Jothe Jotheyali: ಅನುಗೆ ಡಿವೋರ್ಸ್ ಕೊಡು ಎಂದ ಝೇಂಡೇ: ಆರ್ಯ ಏನು ಮಾಡುತ್ತಾನೆ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ, ಅನು ಪರ ಮಾತನಾಡಲು ಆರ್ಯನನ್ನು ಭೇಟಿ ಮಾಡುತ್ತಾಳೆ. ಆರ್ಯನ ಮನೆ ಬಳಿಗೆ ಬಂದು ಆಚೆ ಬರುವಂತೆ ಆರ್ಯನಿಗೆ ಫೋನ್ ಮಾಡುತ್ತಾಳೆ. ಗೇಟ್‌ನಿಂದ ಆಚೆ ಬರುವ ಆರ್ಯ, ನೀನ್ಯಾಕೆ ಬಂದೆ ಮೀರಾ. ನಿನ್ನ ಜೊತೆಗೆ ನನ್ನನ್ನು ಝೇಂಡೇ ನೋಡಿದರೆ, ನನ್ನ ಪ್ಲಾನ್ ಕೆಡುತ್ತದೆ. ಏನೇ ಇದ್ದರೂ ಆಫೀಸಿನಲ್ಲಿ ಮಾತನಾಡೋಣ ಎನ್ನುತ್ತಾನೆ.

ಮೀರಾ ಇಲ್ಲ ಸರ್, ಅನು ವಿಚಾರವಾಗಿ ಮಾತನಾಡಲು ಬಂದೆ. ನೀವು ಮಾಡುತ್ತಿರುವುದೆಲ್ಲಾ ಒಳ್ಳೆಯದಕ್ಕೆ. ಆದರೆ ಈ ನಿಮ್ಮ ಒಳ್ಳೆಯ ಉದ್ದೇಶದಿಂದ ಅಲ್ಲಿ ಅನು ಕೊರಗುತ್ತಿದ್ದಾಳೆ. ನಿಮ್ಮ ಪ್ಲಾನ್ ಸಕ್ಸಸ್ ಆಗುವುದರೊಳಗೆ ನೀವೂ ಮತ್ತೆ ಅನು ದೂರ ಇರಬೇಕಾಗುತ್ತದೆ ಎನ್ನುತ್ತಾಳೆ. ಮಾತನ್ನು ಮುಂದುವರೆಸಿ ನಿಮ್ಮ ಬಿಹೇವಿಯರ್ ಅನ್ನು ಅನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾಳೆ. ನೀವು ಒಂದು ಸಲ ಅನು ಜೊತೆಗೆ ಮಾತನಾಡಿ, ಸತ್ಯವನ್ನೆಲ್ಲಾ ಹೇಳಿ ಎಂದು ಮೀರಾ ಕೇಳಿಕೊಳ್ಳುತ್ತಾಳೆ.

Jothe Jotheyali Serial 08th May episode written update

ಆರ್ಯ ಇಲ್ಲ ಮೀರಾ ನೀನು ಹೇಳಿದ ಹಾಗೆ ನಾನು ಮಾಡಿದರೆ ತಪ್ಪಾಗುತ್ತದೆ. ನಾನು ಝೇಂಡೇ ಜೊತೆಗೆ ಇದ್ದುಕೊಂಡೆ ಈ ಕೆಲಸ ಮಾಡಬೇಕು. ಅನು ಜೊತೆಗೆ ಮಾತನಾಡುವುದು ಝೇಂಡೇಗೆ ತಿಳಿದರೆ, ಎಲ್ಲವೂ ವ್ಯರ್ಥವಾಗುತ್ತದೆ. ನಾನು ಇದನ್ನೆಲ್ಲಾ ಮಾಡುತ್ತಿರುವುದು ಅನುಗೋಸ್ಕರ. ಸ್ವಲ್ಪ ದಿನ ಎಲ್ಲವೂ ಸರಿ ಹೋಗುತ್ತದೆ. ಅನು ಹಾಗೂ ಝೇಂಡೇ ನಡುವೆ ಇರುವ ವೈಮನಸ್ಸನ್ನು ಸರಿ ಮಾಡಬೇಕು ಎಂದರೆ, ನಾನು ಅನುಳಿಂದ ದೂರ ಇರುವುದೇ ಸರಿ. ಅನುಗೆ ನಾನು ಹತ್ತಿರವಾದರೆ, ಝೇಂಡೇ ಅನುಳನ್ನು ಏನು ಬೇಕಿದ್ದರೂ ಮಾಡುತ್ತಾನೆ. ಅದು ನನಗೆ ಇಷ್ಟವಿಲ್ಲ ಎಂದು ಹೇಳಿ ಬಿಡುತ್ತಾನೆ.

