ಜೋಡಿ ನಂ1: ಕೆಸರು ಗದ್ದೆಯಲ್ಲೇ ಹೆಂಡತಿಯಿಂದ ಒದೆ ತಿಂದ 'ಪುಟ್ಟಕ್ಕನ ಮಕ್ಕಳು' ನಾಗ

By ಎಸ್ ಸುಮಂತ್

ಜೀ ಕನ್ನಡದ ಮನರಂಜನೆಯ ಕಾರ್ಯಕ್ರಮದಲ್ಲಿ 'ಜೋಡಿ ನಂ 1' ಕೂಡ ಒಂದು. ಕಿರುತೆರೆಯ ಸೆಲೆಬ್ರೆಟಿ ಜೋಡಿಗಳನ್ನು ಕರೆ ತಂದು ಅವರ ಜೀವನ ಚರಿತ್ರೆಯನ್ನು ವೇದಿಕೆ ಮೇಲೆ ಬಣ್ಣಿಸುತ್ತಿದ್ದಾರೆ. ತೆರೆ ಮೇಲೆ ನೋಡಿದ ಸ್ಟಾರ್‌ಗಳ ಜೀವನದಲ್ಲೂ ಇಂಥದ್ದೊಂದು ಘನಘೋರ ನೋವು ಇತ್ತಾ ಅಂತ ಜೋಡಿಗಳ ಕರಾಳ ಸತ್ಯ ಕೇಳಿದ ಮೇಲೆಯೇ ಗೊತ್ತಾಗಿದ್ದು. ಅದರ ಜೊತೆಗೆ ಒಂದಷ್ಟು ಆಟ ಆಡಿಸುತ್ತಾ ಮನರಂಜನೆಯನ್ನು ನೀಡುತ್ತಿದ್ದಾರೆ.

ಇದೀಗ ಜೋಡಿ ನಂಬರ್ ಒನ್ ಟೀಂ ಆನೆಗುಂದಿಯಲ್ಲಿ ಬೀಡು ಬಿಟ್ಟಿದೆ. ಎಲ್ಲಾ ಜೋಡಿಗಳ ಜೊತೆಗೆ ಹಳ್ಳಿಯಲ್ಲಿ ಸಖತ್ ಮಜಾ ಮಾಡುತ್ತಿದ್ದಾರೆ. ಜಡ್ಜ್‌ಗಳಾದ ನೆನಪಿರಲಿ ಪ್ರೇಮ್ ಹಾಗೂ ಮಾಳವಿಕ ಅವರದ್ದೇ ಒಂದೊಂದು ಟೀಂ ಆಗಿದೆ. ರೆಡ್ ಡ್ರೆಸ್ ಹಾಕಿರುವವರೆಲ್ಲಾ ಪ್ರೇಮ್ ಟೀಂ ನೀಲಿ ಡ್ರೆಸ್ ಹಾಕಿರುವವರೆಲ್ಲಾ ಮಾಳವಿಕ ಟೀಂ. ಆಟ ಅಂತು ಸಖತ್ ಬೊಂಬಾಟ್ ಆಗಿದೆ.

ಒಮ್ಮೆಗೆ ಎಷ್ಟು ಬೆರಣಿ ತಟ್ಟಿದ್ದು ಗೊತ್ತಾ?

ಒಮ್ಮೆಗೆ ಎಷ್ಟು ಬೆರಣಿ ತಟ್ಟಿದ್ದು ಗೊತ್ತಾ?

