'ಜೋಡಿ ನಂಬರ್ 1' ಶೋನಲ್ಲಿ ಕರಾವಳಿ ಜೋಡಿಯ ಕಲರವ

By Poorva

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಜೋಡಿ ನಂಬರ್ 1 ಕೂಡ ಒಂದು. ಸೀಸನ್ -2ರಲ್ಲಿ ಮಿಂಚುತ್ತಿರುವ ಕರಾವಳಿಯ ಜನಪ್ರಿಯ ಗಣೇಶ್ ಕಾರಂತ್ ಹಾಗೂ ಶ್ರೀ ವಿದ್ಯಾ. ಹೌದು ಈ ಇಬ್ಬರು ಜೋಡಿಗಳು ಜೋಡಿ ನಂಬರ್ 1 ಗೆ ಹೋಗುವ ಮೊದಲು ಸಾಕಷ್ಟು ಕಾಮಿಡಿ ವಿಡಿಯೋಗಳನ್ನ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚಿರ ಪರಿಚಿತರಾಗಿದ್ದರು.

ಇನ್ನು ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವವರಿಗೆ ಈ ಜೋಡಿ ಬಗ್ಗೆ ತಿಳಿದೇ ಇರುತ್ತದೆ. ಈ ದಂಪತಿಯ ವಿಡಿಯೋಗಳನ್ನು ನೋಡಿ, ಅನ್ಯೂನ್ಯತೆ ನೋಡಿ ನಿಮ್ಮದು ಲವ್ ಮ್ಯಾರೇಜಾ? ಎಂದು ಕೇಳುತ್ತಿರುತ್ತಾರೆ. ಆ ಬಗ್ಗೆ ಶ್ರೀ ವಿದ್ಯಾ ಹಾಗೂ ಗಣೇಶ್ ಎಲ್ಲರಿಗೆ ಕ್ಲಾರಿಟಿ ಕೂಡ ನೀಡಿದ್ದಾರೆ . ನಾವು ಆರೆಂಜ್ ಮ್ಯಾರೇಜ್ ಅಲ್ಲ ಎಂದಿದ್ದಾರೆ. ವಿದ್ಯಾ ಹಾಗೆ ಇರುವ ಹೆಂಡತಿ ಸಿಕ್ಕಿರುವುದು ನನ್ನ ಪುಣ್ಯ ಎಂದು ಹಲವು ಬಾರಿ ರಿಯಾಲಿಟಿ ಶೋನಲ್ಲಿ ಗಣೇಶ್ ಹೇಳಿಕೊಂಡಿದ್ದಾರೆ.

Jodi no 1 show contestents Ganesh karanth and wife Shree vidya journey

ಗಣೇಶ್ ಕಾರಂತ್ ಮೂಲತಃ ಉಡುಪಿಯವರು. ಶ್ರೀ ವಿದ್ಯಾ ಚಿಕ್ಕಬಳ್ಳಾಪುರದವರು. ಮದುವೆಗೂ ಮುನ್ನ ಇಬ್ಬರೂ ಪರಿಚಯ ಇರಲಿಲ್ಲ. ಮದುವೆ ಬಳಿಕ ಒಬ್ಬರನ್ನೊಬ್ಬರು ಅರಿತು ಬೆರೆತು ಜೀವನ ಸಾಗಿಸುತ್ತಿದ್ದಾರೆ. ಶೋನಲ್ಲಿ ಗಣೇಶ್ ಹಾಗೂ ಶ್ರೀವಿದ್ಯಾ ಬಹಳ ಆಕ್ಟಿವ್ ಆಗಿ ಇತರ ಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಿದ್ದಾರೆ.

