Jothe Jotheyali: ಅನು ಹಾಗೂ ಆರ್ಯನನ್ನು ದೂರ ಮಾಡಲು ಮುಂದಾಗಿರುವ ಸುಬ್ಬು, ಆರಾಧನಾ

By ಪ್ರಿಯಾ ದೊರೆ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೇಗಾದರೂ ಮಾಡಿ ಆರ್ಯವರ್ಧನ್ ಮತ್ತು ಅನು ಸಿರಿಮನೆಯನ್ನು ಒಂದು ಮಾಡಬೇಕು ಎಂದು ಪುಷ್ಪಾ ಮತ್ತು ಶಾರದಾ ದೇವಿ ಪ್ರಯತ್ನ ಪಡುತ್ತಿದ್ದಾರೆ.

ಆದರೆ, ಸುಬ್ಬು ಮತ್ತು ಆರಾಧನಾ ಆಲೋಚನೆಗಳು ಬೇರೆ ಬೇರೆಯಾದರೂ ಇಬ್ಬರೂ ಆರ್ಯ ಹಾಗೂ ಅನು ದೂರ ಆಗಬೇಕು ಎಂದು ಬಯಸುತ್ತಿದ್ದಾರೆ.

ಸುಬ್ಬುಗೆ ಮಗಳು ಅನುಗೆ ಒಳ್ಳೆಯದಾಗಬೇಕು ಎಂದು ಆಲೋಚಿಸುತ್ತಿದ್ದಾನೆ. ಆದರೆ, ಆರಾಧನಾ ಮಾತ್ರ ಆರ್ಯನಿಗೆ ಹತ್ತಿರವಾಗುವ ಆತುರದಲ್ಲಿದ್ದಾಳೆ. ಇತ್ತ ಆರ್ಯ ಮತ್ತು ಅನುಗೆ ತಾವಿಬ್ಬರು ಮತ್ತೆ ಮೊದಲಿನಂತೆ ಒಂದಾಗುವ ಆಸೆ.

ಆರ್ಯನಿಗೆ ಹತ್ತಿರವಾಗುತ್ತಿರುವ ಆರಾಧನಾ

ಆರ್ಯನಿಗೆ ಹತ್ತಿರವಾಗುತ್ತಿರುವ ಆರಾಧನಾ

ಆರಾಧನಾಳಿಗೆ ಆರ್ಯ, ವಿಶ್ವಾಸ್ ದೇಸಾಯಿ ಅಂತೆ ಕಾಣುವುದರಿಂದ ಅವನ ಜೊತೆಗೆ ಇರಬೇಕು ಎಂದು ಬಯಸುತ್ತಿದ್ದಾಳೆ. ಆರ್ಯ ಮತ್ತು ಅನುಳನ್ನು ಒಟ್ಟಿಗೆ ನೋಡಲು ಇಷ್ಟ ಪಡುತ್ತಿಲ್ಲ. ಹೊಟ್ಟೆ ಉರಿ ಪಟ್ಟುಕೊಂಡು ದೂರ ಆಗಲಿ ಎಂದು ಬಯಸುತ್ತಿದ್ದಾಳೆ. ಮನೆ, ಆಫೀಸ್ ಎರಡೂ ಕಡೆ ಆರ್ಯನ ಜೊತೆಗೆ ಇರಲು ಆರಾಧನಾ ಸದಾ ಪ್ರಯತ್ನಿಸುತ್ತಿರುತ್ತಾಳೆ. ಬೆಳಗೆದ್ದು ವಾಕಿಂಗ್, ವ್ಯಾಯಾಮ ಮಾಡುತ್ತಿದ್ದ ಆರ್ಯನ ಜೊತೆಗೆ ವಾಕ್ ಮಾಡುತ್ತಾ ತನ್ನ ಹಳೆಯ ದಿನಗಳನ್ನು ಆರಾಧನಾ, ಆರ್ಯನ ಬಳಿ ಹೇಳಿಕೊಳ್ಳುತ್ತಾಳೆ. ಆರ್ಯ ಕೂಡ ಆರಾಧನಾಳನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಮಾತನಾಡುತ್ತಾನೆ.

