Jothe Jotheyali: ಎರಡೂ ಮನೆಗಳಿಗೆ ಬಂದು ಎಚ್ಚರಿಕೆ ಕೊಟ್ಟು ಹೋದ ಜೋಗ್ತವ್ವ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ, ಆರ್ಯ ಹಾಗೂ ಅನು ಮೂವರು ಕೂಡ ಕಂಪನಿಯ ಮರ್ಜಿಂಗ್ ಕೆಲಸಕ್ಕಾಗಿ ಅಮೆರಿಕಾಗೆ ಹೋಗಿದ್ದಾರೆ. ಇತ್ತ ಮಾನ್ಸಿಗೆ ಮನೆ ಕೆಲಸದವಳಂತೆ ಇರಲು ಸಾಧ್ಯವಾಗುತ್ತಿಲ್ಲ. ಹರ್ಷನನ್ನು ಬಿಟ್ಟಿರಲು ಆಗುತ್ತಿಲ್ಲ. ತಾನೇ ಫೋನ್ ಮಾಡಿ ಹರ್ಷನ ಜೊತೆಗೆ ಇರಬೇಕು ಎಂದು ಮನಸ್ಸಾಗುತ್ತಿದೆ.
ಮನೆಗೆ ಬಂದಿರುವ ಸಂಜೀವಿನಿ ಹಾಗೂ ಅವಳ ಹಿನ್ನೆಲೆ ಏನು ಎಂದು ತಿಳಿದುಕೊಳ್ಳುವುದು ಕೂಡ ಮಾನ್ಸಿಗೆ ಬಹಳ ಮುಖ್ಯವಾಗಿದೆ. ಹೀಗಾಗಿ ಮಾನ್ಸಿ ಇನ್ನೂ ಮನೆ ಕೆಲಸದವಳ ವೇಷದಲ್ಲೇ ಇದ್ದಾಳೆ. ಹೊಸಮನಿ ಅಜ್ಜಯ್ಯ ಕೂಡ ಮಾನ್ಸಿಯನ್ನು ಮನೆ ಕೆಲಸದವಳು ಎಂದುಕೊಂಡಿದ್ದು, ಮಾನ್ಸಿ ಮಾಡುವ ತಪ್ಪುಗಳಿಗೆಲ್ಲಾ ಬೈಯುತ್ತಿದ್ದಾರೆ. ಮಾನ್ಸಿಗೆ ಇದರಿಂದ ಹೊಸಮನಿ ಅಜ್ಜಯ್ಯನ ಮೇಲೆ ಕೋಪ ಬಂದರೂ ಏನೂ ಮಾತನಾಡಲಾಗದೇ ಸುಮ್ಮನಿದ್ದಾಳೆ.

ಹರ್ಷ ಎಷ್ಟೊತ್ತಾದರೂ ಮನೆಗೆ ಬಾರದಿದ್ದಕ್ಕೆ ಮಾನ್ಸಿ ಲ್ಯಾಂಡ್ ಲೈನ್ ಇಂದ ಫೋನ್ ಮಾಡುತ್ತಾಳೆ. ಹರ್ಷ, ಮಾನ್ಸಿ ಇಲ್ಲದ ಕಾರಣ ಯೋಚಿಸುತ್ತಾ ಒದ್ದಾಡುತ್ತಿರುತ್ತಾನೆ. ಇದೇ ವೇಳೆಗೆ ಮಾನ್ಸಿ ಫೋನ್ ಮಾಡುತ್ತಾಳೆ. ಅಮ್ಮ ಮಾಡುತ್ತಿದ್ದಾರೆ ಎಂದು ರಿಸೀವ್ ಮಾಡುವ ಹರ್ಷ ಇಲ್ಲೇ ಇದ್ದೀನಿ ಅಮ್ಮ, ಈಗಲೇ ಮನೆಗೆ ಬರುತ್ತೀನಿ ಎನ್ನುತ್ತಾನೆ. ಇದರಿಂದ ಸಮಾಧಾನಗೊಂಡ ಮಾನ್ಸಿ ಫೋನ್ ಕಟ್ ಮಾಡುತ್ತಾಳೆ.
ಇನ್ನು ಮನೆಗೆ ಜೋಗ್ತವ್ವ ಬರುತ್ತಾಳೆ. ಆಗ ಶಾರದಾ ದೇವಿ ಮೆಟ್ಟಿಲಿನಿಂದ ಕಾಲು ಜಾರಿ ಬೀಳುತ್ತಾರೆ. ಜೋಗ್ತವ್ವ ಮನೆಗೆ ಕಂಟಕವಿದೆ. ಎಚ್ಚರವಾಗಿರಿ ಎಂದು ಎಚ್ಚರಿಕೆ ಕೊಟ್ಟು ಹೊರಟು ಹೋಗುತ್ತಾರೆ. ಮಾನ್ಸಿ, ಶಾರದಾಳನ್ನು ನೋಡಿಕೊಳ್ಳುತ್ತಿರುತ್ತಾಳೆ. ಇತ್ತ ಪುಷ್ಪ ಬಳಿಯೂ ಬರುವ ಜೋಗ್ತವ್ವ ನಿನ್ನ ಮಗಳಿಗೂ ಅವಳ ಹೊಟ್ಟೆಯಲ್ಲಿರುವ ಮಗುವಿಗೂ ಆಪತ್ತಿದೆ. ಜಾಗ್ರತೆ ವಹಿಸಿ, ಕಾಪಾಡಿಕೋ ಎಂದು ಹೇಳಿ ಹೋಗುತ್ತಾಳೆ.
ಜೋಗ್ತವ್ವ ಮಾತನ್ನು ಕೇಳಿದ ಪುಷ್ಪಾ ನಿಂತ ಜಾಗದಲ್ಲೇ ಗಾಬರಿಯಾಗುತ್ತಾಳೆ. ಮನೆಗೆ ಬಂದು ಸುಬ್ಬು ಬಳಿ ಹೇಳಿಕೊಂಡು ಕಣ್ಣೀರು ಇಡುತ್ತಾಳೆ. ಏನು ಮಾಡುವುದು ಎಂಬುದು ತಿಳಿಯದೇ, ಪುಷ್ಪಾ, ಮೀರಾಳಿಗೆ ಫೋನ್ ಮಾಡುತ್ತಾಳೆ. ಆಗ ಮೀರಾ ಕಂಪನಿ ಮರ್ಜ್ ಆಗುತ್ತಿರುವುದು. ಇದೆಲ್ಲಾ ಮೀರಾಗೆ ಇಷ್ಟವಿಲ್ಲದಿರುವುದನ್ನೆಲ್ಲಾ ಹೇಳುತ್ತಾಳೆ. ಪುಷ್ಪಾಗೆ ಈ ಮಾತುಗಳನ್ನು ಕೇಳಿ ಮತ್ತಷ್ಟು ಗೊಂದಲವಾಗುತ್ತದೆ. ಶಾರದಾ ದೇವಿಗೆ ಫೋನ್ ಮಾಡುತ್ತಾಳೆ. ಆಗ ಮಾನ್ಸಿ ರಿಸೀವ್ ಮಾಡಿ, ಶಾರದಾ ಕಾಲು ಜಾರಿ ಬಿದ್ದಿದ್ದನ್ನು ಹೇಳುತ್ತಾಳೆ.