ಆನೆಗುಂದಿಯ ರಮಣೀಯ ಸ್ಥಳಕ್ಕೆ ಎಲ್ಲಾ ಸ್ಪರ್ಧಿಗಳನ್ನು ಕರೆದುಕೊಂಡು ಹೋಗಿರುವ ಜೀ ಕನ್ನಡ. ಅಲ್ಲಿ‌ನ ಹಳ್ಳಿ ಜನರ ನಡುವೆ ಹಳ್ಳಿ ಕೆಲಸಗಳ ಜೊತೆಗೆ ಆಟವನ್ನು ಆಡಿಸುತ್ತಿದ್ದಾರೆ. ಅದರಂತೆ ಬೆರಣಿ ತಟ್ಟುವ ಸ್ಪರ್ಧೆ ಶುರುವಾಗಿದೆ. ಅದರಲ್ಲಿ ಪ್ರೇಮ್ ಟೀಂ ಕಡೆಯಿಂದ ಕಿರಿಕ್ ಕೀರ್ತಿ ಮತ್ತು ಅರ್ಪಿತಾ ಬಂದರೆ ಮಾಳವಿಕ ಟೀಂನಿಂದ ರಮ್ಯಾ ಹಾಗೂ ನಿನಾದ್ (ತ್ರಿಶೂಲ್) ಬಂದಿದ್ದಾರೆ. ಕಾಲಾವಕಾಶ ಇರುವುದು ಐದೇ ನಿಮಿಷ. ಗಂಡ ಹೆಂಡತಿ ಇಬ್ಬರು ಸೇರಿ ಬೆರಣಿ ತಟ್ಟಬೇಕು. ಮೊದ ಮೊದಲಿಗೆ ಸ್ಪರ್ಧೆಯ ನಿಯಮಕ್ಕೆ ಅನುಸಾರವಾಗಿ ಆಡುತ್ತಿದ್ದ ನಿನಾದ್ ಕೊನೆ ಕೊನೆಗೆ ರೊಚ್ಚಿಗೆದ್ದು, ಒಮ್ಮೆಲೆ ಹೆಚ್ಚು ಸಗಣಿ ತೆಗೆದುಕೊಂಡು ಮೂರೇ ಬೆರಣಿ ತಟ್ಟಿದ್ರು. ಕಡೆಗೆ ಸಮಯ ಮುಗಿದ ಮೇಲೆ ಲೆಕ್ಕಾ ಹಾಕಿದರೆ ನಿನಾದ್ ಮತ್ತು ರಮ್ಯಾ ತಟ್ಟಿದ್ದು 23 ಅದರಲ್ಲಿ ಮೂರು ನಿಯಮ ಮೀರಿದ ಬೆರಣಿಯಾಗಿತ್ತು. ಕಿರಿಕ್ ಕೀರ್ತಿ ಮತ್ತು ಅರ್ಪಿತಾ ತಟ್ಟಿದ್ದು 21. ಹಾಗಾಗಿ ಈ ಗೇಮ್‌ನಲ್ಲಿ ಕಿರಿಕ್ ಮತ್ತು ಅರ್ಪಿತಾ ವಿನ್ನರ್ ಆದರು.

ಹೆಂಡತಿ ಕೈನಲ್ಲಿ ಒದೆ ತಿಂದ ಸಂತು

ಮತ್ತೊಂದು ಅದ್ಭುತವಾದ ಆಟವಿದೆ. ಕೆಸರುಗದ್ದೆಯಾಟ. ಒಂದು ಕಡೆಯಿಂದ ಕೆಸರು ಗದ್ದೆಯಲ್ಲಿ ನಡೆದುಕೊಂಡು ಹೋಗಿ, ಆ ಕಡೆಯಿಂದ ಬರುವಾಗ ಹೆಂಡತಿಯನ್ನು ಹೊತ್ತು, ಕಾಯಿಯನ್ನು ಜೊತೆಗೆ ತರಬೇಕು. ಇದರಲ್ಲಿ ಕಂಬದ ರಂಗಯ್ಯ ಮತ್ತು ಲೀಲಾವತಿ, ಸಂತೋಷ್ ಮತ್ತು ಮಾನಸ ಭಾಗಿಯಾಗಿದ್ದರು. ಪಾಪ ಕಂಬದ ರಂಗಯ್ಯ ಹೆಂಡತಿಯನ್ನು ಹೊತ್ತು ಎಳನೀರನ್ನು ತಂದರು. ಆದರೆ ಸಂತು, ಮಾನಸರನ್ನು ಹೊತ್ತು ತರುವಾಗ ಮಧ್ಯದಲ್ಲಿಯೇ ಬಿದ್ದರು. ಮಾನಸ ಸುಮ್ಮನೆ ಬಿಡುತ್ತಾರಾ ಗದ್ದೆಯಲ್ಲಿಯೇ ಸಖತ್ ಫೈಟ್ ಶುರು ಮಾಡಿಬಿಟ್ಟರು. ಇದು ಜಡ್ಜ್‌ಗಳಿಗೆ ಮಾತ್ರವಲ್ಲ ಹಳ್ಳಿ ಜನಕ್ಕೂ ಬಿದ್ದು ಬಿದ್ದು ನಗುವಂತೆ ಮಾಡಿತ್ತು.

