Jothe Jotheyali: ಅನುಳಿಂದ ಮತ್ತೆ ದೂರ ಆಗುತ್ತಾನಾ ಆರ್ಯ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಆರ್ಯನಿಗೆ ಹಳೆಯ ನೆನಪೆಲ್ಲಾ ಬರಲಿ ಎಂದು ಮದುವೆಯ ಕತೆಯನ್ನು ಹೇಳುತ್ತಿದ್ದಾಳೆ. ಆರ್ಯನು ಕೂಡ ತನಗೆ ನೆನಪಿಲ್ಲದ ದಿನಗಳನ್ನು ಅನುಳಿಂದ ಕೇಳುತ್ತಿದ್ದಾನೆ.
ಇತ್ತ ಝೇಂಡೇ, ಆರ್ಯ ಇಲ್ಲದೇ ಒದ್ದಾಡುತ್ತಿದ್ದಾನೆ. ಹೇಗಾದರೂ ಮಾಡಿ ಆರ್ಯನ ಜೊತೆಗೆ ಮಾತನಾಡಬೇಕು ಎಂದು ಕಾಯುತ್ತಲೇ ಇದ್ದಾನೆ. ಈ ನಡುವೆ ಅನು ಹಾಗೂ ಆರ್ಯನಿಗೆ ಸರ್ಪ್ರೈಸ್ ಕೊಡಲು ಮುಂದಾಗಿದ್ದಾಳೆ.
ಮನೆಯಲ್ಲಿ ಎಲ್ಲರೂ ಅನು, ಆರ್ಯ ಒಂದಾದರು. ಮನೆಯಲ್ಲಿ ಇನ್ಯಾವ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದು ಖುಷಿ ಪಡುತ್ತಿದ್ದಾರೆ. ಪುಷ್ಪ - ಸುಬ್ಬು ಕೂಡ ಮಗಳ ಬದುಕು ಸುಖಾಂತ್ಯವಾಗುತ್ತಿದೆ ಎಂದು ಸಂತಸದಲ್ಲಿರುತ್ತಾರೆ.

ಅನು ಮಾತಿನಿಂದ ಸಿಟ್ಟಾದ ಆರ್ಯ
ಅನು ತನ್ನ ಹಾಗೂ ಆರ್ಯನ ಪ್ರೀತಿ ಬಗ್ಗೆ ಕಥೆ ಹೇಳುತ್ತಾ, ಸೂರ್ಯನ ಜೊತೆಗೆ ಅನು ಮದುವೆ ಮಾಡಿಸುವ ಕಥೆಯನ್ನು ಹೇಳುತ್ತಾಳೆ. ಆಗ ಅನು ಹಾಗೂ ಆರ್ಯ ಪ್ರೀತಿ ಬಗ್ಗೆ ಗೊತ್ತಾಗಿದ್ದು, ಇಬ್ಬರ ಎಂಗೇಜ್ಮೆಂಟ್ ನಡೆದ ಬಗ್ಗೆ ಹೇಳುತ್ತಾಳೆ. ಆಗ ಪ್ರಿಯದರ್ಶಿನಿ ಬಂದಿದ್ದನ್ನು ಹೇಳುತ್ತಾಳೆ. ಆಗ ಆರ್ಯ ಶಾಕ್ ಆಗುತ್ತಾನೆ. ಈ ವಿಚಾರ ಅನುಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸುತ್ತಾನೆ. ಆಗ ಅನು ನನಗೆ ಎಲ್ಲವೂ ಗೊತ್ತು. ನಾನು ಬರೀ ಅನು ಅಲ್ಲ. ರಾಜನಂದಿನಿಯ ಪುನರ್ಜನ್ಮ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಆರ್ಯನಿಗೆ ಶಾಕ್ ಆಗುತ್ತದೆ. ಸುಳ್ಳು ಹೇಳುತ್ತಿದ್ದೀಯಾ ಎಂದು ವಾದಿಸುತ್ತಾನೆ. ಒಬ್ಬನೇ ಮನೆಯೊಳಗೆ ಹೊರಟು ಹೋಗುತ್ತಾನೆ.

