Jothe Jotheyali: ಆರ್ಯ ಹಾಗೂ ಅನು ನಡುವಿನ ಅಂತರವನ್ನು ಆರಾಧನಾ ಹೆಚ್ಚಿಸುತ್ತಿದ್ದಾಳಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಆರ್ಯನಿಗೆ ಕೆಲಸ ಕೊಡಬಾರದು ಎಂದು ಹೇಳಿದ್ದರೂ ಕೂಡ ಆರಾಧನಾ ತನಗಿರುವ ಅಧಿಕಾರವನ್ನು ಬಳಸಿಕೊಂಡು ಕೆಲಸ ಕೊಟ್ಟಿದ್ದಾಳೆ. ಇದು ಅನುಗೆ ಕೋಪ ಬರುವಂತೆ ಮಾಡಿದೆ. ಇನ್ನು ಆರ್ಯ, ಮೀರಾಳನ್ನು ಪ್ರಶ್ನೆ ಮಾಡುತ್ತಾನೆ. ಅನು ನನ್ನನ್ನು ಅಪಾಯಿಂಟ್ ಮಾಡಿಕೊಳ್ಳಬೇಕಿತ್ತು. ಆದರೆ ಆರಾಧನಾ ಯಾಕೆ ಅಪಾಯಿಂಟ್ ಮಾಡಿಕೊಂಡರು ಎಂದು ಕೇಳುತ್ತಾನೆ.

ಇದಕ್ಕೆ ಮೀರಾ ನಿಮಗೆ ಆಗಬೇಕಿರುವ ಕೆಲಸ ಆಗಿದೆಯೆಲ್ಲಾ ಆರಾಮಾಗಿ ಇರಿ ಎಂದು ಹೇಳುತ್ತಾಳೆ. ಆರ್ಯನಿಗೆ ಇದು ಅರ್ಥವಾಗುವುದಿಲ್ಲ. ಬೇರೆ ದಾರಿ ಇಲ್ಲದೇ ಸುಮ್ಮನಾಗುತ್ತಾನೆ. ಇನ್ನು ಆರಾಧನಾ ಆರ್ಯನನ್ನು ನೋಡಿ ನಗುತ್ತಿರುವುದನ್ನು ಅನು ಗಮನಿಸುತ್ತಾಳೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆಯಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ.

Jothe Jotheyali Serial 05th May episode written update

ಬೇರೆ ಯಾರಾದರೂ ಈ ವಿಚಾರವನ್ನು ಹೇಳಿದ್ದರೆ ಕೇಳುತ್ತಿರಲಿಲ್ಲ. ಆದರೆ, ಈಗ ನಾನೇ ನನ್ನ ಕಣ್ಣಾರೆ ನೋಡಿದ ಮೇಲೂ ಹೇಗೆ ಸುಮ್ಮನಿರಲಿ. ನಾನು ನಂಬಿದವರೇ ನನಗೆ ಮೋಸ ಮಾಡುತ್ತಿದ್ದಾರಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಆರಾಧನಾ ಅಂತೂ ತುಂಬಾ ಖುಷಿಯಾಗಿದ್ದಾಳೆ. ತನಗೆ ಬೇಕಾದ ಅಧಿಕಾರವೂ ಸಿಕ್ಕಿದೆ. ಆರ್ಯನೂ ತನ್ನ ಕ್ಯಾಬಿನ್ ಎದುರಿಗೇ ಕುಳಿತಿದ್ದಾನೆ. ಇದಕ್ಕಿಂತ ತನಗೇನು ಬೇಕೆಂದು ಖುಷಿ ಪಟ್ಟಿದ್ದಾಳೆ.

ಅನು ಬೇಸರಗೊಂಡು ದೇವಸ್ಥಾನಕ್ಕೆ ತೆರಳಿದ್ದಾಳೆ. ದೇವರ ಮುಂದೆ ನಿಂತು ನಾನು ನೋಡುತ್ತಿರುವುದೆಲ್ಲಾ ಕನಸೋ ನನಸೋ ಗೊತ್ತಾಗುತ್ತಿಲ್ಲ. ನಾನು ನಂಬಿದವರೇ ನನಗೆ ಮೋಸ ಮಾಡುತ್ತಿದ್ದಾರಾ. ನನ್ನನ್ನು ಕರೆಸಿಕೋ ದೇವರೆ ಎಂದು ಬೇಸರದಲ್ಲಿ ದೇವರ ಬಳಿ ಕೇಳಿಕೊಳ್ಳುತ್ತಾಳೆ. ದೇವಸ್ಥಾನಕ್ಕೆ ಮೀರಾ ಬಂದು ಮಾತನಾಡುತ್ತಾಳೆ. ಆರ್ಯ ಸರ್ ಯಾವುದೋ ಒಂದು ಕಾರಣಕ್ಕಾಗಿಯೇ ಹೀಗೆ ನಿಮ್ಮಿಂದ ದೂರ ಇದ್ದಾರೆ. ಆರ್ಯ ಸರ್ ನಿಮ್ಮ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದಾರೆ. ಇದೆಲ್ಲವೂ ಸ್ವಲ್ಪ ದಿನ ಮಾತ್ರವೇ ಎಂದು ಹೇಳುತ್ತಾಳೆ.

