For Quick Alerts
  ALLOW NOTIFICATIONS  
  For Daily Alerts

  ಸಂಜು ವಠಾರದಲ್ಲೂ ಇಲ್ಲ: ಝೇಂಡೇ ಕಿಡ್ನ್ಯಾಪ್ ಮಾಡಿದ್ದಾನಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಆರ್ಯ ಡೆತ್ ಸರ್ಟಿಫಿಕೆಟ್ ಕೇಳಿದ್ದಾಳೆ. ಹಾಗಾಗಿ ಡೆತ್ ಸರ್ಟಿಫಿಕೆಟ್ ಅನ್ನು ಆಸ್ಪತ್ರೆಯಿಂದ ಪಡೆದೇ ಇಲ್ಲ ಎಂಬ ವಿಚಾರ ಇದೀಗ ಅನುಗೆ ಗೊತ್ತಾಗಿದೆ. ಡೆತ್ ಸರ್ಟಿಫಿಕೆಟ್ ಅನ್ನು ತರಲು ಅನು ಆಸ್ಪತ್ರೆಗೆ ಹೊರಟಿದ್ದಾಳೆ.

  ಅನು ಒಬ್ಬಳೆ ಅಷ್ಟು ದೂರ ಹೋಗುತ್ತಿದ್ದಾಳೆ ಎಂಬುದನ್ನು ತಿಳಿದ ಪುಷ್ಪಾ ಕೊಂಚ ಆತಂಕಗೊಂಡಿದ್ದಾಳೆ. ಆದರೆ ಅನು, ಪುಷ್ಪಾಳಿಗೆ ಸಮಾಧಾನವನ್ನು ಹೇಳಿದ್ದಾಳೆ. ಆರ್ಯ ಸರ್ ಮುಖವನ್ನೂ ನೋಡದೇ ಅವರ ಸಾವನ್ನು ಒಪ್ಪಿಕೊಂಡಿದ್ದರ ಬಗ್ಗೆ ಅನು ಯೋಚಿಸಿದ್ದಾಳೆ.

  ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದ ಮೋಕ್ಷಿತಾ ಪೈ! ಅಭಿಮಾನಿಗಳಲ್ಲಿ ಬೇಸರಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದ ಮೋಕ್ಷಿತಾ ಪೈ! ಅಭಿಮಾನಿಗಳಲ್ಲಿ ಬೇಸರ

  ಆರ್ಯ ಸರ್ ಸಾವಿನ ಬಗ್ಗೆ ಯಾಕಷ್ಟು ಕೇರ್ ಲೆಸ್ ಆಗಿದ್ವಿ. ಅದು ಹೇಗೆ ನಾನು ಡೆತ್ ಸರ್ಟಿಫಿಕೆಟ್ ಅನ್ನು ಮರೆತು ಬಿಟ್ಟೆ ಎಂದು ಅನು ಯೋಚಿಸುತ್ತಲೇ ಆಸ್ಪತ್ರೆಗೆ ಹೋಗುತ್ತಾಳೆ.

  ಸಂಜುಗೆ ಸಹಾಯ ಸಿಗುತ್ತಾ..?

  ಸಂಜುಗೆ ಸಹಾಯ ಸಿಗುತ್ತಾ..?

  ಇತ್ತ ಸಂಜು ಮನೆಗೆ ಹೋಗಲು ಇಷ್ಟವಿಲ್ಲದೇ ವಠಾರಕ್ಕೆ ಬಂದಿರುತ್ತಾನೆ. ಪುಷ್ಪಾ ಮತ್ತು ಸುಬ್ಬು ಬಳಿ ತನ್ನ ಕಷ್ಟವನ್ನು ಹೇಳಿಕೊಳ್ಳುತ್ತಿರುತ್ತಾನೆ. ಇದೇ ವೇಳೆಗೆ ಝೇಂಡೇ ಕಡೆಯಿಂದ ಅನುಗೆ ಅಪಾಯವಿದೆ. ಅವನು ಬೇಕಂತಲೇ ನನ್ನ ಜೊತೆ ಸೇರಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಪುಷ್ಪಾ ಮತ್ತು ಸುಬ್ಬು ಇಬ್ಬರು ಶಾಕ್ ಆಗುತ್ತಾರೆ. ಇದೆಲ್ಲಾ ವಿಚಾರದ ಬಗ್ಗೆ ನಾನು ಅನು ಅವರ ಜೊತೆಗೆ ಮಾತನಾಡಬೇಕು. ಮನೆಯಲ್ಲಿ ಇದನ್ನೆಲ್ಲಾ ಮಾತನಾಡಲು ಸಾಧ್ಯವಿಲ್ಲ. ಹಾಗಾಗಿ ನೀವೇ ಇದಕ್ಕೊಂದು ದಾರಿ ಹುಡುಕಿ ಕೊಡಿ ಎಂದು ಕೇಳುತ್ತಾನೆ. ಆಗ ಪುಷ್ಪಾ ಅನು ಸವದತ್ತಿ ಕಡೆಗೆ ಹೋಗಿರುವುದನ್ನು ಹೇಳುತ್ತಾಳೆ.

