Jothe Jotheyali: ಅನು ಒಳ್ಳೆಯತನವನ್ನು ಬಂಡವಾಳ ಮಾಡಿಕೊಂಡ ಆರಾಧನಾ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ, ಅನು ಮಾತನ್ನು ಕೇಳಿಕೊಂಡು ತನ್ನ ಗಂಡ ವಿಶ್ವಾಸ್ ದೇಸಾಯಿಗಾಗಿ ಹುಡುಕಿಕೊಂಡು ಬೆಂಗಳೂರಿಗೆ ಬಂದಳು. ಅನು ಮನೆಗೆ ಬಂದ ಆರಾಧನಾ, ಆರ್ಯನನ್ನು ನೋಡಿ ಆತನೇ ತನ್ನ ಪತಿ ಎಂದುಕೊಂಡಳು. ಆದರೆ, ಅದು ವಿಶ್ವಾಸ್ ಅಲ್ಲ ಆರ್ಯ ಎಂಬ ಸತ್ಯ ಅರಿವಾದಾಗ ಇದನ್ನು ಆರಾಧನಾ ಕೈನಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆರ್ಯ ಆದರೂ ಕೂಡ ಅವರೇ ವಿಶ್ವಾಸ್ ದೇಸಾಯಿ ಎಂದು ತಿಳಿದುಕೊಳ್ಳುತ್ತಾಳೆ. ಹೀಗಾಗಿಯೇ ಆರಾಧನಾ ತನಗೇ ತಿಳಿಯದ ಹಾಗೆ ಆರ್ಯನನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾಳೆ. ಹಾಗಾಗಿಯೇ ಆರಾಧನಾ ತನ್ನ ಕಂಪನಿಯನ್ನು ಆರ್ಯನ ಕಂಪನಿಯ ಜೊತೆಗೆ ಮರ್ಜ್ ಮಾಡಿದ್ದಾಳೆ.

ಆದರೆ, ಕಂಪನಿ ಮರ್ಜ್ ಮಾಡಿದಾಗಿನಿಂದ ಆರಾಧನಾಳಿಗೆ ತನ್ನ ಯಾವ ನಿರ್ಧಾರಗಳು ನಡೆಯುತ್ತಿಲ್ಲ. ಪ್ರತಿಯೊಂದಕ್ಕೂ ಮೀರಾ ಅಡ್ಡ ಬರುತ್ತಿದ್ದಾಳೆ. ಆರಾಧನಾಳ ಉದ್ದೇಶಗಳು ಸರಿಯಿಲ್ಲ ಎಂಬುದು ಮೀರಾಳಿಗೆ ಅರ್ಥವಾಗಿದೆ. ಆದರೆ ಈ ವಿಚಾರ ಇನ್ನೂ ಅನು ಹಾಗೂ ಆರ್ಯನಿಗೆ ಅರ್ಥವಾಗುತ್ತಿಲ್ಲ. ಈಗ ಕಂಪನಿಯ ಸಿಇಒ ತಾನೇ ಎಂದು ಆಸೆಪಟ್ಟಿದ್ದ ಆರಾಧನಾಳಿಗೆ ಮತ್ತೆ ನಿರಾಸೆ ಆಗಿದೆ. ಹೀಗಾಗಿ ಆರಾಧನಾ ತನ್ನ ಬೇಸರವನ್ನು ಅನು ಬಳಿ ಹೇಳಿಕೊಂಡಿದ್ದಾಳೆ.
ಅನು, ಆರಾಧನಾಳನ್ನು ಇಲ್ಲಿಗೆ ಕರೆತಂದದ್ದು, ಅನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದ ಕಾರಣ ಅನು ನಿಮಗೆ ಏನು ಬೇಕು ಕೇಳಿ ಎಂದು ಹೇಳಿದ್ದಾಳೆ. ಇದನ್ನೇ ಬಂಡವಾಳ ಮಾಡಿಕೊಂಡ ಆರಾಧನಾ ತನ್ನ ನಿರ್ಧಾರಗಳನ್ನು ಈ ಕಂಪನಿಯಲ್ಲಿ ಯಾರೂ ಪ್ರಶ್ನಿಸಬಾರದು ಎಂದು ಹೇಳುತ್ತಾಳೆ. ಇದಕ್ಕೆ ಅನು ಓಕೆ ಎಂದಿದ್ದಾಳೆ. ಆದರೆ ಆರಾಧನಾ ಪೇಪರ್ಸ್ ಬೇಕು, ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಎಂದು ಹೇಳುತ್ತಾಳೆ.

