Megha Shetty: 'ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಿನ್ನೆಲೆ ಏನು?

By ಪೂರ್ವ

'ಜೊತೆ ಜೊತೆಯಲಿ' ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಅನು ಸಿರಿಮನೆ. ಅಸಲಿಗೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟಿಯೇ ಮೇಘಾ ಶೆಟ್ಟಿ. ಈಕೆ ಧಾರಾವಾಹಿ ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ ಮೂಲತಃ ಮಂಗಳೂರಿನಲ್ಲಿ ಜನಿಸಿದವರು. ಬೆಂಗಳೂರಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ.

ಮೇಘಾ ಶೆಟ್ಟಿ ಹುಟ್ಟಿದ್ದು ಆಗಸ್ಟ್ 4 ರಂದು, ಎಂಬಿಎ ಪದವಿ ಪಡೆದುಕೊಂಡಿರುವ ಇವರಿಗೆ ಚಿತ್ರರಂಗದ ಕಡೆ ಇದ್ದ ಅಪಾರವಾದ ವ್ಯಾಮೋಹವು ಅವರನ್ನು ಜೊತೆ ಜೊತೆಯಲಿ ಧಾರವಾಹಿ ತನಕ ಕರೆದುಕೊಂಡು ಬಂದಿದೆ.

ಹೊಸ ಬಗೆಯ ಪಾತ್ರದಲ್ಲಿ ಮೇಘಾ ಶೆಟ್ಟಿ

ಹೊಸ ಬಗೆಯ ಪಾತ್ರದಲ್ಲಿ ಮೇಘಾ ಶೆಟ್ಟಿ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ನಟನೆಗಾಗಿ ಜೀ ಕುಟುಂಬ ಅವಾರ್ಡ್ಸ್ 2020ರ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಹೊಸ ಬಗೆಯ ಡಿಫರೆಂಟ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಮೇಘಾ. ಕವೀಶ್‌ ಶೆಟ್ಟಿ ಈ ಚಿತ್ರದ ಹೀರೊ ಆಗಿ ಅಭಿನಯಿಸಿದ್ದಾರೆ. ಸೀರಿಯಲ್‌ ಸಿನಿಮಾಗಳಲ್ಲಿ ಈವರೆಗೆ ಮುಗ್ದೆಯಾಗಿ, ಬಬ್ಲಿ ಹುಡುಗಿ ಪಾತ್ರ ಮಾಡ್ತಾ ಇದ್ದ ಮೇಘಾ ಈ ಸಿನಿಮಾದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅನು ಸಿನಿಮನೆ ಹಿನ್ನೆಲೆ ಏನು ಗೊತ್ತಾ ?

ಅನು ಸಿನಿಮನೆ ಹಿನ್ನೆಲೆ ಏನು ಗೊತ್ತಾ ?

ಇತ್ತೀಚಿನ ದಿನಗಳಲ್ಲಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮೇಘಾ ಶೆಟ್ಟಿ ಮನೆ ಹಾಗೂ ದುಬಾರಿ ಕಾರ್ ಖರೀದಿ ಮಾಡಿದ್ದರು. ಈ ವಿಷಯವನ್ನು ಅವರೆ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸಿದ್ದರು. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸಿದ ನಂತರದಲ್ಲಿ ಮೇಘಾಗೆ ಸಾಕಷ್ಟು ಅವಕಾಶಗಳು ಬಂದಿವೆ.

ಸಿನಿಮಾದಿಂದ ಮೇಘಾಗೆ ಹೆಚ್ಚು ಬೇಡಿಕೆ

ಸಿನಿಮಾದಿಂದ ಮೇಘಾಗೆ ಹೆಚ್ಚು ಬೇಡಿಕೆ

ಚಂದನ್ ಶೆಟ್ಟಿ ಮ್ಯೂಸಿಕ್ ವಿಡಿಯೋದಲ್ಲಿಯೂ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನು ಒಂದಾದ ಮೇಲೆ ಒಂದರಂತೆ ಸಿನಿಮಾದಲ್ಲಿಯೂ ನಟಿಸುವ ಅವಕಾಶವೂ ಮೇಘಾಗೆ ಸಿಗುತ್ತಿದೆ. 'ಗೋಲ್ಡನ್ ಸ್ಟಾರ್' ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಸಿನಿಮಾದ ನಾಯಕಿಯರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು. ಕವೀಶ್ ಶೆಟ್ಟಿ ನಾಯಕ ನಟರಾಗಿರುವ ಪ್ಯಾನ್ ಇಂಡಿಯಾ ಸಿನಿಮಾಗೆ ಮೇಘಾ ಶೆಟ್ಟಿ ನಾಯಕಿಯಾಗಿದ್ದಾರೆ. ಅಂದ್ಹಾಗೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಹೀಗೆ ಇನ್ನು ಕೆಲಸ ಸಿನಿಮಾಗಳ ಮಾತುಕತೆ ನಡೆಯುತ್ತಿದೆ.

ಪ್ರತಿ ಹಂತದಲ್ಲೂ ಮೇಘಾ ಶೆಟ್ಟಿಗೆ ಸಿಕ್ಕಿದೆ ಯಶಸ್ಸು

ಪ್ರತಿ ಹಂತದಲ್ಲೂ ಮೇಘಾ ಶೆಟ್ಟಿಗೆ ಸಿಕ್ಕಿದೆ ಯಶಸ್ಸು

ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಸಹಭಾಗಿತ್ವದಲ್ಲಿ ನಿರ್ಮಾಪಕರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಮೇಘಾ ಶೆಟ್ಟಿ ಎನ್ನುವ ಹೆಸರು ಕೇಳಿದಾಕ್ಷಣ ಈಕೆ ಬಂಟರ ಹುಡುಗಿ ಇರಬೇಕು ಅನಿಸುತ್ತದೆ. ಅದು ನಿಜವೂ ಹೌದು. ಮೇಘಾ ತಂದೆ ಮಂಗಳೂರಿನವರೇ. ಆದರೆ ತಾಯಿ ಹುಬ್ಬಳ್ಳಿಯವರಾದ ಕಾರಣ ಮೇಘಾ ತುಳು ಭಾಷೆ ಕಲಿತಿಲ್ಲ. ಆದರೆ ರಕ್ಷಿತ್ ಶೆಟ್ಟಿಯ ಬಳಿಕ ಚಂದನವನದಲ್ಲಿ ಮೂಡಿರುವ ಶೆಟ್ಟರ ಹವಾ ಮುಂದುವರಿಸುವ ಎಲ್ಲ ಲಕ್ಷಣಗಳೂ ಈ ನಟಿಯಲ್ಲಿದೆ. ಅದಕ್ಕೆ ಒಂದೇ ಒಂದು ಸಾಕ್ಷಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿನ ಅನು ಸಿರಿಮನೆ ಪಾತ್ರ.

More from Filmibeat

English summary
kannada actress Megha Shetty life style, Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X