Jodi No 1: ಜೋಡಿ ನಂ 1 ಸೀಸನ್ 2 ಗ್ರ್ಯಾಂಡ್ ಫಿನಾಲೆ; ಶೋ ಗೆದ್ದಿದ್ದು ಯಾರು ಗೊತ್ತಾ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಗಳ ಪೈಕಿ 'ಜೋಡಿ ನಂ 1' ಕೂಡಾ ಒಂದು. ಯಶಸ್ವಿ 1 ಸೀಸನ್ ಪೂರೈಸಿರುವ ಈ ರಿಯಾಲಿಟಿ ಶೋ ಇದೀಗ 2ನೇ ಸೀಸನ್ ಅನ್ನು ಕೂಡಾ ಮುಗಿಸಿದೆ.

ಹೌದು, 'ಜೋಡಿ ನಂ 1' ರಿಯಾಲಿಟಿ ಶೋವಿನ ಗ್ರ್ಯಾಂಡ್ ಫಿನಾಲೆ ಇಂದು ನಡೆದಿದೆ. ಕಿರುತೆರೆ ನಟಿ ಲಾವಣ್ಯ ಹಾಗೂ ಕಿರುತೆರೆ ನಟ ಶಶಿ ಅವರು ಈ ಸೀಸನ್‌ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

Jodi No 1 grand finale who is the winner

ಪ್ರಶಸ್ತಿ ಸ್ವೀಕರಿಸಿದ ಲಾವಣ್ಯ ಶಶಿ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. 'ನೀವು ಏನು ಪ್ರೀತಿ ವಿಶ್ವಾಸ ಇಟ್ಟು ವೋಟ್ ಮಾಡಿದ್ದೀರೋ ಅದನ್ನ ನಾವು ಕಾಪಾಡ್ಕೊಂಡು ಕೊನೆಯ ತನಕ ಹೀಗೆ ಹೋಗ್ತೀವಿ ಎಂದು ನಾನು ಪ್ರಾಮೀಸ್ ಮಾಡ್ತೀನಿ" ಎಂದು ಕಿರುತೆರೆ ನಟಿ ಲಾವಣ್ಯ ಹೇಳಿದ್ದಾರೆ. ಇನ್ನು ಶಶಿ "ಈ ಕಾರ್ಯಕ್ರಮ ವೀಕ್ಷಿಸಿ, ನಮಗೆ ಯಾರೆಲ್ಲಾ ವೋಟ್ ಮಾಡಿದ್ದಾರೋ, ನಮ್ಮನ್ನ ಯಾರೆಲ್ಲಾ ಸಪೋರ್ಟ್ ಮಾಡಿದ್ದಾರೋ ಅವರಿಗೆಲ್ಲಾ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಜೊತೆಗೆ ನಿಮ್ಮ ಪ್ರೀತಿ ಯಾವಾಗ್ಲೂ, ಎಂದೆಂದಿಗೂ ಹೀಗೆ ಇರಲಿ ಅಂತ ನಾವು ಆಶಿಸುತ್ತೇವೆ" ಎಂದು ಹೇಳಿದ್ದಾರೆ.

