾಟಕದ ತರಬೇತಿ ಸಮಯದಲ್ಲಿಯೇ ಎಲ್ಲರ ಬಳಿ ಲೀಲಾಜಾಲವಾಗಿ ಬೆರೆತ ಈಕೆ ಮುಂದೆ ಐವತ್ತಕ್ಕೂ ಹೆಚ್ಚಿನ ನಾಟಕಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ.

ನಾಟಕಗಳ ನಂತರ ಪೂರ್ಣ ಪ್ರಮಾಣದ ನ ಟಿಯಾಗಿ ಮೋಡಿ ಮಾಡುವ ಬಯಕೆ ಹೊಂದಿದ ಚೈತ್ರಾ ರಾವ್ 'ಮನಸೇ ಓ ಮನಸೇ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ಇದರ ಜೊತೆಗೆ ಮಾಸ್ಟರ್ ಕಿಶನ್ ನಿರ್ದೇಶನದ 'ಕೇರ್ ಆಫ್ ಫುಟ್ ಪಾತ್' ಸಿನಿಮಾದಲ್ಲಿಯೂ ಚೈತ್ರಾ ರಾವ್ ಅಭಿನಯಿಸಿದ್ದರು.

Jodi Hakki fame actress Chaitra Rao makes a comeback with the serial Bhargavi LLB

'ಕೇರ್ ಆಫ್ ಪುಟ್ ಪಾತ್' ಸಿನಿಮಾದ ನಂತರ ನಟನೆಯಿಂದ ದೂರವಿದ್ದ ಚೈತ್ರಾ ರಾವ್ ಮುಂದೆ ನಟನೆಯಿಂದ ದೂರವಿದ್ದರು. ಹೌದು, ಓದಿನ ಸಲುವಾಗಿ ಬಣ್ಣದ ಲೋಕದಿಂದ ದೂರವಿದ್ದ ಚೈತ್ರಾ, ವಿದ್ಯಾಭ್ಯಾಸದ ಬಳಿಕ ಕೆಲಸಕ್ಕೂ ಸೇರಿದ್ದರು. ಆದರೆ ಒಂದೇ ರೀತಿಯ ಕೆಲಸ ನಟಿಗೆ ಸರಿ ಹೊಂದದ ಕಾರಣ ಕೆಲಸಕ್ಕೆ ಗುಡ್ ಬಾಯ್ ಹೇಳಿ, ಮತ್ತೆ ತನ್ನಿಷ್ಟದ ನಟನೆಗೆ ಹಾಯ್ ಹೇಳಿದರು.

'ರಾಗ ಅನುರಾಗ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆದ ಚೈತ್ರಾ ರಾವ್ ಮುಂದೆ 'ಜೋಡಿ ಹಕ್ಕಿ' ಧಾರಾವಾಹಿಯಲ್ಲಿ ನಾಯಕಿ ಜಾನಕಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ಹಾಗೂ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನ ಸೆಳೆದಿದ್ದ ಚೈತ್ರ ರಾವ್ ಸಿನಿರಂಗದಲ್ಲಿಯೂ ನಟನಾ ಕಂಪು ಪಸರಿಸಿದ್ದಾರೆ.

'ಮಾಯಾಬಜಾರ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಚೈತ್ರಾ ರಾವ್ ಮೊದಲ ಸಿನಿಮಾದಲ್ಲಿಯೇ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರಾಜ್ ಬಿ ಶೆಟ್ಟಿ, ಸುಧಾರಾಣಿ, ಸಾಧುಕೋಕಿಲ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಈ ನಟಿ ಮುಂದೆ 'ಟಾಮ್ ಆ್ಯಂಡ್ ಜೆರ್ರಿ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Jodi Hakki fame actress Chaitra Rao makes a comeback with the serial Bhargavi LLB
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X