Jothe Jotheyali: ಅಪ್ಪನಿಗೆ ಮಾತು ಕೊಟ್ಟ ಅನು: ಆರ್ಯನನ್ನು ಬಿಟ್ಟು ಬರುವುದು ಗ್ಯಾರೆಂಟಿನಾ?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಬ್ಬು ಶತಾಯಗತಾಯ ಅನುಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಬೇಕು ಎಂದು ನಿರ್ಧಾರ ಮಾಡಿದ್ದಾನೆ. ಹಾಗಾಗಿ ಮಗಳಿಗೆ ಏನೂ ಹೇಳದೇ ಮಾತು ತೆಗೆದುಕೊಂಡಿದ್ದಾನೆ.
ಅನುಗೆ ಅಪ್ಪನ ಆಲೋಚನೆ ಬಗ್ಗೆ ಸ್ವಲ್ಪವೂ ಕ್ಲೂ ಇಲ್ಲದೇ, ಮಾತು ಕೊಟ್ಟಿದ್ದಾಳೆ. ತನ್ನ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಆಣೆ ಮಾಡಿದ್ದಾಳೆ. ಇದರಿಂದ ಅನು ಸುಬ್ಬು ಹೇಳಿದಂತೆ ಕೇಳಲೇಬೇಕು.
ಸುಬ್ಬು ನಡವಳಿಕೆ ಪುಷ್ಪಾಳನ್ನು ಗಾಬರಿಗೊಳಿಸಿದೆ. ಮಗಳ ಜೀವನಕ್ಕೆ ಸುಬ್ಬುನೇ ಅಡ್ಡವಾಗುತ್ತಿದ್ದಾನಲ್ಲ ಎಂದು ಪುಷ್ಪಾ ಒದ್ದಾಡುತ್ತಿದ್ದಾಳೆ. ಶಾರದಾ ಕೂಡ ಹೇಗಾದರೂ ಮಾಡಿ ಸುಬ್ಬು ಮನಸ್ಸನ್ನು ಶಾಂತಗೊಳಿಸಬೇಕು ಎಂದು ಯೋಚಿಸುತ್ತಿದ್ದಾಳೆ.

ಸುಬ್ಬು ಮಾತು ಕೇಳಿ ಎಲ್ಲರೂ ಶಾಕ್
ಶಾರದಾ ದೇವಿ ಬಂದು ಅನು ಬಳಿ ಆರ್ಯವರ್ಧನ್ ಎಲ್ಲಿ ಎಂದು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಅನು, ಎಲ್ಲೋ ಹೋಗಿದ್ದಾರೆ. ಆದರೆ, ನನಗೆ ಗೊತ್ತಿಲ್ಲ. ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ಆರ್ಯ ಸರ್ ನನ್ನ ಬಳಿ ಹೇಳುವುದನ್ನು ಬಿಟ್ಟು ಸಾಕಷ್ಟು ಸಮಯವಾಯ್ತು ಎನ್ನುತ್ತಾಳೆ. ಆಗ ಶಾರದಾ ಅವನ ಮನಸ್ಸು ಈಗ ಝೇಂಡೇ ಇಲ್ಲದೇ ಒದ್ದಾಡುತ್ತಿದೆ. ಸ್ವಲ್ಪ ದಿನ ಸರಿ ಹೋಗುತ್ತಾನೆ ಎನ್ನುತ್ತಾಳೆ. ಆದರೆ, ಇದನ್ನೆಲ್ಲಾ ಕೇಳಿಸಿಕೊಂಡು ಸುಮ್ಮನಿರದ ಸುಬ್ಬು ನನ್ನ ಮಗಳನ್ನು ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ. ಈಗ ಅವಳು ಗರ್ಭಿಣಿ, ಎಲ್ಲಾ ಜವಾಬ್ದಾರಿಯನ್ನು ಅವಳ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದವರೆಲ್ಲಾ ಶಾಕ್ ಆಗುತ್ತಾರೆ.

ಝೇಂಡೇ ಮೇಲೆ ಗೂಬೆ ಕೂರಿಸಿದ ಆರ್ಯ
ಆರ್ಯ ಬಂದಿದ್ದಕ್ಕೆ ಖುಷಿಯಾದ ಝೇಂಡೇ ರೆಡಿಯಾಗುತ್ತಾನೆ. ತನ್ನನ್ನು ಆಚೆ ಕರೆದುಕೊಂಡು ಹೋಗುತ್ತಾನೆ ಎಂದು ಅಂದುಕೊಳ್ಳುತ್ತಾನೆ. ಆದರೆ, ಆರ್ಯ ಝೇಂಡೇಗೆ ಊಟವನ್ನು ತಂದಿರುತ್ತಾನೆ. ರಾಜನಂದಿನಿಯನ್ನು ನೀನೇ ಕೊಂದಿದ್ದು, ಇಷ್ಟು ದಿನ ನಿನ್ನ ಕಾಪಾಡಿದೆ. ಆದರೆ, ಇನ್ನು ಮುಂದೆ ಅದು ಸಾಧ್ಯವಿಲ್ಲ. ಎಲ್ಲರಿಗೂ ಸತ್ಯ ಗೊತ್ತಾಗಿದೆ ಎನ್ನುತ್ತಾನೆ. ಆರ್ಯನ ಮಾತುಗಳನ್ನು ಕೇಳಿದ ಝೇಂಡೇ ಶಾಕ್ ಆಗುತ್ತಾನೆ. ಮತ್ತೆ ಝೇಂಡೇ ಅನ್ನು ಕೂಡಿ ಹಾಕಿ ಆರ್ಯ ಹೊರಟು ಬಿಡುತ್ತಾನೆ.

