Jothe Jotheyali: ಹರ್ಷನಿಗಾಗಿ ಕುಡಿದು ಬಂದ ಭಾವನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾಳ ಮನಸ್ಸು ಸದಾ ಆರ್ಯನಿಗೆ ಜೊತೆಯಾಗುವಲ್ಲಿಯೇ ತುಡಿಯುತ್ತಿದೆ. ತನಗೇ ತಿಳಿಯದ ಹಾಗೆ ವಿಶ್ವಾಸ್ ದೇಸಾಯಿ ರೂಪದಲ್ಲಿರುವ ಆರ್ಯನನ್ನು ಬಯಸುತ್ತಿದ್ದಾಳೆ. ಏತಕ್ಕಾಗಿ ತಾನು ತನ್ನ ಕಂಪನಿಯನ್ನು ಆರ್ಯನ ಕಂಪನಿಗೆ ಜೊತೆಗೆ ಮರ್ಜ್ ಮಾಡುತ್ತಿದ್ದೇನೆ ಎಂಬುದು ಕೂಡ ಆರಾಧನಾಳಲ್ಲಿ ಸ್ಪಷ್ಟತೆ ಇಲ್ಲ.
ಆರಾಧನಾ ಮನಸ್ಸು ಆರ್ಯನ ಮೇಲಿದ್ದು, ಇವರಿಬ್ಬರೂ ಮದುವೆಯಾದರೆ, ಆಸ್ತಿ ಎಲ್ಲವೂ ತನ್ನ ವಶವಾಗುತ್ತದೆ ಎಂದು ಖುಷಿಯಲ್ಲಿದ್ದಾಳೆ. ಹೀಗಾಗಿ ಸಂಜೀವಿನಿಯೂ ಆಗಾಗ ಆರಾಧನಾಳಿಗೆ ದಾರಿ ಮಾಡಿಕೊಡುತ್ತಿರುತ್ತಾಳೆ. ಆರಾಧನಾ ಕಂಪನಿಯ ಮರ್ಜ್ ಮಾಡುವ ಸಲುವಾಗಿ ಆರ್ಯವರ್ಧನ್ ಅಮೆರಿಕಕ್ಕೆ ಹೋಗಬೇಕಾಗಿ ಬರುತ್ತದೆ. ಆದರೆ, ಇದು ಮೀರಾಳಿಗೆ ಸ್ವಲ್ಪವೂ ಇಷ್ಟವಿರುವುದಿಲ್ಲ.

ಇಷ್ಟವಿಲ್ಲದಿದ್ದರೂ ಬೇರೆ ದಾರಿ ಇಲ್ಲದೇ, ಇಬ್ಬರನ್ನೂ ಅಮೆರಿಕಾಗೆ ಕಳಿಸುವ ವ್ಯವಸ್ಥೆಯನ್ನು ಮಾಡಿರುತ್ತಾಳೆ. ಈ ವಿಚಾರ ತಿಳಿದ ಆರಾಧನಾ ಫುಲ್ ಖುಷಿಯಾಗಿರುತ್ತಾಳೆ. ತನ್ನ ಜೊತೆಗೆ ಆರ್ಯನೂ ಬರುತ್ತಾರೆ. ಇಬ್ಬರೇ ಒಟ್ಟಿಗೆ ಇರಬಹುದು ಎಂದು ಖುಷಿಯಾಗಿರುತ್ತಾಳೆ. ಇದಕ್ಕೆ ಸಂಜೀವಿನಿ ಮತ್ತಷ್ಟು ಐಡಿಯಾಗಳನ್ನು ಕೊಡುತ್ತಾಳೆ.
ಅಮೆರಿಕದಲ್ಲಿ ಇರುವವರೆಲ್ಲಾ ಆರ್ಯನನ್ನು ನಿನ್ನ ಗಂಡ ವಿಶ್ವಾಸ್ ದೇಸಾಯಿ ಎಂದೇ ಗುರುತಿಸುತ್ತಾರೆ. ನೀನು ಕೂಡ ಹಾಗೆ ನಡೆದುಕೋ ಆರ್ಯ ಯಾರಿಗಾದರೂ ಸತ್ಯ ಹೇಳಲು ಮುಂದಾದರೆ, ತಡೆ ಹಿಡಿ, ಇದರಿಂದ ನಿನಗೆ ಒಳ್ಳೆಯದು ಎಂದು ಹೇಳಿಕೊಡುತ್ತಾಳೆ.
