Jothe Jotheyali: ಆರಾಧನಾ ಬದುಕು ಹಸನಾಗಿರಲೆಂದು ಸಂಜೀವಿನಿ ಮಾಡಿರುವ ಪ್ಲ್ಯಾನ್ ಯಾವುದು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಮತ್ತು ಆರ್ಯ ಪ್ರೈವೇಟ್ ಜೆಟ್‌ನಲ್ಲಿ ಅಮೆರಿಕಾಗೆ ಹೋಗಿದ್ದಾರೆ. ಆರಾಧನಾ ಕಂಪನಿಯನ್ನು ಮರ್ಜ್ ಮಾಡುವ ಕೆಲಸಕ್ಕಾಗಿ ತೆರಳಿದ್ದಾರೆ. ಆರಾಧನಾ ಕೂಡ ಈ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ ಮೀರಾ, ಆರಾಧನಾ ಹೋಗಬಾರದು ಎಂದು ಬೇಕಂತಲೇ ಪ್ಯಾಸೆಂಜರ್ ಫ್ಲೈಟ್ ಅನ್ನು ಬುಕ್ ಮಾಡಿರುತ್ತಾಳೆ. ಬೇಸರಗೊಂಡ ಆರಾಧನಾ ಮನೆಗೆ ವಾಪಸ್ ಬರುತ್ತಾಳೆ.

ಮನೆಗೆ ಬಂದವಳೇ ಕೋಪ ಮಾಡಿಕೊಂಡಿರುತ್ತಾಳೆ. ಸಂಜೀವಿನಿಯ ಯಾವ ಪ್ರಶ್ನೆಗಳಿಗೂ ಉತ್ತರ ಕೊಡುವುದಿಲ್ಲ. ಸಂಜೀವಿ ಜೊತೆ ಫೋನ್‌ನಲ್ಲಿ ಸರಿಯಾಗಿ ಮಾತನಾಡುವುದಿಲ್ಲ. ಆರ್ಯ, ಅನು ನನ್ನನ್ನು ಬಿಟ್ಟು ಹೋದರು ಎನ್ನುವ ಕೋಪದಲ್ಲಿ ಕೆಂಡ ಕಾರುತ್ತಿದ್ದಾಳೆ. ಸಂಜೀವಿನಿ ಮಗಳನ್ನು ಸಮಾಧಾನ ಮಾಡಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ.

Jothe Jotheyali Serial 10th April episode written update

ಸಂಜೀವಿನಿ, ಶಾರದಾ ದೇವಿ ಮಲಗಿದ್ದಾರೆ. ಹರ್ಷನಿಗೂ ಜ್ವರ ಇದೆ. ಈ ಸಂದರ್ಭದಲ್ಲಿ ಸಂಜೀವಿನಿ ರಾಜನಂದಿನಿ ರೂಮ್‌ಗೆ ಹೋಗಲು ಬಯಸುತ್ತಾಳೆ. ಹೀಗಾಗಿ ಮಾನ್ಸಿ ಬಳಿ ರೂಮಿನ ಕೀ ಅನ್ನು ಕೇಳುತ್ತಾಳೆ. ಮಾನ್ಸಿಗೆ ಆಗ ಸಂಜೀವಿನಿ ಈ ಮನೆಗೆ ಬಂದಿರುವುದು ಆಸ್ತಿಗಾಗಿ ಎಂಬುದು ಕನ್ಫರ್ಮ್ ಆಗುತ್ತೆ. ಅಷ್ಟೇ ಅಲ್ಲದೇ, ಸಂಜೀವಿನಿ ಮಾನ್ಸಿ ಬಳಿ ಕೀ ತರಿಸುವುದು ಬೇಡ ಎಂದು ಟೆಸ್ಟ್ ಮಾಡುವುದಕ್ಕೆ ಹೇಳಿದೆ ಎಂದು ಸುಮ್ಮನಾಗುತ್ತಾಳೆ.

ಮಧ್ಯರಾತ್ರಿಯಲ್ಲಿ ಸಂಜೀವಿನಿ ಝೇಂಡೇ ಅನ್ನು ಭೇಟಿ ಮಾಡಲು ಹೋಗುತ್ತಾಳೆ. ಝೇಂಡೇ ಬಳಿ ಯಾವುದೋ ವಿಚಾರವಾಗಿ ಮಾತನಾಡುತ್ತಾಳೆ. ಇದನ್ನು ಮಾನ್ಸಿ ಎದ್ದು ನೋಡುತ್ತಾಳೆ. ಮಾನ್ಸಿ ಕೆಲಸದವಳ ವೇಶದಲ್ಲೇ ಸಂಜೀವಿನಿಯ ಪ್ಲಾನ್ ಅನ್ನು ತಿಳಿಯಲು ಇಷ್ಟೆಲ್ಲಾ ಮಾಡುತ್ತಿದ್ದಾಳೆ. ಮಾರನೆಯ ದಿನ ಆರಾಧನಾ ಹಾಗೂ ಭಾವನಾ ಇಬ್ಬರೂ ವಾಪಸ್ ಯುಎಸ್ ಗೆ ಹೋಗಬೇಕು ಎಂದು ಯೋಚಿಸುತ್ತಿರುತ್ತಾರೆ. ಈ ವೇಳೆಗೆ ಸಂಜೀವಿನಿ ಬಂದು ಇಬ್ಬರಿಗೂ ಬುದ್ಧಿ ಹೇಳುತ್ತಾಳೆ.

