Manasa Manohar: 2ನೇ ಮದುವೆಗೆ ಸಿದ್ಧವಾದ 'ಜೊತೆ ಜೊತೆಯಲಿ' ಮೀರಾ : ಮೊದಲ ಮದುವೆ ಬಗ್ಗೆ ಸ್ಪಷ್ಟನೆ

By ಎಸ್ ಸುಮಂತ್

'ಜೊತೆ ಜೊತೆಯಲಿ' ಸೀರಿಯಲ್ ಯಾರಾದ್ರೂ ಮರೆಯೋದಕ್ಕೆ ಆಗುತ್ತಾ. ಆರ್ಯವರ್ದನ್ ಮತ್ತು ಅನು ಸಿರಿಮನೆ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ರು. ಅದರಲ್ಲೂ ಇದೇ ಸೀರಿಯಲ್ ಮೂಲಕ ಗುರುತಿಸಿಕೊಂಡಂತ ಮೇಘಾ ಶೆಟ್ಟಿ ಒಂದಷ್ಟು ಮನಸ್ಸುಗಳನ್ನು ಗೆದ್ದರು. ಸೀರಿಯಲ್ ಜೊತೆ ಜೊತೆಗೇನೆ ಸಿನಿಮಾಗಳ ಅವಕಾಶವನ್ನು ಪಡೆದರು. ಆರ್ಯವರ್ಧನ್ ಪಾತ್ರ ನಿರ್ವಹಿಸಿದ್ದಂತ ಅನಿರುದ್ದ್ ಅವರಿಗೆ ಒಂದೊಳ್ಳೆ ಬ್ರೇಕ್ ನೀಡಿದಂತ ಸೀರಿಯಲ್ ಇದು. ವರ್ಷಾನುಗಟ್ಟಲೇ ಪ್ರಸಾರವಾಗಿತ್ತು. ಎಲ್ಲಿಯೂ ಜನರಿಗೆ ಬೋರ್ ಅನ್ನಿಸಿರಲಿಲ್ಲ. ಆದರೆ ಆರ್ಯವರ್ದನ್ ಪಾತ್ರ ಬದಲಾದ ಮೇಲೆ ಕಥೆ ಕಂಪ್ಲೀಟ್ ರಿಪೀಟ್ ದೃಶ್ಯಗಳೇ ಶೂಟ್ ಆಗಿತ್ತು.

ಧಾರಾವಾಹಿ ಮುಗೀತು ಬಿಡಿ. ಆದರೆ ಇದೇ ಧಾರಾವಾಹಿಯಲ್ಲಿ ಮೀರಾ ಅನ್ನೋ ಪಾತ್ರ ಇತ್ತು. ಆರ್ಯವರ್ದನ್ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ಪಾತ್ರವದು. ಎಷ್ಟೋ ಎಂಎನ್ಸಿ ಕಂಪನಿಗಳು ಇದ್ದರೆ ಈ ರೀತಿಯ ಎಂಪ್ಲಾಯ್ ಇರಬೇಕು ಎಂಬ ಗತ್ತು ಹೊಂದಿದ್ದ ಕ್ಯಾರೆಕ್ಟರ್ ಅದು. ಮೀರಾ ಪಾತ್ರಕ್ಕೆ ಮಾನಸ ಮನೋಹರ್ ತುಂಬಾನೇ ಹೊಂದಿಕೊಂಡಿದ್ದರು. ಆ ಪ್ರೊಫೆಷನಲ್ ಅದ್ಭುತವಾಗಿ ಮ್ಯಾಚ್ ಆಗಿತ್ತು. ಇದೀಗ ಎಂಗೇಜ್ ಆಗಿದ್ದಾರೆ.

Jothe jotheyali Fame Manasa Manohar CONFIRMS 2nd Marriage introduces her fiance

ಮಾನಸ ಮನೋಹರ್ ಎಂಗೇಜ್ಡ್

ಮಾನಸ ಮನೋಹರ್‌ಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದಾರೆ. 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಮಾನಸ, ಆರ್ಯವರ್ಧನ್ ಅವರನ್ನು ಇಷ್ಟಪಡುತ್ತಿದ್ದರೆ, ಸೀರಿಯಲ್ ನೋಡದ ಹುಡುಗರು ಸೀರಿಯಲ್ ನೋಡುವುದಕ್ಕೆ ಶುರು ಮಾಡಿದ್ದರು. ಅದು ಮಾನಸ ಮನೋಹರ್ ಗಾಗಿ. ಅವರ ಸ್ಟೈಲ್, ಡ್ರೆಸ್ಸಿಂಗ್, ಸಿಂಪಲ್ ಮೇಕಪ್, ಅವರ ಮಾತಿಗೆ ಕಳೆದೋಗಿದ್ರು. ಇದೀಗ ಎಂಗೇಜ್ಮೆಂಟ್ ಫೋಟೋಗಳನ್ನು ಹಾಕಿದ್ದಾರೆ.

