'ಜೋಡಿಹಕ್ಕಿ' ಧಾರಾವಾಹಿ ಖ್ಯಾತಿಯ ನಟಿ ಮಧುಶ್ರೀ ಅಯ್ಯರ್ ಕುಟುಂಬಕ್ಕೆ ಸಿಹಿ ಸುದ್ದಿ

By ಪ್ರಿಯಾ ದೊರೆ

ಕಳೆದ ವರ್ಷ ಕನ್ನಡ ಕಿರುತೆರೆಯಲ್ಲಿ ಮದುವೆಯ ಪರ್ವವಾಗಿತ್ತು. ಈ ವರ್ಷ ಕಿರುತೆರೆಯ ನಟ-ನಟಿಯರ ಮನೆಗೆ ಹೊಸ ಸದಸ್ಯರ ಆಗಮನವೇ ಹೆಚ್ಚಾಗಿದೆ.

ಇತ್ತೀಚೆಗಷ್ಟೇ ನಟಿ ತೇಜಸ್ವಿನಿ ಪ್ರಕಾಶ್, ಕಾವ್ಯಾ ಗೌಡ ಸೇರಿದಂತೆ ಕೆಲವರು ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ನಟಿ ಸಿರಿ ರಾಜು ಹಾಗೂ ದಿವ್ಯಶ್ರೀ ಅಯ್ಯರ್ ಸರದಿ.

ಕನ್ನಡ ಕಿರುತೆರೆಯಲ್ಲಿ ನಟಿಸಿ ಮಿಂಚಿದ್ದ ಈ ಇಬ್ಬರೂ ನಟಿಯರು ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ. ಇಬ್ಬರೂ ಕೂಡ ಈ ಹೊಸ ವರ್ಷದಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

 Jodihakki Fame actress madhushri iyer expecting second child

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟಿ

ಕಿರುತೆರೆ ನಟಿ ಮಧುಶ್ರೀ ಅಯ್ಯರ್ ಈಗ ಎರಡನೇಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಕುಟುಂಬದ ಜೊತೆಗೆ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿರುವ ಸಂದರ್ಭದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಮಧುಶ್ರೀ ಅಯ್ಯರ್ ಗರ್ಭಿಣಿಯಾಗಿದ್ದು, ಪತಿ ಯಶ್ ಹಾಗೂ ಮೊದಲ ಮಗು ಸ್ವರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. 2018ರಲ್ಲಿ ವಿವಾಹವಾದ ನಟಿ ಮಧು 2020ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದೆ ಮಧೂಶ್ರೀ ಕುಟುಂಬ.

ಅಕಸ್ಮಾತ್ ಆಗಿ ನಟನೆಗೆ ಬಂದ ಮಧುಶ್ರೀ

ನಟಿ ಮಧುಶ್ರೀ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿಯಿ ಮೂಲಕ ಚಿರಪರಿಚಿತರಾಗಿದ್ದರು. ಇದಷ್ಟೇ ಅಲ್ಲದೇ, 'ರಾಧಾರಮಣ', 'ಅವಳು' ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ನಟಿ ಶಿಲ್ಪಾ ಅಯ್ಯರ್ ಹಾಗೂ ಶ್ವೇತಾಪ್ರಸಾದ್ ಇಬ್ಬರೂ ಕೂಡ ನಟಿ ಮಧುಗೆ ದೂರದ ಸಂಬಂಧಿಯಾಗಿದ್ದಾರೆ. ಮಧುಶ್ರೀ ನಟನೆಗೆ ಬರುವ ಯಾವ ಉದ್ದೇಶವೂ ಇರಲಿಲ್ಲ. ಬದಲಿಗೆ ತಾವು ಯಾವುದಾದರೂ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕು ಎಂದು ಆಸೆ ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆ ಇತ್ತು.

 Jodihakki Fame actress madhushri iyer expecting second child

ಜೋಡಿಹಕ್ಕಿ ಧಾರಾವಾಹಿಯ ನಟಿ

ನಟಿ ಮಧುಶ್ರೀ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಬಿಕಾಂ ಓದಿರುವ ಆಕೆ ಬ್ಯಾಂಕ್ ಎಕ್ಸಾಂ ಬರೆಯಬೇಕು ಎಂದುಕೊಂಡಿದ್ದರು. ಇದಕ್ಕೋಸ್ಕರ ಬೆಂಗಳುರಿಗೆ ಆಗಮಿಸಿದ್ದರು. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಮಧುಶ್ರೀ ನೆಲೆಸಿದ್ದರು. ಈ ಸಂದರ್ಭದಲ್ಲಿ ಆಕೆಯನ್ನು ಆಡಿಷನ್ ಒಂದಕ್ಕೆ ಸಂಬಂಧಿಕರು ಕರೆದುಕೊಂಡು ಹೋಗಿದ್ದರು. ಅಲ್ಲಿ ನಟಿಸಿದಾಗ ಮಧುಶ್ರೀಗೆ ಜೋಡಿಹಕ್ಕಿ ಧಾರಾವಾಹಿ ಅವಕಾಶ ಒಲಿದು ಬಂದಿತ್ತು. ಅವಕಾಶವನ್ನು ಮಿಸ್ ಮಾಡಿಕೊಳ್ಳದ ನಟಿ ಮಧುಶ್ರೀ ನಟನೆಯನ್ನು ಮುಂದುವರೆಸಿದರು. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಬದಲು ಬಣ್ಣದ ಲೋಕದಲ್ಲಿ ಕೆಲ ಕಾಲ ಮಿಂಚಿದರು. ಆದರೆ, ಮದುವೆಯಾದ ಬಳಿಕ ನಟನೆಗೆ ಬ್ರೇಕ್ ಕೊಟ್ಟರು.

ಛೋಟಾ ಚಾಂಪಿಯನ್‌ನಲ್ಲಿ ಭಾಗಿ

ಜೋಡಿಹಕ್ಕಿ ಧಾರಾವಾಹಿಯಲ್ಲಿ ಅನು ಪಾತ್ರದಿಂದ ಕಾಣಿಸಿಕೊಂಡ ಆಕೆ ಹೆಚ್ಚು ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಇನ್ನು ಮದುವೆಯಾದ ಬಳಿಕ ಮಗಳು ಸ್ವರ ಜೊತೆಗೆ 'ಛೋಟಾ ಚಾಂಪಿಯನ್'ಗೆ ಆಗಮಿಸಿದ್ದರು. ನಟಿ ಮಧೂಶ್ರೀ ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸದ ಕಾರಣ ಅವರ ಬಗ್ಗೆ ಅಭಿಮಾನಿಗಳಿಗೆ ಮಾಹಿತಿಗಳು ಸಿಗುವುದೂ ಕಡಿಮೆಯಾಗಿದೆ. ಇನ್ನು ಪತಿ ಜೊತೆಗೆ ಛೋಟಾ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಟಿ ಮಧುಶ್ರೀ ಯಾವಾಗ ನಟನೆಗೆ ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Tv actress madhushri iyer's baby bump picture go viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X