ಇನ್ನು ಶೋ ವಿನ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಮತ್ತೋರ್ವ ಕಿರುತೆರೆ ಜೋಡಿ ಪಡೆದುಕೊಂಡಿದೆ. ಕಿರುತೆರೆ ನಟಿ ಸುನೇತ್ರಾ ಪಂಡಿತ್ ಹಾಗೂ ಕಿರುತೆರೆ ನಟ ರಮೇಶ್ ಪಂಡಿತ್ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಪಡೆದ ಸುನೇತ್ರಾ-ರಮೇಶ್ ಪಂಡಿತ್ ಜೋಡಿ ಖುಷಿಯನ್ನು ಹಂಚಿಕೊಂಡಿದ್ದಾರೆ. "ಜೋಡಿ ನಂಬರ್ 1ನ ಫಸ್ಟ್ ರನ್ನರ್ ಅಪ್ ಆಗಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಎಲ್ಲರೂ ವಿನ್ನರ್‌ಗಳೇ... ಎಲ್ಲರೂ ಚಿಂದಿ ಉಡಾಯಿಸಿ ಬಿಟ್ಟಿದ್ದಾರೆ. ಎಲ್ಲಾ ಜೋಡಿಗಳಿಗೂ ಆರ್ ದಿ ಬೆಸ್ಟ್. ಜೀ ಕನ್ನಡ ವಾಹಿನಿಯವರಿಗೆ ನಾವು ಹೃದಯಪೂರ್ವಕವಾಗಿ ಆಭಾರಿಗಳು. ನಮ್ಮ ಧನ್ಯವಾದಗಳನ್ನು ಅರ್ಪಿಸುವುದಕ್ಕೆ ಇಷ್ಟಪಡುತ್ತೇವೆ" ಎಂದು ಸುನೇತ್ರಾ ಹೇಳಿದ್ದಾರೆ. "ಈ ಕಾರ್ಯಕ್ರಮಕ್ಕೆ ಕೆಲಸ ಮಾಡಿದ ಕ್ಯಾಮೆರಾ ಹಿಂದೆ ಇರುವ, ಕ್ಯಾಮೆರಾ ಮುಂದೆ ಇರುವ ಎಲ್ಲರೂ ಅಭಿನಂದನಾ ಅರ್ಹರು. ಅವರೆಲ್ಲರಿಗೂ ಅನಂತಾನಂತ ನಮಸ್ಕಾರಗಳು" ಎಂದು ರಮೇಶ್ ಪಂಡಿತ್ ಹೇಳಿದ್ದಾರೆ.

Jodi No 1 grand finale who is the winner

"ಜೋಡಿ ನಂ 1 ಸೀಸನ್ 2" ರ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿಯನ್ನು ಗಣೇಶ್ ಕಾರಂತ್-ಶ್ರೀವಿದ್ಯಾ ಜೋಡಿ ಪಡೆದುಕೊಂಡಿದೆ. ಪ್ರಶಸ್ತಿ ಪಡೆದು ಮಾತನಾಡಿದ ಗಣೇಶ್ ಕಾರಂತ್ "ನಾವು ಜೋಡಿ ನಂ 1 ಸೀಸನ್ 2 ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದೇವೆ. ಬಿಗ್ ಥ್ಯಾಂಕ್ಸ್ ಟು ಜೀ ಕನ್ನಡ. ನಮಗೆ ಇಂಥ ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕೆ. ಹಾಗೇನೆ ಇಡೀ ಕರ್ನಾಟಕದ ಜನತೆಗೆ ನಾನು ಹಾಗೂ ವಿದ್ಯಾಳ ಪರವಾಗಿ ಧನ್ಯವಾದಗಳನ್ನು ತಿಳಿಸ್ತೇನೆ. ನಮ್ಮನ್ನ ಇಲ್ಲಿ ತನಕ ವೋಟ್ ಮಾಡಿ ಬೆಳೆಸಿದ್ದೀರ. ಸಹಕರಿಸಿದ್ದೀರ. ಪ್ರೀತಿ ಕೊಟ್ಟಿದ್ದೀರ. ನಿಮ್ಮ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ಒನ್ಸ್ ಅಗೈನ್ ಥ್ಯಾಂಕ್ಯೂ ಸೋ ಮಚ್ ಟು ಜೀ ಕನ್ನಡ" ಎಂದು ಹೇಳಿಕೊಂಡಿದ್ದಾರೆ.

ಸುಮಾರು ಒಂಭತ್ತು ಜೋಡಿಗಳಿದ್ದ ಈ ರಿಯಾಲಿಟಿ ಶೋವಿನ ನಿರೂಪಕರಾಗಿ ಕುರಿ ಪ್ರತಾಪ್ ಹಾಗೂ ಶ್ವೇತಾ ಚೆಂಗಪ್ಪ ಸಾರಥ್ಯ ವಹಿಸಿದ್ದರು. ಇನ್ನು ನಟಿ ಮಾಳವಿಕಾ ಅವಿನಾಶ್ ಹಾಗೂ ನಟ ನೆನಪಿರಲಿ ಖ್ಯಾತಿಯ ಪ್ರೇಮ್ ಅವರು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು.

More from Filmibeat

English summary
Jodi No 1 Season 2 finale Do you know who won the show?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X