ಮಾಡರ್ನ್ ಗೆಟಪ್‌ನಲ್ಲಿದ್ದ ಮೇಘಾ ಶೆಟ್ಟಿಯ ಜಾನಪದ ಲುಕ್ಕಿಗೆ ಫ್ಯಾನ್ಸ್ ಫಿದಾ..!

By ಎಸ್ ಸುಮಂತ್

ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆಯುತ್ತಿದೆ. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ನಟನೆಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಆದರೆ ಧಾರಾವಾಹಿ ಹೊರತಾಗಿ ಅವರ ಫಾಲೋವರ್ಸ್ ಅವರನ್ನು ಬೇರೆ ರೀತಿಯಲ್ಲಿಯೇ ನೋಡುವುದಕ್ಕೆ ಇಷ್ಟಪಡುತ್ತಿರುತ್ತಾರೆ. ಆ ಇಷ್ಟಗಳನ್ನು ವಿಡಿಯೋ ಮಾಡುವ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಅಂಥದ್ದೇ ವಿಡಿಯೋ ಒಂದು ಅಭಿಮಾನಿಗಳ ಪೇಜ್‌ನಲ್ಲಿ ಸಿಕ್ಕಿದೆ.

ಅನು ಸಿರಿಮನೆಯಾಗಿ ಸದ್ಯ ಮೇಘಾ ಶೆಟ್ಟಿ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಧಾರಾವಾಹಿ ಶುರುವಾಗಿ ವರ್ಷಗಳೇ ಕಳೆಯುತ್ತಾ ಬಂದರೂ ಎಲ್ಲಿಯೂ ಬೋರ್ ಹೊಡೆಸಿಲ್ಲ. ಅದರಲ್ಲೂ ಇತ್ತೀಚೆಗೆ ಅನು ಸಿರಿಮನೆ ನಟನೆಗೆ ಕ್ಲೀನ್ ಬೋಲ್ಡ್ ಆದವರೇ ಹೆಚ್ಚು. ಯಾಕಂದ್ರೆ ಅನು ಸಿರಿಮನೆ ಆಗಾಗ ರಾಜನಂದಿನಿಯಾಗಿ ಬದಲಾಗಿ, ಮುಖದಲ್ಲೇ ರೌದ್ರತೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಇದು ನೋಡುಗರಿಗೆ ತುಂಬಾ ಹಿಡಿಸಿದೆ.

ಬಿಂದಿಗೆ ಹಿಡಿದು ಹೊರಟ ಅನು ಸಿರಿಮನೆ

ಬಿಂದಿಗೆ ಹಿಡಿದು ಹೊರಟ ಅನು ಸಿರಿಮನೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಸಂಪೂರ್ಣ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಹೆಚ್ವು ಚೂಡಿದಾರ್ ಹಾಕುವ ಮೂಲಕ. ಇದೀಗ ಮೇಘಾ ಶೆಟ್ಟಿ ಅವರ ಅಭಿಮಾನಿ ಬಳಗ ಬ್ಯೂಟಿಫುಲ್ ಎನಿಸುವ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಅದು ಮೇಘಾ ಶೆಟ್ಟಿ ಜಾನಪದ ಶೈಲಿಯಲ್ಲಿ ಕಾಣಿಸಿಕೊಂಡಿರುವುದು. ನೀರಿಗೆ ಹೋಗೋ ಹೆಣ್ಣೆ ನಿಲ್ಲೆ ನಾ ಬರುತ್ತೀನಿ ಎಂಬ ಜಾನಪದ ಹಾಡಿಗೆ ಮೇಘಾ ಶೆಟ್ಟಿ ಫೋಟೊ ಹಾಕಿ ಎಡಿಟ್ ಮಾಡಿದ್ದಾರೆ. ಆ ವಿಡಿಯೋವವೊಮ್ಮೆ ನೀವೂ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸದೆ ಇರುವುದಿಲ್ಲ. ಮೇಘಾ ಶೆಟ್ಟಿಯ ಆ ಲುಕ್ ಅಷ್ಟಯ ಅಟ್ರಾಕ್ಟ್ ಮಾಡುತ್ತಾ ಇದೆ.

