ಆರ್ಯ-ಅನುಗೆ ಸರ್ಪ್ರೈಸ್ ಕೊಡಲು ಮುಂದಾದ ಮೀರಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು-ಆರ್ಯ ಮದುವೆಯ ದಿನ ಮೀರಾ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಳು. ಆರ್ಯನಿಗೆ ಮೀರಾ ತನ್ನ ಮನದ ಮಾತುಗಳನ್ನು ಹೇಳಿಕೊಂಡಿರುವುದು ನೆನಪಿಲ್ಲ ಎಂಬ ಸತ್ಯ ಗೊತ್ತಾಗಿದೆ.
ಇದನ್ನು ತಿಳಿದ ಮೀರಾ ಒಳ್ಳೆಯದೇ ಆಯ್ತು. ಆರ್ಯ ಸರ್‌ಗೆ ಇದ್ಯಾವುದೂ ನೆನಪಾಗುವುದೂ ಬೇಡ. ನನ್ನ ಪ್ರೀತಿ ನನ್ನಲ್ಲೇ ಉಳಿದು ಬಿಡಲಿ ಎಂದು ಮೀರಾ ಬಯಸಿದ್ದಾಳೆ.
ಇತ್ತ ಆರಾಧನಾ ತನ್ನ ಪತಿ ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವುದು ತಿಳಿದು ಬೇಸರ ಮಾಡಿಕೊಂಡಿದ್ದಾಳೆ. ಮುಂದಿನ ತನ್ನ ಜೀವನ ಹೇಗೆ ನಡೆಸಬೇಕು ಎಂಬ ಗೊಂದಲದಲ್ಲೇ ಇದ್ದಾಳೆ.

ಹೊರಡುತ್ತೇನೆ ಎಂದ ಆರಾಧನಾ
ಪುಷ್ಪಾ ಹಾಗೂ ಸುಬ್ಬು ಇಬ್ಬರೂ ರಾಜನಂದಿನಿ ವಿಲಾಸಕ್ಕೆ ಆಗಮಿಸಿದ್ದಾರೆ. ಇವರಿಬ್ಬರನ್ನೂ ನೋಡಿದ ಆರಾಧನಾ ಬಂದು ಇಬ್ಬರ ಬಳಿಯೂ ಕ್ಷಮೆ ಕೇಳಿದ್ದಾಳೆ. ನನಗೆ ಅವತ್ತು ಏನಾಗಿತ್ತೋ ಗೊತ್ತಿಲ್ಲ. ಅನು ನನಗಾಗಿ ಎಷ್ಟೆಲ್ಲಾ ತ್ಯಾಗ ಮಾಡುತ್ತಿದ್ದಾಳೆ ಎಂಬ ಅರಿವಿಲ್ಲದೇ ನಿಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡೆ. ನಾನು ನನ್ನ ವಿಶು ಎಂಬುದಷ್ಟೇ ಆಗ ನನ್ನ ತಲೆಯಲ್ಲಿ ಇದ್ದಿದ್ದು. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳುತ್ತಾಳೆ. ಇದಕ್ಕೆ ಪುಷ್ಪಾ ಹಾಗೂ ಸುಬ್ಬು ಇಬ್ಬರೂ ಸಮಾಧಾನ ಮಾಡುತ್ತಾರೆ. ಇನ್ನು ನಾನು ಇಲ್ಲಿಂದ ಹೊರಡುತ್ತೇನೆ ಎಂದು ಆರಾಧನಾ ಹೇಳುತ್ತಾಳೆ.