ಅನು ಮೇಲೆ ಕೂಗಾಡಿದ ಆರ್ಯ
ಇದೇ ವೇಳಗೆ ಮನೆಯೊಳಗೆ ಬರಲು ಝೇಂಡೇ ಯತ್ನಿಸುತ್ತಾನೆ. ಆರ್ಯ ಆರ್ಯ ಎಂದು ಕೂಗುತ್ತಾ ಬರುತ್ತಾನೆ. ಅನುಗೆ ಬೈಯುತ್ತಾನೆ. ಆರ್ಯನಿಗೆ ಏನು ಹೇಳಿದೆ, ಅವನ ಪ್ರೀತಿಯನ್ನು ಉಳಿಸಿಕೊಳ್ಳಲು ಬರೋದಿಲ್ವಾ ಎಂದು ಕೇಳುತ್ತಾನೆ. ಆಗ ಅನು, ಝೇಂಡೇಗೆ ಬೈದು ಹೊರಗೆ ಹೋಗುವಂತೆ ಹೇಳುತ್ತಾಳೆ. ಮನೆಗೆ ಬರುತ್ತಿದ್ದಂತೆ ಆರ್ಯ, ರಾಜನಂದಿನಿಯ ರೂಮಿಗೆ ಹೋಗುತ್ತಾನೆ. ಆದರೆ, ರೂಮ್ ಲಾಕ್ ಆಗದೇ ಇರುವುದನ್ನು ನೋಡಿ ಕೂಗಾಡುತ್ತಾನೆ. ಆಗ ಅನು ಬಂದು ತಾನೇ ರೂಮ್ ಬಾಗಿಲನ್ನು ತೆರೆದಿದ್ದು ಎಂದಿದ್ದಕ್ಕೆ ಬೈಯ್ದು ಒಳಗೆ ಹೋಗುತ್ತಾನೆ.

ರಾಜನಂದಿನಿ ರೂಮಿಗೆ ಹೋದ ಆರ್ಯ
ರಾಜನಂದಿನಿಗೆ ರೂಮಿಗೆ ಹೋದ ಆರ್ಯ ಅಲ್ಲಿ ರಾಜನಂದಿನಿಯ ಫೋಟೋವನ್ನು ನೋಡುತ್ತಾನೆ. ಇತ್ತ ಆರ್ಯನ ಕೂಗಾಟ ಕೇಳಿ ಬಂದ ಮನೆಯವರೆಲ್ಲಾ ಅನುಳನ್ನು ಏನಾಯ್ತು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಅನು ನಡೆದ ಘಟನೆಯನ್ನು ಹೇಳುತ್ತಾಳೆ. ಇದರಿಂದ ಶಾರದಾ ದೇವಿ ಹಾಗೂ ಮೀರಾ ಶಾಕ್ ಆಗುತ್ತಾರೆ. ಅನು ಕೂಡ ಬೇಸರ ಮಾಡಿಕೊಂಡು ಆರ್ಯನಿಗಾಗಿ ಕಾಯುತ್ತಿರುತ್ತಾಳೆ.

ಅನುಳನ್ನು ನೋಡಿ ಹೆದರಿದ ಆರ್ಯ
ಅನು ಪರಿಸ್ಥಿತಿ ಹೀಗಾಯ್ತಲ್ಲ ಅಂತ ಪುಷ್ಪಾ ಹಾಗೂ ಸುಬ್ಬು ಬೇಸರ ಮಾಡಿಕೊಳ್ಳುತ್ತಾರೆ. ಆರ್ಯನಿಗೆ ನೆನಪು ಬರದೇ ಇದ್ದರೆ, ಏನು ಗತಿ. ಅನು ಬಾಳು ಹೀಗಾಯ್ತಲ್ಲ ಎಂದು ಪುಷ್ಪಾ ಅಳುತ್ತಿರುತ್ತಾಳೆ. ಇತ್ತ ರೂಮಿನಿಂದ ಬಂದ ಆರ್ಯ, ಅನುಳನ್ನು ನೋಡುತ್ತಾನೆ. ಅನು, ರಾಜನಂದಿನಿಯಂತೆ ಕಾಣುತ್ತಿರುತ್ತಾಳೆ. ಇದರಿಂದ ಹೆದರಿದ ಆರ್ಯ ದೂರ ಹೋಗುತ್ತಾನೆ. ಅನು ಕರೆದರೂ ಕೇಳದ ಆರ್ಯ, ನಿನ್ನಿಂದ ದೂರವೇ ಇರುತ್ತೇನೆ ಎಂದು ಹೇಳಿ ಹೊರಟು ಹೋಗುತ್ತಾನೆ. ಧಾರಾವಾಹಿಯ ಕಥೆ ಬೇರೆಲ್ಲೋ ಟ್ವಿಸ್ಟ್ ಪಡೆಯುತ್ತಿದೆಯಾ ಎಂದು ಪ್ರೇಕ್ಷಕರು ಅನುಮಾನಗೊಂಡಿದ್ದಾರೆ.


Click it and Unblock the Notifications











