ಶಾರ್ಟ್ ಡ್ರೆಸ್‌ನಲ್ಲಿ ಜ್ಯೋತಿ ರೈ ಹಾಟ್ ಫೋಟೋಶೂಟ್; ಫುಲ್ ವೈರಲ್
ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಜ್ಯೋತಿ ರೈ. ಮೊದಲು ಈಕೆ ನಟಿಸಿದ್ದು ಕನ್ನಡ ಕಿರುತೆರೆಯಲ್ಲಿ. ಆದರೆ ಇದೀಗ ಜ್ಯೋತಿ ರೈ ಬಹುಭಾಷಾ ತಾರೆ ಎಂದರೆ ತಪ್ಪಾಗದು. ತಮ್ಮ ಅಭಿನಯದ ಮೂಲಕ ಮೋಡಿ ಮಾಡಿರುವ ನಟಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.
ಇತ್ತೀಚೆಗೆ ಜ್ಯೋತಿರೈ 2ನೇ ಮದುವೆ ವಿಚಾರ ರಿವೀಲ್ ಆಗಿತ್ತು. ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಮದುವೆ ಆಗಿರುವ ವಿಚಾರ ಬಹಿರಂಗಪಡಿಸಿ ನೆಟ್ಟಿಗರ ಗೊಂದಲಕ್ಕೆ ತೆರೆಬಿದ್ದಿದೆ. ಹಲವು ಜನರಲ್ಲಿ ಈ ಬಗ್ಗೆ ಗೊಂದಲ ಇತ್ತು. ಆದರೆ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಕೂಡ.

ಜ್ಯೋತಿ ರೈ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ನಟಿಯ ಫೋಟೋಗೆ ಸಖತ್ ಲೈಕ್ ಕಾಮೆಂಟ್ ಬರುತ್ತಿದೆ. ಒಂದು ಮಗುವಿನ ತಾಯಿ ಆಗಿದ್ದರೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಕಿರುತೆರೆಯಲ್ಲಿ ಸೀರೆ ಉಟ್ಟು ನಟಿಸುವ ಚೆಲುವೆ ಇತ್ತೀಚೆಗೆ ಸಖತ್ ಬೋಲ್ಡ್ ಆಗಿದ್ದಾರೆ.
ವಯಸ್ಸು 38 ಆಗಿದ್ದರೂ ಇಪ್ಪತ್ತರ ಹುಡುಗಿಯರನ್ನು ನಾಚಿಸುವಂತೆ ಕ್ಯಾಮರಾ ಮುಂದೆ ಜ್ಯೋತಿ ರೈ ಕಾಣಿಸಿಕೊಳ್ಳುತ್ತಾರೆ. ಸಣ್ಣ ಫ್ರಾಕ್, ಟಾಪ್ ಧರಿಸಿ ಹೊಸ ಫೋಟೊಗಳನ್ನು ಇದೀಗ ಹಂಚಿಕೊಂಡಿದ್ದಾರೆ. ಜ್ಯೋತಿ ರೈ ಅವರ ಫೋಟೋ ನೋಡಿ ಅಭಿಮಾನಿಗಳು ಮಾತ್ರ ಸಖತ್ ಲೈಕ್ಸ್, ಕಾಮೆಂಟ್ ಮಾಡುತ್ತಿದ್ದಾರೆ.
ಹಲವು ಧಾರಾವಾಹಿಗಳಲ್ಲಿ ನಟನೆ
ಫೋಟೋಗೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು , ಬ್ಯೂಟಿಫುಲ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಕೂಡ ಇದ್ದಾರೆ. ಜ್ಯೋತಿ ರೈ ಸದ್ಯ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.

ಪಡ್ಡೆ ಹುಡುಗರ ನಿದ್ದೆ ಕದ್ದ ಬ್ಯೂಟಿ
ಜ್ಯೋತಿ ರೈಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಎದೆಯೆತ್ತರಕ್ಕೆ ಬೆಳೆದ ಮಗನಿದ್ದರೂ ಜ್ಯೋತಿ ರೈ ಸೌಂದರ್ಯ ದಿನೇ ದಿನೇ ಹೆಚ್ಚುತ್ತಲೇ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿರುತ್ತಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳ ಹಾರ್ಟ್‌ಬೀಟ್ ಹೆಚ್ಚಿಸುತ್ತಲೇ ಇದ್ದಾರೆ.
ಪ್ರೆಟಿ ಗರ್ಲ್ ವೆಬ್ ಸೀರಿಸ್
ಮಡಿಕೇರಿ ಬೆಡಗಿ ಜ್ಯೋತಿರೈ ಸದ್ಯ 'ಪ್ರೆಟಿ ಗರ್ಲ್' ಎನ್ನುವ ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಈ ಕ್ರೈಂ ಥ್ರಿಲ್ಲರ್ ಸೀರಿಸ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರಲ್ಲೂ ಸಿಕ್ಕಾಪಟ್ಟೆ ಹಾಟ್ ಆಗಿ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅದರ ಪೋಸ್ಟರ್‌ಗಳು ರಿಲೀಸ್ ಆಗಿ ವೈರಲ್ ಆಗಿದ್ದವು.
ಸುಕು ಪೂರ್ವಜ್ ಹುಟ್ಟುಹಬ್ಬ
ಇತ್ತೀಚೆಗೆ ತಮ್ಮ ಎರಡನೇ ಪತಿ ಸುಕು ಪೂರ್ವಜ್ ಹುಟ್ಟುಹಬ್ಬವನ್ನು ಜ್ಯೋತಿ ರೈ ಆಚರಿಸಿದ್ದರು. ಮನೆಯಲ್ಲಿ ದಂಪತಿ ಸತ್ಯ ನಾರಾಯಣ ಪೂಜೆ ನೆರವೇರಿಸಿದ್ದರು. ಅದೇ ಸಮಯದಲ್ಲಿ ತಮ್ಮಿಬ್ಬರ ಮದುವೆ ವಿಚಾರವನ್ನು ಹಾಕಿ ರಿವೀಲ್ ಮಾಡಿದ್ದರು. ಆದರೆ ಎಲ್ಲಿ, ಯಾವಾಗ? ಮದುವೆ ನಡೀತು ಎನ್ನುವುದನ್ನು ಮಾತ್ರ ಹೇಳಲಿಲ್ಲ.


Click it and Unblock the Notifications











