'ಜೋಶ್' ಅಪ್ಲಿಕೇಶನ್ ಬಳಸುತ್ತಿದ್ದವರಿಗೆ ಹುಡುಕಿ ಬಂತು ಕಿರುತೆರೆ ಅವಕಾಶ
ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್'. ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಾ ಸಾಗುತ್ತಿರುವ 'ಜೋಶ್' ಸಾವಿರಾರು ಪ್ರತಿಭಾವಂತರಿಗೆ ತಮ್ಮ ಕಲೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದೆ.
ಜೋಶ್ ವಿಡಿಯೋ ಅಪ್ಲಿಕೇಶನ್ ಬಳಸಿ ಭಿನ್ನ-ವಿಭಿನ್ನ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿರುವ ಹಲವರಿಗೆ ದೊಡ್ಡ ಅವಕಾಶಗಳು ಅರಸಿ ಬಂದ ಉದಾಹರಣೆಗಳು ಇವೆ. ಇದೀಗ ಕರ್ನಾಟಕದ ಇಬ್ಬರು ಜೋಶ್ ಕಿರು ವಿಡಿಯೋ ಅಪ್ಲಿಕೇಶನ್ ಬಳಕೆದಾರರಿಗೆ ಇಂಥಹುದೇ ಒಂದು ಅವಕಾಶ ಅರಸಿ ಬಂದಿದೆ.
'ಜೋಶ್'ನ ಕನ್ನಡ ಕಂಟೆಂಟ್ ಕ್ರಿಯೇಟರ್‌ಗಳಾದ ಸಚಿನ್ ಮತ್ತು ಸುಪ್ರಿತ್ ಅವರಿಗೆ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಒಂದರ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗುವ ಅವಕಾಶ ಒದಗಿ ಬಂದಿದೆ. 'ಜೋಶ್' ಮೂಲಕ ಈಗಾಗಲೇ ಸಾವಿರಾರು ಬೆಂಬಲಿಗರನ್ನು ಹೊಂದಿರುವ ಸಚಿನ್ ಮತ್ತು ಸುಪ್ರಿತ್ ಅವರ ಪ್ರತಿಭೆ ಗುರುತಿಸಿ ಬಿಪಾಸಿಟಿವ್ ಇವೆಂಟ್ ಕಾಸ್ಟಿಂಗ್ ನವರು ರಿಯಾಲಿಟಿ ಶೋನ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗುವ ಅವಕಾಶ ನೀಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಜಾ-ರಾಣಿ ಸೀಸನ್ 2 ' ಆರಂಭವಾಗುತ್ತಿದ್ದು, ರಿಯಾಲಿಟಿ ಶೋನ ಪ್ರೋಮೋ ಚಿತ್ರೀಕರಣ ಪೂರ್ಣಗೊಂಡಿದೆ. ಸಚಿನ್ ಮತ್ತು ಸುಪ್ರಿತ್ ಅವರನ್ನು ಒಳಗೊಂಡಂತೆ, ಸ್ರುಜನ್ ಲೋಕೇಶ್, ತಾರಾ ಇನ್ನಿತರರು ಮುಖ್ಯ ಕಲಾವಿದರು ಭಾಗವಹಿಸಿದ್ದ ಚಿತ್ರೀಕರಣದಲ್ಲಿ ಜೋಶ್‌ನ ಕಂಟೆಂಟ್ ಕ್ರಿಯೇಟರ್‌ಗಳಾದ ಸಚಿನ್ ಮತ್ತು ಸುಪ್ರಿತ್ ಸಹ ಪಾಲ್ಗೊಂಡಿದ್ದಾರೆ.
ಇದೀಗ 'ರಾಜಾ ರಾಣಿ ಸೀಸನ್ 2' ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಇತರೆ ನಟರೊಟ್ಟಿಗೆ ಸಚಿನ್ ಮತ್ತು ಸುಪ್ರಿತ್ ಸಹ ಪೋಷಕ ನಟರಾಗಿ ನಟಿಸಿದ್ದಾರೆ.

ಸಚಿನ್ ಮತ್ತು ಸುಪ್ರಿತ್ ಜೋಶ್ ಅಪ್ಲಿಕೇಶನ್ ಅನ್ನು ಬಹು ಸಮಯದಿಂದ ಬಳಸುತ್ತಿದ್ದು, ಹಲವಾರು ಹಾಸ್ಯಮಯ ಹಾಗೂ ಮನೊರಂಜನಾತ್ಮಕ ವಿಡಿಯೋಗಳನ್ನು ಮಾಡಿ ಹಂಚಿಕೊಂಡಿದ್ದಾರೆ. 'ಜೋಶ್' ನಲ್ಲಿ ಸುಪ್ರಿತ್‌ಗೆ 16 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಸಚಿನ್‌ಗೂ ಸಾಕಷ್ಟು ಸಂಖ್ಯೆಯ ಫಾಲೋವರ್ಸ್ ಇದ್ದಾರೆ. ಸುಪ್ರಿತ್‌ಗೆ 3 ಲಕ್ಷಕ್ಕೂ ಹೆಚ್ಚು ಮೆಚ್ಚುಗೆಗಳು ಸಿಕ್ಕಿರುವುದು ವಿಶೇಷ. ಸಚಿನ್‌ಗೂ ಸಾಕಷ್ಟು ಸಂಖ್ಯೆಯಲ್ಲಿ ಮೆಚ್ಚುಗೆಗಳು ಲಭಿಸಿವೆ.
ಇನ್ನು ಸುಪ್ರಿತ್ ಜೋಶ್ ಅಪ್ಲಿಕೇಶನ್‌ನಲ್ಲಿ ಬಹಳ ಸಕ್ರಿಯವಾಗಿದ್ದು, ಹಲವು ಕಿರುತೆರೆ, ಹಿರಿತೆರೆ ಕಲಾವಿದರೊಟ್ಟಿಗೆ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಸಚಿನ್ ಸಹ ಗೆಳೆಯರೊಟ್ಟಿಗೆ ಸೇರಿಕೊಂಡು ಹಲವು ಮನೊರಂಜನಾತ್ಮಕ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಸಚಿನ್ ಹಾಗೂ ಸುಪ್ರಿತ್ ನಟಿಸಿರುವ 'ರಾಜಾ ರಾಣಿ ಸೀಸನ್ 2'ರ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ.


Click it and Unblock the Notifications











