ಇಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಇರೋದಿಲ್ವಾ? 'ಜೊತೆ ಜೊತೆಯಲಿ' ಕಥೆಯೇನು?
ಕಳೆದ ಕೆಲವು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿಯ ವಿವಾದ ಭುಗಿಲೆದ್ದಿದೆ. ನಿರ್ಮಾಪಕರು ಹಾಗೂ ಹೀರೋ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದೆ. ಯಾವುದೇ ಕಾರಣಕ್ಕೂ ಮತ್ತೆ ಆರ್ಯವರ್ಧನ್ ಜಾಗಕ್ಕೆ ಅನಿರುದ್ಧ್ ಅವರನ್ನು ಕರೆತರುವುದಿಲ್ಲ. ಅವರಿಂದ ಎಷ್ಟೋ ಜನ ಕೆಲಸ ಬಿಟ್ಟು ಹೋಗಿದ್ದಾರೆ. ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕೆ ಹೋಗುವುದಿಲ್ಲ ಎಂದು ನಿರ್ಮಾಪಕ ಆರೂರು ಜಗದೀಶ್ ಸ್ಪಷ್ಷವಾಗಿ ಹೇಳಿದ್ದರು.
ಶುಕ್ರವಾರದ ತನಕ ಆರ್ಯವರ್ಧನ್ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಂದಿನಿಂದ ಧಾರಾವಾಹಿ ಆರ್ಯವರ್ಧನ್ ಅವರನ್ನು ಬಿಟ್ಟು ಮುಂದುವರೆಯುವ ಸೂಚನೆ ಕಾಣುತ್ತಿದೆ.
'ಜೊತೆ ಜೊತೆಯಲಿ' ಧಾರಾವಾಹಿ ನಿಂತಿರುವುದೇ ಹೀರೊ ಪಾತ್ರದ ಮೇಲೆ. ಹೀರೊನೇ ಕಥೆ, ಹೀರೊನೇ ವಿಲನ್, ಹೀರೊ ಇಲ್ಲದೆ ಕಥೆ ಮುಂದುವರೆಸಲು ಸಾಧ್ಯವಿಲ್ಲ. ಹೀಗಾಗಿ ಆರ್ಯವರ್ಧನ್ ಜಾಗವನ್ನು ಹೇಗೆ ಫುಲ್‌ಫಿಲ್ ಮಾಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಆರ್ಯವರ್ಧನ್ ಇಲ್ಲದೆ ಕಥೆ ಸಾಗುವುದಿಲ್ಲ ಎಂದು ತಿಳಿದೇ ಈಗಾಗಲೇ ಪಾತ್ರಕ್ಕೆ ಮ್ಯಾಚ್ ಆಗುವ ಕಲಾವಿದನ ಹುಡುಕಾಟದಲ್ಲಿದೆ. ಅಲ್ಲಿವರೆಗೂ ಕಥೆ ಸಾಗುವುದಾದರೂ ಹೇಗೆ? ಉತ್ತರಕ್ಕಾಗಿ ಮುಂದೆ ಓದಿ.

ಆರ್ಯವರ್ಧನ್ ಇಲ್ಲ ಎಂಬ ಪದಕ್ಕೆ ಒತ್ತು!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಹಲವು ಪಾತ್ರಗಳಿವೆ. ಆ ಎಲ್ಲಾ ಪಾತ್ರಗಳಿಗೂ ಆರ್ಯವರ್ಧನ್ ಒಬ್ಬನೇ ಲಿಂಕ್ ಇರುವುದು. ಆರ್ಯವರ್ಧನ್ ಇಲ್ಲದೆಯೇ ಕಥೆಯನ್ನು ತೆಗೆದುಕೊಂಡು ಹೋದರೂ ಮಾತಿನಲ್ಲಾದರೂ ಆರ್ಯವರ್ಧನ್ ಹೆಸರು ಅಲ್ಲಿ ಸುಳಿದಾಡುತ್ತದೆ. ಇಂದಿನ ಎಪಿಸೋಡಿನಲ್ಲಿ ಅದು ಎದ್ದು ಕಾಣುತ್ತಿದೆ. ಮಾನಸಿ ತನ್ನ ಭಾಗದ ಆಸ್ತಿಗಾಗಿ ಡಿಮ್ಯಾಂಡ್ ಇಡುತ್ತಿದ್ದಾಳೆ. ಈ ವೇಳೆ ಮಾತಾಡುವಾಗ ಬ್ರೋ ಇನ್ನೂ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದಾಳೆ. ಈ ಮಾತು ನೋಡುಗರಿಗೆ ಓ ಇನ್ನು ಮುಂದೆ ಆರ್ಯವರ್ಧನ್ ಬರುವುದಿಲ್ಲವೇನೋ ಎಂಬಂತೆ ಭಾಸವಾಗುತ್ತಿದೆ.

