Jothe Jotheyali: ಅಪಾರ್ಥ ಮಾಡಿಕೊಂಡಿರುವ ಅನುಗೆ ಶಾರದಾ ಸತ್ಯ ಹೇಳುತ್ತಾಳಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್‌ಗೆ ಅಪಘಾತವಾದಾಗ ಆತನ ಮುಖ ಜಜ್ಜಿ ಹೋಗಿತ್ತು. ಆಗ ಪ್ರಿಯದರ್ಶಿನಿ ಅದೇ ಆಸ್ಪತ್ರೆಯಲ್ಲಿ ಇದ್ದಳು. ಆರ್ಯನಿಗೆ ರಕ್ತ ಕೂಡ ಕೊಟ್ಟಿದ್ದಳು.
ಪ್ರಿಯದರ್ಶಿನಿಯ ಮತ್ತೊಬ್ಬ ಮಗ ವಿಶ್ವಾಸ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಅದೇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ವಿಶ್ವಾಸ್ ಸಾವನ್ನಪ್ಪಿದ ಕಾರಣ ಪ್ರಿಯದರ್ಶಿನಿ ಆರ್ಯನಿಗೆ ತನ್ನ ಎರಡನೇ ಮಗನ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಳು.
ನಂತರ ಈ ವಿಚಾರವನ್ನು ಯಾರಿಗೂ ಹೇಳದೇ ತಪ್ಪು ಮಾಡಿದ್ದಳು. ಆರ್ಯ ಸತ್ತಿದ್ದಾನೆ ಎಂದು ಎಲ್ಲರೂ ತಿಳಿದಿದ್ದರು. ಇದೀಗ ಆರ್ಯ ಬದುಕಿರುವುದು ಗೊತ್ತಾಗಿದೆ. ಆದರೆ ಆರ್ಯನಿಗೆ ಹಿಂದಿನದು ನೆನಪಿಲ್ಲದೇ ಇರುವುದು ವರ್ಧನ್ ಕುಟುಂಬಕ್ಕೆ ದೊಡ್ಡ ತಲೆನೋವಾಗಿದೆ.

ಸಂಜುನೇ ಆರ್ಯ ಎಂದು ಒಪ್ಪದ ಮಾನ್ಸಿ
ಝೇಂಡೇ ಅಧಿಕಾರವನ್ನು ಸ್ವಾಧೀನ ಪಡಿಸಿಕೊಳ್ಳಬಾರದೆಂದು, ಆರ್ಯ ಬದುಕಿರುವ ವಿಚಾರವನ್ನು ಶಾರದಾ ದೇವಿ ಹೇಳಿದ್ದಾಳೆ. ಆದರೆ ಇದು ಆರಾಧನಾಳಿಗೆ ದೊಡ್ಡ ಮೋಸದಂತೆ ಕಾಣುತ್ತಿದೆ. ಹೀಗಾಗಿ ಆರಾಧನಾ ವರ್ಧನ್ ಕುಟುಂಬದವರ ಮೇಲೆ ಕೂಗಾಡುತ್ತಿದ್ದಾಳೆ. ನೀವೆಲ್ಲಾ ಸೇರಿ ನನಗೆ ಮೋಸ ಮಾಡುತ್ತಿದ್ದೀರಾ ಎಂದು ಹೇಳುತ್ತಾಳೆ. ಆರಾಧನಾಳಿಗೆ ಯಾರು ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇತ್ತ ಮಾನ್ಸಿಯೂ ಕೂಡ ಮನೆಯಲ್ಲಿ ನಡೆಯುತ್ತಿರುವುದನ್ನು ಒಪ್ಪಲು ತಯಾರಿರುವುದಿಲ್ಲ. ಇದೆಲ್ಲಾ ಏನು ನಡೆಯುತ್ತಿದೆ ಎಂದು ಮೇಲೆ ಹೋಗುತ್ತಾಳೆ.