ಭಾವಿ ಪತಿ ಫುಟ್ ಬಾಲ್ ಪ್ಲೇಯರ್

ಸದ್ಯ ಮಾನಸ ಮನೋಹರ್ ಮದುವೆಯಾಗುತ್ತಿರುವ ಹುಡುಗ ಯಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ಮಾನಸ ಫೋಟೋಗಳನ್ನ ಹಂಚಿಕೊಂಡರು, ಅವರ ಹುಡುಗನನ್ನು ಟ್ಯಾಗ್ ಮಾಡಿರಲಿಲ್ಲ. ಆದರೆ ಮಾನಸ ಅವರ ಅಭಿಮಾನಿಗಳು ಮದುವೆಯಾಗುತ್ತಿರುವ ಹುಡುಗನನ್ನು ಹುಡುಕಿ ಟ್ಯಾಗ್ ಮಾಡಿದ್ದಾರೆ. ಅವರ ಹೆಸರು ಪ್ರೀತಂ ಚಂದ್ರ. ಫುಟ್ ಬಾಲ್ ಪ್ಲೇಯರ್ ಎಂಬುದು ಅವರ ಸೋಷಿಯಲ್ ಮೀಡಿಯಾ ನೋಡಿದಾಗ ತಿಳಿಯುತ್ತೆ. ಹಾಗೇ ಫುಟ್ ಬಾಲ್ ಅಕಾಡೆಮಿ ಕೂಡ ನಡೆಸುತ್ತಿದ್ದಾರೆ.

ಅಭಿಮಾನಿಗಳಿಂದ ಶುಭಕೋರಿಕೆ

ಈಗಿನ್ನು ಎಂಗೇಜ್ಮೆಂಟ್ ಆಗಿದ್ದಾರೆ. ಅಭಿಮಾನಿಗಳೆಲ್ಲ ಫುಲ್ ಖುಷಿಯಾಗಿದ್ದಾರೆ. ಹ್ಯಾಪಿ ಮ್ಯಾರಿಡ್ ಲೈಫ್ ಎಂದವರಿಗೆ, ಇದು ಬರೀ ನಿಶ್ಚಿತಾರ್ಥ, ಅತಿ ಶೀಘ್ರದಲ್ಲೇ ನಾನು ಅವರು ಮದುವೆಯಾಗುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ ಇದು ಮಾನಸ ಅವರಿಗೆ ಎರಡನೇ ಮದುವೆ. ಅದರ ಬಗ್ಗೆಯೂ ನೆಟ್ಟಿಗರು ಕಮೆಂಟ್ ಹಾಕಿದ್ದಾರೆ. ಅದನ್ನು ಪಾಸಿಟಿವ್ ಹಾಗೇ ತೆಗೆದುಕೊಂಡಿರೋ ಮಾನಸ, ಅದಕ್ಕೂ ಉತ್ತರಿಸಿದ್ದಾರೆ.

2ನೇ‌ ಮದುವೆ ಬಗ್ಗೆ ಪ್ರಶ್ನೆ

'ನಿಮ್ಮ ಅನುಮಾನಗಳನ್ನು ಹೋಗಲಾಡಿಸುತ್ತಿದ್ದೇನೆ. ಹೌದು ಇದು ನನ್ನ ಎರಡನೇ ಮದುವೆ. ಜೀವನದಲ್ಲಿ ಕೆಲವು ಬಾರಿ ದೈಹಿಕವಾಗಿ ಮದುವೆಯಾಗುತ್ತೇವೆ ಆದರೆ ಯಾವುದೇ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದಿಲ್ಲ. ಆದರೂ ಎಲ್ಲರ ಒಳಿತಿಗಾಗಿ ಆ ಸಂಬಂಧವನ್ನು ಮುಂದುವರೆಸಬೇಕು. ಆದರೆ ಈಗ ನಾನು ನನ್ನ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಪ್ರೀತಂ ಮತ್ತು ನಾನಿ ಮದುವೆಯಾಗುತ್ತಿದ್ದೇವೆ. ನನಗೆ ಯಾವುದೇ ಅಪರಾಧ ಎನಿಸುತ್ತಿಲ್ಲ. ಆದರೆ ಕೃತಜ್ಞತೆ ಮಾತ್ರ ಇದೆ. ಆದ್ದರಿಂದ ಅದನ್ನು ವ್ಯಕ್ತಪಡಿಸುತ್ತಿದ್ದೇನೆ. ಪ್ರತಿಯೊಬ್ಬರ ಪ್ರೀತಿಗೆ ಧನ್ಯವಾದಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು' ಎಂದು ಸಮಾಧಾನದಿಂದ ಉತ್ತರಿಸಿದ್ದಾರೆ.

More from Filmibeat

English summary
Jothe jotheyali serail actress Manasa Manohar opens up on her 2nd Marriage;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X