Megha Shetty: ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡ ಮೇಘಾ ಶೆಟ್ಟಿ, ದಸರಾ ಗೊಂಬೆ ಎಂದ ಫ್ಯಾನ್ಸ್!
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮಿಂಚಿದ ನಟಿ ಮೇಘಾ ಶೆಟ್ಟಿ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಎಲ್ಲರ ಮನ ಗೆದ್ದಿದ್ದ ಈ ನಟಿ ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಸದ್ಯ ಹೊಸ ಹೊಸ ಫೋಟೋಶೂಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ದಸರಾ ಆಚರಿಸಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಮಿಂಚಿರುವ ಅವರು, ನವರಾತ್ರಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ದಿನ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.
ನವರಾತ್ರಿ ದಿನ ಸೀರೆಯಿಟ್ಟು ಮಿಂಚಿದ್ದಾರೆ. ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಯಾಗಿ ಆ ಬಳಿಕ ಸಿನಿಮಾದಲ್ಲೂ ಕೂಡ ನಟನೆ ಮಾಡಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟು ಜನರ ಮನಗೆದಿದ್ದಾರೆ. ಇದೀಗ ನವರಾತ್ರಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿ ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ್ದು, ನಟಿಯನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ದಸರಾ ಗೊಂಬೆಯಂತೆ ಕಾಣುತ್ತಿರುವ ಮೇಘಾ ಶೆಟ್ಟಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಲೈಕ್ ಕಾಮೆಂಟ್‌ಗಳನ್ನು ಮಾಡಿ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗೆಯೇ ನಾಡಿನ ಜನರಿಗೆ ದಸರಾ ಹಬ್ಬದ ಶುಭಾಶಯಗಳು ಕೂಡ ಕೋರಿದ್ದಾರೆ.
ಸೀರೆಯುಟ್ಟು ಮಿಂಚಿದ ನಟಿ ಮೇಘಾ ಶೆಟ್ಟಿ
ರಾಮ ಗ್ರೀನ್ ಹಾಗೂ ಗ್ರೀನ್ ಬಾರ್ಡರ್ ಸೀರೆಯುಟ್ಟ ಮೇಘಾ ಶೆಟ್ಟಿ ತಲೆಗೆ ಮಲ್ಲಿಗೆ ಹೂವನ್ನು ಮುಡಿದಿದ್ದಾರೆ. ಜೊತೆಗೆ ಹಣೆಗೆ ಕುಂಕುಮ ಇಟ್ಟುಕೊಂಡು ಮನೆಯ ಬಾಗಿಲಿನಲ್ಲಿ ನಿಂತು ನಗುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ. ಮೇಘಾ ಶೆಟ್ಟಿ ಇದೀಗ ಹಿರಿತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಲವು ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಲು ಮೇಘಾ ಶೆಟ್ಟಿಗೆ ಆಫರ್ ಬರುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ
ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಫೋಟೋ ಶೂಟ್‌ಗಳನ್ನ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದರು. ಇದೀಗ ಮೇಘಾ ಶೆಟ್ಟಿ ಯನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ
ಮೇಘಾ ಫೋಟೋಗೆ ಕಾಮೆಂಟ್ ಮಾಡಿದ ಅಭಿಮಾನಿಗಳು
ದಸರಾ ಗೊಂಬೆ ಹಾಗೆ ಇನ್ನಿತರ ಕಾಮೆಂಟ್‌ಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ. ಮೇಘಾ ಶೆಟ್ಟಿ ನಟನೆಗೆ ಹಲವಾರು ಜನ ಫಿದಾ ಆಗಿದ್ದಾರೆ. ನಟನ ರಂಗದಿಂದ ಬಂದಿರದೆ ಇದ್ದರೂ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಇದೀಗ ಸಿನಿಮಾಗಳಲ್ಲೂ ಸಕತ್ ಬ್ಯುಸಿ ಇದ್ದಾರೆ. ಈಗಾಗಲೇ ಹಲವು ಸಿನಿಮಾಗಳು ಇವರನ್ನು ಅರಸಿ ಬಂದಿವೆ.


Click it and Unblock the Notifications











