'ಜೋಡಿ ನಂ.1' ಹಾಗೂ 'ಡಿಕೆಡಿ' ಮಹಾಸಂಗಮ!

ವೀಕೆಂಡ್ ಬಂತೆಂದರೆ ಸಾಕು ಕಿರುತೆರೆಯಲ್ಲಿ ವಾಹಿನಿಯಲ್ಲಿ ಹಬ್ಬವೋ ಹಬ್ಬ. ಸಂಜೆ 6ರಿಂದ ಚಾನೆಲ್ ಚೇಂಜ್ ಮಾಡದೇ ಕಾರ್ಯಕ್ರಮಗಳನ್ನು ನೋಡುತ್ತಾ ಜನ ಎಂಜಾಯ್ ಮಾಡುತ್ತಾರೆ. ವಿವಿಧ ಕಾರ್ಯಕ್ರಮಗಳನ್ನು ವಾಹಿನಿಯನ್ನು ಪ್ರಸಾರ ಮಾಡುತ್ತದೆ.

ಜೀ ಕನ್ನಡ ವಾಹಿನಿಯಲ್ಲಿ ಮನರಂಜನೆಗೆ ಯಾವ ಕೊರತೆಯೂ ಇಲ್ಲ. ವಾರ ಪೂರ್ತಿ ಒಳ್ಳೊಳ್ಳೆ ಕಥೆಯುಳ್ಳ ಧಾರಾವಾಹಿಗಳು ಮೂಡಿ ಬರುತ್ತಿವೆ. ಪ್ರೇಕ್ಷಕರು ಧಾರಾವಾಹಿಗಳನ್ನು ನೋಡುತ್ತಾ ವಾರವೆಲ್ಲಾ ಕಳೆಯುತ್ತಾರೆ. ಇನ್ನು ವೀಕೆಂಡ್‌ನಲ್ಲಿ ಕುಟುಂಬ ಸಮೇತ ಕೂತು ಮಸ್ತ್ ಮಜಾ ಮಾಡುತ್ತಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೋಡಿ ನಂ.1, ಡ್ರಾಮಾ ಜೂನಿಯರ್ಸ್, ಸರಿಗಮಪ, ಕಾಮಿಡಿ ಕಿಲಾಡಿಗಳು ಹೀಗೆ ಹಲವಾರು ರಿಯಾಲಿಟಿ ಶೋಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿರುತ್ತವೆ. ಇನ್ನು ಇವನ್ನೆಲ್ಲಾ ನೋಡಲು ಪ್ರೇಕ್ಷಕರು ಕೂಡ ಕಾಯುತ್ತಿರುತ್ತಾರೆ.

 ಜೋಡಿ ನಂ.1 ಕಾರ್ಯಕ್ರಮದಲ್ಲಿ ಹಬ್ಬ!

ಜೋಡಿ ನಂ.1 ಕಾರ್ಯಕ್ರಮದಲ್ಲಿ ಹಬ್ಬ!

ಕಳೆದ ವಾರ ಜೋಡಿ ನಂ.1 ಕಾರ್ಯಕ್ರಮದಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಸೀರಿಯಲ್ ನಟಿಯರು ರಿಯಾಲಿಟಿ ಶೋಗೆ ಆಗಮಿಸಿ ಹಬ್ಬದ ವಾತಾವರಣವನ್ನು ಹೆಚ್ಚಿಸಿತ್ತು. ಮಕ್ಕಳನ್ನು ಗಣಪನಂತೆ ತಯಾರಿಸಿ, ಗೆಲ್ಲಲು ಮೋದಕವನ್ನು ಬಾಯಿ ತುಂಬಾ ತಿಂದರು. ಗಣಪನಿಗೆ ಚಕ್ಕುಲಿಯನ್ನು ವಿವಿಧ ಶೇಪ್‌ಗಳಲ್ಲಿ ತಯಾರಿಸಿ ತಾವೂ ನಕ್ಕು, ಪ್ರೇಕ್ಷಕರನ್ನೂ ನಗಿಸಿದ್ದರು. ಇದರ ಜೊತೆ ಹಾಡು, ಡ್ಯಾನ್ಸ್, ಕಾಮಿಡಿಗಳು ಕೂಡ ಕಾರ್ಯಕ್ರಮದಲ್ಲಿ ಜೋರಾಗಿತ್ತು.

 ಈ ವಾರ ಮಹಾಸಂಗಮ!

ಈ ವಾರ ಮಹಾಸಂಗಮ!

