Megha Shetty: ಮೇಘಾ ಶೆಟ್ಟಿ ಕಂಡು "ಏನ್ ಶೆಟ್ರೆ.. ಸಖತ್ ಆಗಿ ಕಾಣ್ತಿದ್ದೀರಾ" ಎಂದು ಒದ್ದಾಡಿದ ಫ್ಯಾನ್ಸ್!
ಮೇಘಾ ಶೆಟ್ಟಿಗಿರುವ ಫ್ಯಾನ್ ಕ್ರೇಜ್ ಅಷ್ಟಿಷ್ಟಲ್ಲ. 'ಜೊತೆ ಜೊತೆಯಲಿ' ಧಾರಾವಾಹಿ ಪ್ರಸಾರ ಆಗುತ್ತಿದ್ದ ವೇಳೆ ವಯಸ್ಸಿನ ಹಂಗಿಲ್ಲದೆ ಆ ಧಾರಾವಾಹಿಯನ್ನು ಜನರು ನೋಡುತ್ತಿದ್ದರು. ಅದರಲ್ಲಿ ಆರ್ಯವರ್ಧನ್‌ನನ್ನು ಎಷ್ಟು ಇಷ್ಟ ಪಡುತ್ತಿದ್ದರೋ ಅಷ್ಟೇ ಅನು ಸಿರಿಮನೆಯನ್ನು ಇಷ್ಟ ಪಡುತ್ತಿದ್ದರು. ಆದರೆ, ಆ ಜೀ ಕನ್ನಡದಲ್ಲಿ ಬರುತ್ತಿದ್ದಂತಹ 'ಜೊತೆ ಜೊತೆಯಲಿ' ಧಾರಾವಾಹಿ ಮುಗಿದ ಬಳಿಕ ಅನು ಸಿರಿಮನೆಯನ್ನು ಮಿಸ್ ಮಾಡಿಕೊಂಡವರೇ ಹೆಚ್ಚಾಗಿದ್ದಾರೆ.
ಮೇಘಾ ಶೆಟ್ಟಿಯನ್ನು ಧ್ಯಾನ ಮಾಡುವ ಅಭಿಮಾನಿಗಳು ಎಷ್ಟು ಬೇಗ ಅವರನ್ನು ತೆರೆ ಮೇಲೆ ನೋಡುತ್ತೀವೋ ಎಂದು ಕಾತುರದಿಂದ ಕಾಯುತ್ತಿದ್ದಾರೆ. 'ಜೊತೆ ಜೊತೆಯಲಿ' ಧಾರಾವಾಹಿ ಮಾಡುತ್ತಿರುವಾಗಲೇ ಹಲವು ಕನ್ನಡ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಲಂಗ-ಧಾವಣಿಯಲ್ಲಿ ಮಿಂಚಿದ ಅನು
ಮೇಘಾ ಶೆಟ್ಟಿ ಧಾರಾವಾಹಿ ಲೋಕದಿಂದ ದೂರವಿದ್ದರು, ಸಿನಿಮಾಗಳ ಅವಕಾಶ ಕಡಿಮೆ ಇದ್ದರು, ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿನೇ ಇದ್ದಾರೆ. ಯಾಕಂದರೆ, ಅವರ ಅಭಿಮಾನಿಗಳು ಸದಾ ಅವರನ್ನು ಆಕ್ಟೀವ್ ಆಗಿರುವುದನ್ನು ನೋಡುವುದಕ್ಕೆ ಬಯಸುತ್ತಾರೆ. ಆದ ಕಾರಣ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಲಂಗ ದಾವಣಿಯಲ್ಲಿ ಇರುವ ಹೊಸ ಫೋಟೋಗಳನ್ನು ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ. ಅದು ಪಿಂಕ್ ಮತ್ತು ಗ್ರೀನ್ ಕಾಂಬಿನೇಷನ್ ಡ್ರೆಸ್‌ನಲ್ಲಿ ಪಸಂದ್ ಆಗಿ ಮಿಂಚುತ್ತಿದ್ದಾರೆ.