ಇದೇ ಖುಷಿಯಲ್ಲಿ ಆರಾಧನಾ ಇರುತ್ತಾಳೆ. ಸಂಜೀವಿನಿ, ಶಾರದಾ ದೇವಿ ಬಳಿ ಆರಾಧನಾ ಮತ್ತು ಆರ್ಯನನ್ನು ಅಮೆರಿಕದಲ್ಲಿ ಗಂಡ-ಹೆಂಡತಿ ಎಂದೇ ಗುರುತಿಸುತ್ತಾರೆ ಎಂದು ಹೇಳುತ್ತಾಳೆ. ಇದರಿಂದ ಶಾರದಾ ಮನಸ್ಸಿನಲ್ಲಿ ತಳಮಳ ಶುರುವಾಗುತ್ತದೆ. ಬಳಿಕ ಅನು ಕಂಪನಿಯ ಹೆಡ್ ಆಗಿರುವುದರಿಂದ ಅನು ಅಮೆರಿಕಾಗೆ ಹೋಗಲೇ ಬೇಕು. ಇಲ್ಲದಿದ್ದರೆ, ಎರಡು ಕಂಪನಿಯ ಮರ್ಜ್ ಮಾಡುವ ಕೆಲಸ ಹಾಗೆ ಬಾಕಿ ಉಳಿಯುತ್ತದೆ ಎಂಬ ವಿಚಾರವನ್ನು ತಿಳಿದು ಆರಾಧನಾ ಕೋಪ ಮಾಡಿಕೊಳ್ಳುತ್ತಾಳೆ.

ಆದರೆ, ಈ ರೀತಿ ಸುಳ್ಳು ಹೇಳುವಂತೆ ಶಾರದಾ, ಮೀರಾಗೆ ಹೇಳಿಕೊಟ್ಟಿರುತ್ತಾಳೆ. ಯಾಕೆಂದರೆ, ಆರಾಧನಾ ಮತ್ತು ಆರ್ಯನನ್ನು ಗಂಡ-ಹೆಂಡತಿ ಎಂದು ತೋರಿಸುವುದು ಆಕೆಗೆ ಇಷ್ಟವಿರುವುದಿಲ್ಲ. ಹಾಗಾಗಿ ಶಾರದಾ, ಮೀರಾಳಿಗೆ ಈ ಪ್ಲ್ಯಾನ್ ಬಗ್ಗೆ ಹೇಳಿರುತ್ತಾಳೆ. ಈ ಬಗ್ಗೆ ಮೀರಾ ಬಳಿ ಮಾತನಾಡುವ ಶಾರದಾ, ತನ್ನ ಸುಳ್ಳಿಗೆ ಸಾಥ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಹೇಳುತ್ತಿರುತ್ತಾಳೆ.
ಇದನ್ನು ಕೇಳಿಸಿಕೊಳ್ಳುವ ಸಂಜೀವಿನಿ, ಈ ಆಸ್ತಿ ಎಲ್ಲವೂ ನನ್ನ ಪಾಲಾಗಬೇಕು. ಅತ್ತಿಗೆ ನಿಮ್ಮ ಪ್ಲ್ಯಾನ್‌ಗೆ ನಾನು ಸೆಡ್ಡು ಹೊಡೆಯುತ್ತೇನೆ. ಯಾಕೆಂದರೆ, ನೀವು ಈ ಮನೆಗೆ ಹೊರಗಿನಿಂದ ಬಂದವರು. ಆದರೆ ನಾನು ಇದೇ ಮನೆಯವಳು ಎಂದು ಮನದಲ್ಲೇ ಆಲೋಚನೆಯನ್ನು ಮಾಡುತ್ತಾಳೆ.
ಇತ್ತ ಹರ್ಷನಿಗೆ ಮದುವೆಯಾಗಿದೆ ಎಂಬುದನ್ನು ತಿಳಿದ ಭಾವನಾ ಬೇಸರ ಮಾಡಿಕೊಂಡು ಹೊರಗೆ ಹೋಗಿರುತ್ತಾಳೆ. ಅದೂ ಕೂಡ ಹರ್ಷನ ಜೊತೆಗೆ ಹೋಗಿರುತ್ತಾಳೆ. ಮಾನ್ಸಿ ಇವರಿಬ್ಬರನ್ನೂ ಫಾಲೋ ಮಾಡಿರುತ್ತಾಳೆ. ರಾತ್ರಿಯಾದರೂ ಮನೆಗೆ ವಾಪಸ್ ಬಂದಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾಳೆ. ಅಷ್ಟರಲ್ಲಿ ಬಂದು ಬಾಗಿಲು ತಟ್ಟುವ ಭಾವನಾ ಕುಡಿದು ಬಂದಿರುತ್ತಾಳೆ.
ಸಂಜೀವಿನಿ ಬಳಿ ಹೋಗಿ ನಾನು ಹರ್ಷನನ್ನು ತುಂಬಾ ಇಷ್ಟ ಪಟ್ಟಿದ್ದೇನೆ. ಆದರೆ, ಹರ್ಷನಿಗೆ ಈಗಾಗಲೇ ಮದುವೆಯಾಗಿದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಸಂಜೀವಿನಿ ಶಾಕ್ ಆಗುತ್ತಾಳೆ. ಈಗ ಸಂಜೀವಿನಿ ಆರಾಧನಾಳನ್ನು ಆರ್ಯನಿಗೆ ಹಾಗೂ ಭಾವನಾಳನ್ನು ಹರ್ಷನಿಗೆ ಪ್ಲಾನ್ ಮಾಡಿ ಮದುವೆ ಮಾಡಿಸುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