ಇನ್ನು ಈ ವಾರದ ವೀಕೆಂಡ್ ಅಂತೂ ಸಿಕ್ಕಾಪಟ್ಟೆ ಮಜಾ ಇರುತ್ತದೆ. ಯಾಕೆಂದರೆ. ಜೋಡಿ ನಂ.1 ಹಾಗೂ ಡಿಕೆಡಿ ತಂಡಗಳು ಜೊತೆಯಾಗಿ ನಮ್ಮನ್ನು ರಂಜಿಸಲು ಬರುತ್ತಿವೆ. ಜೋಡಿಗಳೊಂದಿಗೆ ಮೋಡಿ ಮಾಡೋಕೆ ಡಿಕೆಡಿ ತಾರೆಗಳು ರೆಡಿಯಾಗಿದ್ದಾರೆ. ಡಿಕೆಡಿ ಸ್ಪರ್ಧಿಗಳ ಜೊತೆ ಜೋಡಿಗಳ ಜುಗಲ್ ಬಂದಿ ಮಸ್ತ್ ಮಜಾ ಕೊಡಲಿದೆ. ಈ ವಾರದ ಮಹಾಸಂಗಮದಲ್ಲಿ ಆಂಕರ್ ಅನುಶ್ರೀ ಹಾಗೂ ಶ್ವೇತಾ ಚೆಂಗಪ್ಪ ಜೊತೆಗೂಡಿ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳು ರಿಲೀಸ್ ಆಗಿದ್ದು, ಕಾಮಿಡಿ, ಹಾಡು, ಡ್ಯಾನ್ಸ್, ನಗು ಎಲ್ಲವೂ ಮಹಾಸಂಗಮದಲ್ಲಿ ತುಂಬಿ ತುಳುಕುವುದರಲ್ಲಿ ನೋ ಡೌಟ್.

 ಸೂಪರ್ ಡ್ಯಾನ್ಸ್: ಮಸ್ತ್ ಕಾಮಿಡಿ!

ಸೂಪರ್ ಡ್ಯಾನ್ಸ್: ಮಸ್ತ್ ಕಾಮಿಡಿ!

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೊರಿಯೋಗ್ರಾಫರ್‌ಗಳು ಹಾಗೂ ಜೋಡಿಗಳು ಜೊತೆ ಸೇರಿ ಮಹಾಸಂಗಮದಲ್ಲಿ ಡ್ಯಾನ್ಸ್ ಧಮಾಕ ಮಾಡಿದ್ದಾರೆ. ಕುಣಿದು ಕುಪ್ಪಳಿಸದ ಸ್ಪರ್ಧಿಗಳ ಡ್ಯಾನ್ಸ್‌ಗೆ ಎಲ್ಲರೂ ಫಿದಾ ಆಗೋದರಲ್ಲಿ ನೋ ಡೌಟ್. ದಕ್ಷಿತ್- ಪ್ರಣನ್ಯ ಕ್ಯೂಟ್ ಪರ್ಫಾಮೆನ್ಸ್ ಮಾಡಿದ್ದು, ಇದಕ್ಕೆ ಸಂತು-ಮಾನಸ ಸೇರಿ ಕಾಮಿಡಿ ಟಚ್ ಕೊಟ್ಟಿದ್ದಾರೆ. ಇನ್ನು ನವೀನ್- ಹರ್ಷಿತಾ ಇಬ್ಬರು ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ ಕೊಟ್ಟಿದ್ದರೆ, ಇತ್ತ ಪ್ರಣವ್-ನೇಹಾ ತಮ್ಮ ಡ್ಯಾನ್ಸ್ ಮೂಲಕವೇ ಎಲ್ಲರ ಗಮನವನ್ನು ಸೆಳೆದಿದ್ದಾರೆ.

 ಅಭಿಜಿತ್ ಮಸ್ತ್ ಡಾನ್ಸ್ ಪ್ರೋಮೊ!

ಅಭಿಜಿತ್ ಮಸ್ತ್ ಡಾನ್ಸ್ ಪ್ರೋಮೊ!

ಜೋಡಿ ನಂ 1 ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಹಾಸಂಗಮದಲ್ಲಿ ಅಭಿಜಿತ್ ಧೂಳೆಬ್ಬಿಸಿದ್ದಾರೆ. ಅಭಿಜಿತ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಇವರ ಡ್ಯಾನ್ಸ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಅಭಿಜಿತ್ ಅವರ ಎನರ್ಜಿ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಫುಲ್ ಖುಷಿಯಾಗಿದ್ದಾರೆ. ರಕ್ಷಿತಾ ಪ್ರೇಮ್, ಅರ್ಜುನ್ ಜನ್ಯ ಕೂಡ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಭಿಜಿತ್ ಎನರ್ಜಿಗೆ ಫಿದಾ ಆಯ್ತು ಡಿಕೆಡಿ ಸ್ಟೇಜ್ , ಅಪ್ಪಿಕೊಂಡ ಶಿವಣ್ಣ ಅವರು ಸಂಭ್ರಮಿಸಿದ್ದಾರೆ. ಇನ್ನು ಶಿವಣ್ಣ ಅವರ ಮುಂದಿನ ಸಿನಿಮಾದಲ್ಲಿ ಅಭಿಜಿತ್ ಅವರಿಗೆ ಚಾನ್ಸ್ ಕೊಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.

More from Filmibeat

English summary
Jodi No.1 Reality Promo Written Update On September 3rd Episode,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X