ಹಳ್ಳಿ ಹುಡುಗಿ ಲುಕ್‌ಗೆ ಫಿದಾ
'ಜೊತೆ ಜೊತೆಯಲಿ' ಧಾರಾವಾಹಿ ಮುಗಿದ ಮೇಲೆ ಮೇಘಾ ಶೆಟ್ಟಿ ಮಲೆಯಾಳಂ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಮೇಘಾ ಶೆಟ್ಟಿ ಕೂಡ ಈ ಬಗ್ಗೆ ಸಾಕಷ್ಟು ಕಡೆ ಹೇಳಿದ್ದರು. ಮೇಘಾ ಶೆಟ್ಟಿ ಅವರ ಇನ್‌ಸ್ಟಾಗ್ರಾಂ ಖಾತೆ ನೋಡುತ್ತಿದ್ದರೆ, ಹೆಚ್ಚು ಹಳ್ಳಿ ಹುಡುಗಿಯ ಗೆಟಪ್‌ನಲ್ಲಿಯೇ ಕಾಣಿಸಿಕೊಂಡಿರುವ ಫೋಟೋಗಳು ಹೆಚ್ಚಾಗಿವೆ. ಅದರಲ್ಲಿ ಲಂಗ ಧಾವಣಿಯದ್ದೇ ಫೋಟೋಶೂಟ್ ಹೆಚ್ಚಾಗಿದೆ. ಹೀಗಾಗಿ ಇದು ನಾರ್ಮಲ್ ಆಗಿ ಫೋಟೋಶೂಟ್ ಮಾಡಿಸಿರುವುದಾ..? ಅಥವಾ ಸಿನಿಮಾಗಾಗಿ ಮಾಡಿಸಿರುವುದಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ದಂತದ ಗೊಂಬೆ ಎಂದು ಕೊಂಡಾಡಿದ ಫ್ಯಾನ್ಸ್
ಮೇಘಾ ಶೆಟ್ಟಿ ಹೇಗಿದ್ದರು ಚೆಂದವೇ ಅಭಿಮಾನಿಗಳಿಗೆ. ಇದೀಗ ಲಂಗ ಧಾವಣಿಯಲ್ಲಿ ಕಾಣಿಸಿಕೊಂಡ ಮೇಘಾ ಶೆಟ್ಟಿಯನ್ನು ಫ್ಯಾನ್ಸ್ ಹಾಡಿ ಕೊಂಡಾಡಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಂತೂ ಒಮ್ಮೆ ಕಣ್ಣು ಆಡಿಸಿದರೆ ಖುಷಿಯಾಗುತ್ತೆ. ಅಭಿಮಾನಿಗಳ ಉತ್ಸಾಹಕ್ಕೆ ಪಾರವೇ ಇಲ್ಲ ಎನಿಸುತ್ತದೆ. "ದಂತದ ಗೊಂಬೆ..", "ಶೆಟ್ರೆ ಬಿದ್ದೋದ್ನಲ್ಲ ಶೆಟ್ರೆ", "ಶೆಟ್ರು ಸೂಪರ್ ಆಗಿ ಕಾಣುತ್ತಿದ್ದಾರೆ", "ಹಳ್ಳಿ ಲುಕ್‌ನಲ್ಲಿ ಚೆಂದ ಕಾಣಿಸುತ್ತಾ ಇದ್ದೀರಾ" ಹೀಗೆ ಬ್ಯೂಟಿಫುಲ್ ಆದಂತ ತರಹೇವಾರಿ ಕಮೆಂಟ್‌ಗಳೇ ಕಾಣಿಸುತ್ತವೆ.
ಮಿಲಿಯನ್ ಗಟ್ಟಲೇ ಫಾಲೋವರ್ಸ್
ಮೇಘಾ ಶೆಟ್ಟಿ ಅದ್ಯಾವಾಗ ಅನು ಸಿರಿಮನೆಯಾಗಿ ಧಾರಾವಾಹಿ ಲೋಕಕ್ಕೆ ಕಾಲಿಟ್ಟರೋ, ಅಂದಿನಿಂದ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಫಾಲೋವರ್ಸ್ ಕೂಡ ಮಿಲಿಯನ್‌ಗಟ್ಟಲೇ ಹೆಚ್ಚಾಗಿದ್ದಾರೆ. 1 ಮಿಲಿಯನ್‌ಗಿಂತ ಹೆಚ್ಚಿನ ಫಾಲೋವರ್ಸ್ ಅವರ Instagramನಲ್ಲಿ ಇದ್ದಾರೆ. ಇನ್ನು ಫ್ಯಾನ್ ಪೇಜ್‌ಗಳ ಸಂಖ್ಯೆ ಕೂಡ ಕಡಿಮೆ ಇಲ್ಲ. ಜಸ್ಟ್ ಮೇಘಾ ಶೆಟ್ಟಿ ಅಂತ ಹುಡುಕಿದರೆ ಸಾಕು ಕಣ್ಣಿಗೆ ಸಾಕಷ್ಟು ಫ್ಯಾನ್ ಪೇಜ್‌ಗಳು ಕಾಣಿಸುತ್ತವೆ. ಮೇಘಾ ಶೆಟ್ಟಿ ಎಂದರೆ ಅಭಿಮಾನಿಗಳಿಗೆ ಅಷ್ಟು ಇಷ್ಟ.


Click it and Unblock the Notifications