ಭಾವನಾಳನ್ನು ಕಳಿಸಿ, ಆರಾಧನಾ ಬಳಿ ಮಾತನಾಡುತ್ತಾಳೆ. ನೀನು ಇಲ್ಲಿಗೆ ಬಂದಿರುವುದು, ಕಂಪನಿಯನ್ನು ಮರ್ಜ್ ಮಾಡುತ್ತಿರುವುದು ವಿಶ್ವಾಸ್ ರೀತಿ ಕಾಣುವ ಆರ್ಯನ ಜೊತೆಗೆ ಮುಂದಿನ ಜೀವನ ಕಳೆಯಲು. ಹೀಗಿರುವಾಗ ಯಾವುದೋ ಸಣ್ಣ ವಿಷಯಕ್ಕೆ ವಾಪಸ್ ಹೋಗುವ ನಿರ್ಧಾರ ಮಾಡಿದ್ದೀಯಾ ಎಂದು ಹೇಳುತ್ತಾಳೆ. ಇದೆಲ್ಲವನ್ನು ಕೇಳಿಸಿಕೊಳ್ಳುವ ಮಾನ್ಸಿ ಶಾಕ್ ಆಗುತ್ತಾಳೆ.

Jothe Jotheyali Serial 10th April episode written update

ಇನ್ನು ಸಂಜೀವಿನಿ ಅನುಳನ್ನು ವಾಪಸ್ ಬರದೇ ಇರೋ ಹಾಗೆ ಮಾಡಿದರೆ, ನಿನಗೆ ದಾರಿ ಸುಲಭವಾಗುತ್ತಾ ಎಂದು ಕೇಳುತ್ತಾಳೆ. ಸಂಜೀವಿನಿಯ ಮಾತಿನ ಅರ್ಥ ಅನುಳನ್ನು ಕೊಲೆ ಮಾಡಿಸುವುದು ಎಂದಾಗಿದ್ದು, ಅನುಗೆ ಗಂಡಾಂತರ ಕಾದಿರುವುದು ನಿಜವಾಗಿದೆ.

ಇತ್ತ ರಮ್ಯಾ, ಸಂಪತ್ ಹೇಳಿದ ಮಾತುಗಳನ್ನು ಕೇಳಿ ಒಂದು ನಿರ್ಧಾರಕ್ಕೆ ಬಂದಿದ್ದಾಳೆ. ಕರುಣಾಕರನನ್ನು ಮದುವೆಯಾಗಲು ಒಪ್ಪಿದ್ದಾಳೆ. ತನ್ನ ಹುಟ್ಟುಹಬ್ಬದ ದಿನವೇ ಈ ನಿರ್ಧಾರವನ್ನು ಮಾಡಿದ್ದು, ಪುಷ್ಪ ಹಾಗೂ ಸುಬ್ಬುಗೆ ಸ್ವೀಟ್ ಕೊಟ್ಟು ಹೇಳಲು ಬಂದಿದ್ದಾಳೆ. ಈ ಮಾತನ್ನು ಕೇಳಿದ ಸುಬ್ಬು ಹಾಗೂ ಪುಷ್ಪ ಕೂಡ ಖುಷಿಯಾಗಿದ್ದಾರೆ. ಇನ್ನು ಕರುಣಾಕರ, ರಮ್ಯಾಳನ್ನು ಭೇಟಿಯಾಗಲು ಬರುತ್ತಾನೆ. ಸಂಪತ್‌ಗೂ ಇದರಿಂದ ಖುಷಿಯಾಗುತ್ತದೆ. ಕೊನೆಗೂ ರಮ್ಯಾ ಹಾಗೂ ಕರುಣಾಕರ ಒಂದಾದರು ಎಂದು ಖುಷಿ ಪಡುತ್ತಾನೆ. ರಮ್ಯಾ ಅನು ಬರುವವರೆಗೂ ಮದುವೆ ಬೇಡ ಎಂದು ಹೇಳಿರುತ್ತಾಳೆ.

ಪುಷ್ಪಾಳಿಗೆ ಮತ್ತೆ ಜೋಗ್ತವ್ವ ಬಂದು ನಿನ್ನ ಮಗಳಿಗೆ ಆಪತ್ತು ಕಾದಿದೆ, ಆದಷ್ಟು ಬೇಗ ಕರೆಸಿಕೊ ಎಂದು ವಾರ್ನಿಂಗ್ ಕೊಡುತ್ತಾಳೆ. ಪುಷ್ಪ ಆತಂಕ ಹೆಚ್ಚಾಗುತ್ತದೆ. ಅನುಗೆ ಶಾರದಮ್ಮನವರಿಗೆ ಹುಷಾರಿಲ್ಲ ಅಂತ ಹೇಳಿ ಕರೆಸಿಕೊಳ್ಳಲು ಮುಂದಾಗುತ್ತಾಳೆ. ಆದರೆ, ಪುಷ್ಪಾಳನ್ನು ಸುಬ್ಬು ತಡೆಯುತ್ತಾನೆ. ಇತ್ತ ಮಾನ್ಸಿ, ಸಂಜೀವಿನಿ ಬಗ್ಗೆ ಮೀರಾ ಬಳಿ ಮಾತನಾಡಲು ಬಯಸಿ ಫೋನ್ ಮಾಡುತ್ತಾಳೆ. ಮೀರಾಗೆ ಮಾನ್ಸಿ ಫೋನ್ ಮಾಡಿರುವುದು ಆಶ್ಚರ್ಯವಾಗುತ್ತದೆ.

More from Filmibeat

English summary
Jothe Jotheyali Serial 10th April episode written update. Here Is Detials About Aradhana thinks to go back for US. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X