ಸುಬ್ಬುಗೆ ಪರ್ಮಿಷನ್ ಕೊಟ್ಟ ಆರ್ಯ
ಮಾನ್ಸಿ ಸುಬ್ಬು ಮಾತಿಗೆ ರೆಸ್ಪಾನ್ಸ್ ಮಾಡುತ್ತಾಳೆ. ಅನು ಮೇಲೆ ನಾವೆಲ್ಲಾ ಜವಾಬ್ದಾರಿಯನ್ನು ವಹಿಸಿಲ್ಲ. ಅನುನೇ ನಾನೇ ಮಾಡುತ್ತೀನಿ ಅಂತ ಎಲ್ಲವನ್ನೂ ತಲೆ ಮೇಲೆ ಹಾಕಿಕೊಳ್ಳುವುದು. ಇಲ್ಲಿ ನಾವೆಲ್ಲಾ ಅನು ಹೇಳಿದಾಗ ಹಾಗೆ ನಡೆದುಕೊಳ್ಳಬೇಕು ಎನ್ನುತ್ತಾಳೆ. ಅಷ್ಟರಲ್ಲಿ ಆರ್ಯ ಬರುತ್ತಾನೆ. ಆರ್ಯನಿಗೆ ಮನದಲ್ಲಿ ಅನು ಮೇಲೆ ಪ್ರೀತಿ ಇದ್ದರೂ ತೋರಿಸಿಕೊಳ್ಳುವುದಿಲ್ಲ. ಆರ್ಯ ಬರುತ್ತಿದ್ದಂತೆ ಸುಬ್ಬು ತನ್ನ ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎನ್ನುತ್ತಾನೆ. ಇದಕ್ಕೆ ಆರ್ಯ ಕರೆದುಕೊಂಡು ಹೋಗಿ ನಾನು ಅವಳನ್ನು ಮದುವೆಯಾಗಿರುವುದೇ ನನಗೆ ಗೊತ್ತಾಗುತ್ತಿಲ್ಲ. ಅವಳು ಎಷ್ಟೇ ಆದರೂ ನಿಮ್ಮ ಮಗಳು ಎಂದು ಹೇಳುತ್ತಾನೆ. ಆರ್ಯನ ಮಾತು ಕೇಳಿದ ಅನು ಶಾಕ್ ಆಗುತ್ತಾಳೆ. ಸುಬ್ಬು ಕೂಡ ನನಗೆ ಮಾತು ಕೊಟ್ಟಿದ್ದೀಯಾ. ನನ್ನ ಜೊತೆಗೆ ಬಾ ಎನ್ನುತ್ತಾನೆ.

ಆರಾಧನಾ ದಾರಿ ತಪ್ಪುತ್ತಿದ್ದಾಳಾ?
ಆರಾಧನಾಳ ಮನಸಲ್ಲಿ ಇನ್ನೂ ಆರ್ಯಾನೇ ವಿಶ್ವಾಸ್ ದೇಸಾಯಿ ಎಂಬ ಭಾವನೆ ಇದೆ. ಅವಳು ಮನೆಯಿಂದ ಹೊರಡಲು ಸಿದ್ಧಳಾಗಿದ್ದಾಳೆ. ಆದರೆ ಪದೇ-ಪದೇ ಆರ್ಯ ಎದುರಿಗೆ ಬಂದಾಗಲಿಲ್ಲಾ, ಅವಳ ಮನಸ್ಸು ಆರ್ಯನ ಕಡೆಗೆ ವಾಲುತ್ತಿದೆ. ಇದರಿಂದ ಆರಾಧನಾಳಿಗೆ ಸಂಭಾಳಿಸುವುದು ಕಷ್ಟವಾಗುತ್ತಿದೆ. ಆರಾಧನಾಳಿಗೆ ತನ್ನ ಮನಸ್ಸು ಯೋಚಿಸುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ, ಆರ್ಯ ಈಗ ವಿಶ್ವಾಸ್ ರೂಪದಲ್ಲಿರುವುದಕ್ಕೆ ಆಕೆಯ ಮನಸ್ಸು ಬೇಡದ್ದನ್ನೇ ಯೋಚಿಸುತ್ತಿದೆ. ಆರಾಧಾನಾ ದಾರಿ ತಪ್ಪುತ್ತಿದ್ದಾಳೆ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.


Click it and Unblock the Notifications