  ಆರಾಧನಾಗೆ ಸಪೋರ್ಟ್ ಮಾಡಿದ ಶಾರದಾ

  ಆರಾಧನಾಗೆ ಸಪೋರ್ಟ್ ಮಾಡಿದ ಶಾರದಾ

  ಇನ್ನು ಆರಾಧನಾ, ಸಂಜು ರಾತ್ರಿಯೆಲ್ಲಾ ಮನೆಗೆ ಬಂದಿಲ್ಲ. ತನ್ನ ಫೋನ್ ಅನ್ನು ಕೂಡ ರಿಸೀವ್ ಮಾಡುತ್ತಿಲ್ಲವಲ್ಲ ಎಂದು ಆತಂಕಗೊಂಡಿರುತ್ತಾಳೆ. ಇದೇ ವೇಳೆಗೆ ತಾನು ಸಂಜುನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವುದಾಗಿ ಶಾರದಾ ದೇವಿ ಬಳಿ ಹೇಳುತ್ತಾಳೆ. ಆರಾಧನಾಳ ತೀರ್ಮಾನಕ್ಕೆ ಶಾರದಾ ಸಪೋರ್ಟ್ ಮಾಡುತ್ತಾಳೆ. ಮಾನ್ಸಿ ಕೂಡ ಆರಾಧನಾ ಪರವಾಗಿ ಮಾತನಾಡುತ್ತಾಳೆ. ಆರಾಧನಾಳಿಗೆ ಸಂಜು ಯಾಕೆ ಹೀಗಾಡುತ್ತಿದ್ದಾನೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

  ಗಂಡನನ್ನು ಹುಡುಕಿ ಹೊರಟ ಆರಾಧನಾ

  ಗಂಡನನ್ನು ಹುಡುಕಿ ಹೊರಟ ಆರಾಧನಾ

  ಇದೇ ಸಂದರ್ಭದಲ್ಲಿ ಶಾರದಾ ದೇವಿಗೆ ಪುಷ್ಪಾ ಕರೆ ಮಾಡುತ್ತಾಳೆ. ಸಂಜು ಬಗ್ಗೆ ವಿಚಾರಿಸುತ್ತಾಳೆ. ಆದರೆ, ಸಂಜು ಎಲ್ಲಿಗೆ ಹೋಗಿದ್ದಾನೆ ಎಂಬುದೇ ಶಾರದಾಗೆ ಗೊತ್ತಿರುವುದಿಲ್ಲ. ಆಗ ಪುಷ್ಪಾ, ಸಂಜು ವಠಾರಕ್ಕೆ ಬಂದಿದ್ದು, ನಂತರ ತನ್ನ ಊರಿಗೆ ಹೋಗಿದ್ದನ್ನು ಹೇಳುತ್ತಾಳೆ. ಆಗ ಶಾರದಾ ಫೋನ್ ಕಟ್ ಮಾಡಿ ಈ ವಿಚಾರವನ್ನು ಆರಾಧನಾಗೆ ಹೇಳುತ್ತಾಳೆ. ಆರಾಧನಾ ಹಾಗಿದ್ದರೆ, ನಾನು ಕೂಡ ಊರಿಗೆ ಹೋಗುತ್ತೀನಿ. ನನ್ನ ಗಂಡ ಎಲ್ಲಿದ್ದಾನೋ ನಾನು ಅಲ್ಲೇ ಇರಬೇಕು ಎಂದು ಬಟ್ಟೆಯನ್ನು ಪ್ಯಾಕ್ ಮಾಡಿಕೊಂಡು ಹೊರಡುತ್ತಾಳೆ.

  ವೈದ್ಯರು ಹೇಳಿದ್ದೇನು..?

  ವೈದ್ಯರು ಹೇಳಿದ್ದೇನು..?

  ಅನು ಆರ್ಯ ಡೆತ್ ಸರ್ಟಿಫಿಕೆಟ್ ಪಡೆಯಲು ಆಸ್ಪತ್ರೆಗೆ ಬರುತ್ತಾಳೆ. ರಿಸೆಪ್ಶನ್‌ನಲ್ಲಿ ವಿಚಾರಿಸಿ ನಂತರ ಆಸ್ಪತ್ರೆಯ ಎಂಡಿ ಬಳಿ ಹೋಗುತ್ತಾಳೆ. ಅವರು ಟ್ರೀಟ್ ಮೆಂಟ್ ಎಲ್ಲ ಹೇಗೆ ನಡೆಯುತ್ತಿದೆ ಎಂದು ಕೇಳುತ್ತಾರೆ. ಅನುಗೆ ಆಗ ಕೋಪ ಬರುತ್ತದೆ. ಡೆತ್ ಸರ್ಟಿಫಿಕೆಟ್ ಕೇಳಿದರೆ, ನೀವು ಟ್ರೀಟ್‌ಮೆಂಟ್ ಎನ್ನುತ್ತೀರಲ್ಲ ಎಂದಾಗ ಆರ್ಯನನ್ನು ಟ್ರೀಟ್ ಮಾಡಿದ ವೈದ್ಯರ ಮಾತುಗಳನ್ನು ಅನು ಕೇಳಿಸಿಕೊಳ್ಳುತ್ತಾಳೆ. ಅಲ್ಲಿಗೆ ಅನುಗೆ ಸತ್ಯ ಗೊತ್ತಾಗುವುದು ಪಕ್ಕಾ ಆಗಿದೆ. ಕಥೆ ಮುಂದೇನಾಗುತ್ತೆ..?

  English summary
  jothe jotheyali Serial 07th December Episode Written Update. Anu comess to hospital to get death certificate of arya. Will Anu comes to know the truth by the doctor.?
  Wednesday, December 7, 2022, 18:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X