ಮೀರಾ ಸರ್ಪ್ರೈಸ್ ಏನಿರಬಹುದು?
ಇದೇ ಸಮಯಕ್ಕೆ ಸರಿಯಾಗಿ ಬರುವ ಮೀರಾ, ಆರಾಧನಾಳಿಗೆ ಇಲ್ಲೇ ಇರುವಂತೆ ಹೇಳುತ್ತಾಳೆ. ಆರಾಧನಾಳ ಪರಿಸ್ಥಿತಿ ಬಗ್ಗೆ ಮರುಗುತ್ತಾಳೆ. ಆಗ ಆರಾಧನಾ ಇಷ್ಟು ದಿನ ಏನೂ ಅನ್ನಿಸಲಿಲ್ಲ. ಆದರೆ, ಈಗ ವಿಶು ಇಲ್ಲದೇ ಒಂಟಿಯಾಗಿ ಬದುಕುವುದು ಹೇಗೋ ಗೊತ್ತಿಲ್ಲ ಎಂದು ಹೇಳುತ್ತಾಳೆ. ಮೀರಾ ಆಕೆಯನ್ನು ಸಮಾಧಾನ ಮಾಡಿ, ಬಳಿಕ ಅನು ಮತ್ತು ಆರ್ಯನಿಗೆ ಇವತ್ತು ಸರ್ಪ್ರೈಸ್ ಕೊಡಬೇಕು. ಅದರಲ್ಲಿ ನೀವೂ ಭಾಗಿಯಾಗಿ ಎನ್ನುತ್ತಾಳೆ. ಹಾಗಾದರೆ, ಮೀರಾ, ಅನು ಮತ್ತು ಆರ್ಯನಿಗಾಗಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಯಾವ ರೀತಿ ಸರ್ಪ್ರೈಸ್ ಕೊಡಬಹುದು ಎಂಬ ಕುತೂಹಲ ಮೂಡಿದೆ. ಅನು ಮತ್ತೆ ಆರ್ಯನಿಗೆ ಮತ್ತೆ ಮದುವೆ ಮಾಡಿಸಬಹುದೇ ಎಂಬ ಕುತೂಹಲ ಮೂಡಿದೆ.

ಹಳೆ ಕಥೆ ನೆನಪಿಸಿದ ರಮ್ಯಾ-ಸಂಪತ್
ಇತ್ತ ಅನು ಆರ್ಯನಿಗೆ ಹಳೆಯ ನೆನಪುಗಳನ್ನು ಮರುಕಳಿಸಲು ಸಹಾಯ ಮಾಡುತ್ತಿರುತ್ತಾಳೆ. ಅವರಿಬ್ಬರ ಪ್ರೀತಿಯ ಬಗ್ಗೆ ಹೇಳುತ್ತಿರುತ್ತಾಳೆ. ಆಗ ಆರ್ಯ ವಠಾರಕ್ಕೆ ಬಂದು ಅನುಗೆ ಟೀ ಮಾಡಿಕೊಟ್ಟಿದ್ದನ್ನು ಹೇಳುತ್ತಾಳೆ. ಇದಕ್ಕಾಗಿ ಇಬ್ಬರೂ ವಠಾರಕ್ಕೆ ಹೋಗುತ್ತಾರೆ. ಆಗ ರಮ್ಯಾ ಮತ್ತು ಸಂಪತ್ ಇಬ್ಬರೂ ಸೇರಿ ಆರ್ಯ ಅಂದು ಟೀ ಮಾಡಿದ ಹಾಗೆಯೇ ಇಂದು ಮಾಡುವಂತೆ ಟೆರೆಸ್ ಮೇಲೆ ವ್ಯವಸ್ಥೆ ಮಾಡಿರುತ್ತಾರೆ. ಆರ್ಯ ಟೀ ಮಾಡುವಾಗ ಎಲ್ಲರೂ ಏನೇನಾಯ್ತು ಎಂದು ಕಥೆ ಹೇಳುತ್ತಿರುತ್ತಾರೆ.

ಕಥೆಯನ್ನು ಎಷ್ಟು ದಿನ ಎಳೆಯುತ್ತಾರೋ?
ಬಳಿಕ ಅನು, ಆರ್ಯನನ್ನು ಮತ್ತೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಾಳೆ. ಆಗ ಆರ್ಯ ತನಗೆ ಹೇಗೆ ಪ್ರಪೋಸ್ ಮಾಡಿದ್ದು, ತಮ್ಮಿಬ್ಬರ ಪ್ರೀತಿ ಹೇಗೆ ಶುರುವಾಯ್ತು ಎಂದು ಹೇಳುತ್ತಾಳೆ. ಇನ್ನು ಸದ್ಯ ಸೀರಿಯಲ್‌ನಲ್ಲಿ ಆರ್ಯನಿಗೆ ಮರೆತಿರುವ ಎರಡು ವರ್ಷದ ಕಥೆಯನ್ನು ನೆನಪು ಮಾಡುವುದರಲ್ಲೇ ತಳ್ಳುತ್ತಾರೋ. ಇಲ್ಲ ಕಥೆ ಮುಂದೆ ಸಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