ಪತಿಗೆ ಸಪೋರ್ಟ್ ಮಾಡುವ ಮನದರಸಿ

ಮದುವೆಗೆ ಮುಂಚೆ ಶ್ರೀ ವಿದ್ಯಾಗೆ ನಟನೆಯಲ್ಲಿ ಅಷ್ಟೆಲ್ಲ ಇಷ್ಟ ಇರಲಿಲ್ಲವಂತೆ. ಆದರೆ ಇದೀಗ ರೀಲ್ಸ್ ಮಾಡುವುದು ಅಂದ್ರೆ ಬಲು ಇಷ್ಟವಂತೆ. ಡಾನ್ಸ್ ಕೂಡ ಇಷ್ಟ ಎನ್ನುತ್ತಾರೆ. ಜೋಡಿ ನಂ 1' ಸೀಸನ್- 2 ಅಂತಿಮ ಹಂತ ತಲುಪಿದೆ. ತೀರ್ಪುಗಾರರಾಗಿ ಮಾಳವಿಕಾ ಅವಿನಾಶ್ ಮತ್ತು 'ನೆನಪಿರಲಿ' ಪ್ರೇಮ್‌ ಇದ್ದಾರೆ. ಹಾಗೆಯೇ ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ನಿರೂಪಣೆಯ ಈ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ.

Jodi no 1 show contestents Ganesh karanth and wife Shree vidya journey

ಅಂತಿಮ ಹಂತಕ್ಕೆ ಬಂದ ಜೋಡಿ

ಇದೀಗ ಈ ಶೋ ಕೊನೆಯ ಹಂತದಲ್ಲಿದೆ. ಗಣೇಶ್ ಕಾರಂತ್ ಯೂಟ್ಯೂಬ್‌ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕವೂ ಬಹಳ ಫೇಮಸ್ ಆಗಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್. ಪ್ರವೃತ್ತಿಯಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ. ಹಾಗೆಯೇ ಕಾಮಿಡಿ ವಿಡಿಯೋಗಳನ್ನು ಮಾಡುವುದರಲ್ಲಿ ಕೂಡಾ ಎತ್ತಿದ ಕೈ ಎಂದರೆ ತಪ್ಪಾಗದು. ಕ್ರಿಕೆಟ್‌, ಸಿನಿಮಾ ರಿವ್ಯೂ ಕೂಡಾ ಮಾಡ್ತಾರೆ. ಹಾಗೆಯೇ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಗಣೇಶ್ ತಂದೆ ಕೆ. ಶಿವರಾಮ್‌ ಕಾರಂತ್‌ ನಿವೃತ್ತ ಬಿಎಸ್‌ಎನ್‌ಎಲ್‌ ಡಿಜಿಎಂ, ತಾಯಿ ಯಶೋಧಾ ಕಾರಂತ್‌ ಗೃಹಿಣಿ. ಓರ್ವ ಸಹೋದರಿಯೂ ಇದ್ದಾಳೆ.

ಚಿಕ್ಕಂದಿನಿಂದ ಸಂಗೀತದ ಒಲವು

3 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಶ್ರೀವಿದ್ಯಾ ಅವರನ್ನು ಗಣೇಶ್‌ ಕಾರಂತ್‌ ಕೈ ಹಿಡಿದಿದ್ದಾರೆ. ಚಿಕ್ಕವಯಸ್ಸಿನಲ್ಲಿ ಉಡುಪಿಯಲ್ಲಿದ್ದಾಗ ಕರ್ನಾಟಕ ಸಂಗೀತ ಕಲಿತಿದ್ದಾರೆ. ಹಾಗಾಗಿ ಹಾಡುಗಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇದೀಗ ದಂಪತಿ ಕಾಮಿಡಿ ವಿಡಿಯೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅದೇ ಕಾರಣಕ್ಕೆ ಜೋಡಿ ನಂಬರ್ 1 ಶೋಗೆ ಎಂಟ್ರಿ ಕೊಡುವ ಅವಕಾಶ ಸಿಕ್ಕಿತ್ತು.

More from Filmibeat

English summary
social media influencers Ganesh karanth and wife Shree vidya biography;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X