ಸಂಜುಗೆ ಖುಷಿಯೋ ಖುಷಿ
ಇತ್ತ ಸಂಜುಗೆ ತನ್ನನ್ನು ಆರ್ಯ ಎಂದು ಒಪ್ಪಿಕೊಂಡರಲ್ಲ ಎಂಬ ಖುಷಿ ಇರುತ್ತದೆ. ಈ ಬಗ್ಗೆ ಸಂಜು, ಶಾರದಾ ದೇವಿ ಬಳಿ ಖುಷಿಯಿಂದ ಮಾತನಾಡುತ್ತಿರುತ್ತಾನೆ. ನನಗೆ ಇಷ್ಟುದಿನ ನನ್ನ ಅಸ್ತಿತ್ವದ ಬಗ್ಗೆಯೇ ಸಮಸ್ಯೆ ಆಗುತ್ತಿತ್ತು. ನಾನು ಯಾರು ಎಂಬುದನ್ನು ಹೇಳುವುದಕ್ಕೆ ಸಾಧ್ಯವಾಗಿರಲಿಲ್ಲ. ನಾನು ಈ ಮನೆಯಲ್ಲಿ ಮುಂಚೆ ಇದ್ದಿದ್ದೆಲ್ಲವೂ ಮಂಪರಾಗಿಯೇ ಇದೆ. ಕನ್ಫ್ಯೂಸ್ ಆಗುತ್ತೆ ಎಂದು ಹೇಳುತ್ತಾನೆ. ಇದಕ್ಕೆ ಶಾರದಾ, ಜಾಸ್ತಿ ಸ್ಟ್ರೆಸ್ ಮಾಡಿಕೊಳ್ಳಬೇಡ. ಟ್ರೀಟ್ ಮೆಂಟ್ ಶುರು ಮಾಡೋಣ ಎನ್ನುತ್ತಾಳೆ. ಇನ್ನು ಪುಷ್ಪಾ ಮತ್ತು ಸುಬ್ಬುಗೂ ಸುದ್ದಿ ಕೇಳಿ ಖುಷಿಯಾಗಿರುತ್ತದೆ. ನಮ್ಮ ಮಗಳು ಮತ್ತು ಮೊಮ್ಮೊಗು ಅನಾಥವಾಗಲಿಲ್ಲ ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಾರೆ.

ಆರಾಧನಾಗೆ ಸಮಾಧಾನ ಮಾಡಿದ ಅನು
ಅನು, ಆರಾಧನಾಳನ್ನು ರೂಮಿಗೆ ಕರೆದುಕೊಂಡು ಹೋಗಿ ಮಾತನಾಡಿಸುತ್ತಾಳೆ. ಇದೆಲ್ಲಾ ಈ ಸಮಯಕ್ಕಷ್ಟೇ. ಝೇಂಡೇ ಅನ್ನು ಆಫೀಸಿನಿಂದ ದೂರ ತಳ್ಳುವುದಕ್ಕೆ ಶಾರದಮ್ಮ ಈ ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಬಿಟ್ಟರೆ ನಿಮ್ಮ ವಿಶು ಆರ್ಯ ಆಗುವುದಕ್ಕೆ ಸಾಧ್ಯವಿಲ್ಲ. ಹೆದರಬೇಡಿ. ನಿಮಗೆ ಏನೂ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾಳೆ. ಆರಾಧನಾ, ಅನು ಮಾತುಗಳನ್ನು ನಂಬುವುದಿಲ್ಲ. ಆದರೆ, ಅನು ನಾನು ಹೇಳುತ್ತಿರುವುದು ಸತ್ಯ ಬೇಕಿದ್ದರೆ ಶಾರದಾ ಅಮ್ಮನ ಬಳಿಯೇ ಹೇಳಿಸುತ್ತೀನಿ ಎಂದು ಸಮಾಧಾನ ಮಾಡುತ್ತಾಳೆ.

ಅನುಗೆ ಸತ್ಯದ ಅರಿವಾಗುತ್ತಾ..?
ಮತ್ತೆ ಶಾರದಾ ಬಳಿ ಆರಾಧನಾ ಅವರನ್ನು ಕರೆದುಕೊಂಡು ಹೋದ ಅನು, ತಾನು ನಂಬಿರುವುದೇ ಸತ್ಯ ಎಂಬಂತೆ ಮಾತನಾಡುತ್ತಾಳೆ. ಶಾರದಾಳಿಗೆ ಸತ್ಯ ಹೇಳಲು ಹೇಳುತ್ತಾಳೆ. ಆದರೆ ಶಾರದಾ ಅನು ಮಾತುಗಳನ್ನು ಕೇಳಿ ಶಾಕ್ ಆಗುತ್ತಾಳೆ. ಅನು ಅಪಾರ್ಥ ಮಾಡಿಕೊಂಡಿರುವುದನ್ನು ಶಾರದಾ ಮತ್ತು ಆರ್ಯ ಇಬ್ಬರೂ ಅರ್ಥ ಮಾಡಿಕೊಳ್ಳುತ್ತಾರೆ. ಆರ್ಯ ನಾನೇ ಆರ್ಯ ಎಂದು ಹೇಳಲು ನನ್ನ ಬಳಿ ಯಾವ ಸಾಕ್ಷಿಯೂ ಇಲ್ಲ ಎಂದು ಚಿಂತೆ ಮಾಡಲು ಯತ್ನಿಸುತ್ತಾನೆ.


Click it and Unblock the Notifications











