Megha Shetty: ಹೊಸ ಫೋಟೋಸ್ ಹಂಚಿಕೊಂಡ ಮೇಘಾ ಶೆಟ್ಟಿ, ಈ ಡ್ರೆಸ್ ನಿಂಗಲ್ಲ...ನಿಶ್ವಿಕಾ ನಾಯ್ಡುಗೆ ಸರಿ ಎಂದ ಅಭಿಮಾನಿ!
ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟಿ ಮೇಘಾ ಶೆಟ್ಟಿ ಸ್ಯಾಂಡಲ್‌ವುಡ್ ಅಂಗಳ ದಾಟಿ ಈಗ ಬೇರೆ ಭಾಷೆಗಳಲ್ಲಿಯೂ ಬ್ಯೂಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಟಿ, ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ, ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು.
ಸದ್ಯ ಮತ್ತೊಂದು ಫೋಟೋ ಶೂಟ್ ಮಾಡಿಸಿದ್ದು, ಕಡು ಹಸಿರು ಬಣ್ಣದ ಉಡುಗೆಯಲ್ಲಿ ಹೆಂಗೆಳೆಯರ ಮನ ಕದಿಯುವಂತಹ ಲುಕ್ ನೀಡಿದ್ದಾರೆ. ಆಗಸ್ಟ್ 10 ರಂದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಯಾವಾಗಲೂ ಕುರ್ತಾ, ಸೀರೆ ಧರಿಸುತ್ತಾ ಪಕ್ಕಷದ ಮನೆಯ ಹುಡುಗಿಯಂತಿದ್ದ ಮೇಘಾ ಶೆಟ್ಟಿ ಈಗ ಸಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.

ಮೇಘಾ ಶೆಟ್ಟಿ ಫೋಟೋಗೆ ಮಿಶ್ರ ಪ್ರತಿಕ್ರಿಯೆ!
ಸೆಲಬ್ರಿಟಿಗಳು ಏನೂ ಮಾಡಿದರೂ ದೊಡ್ಡ ಸುದ್ದಿ ಮತ್ತು ಯಾವ ಬಟ್ಟೆ ಹಾಕಿದರೂ ಅದಕ್ಕೆ ಕಾಮೆಂಟ್ ಮಾಡುವವರು ಇದ್ದೇ ಇರುತ್ತಾರೆ. ಹಾಗೆಯೇ ಮೇಘಾ ಶೆಟ್ಟಿ ಕೂಡ. ತಮ್ಮ ಫೋಟೋಗಳಿಗೆ ಜನರು ಏನೇ ಕಾಮೆಂಟ್ ಹಾಕಿದರೂ ತಾವು ಮಾತ್ರ ಬಿಂದಾಸ್ ಆಗಿ ಇರುತ್ತಾರೆ. ಗುರುವಾರ ಹಂಚಿಕೊಂಡಿರುವ ಫೋಟೋಗಳಿಗೆ ಅವರ ಅಭಿಮಾನಿಗಳು ಪ್ರೀತಿಯ ಮಳೆಯನ್ನೇ ಸುರಿಸಿದ್ದಾರೆ.
ಇನ್ನು ಹಲವು ನೆಟ್ಟಿಗರು, ಮೇಘಾ ಶೆಟ್ಟಿಯನ್ನು ಅನು ಸಿರಿಮನೆ ಪಾತ್ರದಿಮದ ಹೊರಬರಲು ಬಿಡುತ್ತಿಲ್ಲ. ಆಕೆ ಇನ್ನೂ ಹಾಗೆಯೇ ಸಂಪ್ರದಾಯಸ್ಥ ಕುಟುಂಬದ ಹೆಣ್ಣು ಮಗಳಂತೆ ಕಾಣಬೇಕು ಎಂದು ಬಯಸುತ್ತಿದ್ದಾರೆ. "ಟ್ರೆಡಿಷನಲ್ ವೇರ್ ನಲ್ಲಿ ಲಕ್ಷ್ಮಿಯಂತೆ ಕಾಣುತ್ತೀಯ.. ಇದು ನಿಜವಾಗಿಯೂ ನಿನಗೆ ಸೂಟ್ ಅಲ್ಲ. ನೀನು ನಮ್ಮ ಹುಡುಗಿ ಹಾಲಿವುಡ್ ಹೀರೋಯಿನ್ ಅಲ್ಲ.. ಎಷ್ಟೋ ನಟಿಯರು ಟ್ರೆಡಿಷನಲ್ ವೇರ್ ನಲ್ಲಿ ಸ್ಟಾರ್ ಆಗಿ ಸಕ್ಸಸ್ ಆಗಿದ್ದಾರೆ. ನೀನು ಕೂಡ ಹಾಗೆ ಆಗುತ್ತಿಯ. ಆದರೆ ಈ ರೀತಿಯ ಕಾಸ್ಟ್ಯೂಮ್ ಜೊತೆಯಲ್ಲ. ಬಹುಶಃ ಹಣ ನಿಮ್ಮನ್ನು ಹೀಗೆ ಮಾಡುತ್ತದೆ...ನೀನು ನಮ್ಮ ಹಳೆಯ ಲಕ್ಷ್ಮಿಯಂತೆ ಇರು" ಎಂದು ಹೇಳಿದ್ದಾರೆ.