ಹೊಸ ಆರ್ಯ ಸಿಗುವ ತನಕ ಆಸ್ತಿ ಜಗಳ?
ಸದ್ಯಕ್ಕೆ ಹೊಸ ಆರ್ಯನನ್ನು ಹುಡುಕಲೇಬೇಕಾಗಿದೆ. ಯಾಕೆಂದರೆ ಆರೂರು ಹೇಳಿದಂತೆ ಅನಿರುದ್ಧ್ ಅವರನ್ನು ಮುಂದುವರೆಸಲು ಸಾಧ್ಯವೇ ಇಲ್ಲ ಎಂಬುದಾಗಿರುವುದರಿಂದ ಹೊಸ ಆರ್ಯ ಬರುತ್ತಾನೆ ಎಂಬುದಂತು ಸ್ಪಷ್ಟವಾಗಿದೆ. ಆದರೆ ಹೊಸ ಆರ್ಯ ಸಿಗುವ ತನಕ ಕಥೆ ಸಾಗಲೇಬೇಕಲ್ಲವಾ. ಆರ್ಯನ ಅನುಪ ಸ್ಥಿತಿಯಲ್ಲಿ ಮನೆಯಲ್ಲಿ ಆಸ್ತಿ ವಿಚಾರ ನಡೆಯುವ ಸಾಧ್ಯತೆ ಇದೆ. ಈಗಾಗೇ ಮಾನ್ಸಿ ಆಸ್ತಿಯ ವಿಚಾರಕ್ಕೆ ಜಗಳ ಶುರು ಮಾಡಿದ್ದಾಳೆ. ಆಸ್ತಿ ಭಾಗವಾಗಿದ್ದೆಲ್ಲ ಸುಳ್ಳು, ನಕಲಿ ಡಾಕ್ಯೂಮೆಂಟ್ಸ್ ಕೊಟ್ಟು ಮೋಸ ಮಾಡಿದ್ದಾರೆ ಎಂದು ಗಲಾಟೆ ತೆಗೆದಿದ್ದಾಳೆ. ನಕಲಿ ಹೇಗಾಯಿತು, ಇದರ ಹಿಂದೆ ಯಾರಿದ್ದಾರೆಂಬ ಸತ್ಯ ತಿಳಿಯುವ ಹಾದಿಯನ್ನು ಹಿಡಿಯಬಹುದು.

ಅನಿರುದ್ಧ್‌ಗಾಗಿ ಫ್ಯಾನ್ಸ್ ಮನವಿ
ಇವತ್ತಿನ ಎಪಿಸೋಡಿನ ಪ್ರೋಮೊ ಬಿಡಲಾಗಿದೆ. ಅದರಲ್ಲಿ ಆರ್ಯವರ್ಧನ್ ಕಂಡಿಲ್ಲ. ಇದನ್ನು ಕಂಡು 'ಜೊತೆ ಜೊತೆಯಲಿ' ಸೀರಿಯಲ್ ಫಾಲೋವರ್ಸ್ ನಮಗೆ ಆರ್ಯವರ್ಧನ್ ಜಾಗಕ್ಕೆ ಅನಿರುದ್ಧ್ ಬೇಕೆ ಬೇಕು ಎಂದು ಕೂತಿದ್ದಾರೆ. ಆರ್ಯವರ್ಧನ್ ಆಗಿ ಅನಿರುದ್ಧ್ ವಾಪಾಸ್ಸಾಗಬೇಕು. ಇಲ್ಲವಾದಲ್ಲಿ ಧಾರಾವಾಹಿಯನ್ನೇ ನಿಲ್ಲಿಸಿ ಎನ್ನುತ್ತಿದ್ದಾರೆ. ಆರ್ಯನಾಗಿ ಅನಿರುದ್ಧ್ ಅವರನ್ನು ಮಾತ್ರ ನೋಡಲು ಸಾಧ್ಯ ಎನ್ನುತ್ತಿದ್ದಾರೆ.
ಕಥೆಯಲ್ಲೇನಾದರೂ ಟ್ವಿಸ್ಟ್ ಸಿಗುತ್ತಾ?
ಅನಿರುದ್ಧ್ ಕೊಂಚ ಕಾಂಪ್ರಮೈಸ್ ಆಗಲು ಒಪ್ಪಿದ್ದಾರೆ. ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿದರೆ ಹೋಗಲು ಸಿದ್ದ ಎಂದಿದ್ದಾರೆ. ಆದರೆ ನಿರ್ಮಾಪಕ ಆರೂರು ಜಗದೀಶ್ ಬಿಲ್‌ಕುಲ್ ಸಾಧ್ಯವಿಲ್ಲ ಎಂದಿದ್ದಾರೆ. ಇತ್ತ ನೋಡುಗರು ನಮಗೆ ಅನಿರುದ್ದ್ ಬೇಕು ಎನ್ನುತ್ತಿದ್ದಾರೆ. ಈ ಎಲ್ಲಾ ಗೊಂದಲದ ನಡುವೆ ಈಗ ಧಾರಾವಾಹಿ ಟಿಆರ್‌ಪಿ ಕಳೆದುಕೊಳ್ಳಬಾರದು ಎಂದರೆ ಕಥೆಯಲ್ಲಿ ಟ್ವಿಸ್ಟ್ ಬೇಕೇ ಬೇಕಾಗುತ್ತದೆ. ಹೊಸ ಆರ್ಯನ ಪರಿಚಯಕ್ಕೆ ಸ್ಟ್ರಾಂಗ್ ಟರ್ನಿಂಗ್ ಪಾಯಿಂಟ್ ಸಿಕ್ಕಾಗ ಪ್ರೇಕ್ಷಕರು ಕೂಡ ಆರ್ಯನನ್ನು ರಿಸೀವ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಈಗ ಯಾವ ರೀತಿ ಮುಂದುವರೆಯುತ್ತೆ. ಟೀಂ ಏನು ಫ್ಲ್ಯಾನ್ ಮಾಡಿಕೊಂಡಿದೆ ಎಂಬ ಕುತೂಹಲದಿಂದಲೇ ಎಲ್ಲರೂ ಕಾಯುತ್ತಿದ್ದಾರೆ.


Click it and Unblock the Notifications