ಅನು ಮೀರಾಳನ್ನು ಕರೆದು, ಈ ಬಗ್ಗೆ ದಾಖಲೆಗಳನ್ನು ತಯಾರಿಸಲು ಹೇಳುತ್ತಾಳೆ. ಆದರೆ, ಮೀರಾಳಿಗೆ ವಿಚಾರ ತಿಳಿದು ಗಾಬರಿಯಾಗುತ್ತದೆ. ಆರಾಧನಾ ಒಳ್ಳೆಯ ಉದ್ದೇಶದಿಂದ ಈ ಕೆಲಸಗಳನ್ನು ಮಾಡುತ್ತಿಲ್ಲ. ಇದೆಲ್ಲಾ ಅಗ್ರಿಮೆಂಟ್ ಮಾಡಿಸಿದರೆ, ಮುಂದೆ ಕಷ್ಟವಾಗುತ್ತದೆ ಎಂದು ಮೀರಾ, ಅನುಳಿಗೆ ಅರ್ಥ ಮಾಡಿಸಲು ಯತ್ನಿಸುತ್ತಾಳೆ. ಆದರೆ ಅನು, ಮೀರಾ ಮಾತನ್ನು ಕೇಳಲು ತಯಾರಿರುವುದಿಲ್ಲ. ಅಗ್ರಿಮೆಂಟ್ ಮಾಡುವಂತೆ ಖಡಕ್ ಆಗಿ ಹೇಳುತ್ತಾಳೆ.
ಇನ್ನು ಆರ್ಯ ಆಫೀಸಿಗೆ ಬಂದಿದ್ದಾನೆ. ಸಾಮಾನ್ಯನಂತೆ ಆಫಿಸಿಗೆ ಬಂದಿದ್ದು, ಸಂದರ್ಶನವನ್ನು ಎದುರಿಸಬೇಕಾಗಿದೆ. ಹರ್ಷ ಮತ್ತು ಮೀರಾ, ಆರ್ಯನನ್ನು ನೋಡಿ ಶಾಕ್ ಆಗಿದ್ದಾರೆ. ಇಲ್ಯಾಕೆ ಹೀಗೆ ಬಂದಿದ್ದೀರಾ. ಇದು ನಿಮ್ಮದೇ ಆಫಿಸ್ ಎಂದು ಮಾತನಾಡಿದರೂ ಆರ್ಯ ಕೇಳಲಿಲ್ಲ. ಅನು, ಆರ್ಯನನ್ನು ನೋಡಿ ಇಲ್ಯಾಕಿದ್ದೀರಾ ಎಂದಾಗ ಸಂದರ್ಶನಕ್ಕೆ ಬಂದಿರುವುದಾಗಿ ಹೇಳುತ್ತಾನೆ.

ಅನು ನಿಮಗೆಲ್ಲಾ ಇದೆ. ಈ ಕೆಲಸ ಪಡೆಯುವ ಬದಲು ಬೇರೆ ಅವರಿಗೆ ಬಿಟ್ಟುಕೊಟ್ಟರೆ, ಅವರ ಜೀವನ ಸೆಟಲ್ ಅಗುತ್ತೆ ಎಂದು ಹೇಳುತ್ತಾಳೆ. ಆದರೆ ಆರ್ಯ ಮೊಂಡು ವಾದ ಕೇಳಿದ ಅನುಗೆ ಕೋಪ ಬರುತ್ತದೆ. ಹಾಗಾಗಿ ಅನು ಸೀದಾ ಕ್ಯಾಬಿನ್‌ಗೆ ಹೋಗಿ, ಅದೇನು ಮಾಡುತ್ತೀರೋ ಗೊತ್ತಿಲ್ಲ. ಆದರೆ ಯಾವುದೇ ಕಾರಣಕ್ಕೂ ಆರ್ಯ ಸರ್‌ನ ಸಂದರ್ಶನದಲ್ಲಿ ಪಾಸ್ ಮಾಡ ಬಾರದು ಎಂದು ಸ್ಟ್ರಿಕ್ಟ್ ಆಗಿ ಹೇಳುತ್ತಾಳೆ.
ಬಳಿಕ ಅನು ಟೆರೆಸ್ ಮೇಲೆ ಹೋಗಿ ಒಬ್ಬಳೇ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಆರ್ಯ ಸರ್ ನೀವಿಲ್ಲದೇ ನನಗೆ ಕಷ್ಟವಾಗುತ್ತಿದೆ. ನಾನೇನು ತಪ್ಪು ಮಾಡಿಲ್ಲ. ಆದರೂ ನನ್ನಿಂದ ದೂರ ಯಾಕಿದ್ದೀರಾ ಎಂದು ತನಗೆ ತಾನೇ ಮಾತನಾಡಿಕೊಂಡು ಅಳುತ್ತಿರುತ್ತಾಳೆ.


Click it and Unblock the Notifications