ಮೀರಾ ಮಾತಿಗೆ ಅನು ನಕ್ಕು ಬಿಡುತ್ತಾಳೆ. ಸುಮ್ಮನೇ ಏನೇನೋ ಹೇಳಬೇಡ ಎಂದು ಮೀರಾ ಮಾತನ್ನೇ ಕೇಳುವುದಿಲ್ಲ. ಮಾನ್ಸಿ ಹಾಗೂ ಹರ್ಷ ಕೂಡ ಮನೆಯಲ್ಲಿ ಆಫಿಸ್ ವಿಚಾರವನ್ನು ಮಾತನಾಡುತ್ತಿರುತ್ತಾರೆ. ಆರಾಧನಾ ಆಫಿಸ್‌ನಲ್ಲಿ ಇರುವಾಗ ತನಗೇನು ಕೆಲಸವಿಲ್ಲ ಎಂದು ಹರ್ಷ ಹೇಳುತ್ತಾನೆ. ಇನ್ನು ಆರಾಧನಾ, ಆರ್ಯನನ್ನು ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿರುವುದರ ಬಗ್ಗೆ ಮಾತನಾಡುತ್ತಾರೆ. ಮಾನ್ಸಿ, ಶಾರದಾ ದೇವಿಗೆ ಅನು ಮತ್ತು ಆರ್ಯನ ಜೊತೆಗೆ ಮಾತನಾಡುವುದಕ್ಕೆ ಹೇಳುತ್ತಾಳೆ.

Jothe Jotheyali Serial 05th May episode written update

ಅನು, ಆರ್ಯಗೆ ಎಷ್ಟು ಫೋನ್, ಮೆಸೇಜ್ ಮಾಡಿದರೂ ಕೂಡ ಆರ್ಯ ರೆಸ್ಪಾನ್ಸ್ ಮಾಡಿಲ್ಲ. ನೀವೊಮ್ಮೆ ಅವರ ಜೊತೆಗೆ ಮಾತನಾಡಿ ಎಂದು ಮಾನ್ಸಿ ಹೇಳುತ್ತಾಳೆ. ಶಾರದಾ ದೇವಿ ಸರಿ ನೋಡೋಣ. ನನ್ನ ಕೈಯಲ್ಲಿ ಆದಷ್ಟು ನಾನು ಪ್ರಯತ್ನ ಮಾಡುತ್ತೇನೆ ಎಂದು ಹೇಳುವ ಶಾರದಾ ದೇವಿ, ಅನು ಬರುತ್ತಿದ್ದಂತೆ ಮಾತನಾಡಿಸುತ್ತಾಳೆ. ಇಬ್ಬರ ನಡುವೆ ಏನು ನಡೆಯುತ್ತಿದೆ ಎಂದು ವಿಚಾರಿಸುತ್ತಾಳೆ. ಆದರೆ ಅನುಗೆ ಈ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಮನಸಿರುವುದಿಲ್ಲ. ನಾನು ನನ್ನ ಪ್ರಯತ್ನವನ್ನು ಮಾಡಿದ್ದೇನೆ ಅದು ಹೊರತು ಪಡಿಸಿ ನಾನು ಇನ್ನೇನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅನು ಹೇಳುತ್ತಾಳೆ.

ಅನು ಆರ್ಯನ ಮೇಲೆ ಬಹಳ ಡಿಸಪಾಯಿಂಟ್ ಆಗಿರುತ್ತದೆ. ಆದರೆ, ಇವರಿಬ್ಬರ ನಡುವಿನ ಮುನಿಸು ಹೀಗೆ ಮುಂದುವರೆದರೆ ಮುಂದೆ ಕಷ್ಟವಾಗುತ್ತದೆ. ಅನು, ಆರ್ಯ ಹೀಗೆ ಒಂದೊಂದು ಹೆಜ್ಜೆಯೇ ದೂರಾಗುತ್ತಿದ್ದರೆ, ಆರ್ಯನಿಗೆ ಆರಾಧನಾ ಹತ್ತಿರವಾದರೆ, ಅನು ಇನ್ನಷ್ಟು ದೂರಾಗುವುದು ಗ್ಯಾರೆಂಟಿ.

More from Filmibeat

English summary
Jothe Jotheyali Serial 05th May episode written update. here is details about Aradhana gives job for Arya. Anu is very disappointed and not listening to anyone. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X