ಈ ಬಟ್ಟೆ ನಿನಗಲ್ಲ...ನಿಶ್ವಿಕಾ ನಾಯ್ಡುಗೆ ಸೂಟ್...!
ಮೇಘಾ ಶೆಟ್ಟಿ ಫೋಟೋಗಳಿಗೆ ಕಾಮೆಂಟ್ ಮಾಡಿರುವ ಮತ್ತೊಬ್ಬ ನೆಟ್ಟಿಗರು ನಟಿ ನಿಶ್ವಿಕಾ ಜೊತೆಗೆ ಮೇಘಾ ಅವರನ್ನು ಹೊಲಿಸಿದ್ದಾರೆ. ಈ ರೀತಿಯ ಬಟ್ಟೆ ನಿನಗಲ್ಲ...ನಿಶ್ವಿಕಾ ನಾಯ್ಡುಗೆ ಎಂದಿದ್ದಾರೆ. "ದಿಲ್ ಪಸಂದ್ ಸಿನಿಮಾದ ಈ ಬಟ್ಟೆ.. ನಿಶ್ಚಿಕ ನಾಯ್ಡು.. ಆಕೆಗೆ ಸರಿ ನಿನಗೆ ಸೂಟ್ ಆಗಲ್ಲ" ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗ "ಬಿಡು ನೀನು ಯಾವ ಹೀರೋಯಿನ್ ಗಿಂತ ಎನ್ ಕಮ್ಮಿ ಇಲ್ಲ" ಎಂದು ಪ್ರೀತಿ ಹರಿಸಿದ್ದಾರೆ.

"ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತಂತೆ. ಬೆಸ್ಟ್ ಉದಾಹರಣೆ ನೀವೇ ಮೇಡಂ. ಹೇಗಿದ್ದೋರು ಹೇಗಾದ್ರಿ. ನಾವು ನಿಮ್ಮ ಮೇಲೆ ಇಟ್ಟಿದ್ದ ಗೌರವ ಕಳ್ಕೊಂಡ್ರಿ" ಎಂದು ಅಭಿಮಾನಿಯೋಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಜನರು ಹಾಲಿವುಡ್, ಬಾಲಿವುಡ್ ಹೀರೋಯಿನ್ ನಂತೆ ಕಾಣ್ತಿದ್ದಿರಾ ಎಂದು ಹೇಳಿದ್ದು, ಇನ್ನಷ್ಟು ಫೋಟೋಗಳನ್ನು ಹಂಚಿಕೊಳ್ಳುವಂತೆ ವಿನಂತಿಸಿದ್ದಾರೆ.
ನಟಿಯರು ಏನೇ ಫೋಟೋ ಹಾಕಿದರೂ ಅದು ಕೆಲವರಿಗೆ ಇಷ್ಟ ಆಗುತ್ತದೆ ಮತ್ತೆ ಕೆಲವರಿಗೆ ಇಷ್ಟವಾಗುವುದಿ್ಲಲ. ಹಾಗಾಂತ ಯಾವ ನಟಿಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಬಿಡಿ. ಇನ್ನು, ಮೇಘಾ ಶೆಟ್ಟಿ ಇತ್ತೀಚೆಗೆ ತಮ್ಮ ಪ್ಯಾನ್ ಇಂಡಿಯಾ ಮೂವಿ ಆಪರೇಷನ್ ಲಂಡನ್ ಕೆಫೆ ಮುಗಿಸಿದ್ದಾರೆ. ಸಿನಿಮಾ ಡಬ್ಬಿಂಗ್ ಹಂತದಲ್ಲಿದೆ.
ಈ ಆಪರೇಷನ್ ಲಂಡನ್ ಕೆಫೆ ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸಿದೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟಿಸಿರುವ ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications










