Jothe Jotheyali: ವರ್ಧನ್ ಗ್ರೂಪ್ಸ್‌ಗೆ ಹೊಸ ಸಿಇಒ ಬಂದಾಯ್ತು

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಮ್ಯಾಗೆ ತನ್ನ ಬದುಕಿಗಿಂತಲೂ ಅನು ಚೆನ್ನಾಗಿರುವುದು ಮುಖ್ಯ. ಸದಾ ಅನುಳ ಸುಖವನ್ನೇ ಬಯಸುತ್ತಿರುತ್ತಾಳೆ. ಅನುಗೆ ಸ್ವಲ್ಪ ನೋವಾದರೂ, ಕಷ್ಟ ಬಂದರೂ ರಮ್ಯಾ ವಿಲವಿಲನೇ ಒದ್ದಾಡುತ್ತಿರುತ್ತಾಳೆ. ರಮ್ಯಾ ಇದೇ ಕಾರಣಕ್ಕಾಗಿಯೇ ತನ್ನ ಮದುವೆಯನ್ನು ಕೂಡ ಮುಂದೂಡುತ್ತಲೇ ಬಂದಿದ್ದಾಳೆ. ಕರುಣಾಕರನಿಗೆ ಸಂಪತ್ ಬೇಕಂತಲೇ ರಮ್ಯಾ ಫೋನ್‌ನಿಂದ ಮಿಸ್ ಕಾಲ್ ಕೊಟ್ಟಿದ್ದಕ್ಕೆ ರಮ್ಯಾ ಗರಂ ಆಗಿದ್ದಾಳೆ.

ಅನು ಜೀವನ ಸರಿ ಹೋಗುವವರೆಗೂ ನನ್ನ ಮದುವೆ ಬಗ್ಗೆ ಯೋಚಿಸಬೇಡ ಎಂದು ಕೂಗಾಡಿದ್ದಾಳೆ. ಈ ಮಾತನ್ನು ಕೇಳಿಸಿಕೊಂಡ ಕರುಣಾಕರ ಕೂಡ ಬೇಸರ ಮಾಡಿಕೊಂಡಿದ್ದಾನೆ. ಇತ್ತ ಅನು ಕಾರು ಕೆಟ್ಟಿರುವ ಕಾರಣ ಆಟೋಗಾಗಿ ಕಾಯುತ್ತಿದ್ದಾಳೆ. ಆರ್ಯನ ಆಟೋ ಅನು ಎದುರು ನಿಂತಾಗ ಅನುಗೆ ಮುಜುಗರವಾಗಿದೆ. ಆರ್ಯ ಬೇಕಂತಲೇ ಬನ್ನಿ ಇದೇ ಆಟೋದಲ್ಲಿ ಹೋಗೋಣ ಎಂದು ಕೇಳುತ್ತಾನೆ. ಆದರೆ, ಮೊದಲು ಒಪ್ಪದ ಅನು ನಿಮಗೆ ಸಮಸ್ಯೆ ಇಲ್ಲ ಅಂದರೆ ಓಕೆ ಎಂದು ಆಟೋ ಹತ್ತುತ್ತಾಳೆ.

jothe jotheyali Serial 01st May episode written update

ಇಬ್ಬರೂ ಒಬ್ಬರಿಗೊಬ್ಬರು ಮಾತನಾಡಲಾಗದೇ ಮನದಲ್ಲೇ ಒದ್ದಾಡುತ್ತಾರೆ. ಆರ್ಯನಿಗೆ ಅನು ಬೇಸರ ಅರ್ಥವಾದರೂ ಏನನ್ನೂ ಹೇಳಲು ಆಗುತ್ತಿಲ್ಲ. ಅನುಗೆ ತಾನು ಬೇಕಂತ ಮಾಡದ ತಪ್ಪಿಗೆ ಕೋಪ ಮಾಡಿಕೊಂಡು ಮನೆಯಿಂದ ಹೋದರು ಎಂಬ ಬೇಸರವಿದೆ. ಆಫೀಸ್‌ಗೆ ಬಂದ ಮೇಲೆ ಅನು ತನ್ನ ಶೇರ್ ಅನ್ನು ಆಟೋದವನಿಗೆ ಕೊಟ್ಟು ಹೋಗುತ್ತಾಳೆ.

