Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೊಸೆಗೆ ಸತ್ಯ ಹೇಳಿದರೂ ನಂಬುತ್ತಿಲ್ಲ: ಆರಾಧನಾ ಹೊಸ ಹೋರಾಟ ಶುರು!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆಸ್ಪತ್ರೆಯಿಂದ ಮನೆಗೆ ಬಂದ ಸಂಜುಗೆ ಅನು ತಿಂಡಿ ತಿನ್ನುವಂತೆ ಹೇಳುತ್ತಾಳೆ. ಸಂಜು ಇಡ್ಲಿ ತಿನನುತ್ತಿರುತ್ತಾನೆ. ಈ ವೇಳೆಗೆ ಬರುವ ಆರಾಧನಅ ಸಂಜು ನನ್ನು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಾಳೆ.
ಹೊತ್ತಲ್ಲದ ಹೊತ್ತಲ್ಲಿ ತಿಂಡಿ ತಿನ್ನಬೇಡ ಸಂಜು. ನಿನ್ನ ಹೆಲ್ತ್ ಅಪ್ಸೆಟ್ ಆಗುತ್ತೆ ಎಂದಯ ಆರಾಧನಾ ಹೇಳುತ್ತಾಳೆ. ಇದಕ್ಕೆ ಸಂಜು ಆರಾಧನಾ ಅವರೇ ನನಗೆ ತಿಂಡಿ ತಿನ್ನಲು ಇಡಿ ಎಂದು ಹೇಳುತ್ತಾನೆ. ಇದರಿಂದ ಆರಾಧನಾಗೆ ಬೇಸರವಾಗುತ್ತೆ.
ಎಚ್ಚರವಾದ
ಸಂಜುಗೆ
ಹಳೆಯದೆಲ್ಲಾ
ನೆನಪಿಗೆ
ಬಂತಾ?
ಇತ್ತ ಮೀರಾ ಪಟ್ಟು ಹಿಡಿದಿದ್ದಾಳೆ. ನಾನು ರಿಸೈನ್ ಮಾಡೇ ಮಾಡುತ್ತೀನಿ ಎಂದು ಹೇಳುತ್ತಾಳೆ. ಹರ್ಷನ ಮಾತನ್ನು ಮೀರಾ ಕೇಳಲು ತಯಾರಿಲ್ಲ. ಏನಾದರಾಗಲೀ ನಾನು ರಿಸೈನ್ ಮಾಡುತ್ತೀನಿ ಎಂದು ಹೇಳುತ್ತಿದ್ದಾಳೆ.

ಟೆನ್ಷನ್ ಆದ ಹರ್ಷವರ್ಧನ್
ಕಾರಣ ಕೇಳಿದರೆ, ಮೀರಾ ಅನು ಬರಲಿ ಮಾತನಾಡುತ್ತೀನಿ. ನಿಮ್ಮೊಬ್ಬರಿಗೆ ಕಾರಣವನ್ನು ಹೇಳುವುದಿಲ್ಲ ಎಂದು ಮೀರಾ ಹೇಳುತ್ತಾಳೆ. ಹರ್ಷನಿಗೆ ಮೀರಾ ಕೆಲಸ ಬಿಟ್ಟರೆ ಕಂಪನಿಯಲ್ಲಿ ಬಹಳ ಸಮಸ್ಯೆಗಳು ಎದುರಾಗುತ್ತವೆ ಎಂಬ ಟೆನ್ಷನ್ ಶುರುವಾಗಿದೆ. ಮೀರಾಳನ್ನು ಸಮಾಧಾನವಾಗಿ ಕೂರಿಸಿ ಮಾತನಾಡಿಸಲು ಯತ್ನಿಸುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಮೀರಾ ನನ್ನ ನಿರ್ಧಾರವನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾಳೆ. ಇದರಿಂದ ಹರ್ಷ ತಲೆ ಕೆಡಿಸಿಕೊಂಡಿದ್ದಾನೆ.

ಆರ್ಯನನ್ನು ಗುರ್ತಿಸುತ್ತಾಳಾ ಅನು?
ಇತ್ತ ಅನುಗೆ ಈಗ ಸಂಜು ಮೇಲೆ ಹೊಸ ಅನುಮಾನ ಶುರುವಾಗಿದೆ. ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಗ ಸಂಜು ಮಾತನಾಡಿದ ರೀತಿಯಿಂದ ಅನುಗೆ ಇದರಲ್ಲೇನೋ ರಹಸ್ಯವಿದೆ ಎಂದು ಅರ್ಥ ಮಾಡಿಕೊಂಡಿದ್ದಾಳೆ. ಸಂಜು, ಆರ್ಯನಂತೆ ಮಾತನಾಡುತ್ತಿದ್ದಾನೆ. ಅವನು ಬಳಸಿದ ನಂಬಿಕೆ ಎಂಬ ಪದ, ಕೆಲ ಮಾತುಗಳು ಎಲ್ಲವೂ ಆರ್ಯನ ಮಾತುಗಳು ಎಂಬುದನ್ನು ಅನು ಅರ್ಥ ಮಾಡಿಕೊಂಡಿದ್ದಾಳೆ. ತನ್ನ ಅನುಮಾನವನ್ನು ಅನು ಆದಷ್ಟು ಬೇಗ ಬಗೆಹರಿಸಿಕೊಳ್ಳುತ್ತಾಳಾ..? ತನ್ನ ಆರ್ಯನನ್ನು ಗುರುತಿಸುತ್ತಾಳಾ ಎಂದು ಕಾದು ನೋಡಬೇಕಿದೆ.