ವಠಾರಕ್ಕೆ ಬಂದು ಗಲಾಟೆ ಮಾಡಿದ ಸುಬ್ಬು

ವಠಾರಕ್ಕೆ ಬಂದು ಗಲಾಟೆ ಮಾಡಿದ ಸುಬ್ಬು

ಇನ್ನು ವಠಾರದ ಮನೆಯನ್ನು ರಿಪೇರಿ ಮಾಡಿಸಿದ ಸುಬ್ಬು ಬಾಡಿಗೆ ಮನೆಯನ್ನು ಬಿಟ್ಟು ಬಂದಿದ್ದಾನೆ. ಅನು ಹಾಗೂ ಪುಷ್ಪಾಳಿಗೆ ವಠಾರಕ್ಕೆ ಬಂದಿದ್ದರಿಂದ ಖುಷಿಯಾಗುತ್ತದೆ. ವಠಾರವಂತೂ ಮಿರ ಮಿರ ಎಂದು ಮಿನುಗುತ್ತಿರುತ್ತದೆ. ಆದರೆ, ವಠಾರಕ್ಕೆ ಬರುತ್ತಿದ್ದರಂತೆ ಸುಬ್ಬು ಗಲಾಟೆ ಮಾಡುತ್ತಾನೆ. ಆರ್ಯ ಮತ್ತು ಅನು ಫೋಟೋವನ್ನು ಹಾಕಿ ದೊಡ್ಡದಾಗಿ ವೆಲ್ಕಂ ಮಾಡಿರುತ್ತಾರೆ. ಈ ಪೋಸ್ಟರ್ ಅನ್ನು ನೋಡಿ ಸುಬ್ಬು ಗರಂ ಆಗುತ್ತಾನೆ. ನನ್ನ ಮಗಳ ಫೋಟೋವನ್ನು ಆರ್ಯನ ಜೊತೆಗೆ ಯಾಕೆ ಹಾಕಿದ್ದೀರಾ ಎಂದು ಗಲಾಟೆ ಮಾಡುತ್ತಾನೆ.

ಒಳಗೊಳಗೆ ಖುಷಿ ಪಡುತ್ತಿರುವ ಆರಾಧನಾ

ಒಳಗೊಳಗೆ ಖುಷಿ ಪಡುತ್ತಿರುವ ಆರಾಧನಾ

ಆರ್ಯ ಮನೆಯಲ್ಲಿ ರೆಡಿ ಆಗುವಾಗ ವಠಾರಕ್ಕೆ ಹೋಗಲು ಖುಷಿ ಪಡುತ್ತಾನೆ. ಅನುಳನ್ನು ನೋಡಬಹುದು. ಅವಳ ಜೊತೆಗೆ ಸಮಯ ಕಳೆಯಬಹುದು ಎಂದು ಆರ್ಯ ಸಂತಸದಲ್ಲಿರುತ್ತಾನೆ. ಆದರೆ, ಇತ್ತ ಆರಾಧನಾ ಚೆಂದವಾಗಿ ರೆಡಿಯಾಗಲು ಮುಂದಾಗುತ್ತಾಳೆ. ಆದರೆ, ಹೀಗೆಲ್ಲಾ ರೆಡಿಯಾಗಿ ನನ್ನ ಖುಷಿಯನ್ನು ನಾಲ್ಕು ಜನರಿಗೆ ತೋರಿಸುವುದು ಸರಿಯಲ್ಲ. ನನ್ನ ಖುಷಿಯನ್ನು ನಾನೊಬ್ಬಳೆ ಅನುಭವಿಸಬೇಕು ಎಂದು ಅಂದುಕೊಳ್ಳುತ್ತಾಳೆ. ಆರಾಧನಾಳಿಗೆ ಆರ್ಯನ ಜೊತೆಗಿರುವ ಆಸೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಆದರೆ ಆರಾಧನಾ ಮನಸ್ಥಿತಿ ಆರ್ಯನಿಗೆ ಅರ್ಥವಾಗುತ್ತಿಲ್ಲ.

ವಠಾರಕ್ಕೆ ಹೋಗಬೇಡಿ ಎಂದ ಹರ್ಷ

ವಠಾರಕ್ಕೆ ಹೋಗಬೇಡಿ ಎಂದ ಹರ್ಷ

ಆರ್ಯ ವಠಾರಕ್ಕೆ ಹೊರಟಿರುವುದನ್ನು ಕಂಡು ಹರ್ಷ ಬೇಸರ ಮಾಡಿಕೊಳ್ಳುತ್ತಾನೆ. ನೀವು ವಠಾರಕ್ಕೆ ಹೋಗಬೇಡಿ. ಅಲ್ಲಿ ಅವರು ನಿಮಗೆ ಅವಮಾನ ಮಾಡುತ್ತಾರೆ. ಅದಕ್ಕೊಸ್ಕರವೇ ಅವರು ನಿಮ್ಮನ್ನು ಕರೆದಿರುವುದು ಎಂದು ಹರ್ಷ ಹೇಳುತ್ತಾನೆ. ಈ ಮಾತುಗಳನ್ನು ಕೇಳಿದ ಆರಾಧನಾ ಸಿಕ್ಕಿದ್ದೇ ಚಾನ್ಸ್ ಎಂದು ತಾನೂ ಕೂಡ ಆರ್ಯನಿಗೆ ವಠಾರಕ್ಕೆ ಹೋಗಬೇಡಿ. ಹರ್ಷ ಅವರು ಹೇಳುತ್ತಿರುವುದು ಸರಿ ಇದೆ ಎಂದು ಹೇಳುತ್ತಾಳೆ. ಆದರೆ, ಆರ್ಯ ಇಲ್ಲ. ವಠಾರದ ಜನ ಆ ರೀತಿ ಅಲ್ಲ. ಅವರು ತುಂಬಾ ಒಳ್ಳೆಯ ಮನಸ್ಸಿನವರು ಎಂದು ಹೇಳುತ್ತಾನೆ. ಆರ್ಯ ವಠಾರಕ್ಕೆ ಹೋದರೆ, ಏನಾಗುತ್ತದೋ ಕಾದು ನೋಡಬೇಕು.

More from Filmibeat

English summary
Jothe Jotheyali Serial 06th March Episode Written Update. Subbu scolds everyone in vatara. Harsha and Aradhana suggests arya not to go for vatara. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X