ಇದೇ ಸಂದರ್ಭದಲ್ಲಿ ಆರ್ಯನನ್ನು ವಾಚ್ ಮಾಡುತ್ತಿರುವ ಝೇಂಡೇ ಹುಡುಗರು ಅನು ಜೊತೆಗೆ ಹೋಗುವುದನ್ನು ಗಮನಿಸುತ್ತಾರೆ. ಇದನ್ನು ಝೇಂಡೇಗೆ ಫೋನ್ ಮಾಡಿ ತಿಳಿಸುತ್ತಾರೆ. ಆರ್ಯ ಸರ್ ಬೇಕಂತಲೇ ಗಾಡಿ ಕೆಟ್ಟೋಗಿದೆ ಎಂದು ಸುಳ್ಳು ಹೇಳಿಸಿ, ಅನು ಅವರ ಜೊತೆಗೆ ಒಂದೇ ಆಟೋದಲ್ಲಿ ಹೋದರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಝೇಂಡೇಗೆ ಕೋಪ ಬರುತ್ತದೆ.

jothe jotheyali Serial 01st May episode written update

ಆರ್ಯ ನಾಟಕ ಮಾಡುತ್ತಿದ್ದಾನೆ ಎಂದು ಅಂದುಕೊಳ್ಳುವಷ್ಟರಲ್ಲಿ, ಆರ್ಯ ಝೇಂಡೇಗೆ ಕರೆ ಮಾಡುತ್ತಾನೆ. ಅನುಳನ್ನು ನೀನು ರಾಜನಂದಿನಿ ಅಲ್ಲ ಎಂಬುದನ್ನು ಅರ್ಥ ಮಾಡಿಸಬೇಕು. ಅದಕ್ಕೆ ಇವತ್ತು ಇಬ್ಬರೂ ಒಟ್ಟಿಗೆ ಆಟೋದಲ್ಲಿ ಆಫೀಸಿಗೆ ಬರುವಂತೆ ಪ್ಲಾನ್ ಮಾಡಿದೆ ಎನ್ನುತ್ತಾನೆ. ಝೇಂಡೇಗೆ ಆರ್ಯ ನಡವಳಿಕೆ ಗೊಂದಲ ಸೃಷ್ಟಿಸುತ್ತದೆ.

ಇನ್ನು ಅನು ಆಫೀಸಿಗೆ ಬರುತ್ತಿದ್ದಂತೆ ಎಲ್ಲರೂ ವೆಲ್ಕಂ ಮಾಡುತ್ತಾರೆ. ಆಫೀಸಿನ ಬಾಗಿಲಲ್ಲೇ ನೌಕರರ ಜೊತೆಗೆ ಅನು ಮಾತನಾಡುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ಮೀರಾ ಅಲ್ಲಿಗೆ ಬಂದು ಹೊಸ ಸಿಇಒನ ಅನೌನ್ಸ್ ಮಾಡುತ್ತಾಳೆ. ಆರಾಧನಾ ತನ್ನ ಹೆಸರನ್ನೇ ಮೀರಾ ಹೇಳುತ್ತಾಳೆ ಎಂದು ಕಾಯುತ್ತಿದ್ದಳು. ಆದರೆ ಮೀರಾ, ಅನುಳನ್ನು ಹೊಸ ಸಿಇಒ ಎಂದು ಅನೌನ್ಸ್ ಮಾಡುತ್ತಾಳೆ. ಇದರಿಂದ ಆರಾಧನಾ ಹಾಗೂ ಅನು ಇಬ್ಬರಿಗೂ ಶಾಕ್ ಆಗುವಂತೆ ಆಗಿದೆ.

jothe jotheyali Serial 01st May episode written update

ಇನ್ನು ಅನು ತಾನೂ ಸಿಇಒ ಆಗಲು ಸಾಧ್ಯವಿಲ್ಲ. ನಾನು ಈ ಕಂಪನಿಗೆ ಕೆಲಸ ಕೇಳಿಕೊಂಡು ಬಂದವಳು. ಈಗ ಅಷ್ಟು ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಾಳೆ. ಆದರೆ ಎಲ್ಲರೂ ಸೇರಿ ಇಲ್ಲ ನೀವೇ ಸಿಇಒ ಆಗಬೇಕು. ನೌಕರರ ಕಷ್ಟ ಸುಖವನ್ನು ನೋಡುವ ನಿಮ್ಮಂತವರೇ ಸಿಇಒ ಆಗಬೇಕು ಎನ್ನುತ್ತಾರೆ.

ಕ್ಯಾಬಿನ್‌ಗೆ ಹೋದ ಬಳಿಕ ಅನು, ಹರ್ಷ ಮತ್ತು ಮೀರಾ ಬಳಿ ಈ ಸ್ಥಾನ ತನಗೆ ಬೇಡ ಎಂದು ಹೇಳಿದರೂ ಕೂಡ ಇಬ್ಬರು ಈ ಕೆಲಸಕ್ಕೆ ನೀವೇ ಸರಿ ಎಂದು ಹೇಳುತ್ತಾರೆ. ಅನುಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗುವುದಿಲ್ಲ.

More from Filmibeat

English summary
jothe jotheyali Serial 01st May episode written update. here is Detials about Arya and Anu comes together for office. Now Anu is new ceo for vardhan groups.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X