ಅಭಿಮಾನಿಗಳಿಗೆ ಸಿಕ್ಕಿದೆ ಹೊಸತರದ ಫೋಟೋ

ಅಭಿಮಾನಿಗಳಿಗೆ ಸಿಕ್ಕಿದೆ ಹೊಸತರದ ಫೋಟೋ

ಅಣ್ಣಾವ್ರು ಅಭಿಮಾನಿಗಳೇ ನಮ್ಮನೆ ದೇವ್ರು ಎಂದಿದ್ದರು. ಅಭಿಮಾನಿಗಳೆಂದರೆ ಹಾಗೆನೇ. ಒಮ್ಮೆ ಒಬ್ಬ ಸೆಲೆಬ್ರೆಟಿಯ ಅಭಿಮಾನಿಯಾದರೆ ಮುಗೀತು ಅವರ ದಿನಚರಿಯನ್ನೆಲ್ಲಾ ಅವರಿಗಿಂತ ಮುಂಚೆಯೇ ಅಪ್ಲೋಡ್ ಮಾಡಿರುತ್ತಾರೆ. ಸೆಲೆಬ್ರೆಟಿಗಳು ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರೆ, ಅಥವಾ ಏನಾದರೂ ವಿಶೇಷತೆ ಎನಿಸಿದರೆ ಆ ಫೋಟೋ, ವಿಡಿಯೋಗಳನ್ನು ಅವರ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಇತ್ತಿಚಿನ ದಿನಗಳಲ್ಲಿ ಸೆಲೆಬ್ರೆಟಿಗಳು ಹಂಚಿಕೊಳ್ಳುವುದಕ್ಕೂ ಮುನ್ನವೇ ಅಭಿಮಾನಿಗಳೇ ಹಂಚಿರುತ್ತಾರೆ. ಮತ್ತೊಂದು ವಿಶೇಷತೆ ಎಂದರೆ ಅವರ ಸೋಶಿಯಲ್ ಮೀಡಿಯಾದಲ್ಲೂ ಸಿಗದಂತೆ ಫೋಟೋ ಅಭಿಮಾನಿಗಳ ಅಕೌಂಟ್‌ನಲ್ಲಿ ಸಿಗಲಿದೆ. ಅಂಥದ್ದೊಂದು ವಿಶೇಷವೆನಿಸುವ ಮೇಘಾ ಶೆಟ್ಟಿಯ ಫೋಟೋ ಸಿಕ್ಕಿರುವುದು ಇದೇ ಫ್ಯಾನ್ ಪೇಜ್‌ನಲ್ಲಿ. ಜಾನಪದ ಶೈಲಿಯ ಉಡುಗೆಯಲ್ಲಿ, ಬಿಂದಿಗೆ ಹಿಡಿದು ಪೋಸ್ ಕೊಟ್ಟಿರುವ ಮೇಘಾ ಶೆಟ್ಟಿಯ ಈ ಸ್ಪೆಷಲ್ ಫೋಟೋ ಹುಡುಕಿದರು ಅಧಿಕೃತ ಅಕೌಂಟ್ ನಲ್ಲಿ ಸಿಗುತ್ತಿಲ್ಲ.

ಜಾನಪದ ಶೈಲಿಯಲ್ಲೂ ಸಖತ್ ಲುಕ್

ಜಾನಪದ ಶೈಲಿಯಲ್ಲೂ ಸಖತ್ ಲುಕ್

ಮೇಘಾ ಶೆಟ್ಟಿಯ ಸೋಶಿಯಲ್ ಮೀಡಿಯಾ ಫಾಲೋವರ್ಸ್ ನೀವಾಗಿದ್ದರೆ ಅವರ ವೆರೈಟಿ ಲುಕ್‌ಗಳು ನಿಮ್ಮ ಕಣ್ಣಿಗೂ ಬಿದ್ದಿರುತ್ತದೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕೇವಲ ಟ್ರೆಡಿಷನಲ್ ಲುಕ್ಕಿನಲ್ಲಿಯೇ ಕಾಣಿಸಿಕೊಳ್ಳುವ ಮೇಘಾ ರಿಯಲ್ ಲೈಫ್‌ನಲ್ಲಿ ಸಖತ್ ಮಾಡರ್ನ್ ಕೂಡ. ಅಷ್ಟೇ ಅಲ್ಲ ಜೀರೊ ಸೈಜ್ ನಟಿ. ಹೀಗಾಗಿಯೇ ಯಾವುದೇ ಡ್ರೆಸ್ ಹಾಕಿದ್ರು ಬ್ಯೂಟಿಫುಲ್ ಲುಕ್‌ನಲ್ಲಿ ಕಾಣಿಸುತ್ತಾರೆ. ಇದೀಗ ಹಾಕಿರುವಂತ ಜಾನಪದ ಉಡುಗೆ ಮತ್ತು ಅದಕ್ಕೆ ಸೆಟ್ ಮಾಡಿರುವಂತಹ ಹಾಡಿಗೆ ಫ್ಯಾನ್ಸ್ ಉಘೆ ಉಘೆ ಎಂದಿದ್ದಾರೆ. ಹಾರ್ಟ್ ಸಿಂಬಲ್ ಹಾಕಿ, ಅನು ಅಕ್ಕ ಸೂಪರ್ ಎಂದಿದ್ದಾರೆ.

ಧಾರಾವಾಹಿ & ಸಿನಿಮಾ ಬ್ಯಾಲೆನ್ಸ್ ಮಾಡುತ್ತಿರೋ ನಟಿ

'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ಎಲ್ಲರಿಗೂ ಚಿರುಪರಿಚಿತರಾದವರು. ಬಳಿಕ ಸಿನಿಮಾಗಳ ಒಂದೊಂದೇ ಆಫರ್‌ಗಳು ಬರತೊಡಗಿತು. ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್', ಡಾರ್ಲಿಂಗ್ ಕೃಷ್ಣ ಜೊತೆಗೆ 'ದಿಲ್ ಪಸಂದ್', ಈಗ ಪ್ಯಾನ್ ಇಂಡಿಯಾ ಸಿನಿಮಾ 'ಲಂಡನ್ ಕೆಫೆ' ಅನೌನ್ಸ್ ಆಗಿದೆ. ಜೊತೆಗೆ ದರ್ಶನ್ ಜೊತೆ ಆಗಾಗ ಫೋಟೋ ಹಂಚಿಕೊಂಡು ಆ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಅದೇನು ಸಿನಿಮಾವೋ, ಇಲ್ಲ ಅಭಿಮಾನವೋ ಗೊತ್ತಾಗದೆ ಅಭಿಮಾನಿಗಳು ತಲೆಕೆರೆದುಕೊಂಡು ಕೂತಿದ್ದಾರೆ. ಈ ಮಧ್ಯೆ 'ಜೊತೆ ಜೊತೆಯಲಿ' ಧಾರಾವಾಹಿ ಕೂಲಾಗಿ ಸಾಗುತ್ತಿದ್ದಾರೆ.

More from Filmibeat

English summary
Jothe Jotheyali Actress Megha Shetty New Look Goes Viral In Social Media. Here Is The Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X