ಸಂಜೀವಿನಿ ಮೇಲೆ ಮಾನ್ಸಿ ಹಾಗೂ ಗೀತಾ ಇಬ್ಬರೂ ಅನುಮಾನ ಪಡುತ್ತಾರೆ. ಶಾರದಾ ದೇವಿ ಜಾರಿ ಬೀಳುವುದಕ್ಕೆ ಸಂಜೀವಿನಿ ಕುತಂತ್ರವೇ ಕಾರಣವಿರಬೇಕು ಎಂದು ಅನುಮಾನಿಸುತ್ತಾರೆ. ಹರ್ಷನಿಗೆ ಟೀ ಕೊಡಲು ಹೋದ ಸಂಜೀವಿನಿ ಆತನಿಗೆ ಜ್ವರ ಇರುವುದು ತಿಳಿಯುತ್ತದೆ. ಇದೇ ಸಂದರ್ಭದವನ್ನು ಬಳಸಿಕೊಳ್ಳುವ ಸಂಜೀವಿನಿ, ಭಾವನಾಳನ್ನು ಎಬ್ಬಿಸುತ್ತಾಳೆ.
ನಿನಗೆ ಹರ್ಷ ಬೇಕು ಎಂದರೆ ಇದೇ ಸರಿಯಾದ ಸಮಯ. ಮನೆಯಲ್ಲಿ ಯಾರು ಇಲ್ಲ. ಮಾನ್ಸಿ ಹರ್ಷನ ಜೊತೆಗಿಲ್ಲ. ಅಲ್ಲದೇ, ಶಾರದಾ ಅತ್ತಿಗೆ ಕಾಲು ಜಾರಿ ಬಿದ್ದು ಏಟು ಮಾಡಿಕೊಂಡಿದ್ದಾರೆ. ಈಗ ಹರ್ಷನಿಗೆ ಜ್ವರ ಬಂದಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಹರ್ಷನನ್ನು ನೋಡಿಕೋ ಅವನಿಗೆ ಹತ್ತಿರವಾಗು ಎಂದು ಹೇಳಿಕೊಡುತ್ತಾಳೆ.
ಇತ್ತ ಮಾನ್ಸಿ ಹರ್ಷನಿಗೋಸ್ಕರ ಕಷಾಯ ಮಾಡುವಂತೆ ಗೀತಾಗೆ ಹೇಳುತ್ತಾಳೆ. ಇದೇ ವೇಳೆಗೆ ಬರುವ ಸಂಜೀವಿನಿ ಕಷಾಯ ಯಾರಿಗೆ ಎಂದು ಕೇಳುತ್ತಾಳೆ. ಗೀತಾ, ಹರ್ಷ ಸರ್‌ಗೆ ಜ್ವರ ಅಲ್ವಾ ಅದಕ್ಕೆ ಮಾಡುತ್ತಿದ್ದೀನಿ ಎಂದಾಗ ಸಂಜೀವಿನಿ ನಿಮಗೆ ಯಾರು ಹೇಳಿದ್ದು, ಹರ್ಷನಿಗೆ ಜ್ವರ ಅಂತ ಎಂದು ಕೇಳುತ್ತಾಳೆ. ಈ ಮಾತಿಗೆ ಉತ್ತರವಿಲ್ಲದೆ, ಮಾನ್ಸಿ ತಬ್ಬಿಬ್ಬಾಗುತ್ತಾಳೆ. ಈಗ ಮಾನ್ಸಿ, ಸಂಜೀವಿನಿ ಬಳಿ ಸಿಕ್ಕಿ ಹಾಕಿಕೊಳ್ಳುತ್ತಾಳೋ ಕಾದು ನೋಡಬೇಕಿದೆ.


Click it and Unblock the Notifications