ಅಭಿಜಿತ್ ಹೆಂಡತಿ ಮಡಿಕೆ ಹೊಡೆದಿದ್ದೇಗೆ

ಅಭಿಜಿತ್ ಹೆಂಡತಿ ಮಡಿಕೆ ಹೊಡೆದಿದ್ದೇಗೆ

ಇನ್ನೊಂದು ಮಡಿಕೆ ಹೊಡೆಯುವ ಸಾಹಸವಿದೆ. ಕಣ್ಣು ಕಟ್ಟಿ ಮಡಿಕೆ ಹೊಡೆಯುವುದು ಒಂಥರ ಖುಷಿಯ ವಿಚಾರವೇ ಸರಿ. ಇದರಲ್ಲಿ ಮಿತ್ರಾ ಅಂಡ್ ಗೀತಾ, ಅಭಿಜಿತ್ ಅಂಡ್ ರೋಹಿಣಿ ಭಾಗವಹಿಸಿದ್ದರು. ಗೆದ್ದಿದ್ದು ಮಿತ್ರಾ ಮತ್ತು ಗೀತಾ. ರೋಹಿಣಿ ಕೂಡ ಒಡೆಯುತ್ತಿದ್ದರು ಆದರೆ ಕಡೆಯ ಮಡಿಕೆ ಹೊಡೆಯಲು ಸಮಯ ಮೀರಿತ್ತು. ಆದರೆ ಕೊನೆಯಲ್ಲಿ ಅಭಿಜಿತ್ ತನ್ನ ಹೆಂಡತಿಯನ್ನು ಎತ್ತಿಕೊಂಡು ಮಡಿಕೆ ಹೊಡೆಸಿದ್ದು ಅದ್ಭುತವಾಗಿತ್ತು.

ಆನೆಗುಂದಿ ಮಂದಿ ಫುಲ್ ಫಿದಾ

ರಿಯಾಲಿಟಿ ಶೋ ಗಳು ಹೀಗೆ ಜನರ ನಡುವೆ ನಡೆದಾಗ ಅದರ ಮಜವೇ ಬೇರೆ. ಟಿವಿಯಲ್ಲಿ ನೋಡಿ ಎಂಜಾಯ್ ಮಾಡುವ ಜನರಿಗಿಂತ ನೇರವಾಗಿ ನೋಡಿ ಎಂಜಾಯ್ ಮಾಡುವ ಅನುಭವವೇ ಬೇರೆ. ಇಂಥ ಖುಷಿಯನ್ನು ಆನೆಗುಂದಿ ಜನ ಅನುಭವಿಸುತ್ತಿದ್ದಾರೆ. ಜೋಡಿಗಳ ಆಟ ಪಾಠವೆಲ್ಲಾ ಆನೆಗುಂದಿ ಜನರ ನಡುವೆಯೇ ನಡೆಯುತ್ತಿದೆ. ಆ ಜನರ ಬೆಂಬಲ ಕೂಡ ಮಕ್ಕಳಿಗೆ ಸಿಕ್ಕಂತೆ ಸಿಗುತ್ತಿದೆ.

More from Filmibeat

English summary
Jodi No 1 Reality Show July 31st Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X