ಆರಾಧನಾ ನಂಬಿಕೆಯೇ ಬೇರೆ
ಇನ್ನು ಪ್ರಭು ದೇಸಾಯಿ ಆರಾಧನಾಳನ್ನು ಮನೆಯ ಹೊರಗೆ ಕರೆದು ಮಾತನಾಡಿದ್ದಾನೆ. ಸಂಜು ವಿಶ್ವಾಸ್ ದೇಸಾಯಿ ಅಲ್ಲ. ಅವನು ಆರ್ಯ. ನಾವು ನಿನ್ನಿಂದ ದೊಡ್ಡ ಸತ್ಯವನ್ನು ಮುಚ್ಚಿಟ್ಟಿದ್ದೀವಿ. ಬಹಳ ದೊಡ್ಡ ತಪ್ಪನ್ನು ಮಾಡಿದ್ದೀವಿ ನಮ್ಮನ್ನು ಕ್ಷಮಿಸಿ ಬಿಡು ಎಂದು ಹೇಳುತ್ತಾನೆ. ಆರ್ಯನನ್ನು ಅನುಗೆ ಬಿಟ್ಟುಕೊಡು ಎಂದು ಕೇಳುತ್ತಾನೆ. ಆದರೆ, ಅವರ ಮಾತನ್ನು ನಂಬದ ಆರಾಧನಾ, ಇಲ್ಲಿರುವವರೆಲ್ಲಾ ನಿಮ್ಮ ತಲೆಗೆ ಚೆನ್ನಾಗಿಯೇ ತುಂಬಿದ್ದಾರೆ. ಅದೇನೇ ಆಗಲಿ ಸಂಜುಗೆ ಪೂರ್ತಿ ನೆನಪು ಬರುವವರೆಗೂ ಇಲ್ಲೇ ಇರುತ್ತೀನಿ, ಆಮೇಲೆ ಕರೆದುಕೊಂಡು ಹೋಗುವುದು. ಅಷ್ಟೇ ಅಲ್ಲದೇ ಈ ಮನೆಯವರಿಗೂ ಪಾಠ ಕಲಿಸುತ್ತೀನಿ ಎಂದು ಹೇಳುತ್ತಾಳೆ.

ಮೀರಾ ಮನವೊಲಿಸುತ್ತಾಳಾ ಅನು..?
ಇನ್ನು ಝೇಂಡೇ ಮತ್ತು ಮೀರಾ ಇಬ್ಬರೂ ಭೇಟಿ ಆಗುತ್ತಾರೆ. ಈ ವೇಳೆ ಝೇಂಡೇ ನನ್ನನ್ನು ಆಫೀಸಿಗೆ ಕರೆಸಿಕೊಳ್ಳಿ ಎಂದರೆ, ನೀವೇ ರಿಸೈನ್ ಮಾಡುತ್ತಿದ್ದೀರಲ್ಲ ಎಂದು ಕೇಳುತ್ತಾನೆ. ಅದಕ್ಕೆ ಮೀರಾ ಈ ನಾಟಕ ಮಾಡಿದರೆನೇ ನಿಮ್ಮನ್ನು ಒಳಗೆ ಕರೆದುಕೊಳ್ಳಲು ಸಾಧ್ಯ. ಇದರ ಬಗ್ಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾಳೆ. ಇನ್ನು ಆರ್ಯ ಬದುಕಿರುವುದಕ್ಕೆ ಸಾಕ್ಷಿ ಏನು ಎಂದು ಕೇಳಿದ್ದಕ್ಕೆ, ಆರ್ಯ ಸತ್ತಿದ್ದಾನೆ ಎಂಬುದಕ್ಕೆ ಸಾಕ್ಷಿ ಕೊಡಿ ಎಂದು ಝೇಂಡೇ ಕೇಳಿದ್ದಾನೆ. ಈಗ ಮೀರಾ ತಲೆಗೆ ಹೊಸ ಹುಳ ಬಿಟ್ಟಿದ್ದು, ಧಾರಾವಾಹಿಯಲ್ಲಿನ ಟ್ವಿಸ್ಟ್ ಗಳು ಕುತೂಹಲವನ್ನು ಹೆಚ್ಚಿಸಿವೆ.