ಅನುಗೆ ಡಿವೋರ್ಸ್ ಕೊಡು ಎಂದ ಝೇಂಡೇ

ಝೇಂಡೇ ಆರ್ಯನನ್ನು ಪ್ರಶ್ನೆ ಮಾಡುತ್ತಾನೆ. ಮೀರಾ ಯಾಕೆ ಬಂದಿದ್ದಳು ಎಂದು ಕೇಳುತ್ತಾನೆ. ಇದಕ್ಕೆ ಆರ್ಯ ಸುಳ್ಳು ಸಬೂಬನ್ನು ಕೊಡುತ್ತಾನೆ. ಆಫಿಸಿನ ವಿಚಾರವಾಗಿ ಬಂದಿದ್ದಳು. ಒಳಗೆ ಕರೆದರೆ, ಮೀರಾ ಬರುತ್ತಾಳೋ ಇಲ್ಲವೋ ಎಂದು ನಾನೇ ಅಲ್ಲಿಗೆ ಹೋಗಿ ಮಾತನಾಡಿದೆ ಎಂದು ಸುಳ್ಳು ಹೇಳುತ್ತಾನೆ.

ಝೇಂಡೇ, ಸುಳ್ಳು ಹೇಳಬೇಡ ಆರ್ಯ, ಅನು ಬಗ್ಗೆ ಬುದ್ಧಿ ಹೇಳಲು ಮೀರಾ ಬಂದಿದ್ದಳು ಅಂತ ಗೊತ್ತು. ನೀನು ಕೂಡ ಹೆಚ್ಚು ಕಾಲ ನನ್ನ ಜೊತೆಗೆ ಇರುವುದಿಲ್ಲ ಎನ್ನುವುದು ಗೊತ್ತು ಎನ್ನುತ್ತಾನೆ. ಇನ್ನು ಝೇಂಡೇ, ಅನುಗೆ ಡಿವೋರ್ಸ್ ಕೊಟ್ಟು ಬಿಡು ಅವಳು ಬೇಡ ಎಂದು ಹೇಳುತ್ತಾನೆ. ಆರ್ಯ ಡಿವೋರ್ಸ್ ಕೊಡುತ್ತಾನಾ ಗೊತ್ತಿಲ್ಲ.

Jothe Jotheyali Serial 08th May episode written update

ಆರ್ಯನಿಂದ ದೂರಾಗಲು ಮುಂದಾದ ಅನು

ಇತ್ತ ಮೀರಾ, ಆರ್ಯ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿರುತ್ತಾಳೆ. ಅದನ್ನು ಅನುಗೆ ಕಳಿಸುತ್ತಾಳೆ. ಆದರೆ ಅನು, ಆರ್ಯ ಮಾತನಾಡಿದ್ದನ್ನು ಕೇಳಿಸಿಕೊಳ್ಳುವುದಿಲ್ಲ. ಅನು ಮನಸಾರೆ ಆರ್ಯನನ್ನು ಬಿಡಲು ತೀರ್ಮಾನಿಸಿದಂತೆ ನಡೆದುಕೊಂಡಿದ್ದಾಳೆ. ಆರ್ಯ ಹಾಗೂ ಅನು ಬೇರೆ ಆದರೆ ಮುಂದೆ ಹೇಗೆ ಎಂಬ ಪ್ರಶ್ನೆ ಮೂಡಿದೆ.

ಮನೆಯಿಂದ ಹೊರಟ ಆರಾಧನಾ

ಇನ್ನು ಆರಾಧಾನ ಬೇರೆ ಮನೆಗೆ ಹೊರಟಿದ್ದಾಳೆ. ಶಾರದಾ ದೇವಿ, ಆರಾಧನಾಳನ್ನು ತಡೆಯಲು ಪ್ರಯತ್ನಿಸಿದ್ದು, ಅನು ಅವರಿಷ್ಟ ಎಂದಿದ್ದಾಳೆ. ಆರಾಧನಾ ಇಲ್ಲ ನಾನು ಇಷ್ಟು ದಿನ ಇಲ್ಲಿ ಇದ್ದದ್ದೇ ಹೆಚ್ಚು ಎಂದು ಹೇಳಿ ಹೊರಟು ಬಿಡುತ್ತಾಳೆ. ಬಳಿಕ ಮಾನ್ಸಿ ಆರ್ಯ ಸರ್ ಇಲ್ಲಿ ಇಲ್ಲ. ಅದಕ್ಕಾಗಿಯೇ ಆರಾಧನಾ ಹೊರಟು ಹೋಗಿದ್ದು, ಆರ್ಯ ಸರ್ ಗೋಸ್ಕರ ಆರಾಧನಾ ಹೀಗೆಲ್ಲಾ ನಡೆದುಕೊಳ್ಳುತ್ತಿದ್ದಾಳೆ. ನಾವೀಗ ಅನು ಮತ್ತು ಆರ್ಯನನ್ನು ಒಂದು ಮಾಡದಿದ್ದರೆ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾಳೆ.

More from Filmibeat

English summary
Jothe Jotheyali Serial 08th May episode written update. Here is details about Jhende forces Arya to give divorce for Anu. This may lead Anu, Arya to stay away. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X