ಅನು ಸಿರಿಮನೆ ಇಮೇಜ್‌ನಿಂದ ಹೊರ ಬರಲು ಬಯಸಿದ ಮೇಘಾ ಶೆಟ್ಟಿ:'ಜೊತೆ ಜೊತೆಯಲಿ' ಬಳಿಕ ಮುಂದಿನ ಹಾದಿ ಏನು?

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಧಾರಾವಾಹಿಯು ಇತ್ತೀಚೆಗಷ್ಟೇ ಸುಖಾಂತ್ಯ ಕಾಣುವ ಮೂಲಕ ಮುಕ್ತಾಯಗೊಂಡಿದೆ. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಅನು ಸಿರಿಮನೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಮೂಲಕವೇ ಕಿರುತೆರೆ ಜಗತ್ತಿನಲ್ಲಿ ಮೇಘಾ ಶೆಟ್ಟಿ ಮನೆ ಮಾತಾಗಿದ್ದರು.

ತಮ್ಮ ಪಾತ್ರ ಹಾಗೂ ಧಾರಾವಾಹಿಯ ತಂಡದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ನಟಿ ಕೊನೆಯಲ್ಲಿ ಭಾವುಕರಾಗಿದ್ದರು. ನಾಲ್ಕು ವರ್ಷಗಳ ಕಾಲ ಅನು ಸಿರಿಮನೆ ಆಗಿ ರಂಜಿಸುತ್ತಿರುವುದಕ್ಕೆ ಮೇಘಾ ಶೆಟ್ಟಿ ತುಂಬಾನೇ ಖುಷಿಯಾಗಿದ್ದಾರೆ. ಮಾತ್ರವಲ್ಲ ಧಾರಾವಾಹಿ ಸೆಟ್ ತನ್ನ ಎರಡನೇ ಮನೆಯಾಗಿತ್ತು ಎಂದು ಆಕೆ ಹೇಳಿಕೊಂಡಿದ್ದಾರೆ.

Jothe Jotheyali fame Megha Shetty wants to come out of that Anu Sirimane image

'ಜೊತೆ ಜೊತೆಯಲಿ' ಧಾರಾವಾಹಿ ಇದೀಗ ಮುಕ್ತಾಯಗೊಂಡಿದೆ. ಮತ್ತೆ ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ತಾನು ಆ ಕುಟುಂಬದಿಂದ ಬೇರ್ಪಡುವಂತೆ ಅನಿಸುತ್ತಿದೆ ಎಂದು ಮೇಘಾ ಶೆಟ್ಟಿ ಹೇಳಿಕೊಂಡಿದ್ದರು.

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 45 ವರ್ಷದ ಅನಿರುದ್ಧ್ ಅವರೊಂದಿಗೆ 20ರ ಹರೆಯದ ಹುಡುಗಿ ಅನು ಸಿರಿಮನೆ ಪ್ರೀತಿಯಲ್ಲಿ ಬೀಳುತ್ತಾಳೆ. ಸುಂದರವಾದ ಕಥಾನಕವನ್ನು ಒಳಗೊಂಡಿರುವ ಈ ಧಾರಾವಾಹಿಯು ವೀಕ್ಷಕರಿಗೆ ತುಂಬಾನೇ ಇಷ್ಟ ಆಗಿತ್ತು. ಅಸಲಿಗೆ ಮೇಘಾ ಶೆಟ್ಟಿಯನ್ನು ಇಂದಿಗೂ ಕೆಲ ಕಿರುತೆರೆ ವೀಕ್ಷಕರು ಅನು ಸಿರಿಮನೆ ಎಂದೇ ಗುರುತಿಸುತ್ತಾರೆ. ಅವರಿಗೆ ನಿಜವಾದ ಹೆಸರು ತಿಳಿದಿಲ್ಲ. ಬದಲಿಗೆ ಈಗಲೂ ಎಲ್ಲರೂ ಆಕೆಯನ್ನು ಅನು ಸಿರಿಮನೆ ಎಂದೇ ಕರೆಯುತ್ತಾರೆ.

'ಜೊತೆ ಜೊತೆಯಲಿ' ಧಾರಾವಾಹಿ ಮುಗಿದ ಬಳಿಕ ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ. ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೆ ಮೇಘಾ ಶೆಟ್ಟಿ ನಿರ್ಧರಿಸಿದ್ದಾರೆ. ಹೀಗಾಗಿ ಇನ್ಮುಂದೆ ಹೊಸ ಧಾರಾವಾಹಿಗಳನ್ನು ಒಪ್ಪಿಕೊಳ್ಳುವುದು ಅನುಮಾನ. ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸುವ ಸಾಧ್ಯತೆಯಿದೆ.

ಮೇಘಾ ಶೆಟ್ಟಿ ಈಗಾಗಲೇ 'ಕೈವಾ' ಮತ್ತು 'ಆಪರೇಷನ್ ಲಂಡನ್ ಕೆಫೆ' ಪೋಸ್ಟ್ ಪ್ರೊಡಕ್ಷನ್‌ನಲ್ಲಿವೆ. ಇದಲ್ಲದೆ ಬೇರೆ ಕೆಲವು ಸ್ಕ್ರಿಪ್ಟ್‌ಗಳನ್ನು ನೋಡುತ್ತಿದ್ದಾರೆ. ಉತ್ತಮ ಮತ್ತು ಅರ್ಥಪೂರ್ಣ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಕನಸು ಮೇಘಾ ಶೆಟ್ಟಿಯಲ್ಲಿದೆ.

More from Filmibeat

English summary
Jothe Jotheyali fame Megha Shetty wants to come out of that Anu Sirimane image,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X