Jothe Jotheyali: ಆರ್ಯನಿಗೆ ಬೆನ್ನು ಬಿಡದ ಬೇತಾಳದಂತಾದ ಝೇಂಡೇ

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯನಿಗೆ ಅನುಳನ್ನು ಬಿಟ್ಟಿರಲು ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಝೇಂಡೇಗೆ ಪಾಠ ಕಲಿಸುವ ಸಲುವಾಗಿ ತಾಳ್ಮೆಯಿಂದ ನಡೆದುಕೊಂಡಿದ್ದಾನೆ. ಇನ್ನು ಝೇಂಡೇಗೆ ಆರ್ಯ ಅನುಳಿಂದ ಸಂಪೂರ್ಣವಾಗಿ ದೂರವಾಗಲಿ ಎಂಬುದು ಮನಸ್ಸಿನಲ್ಲಿದೆ. ಹೀಗಾಗಿ ಆರ್ಯನಿಗೆ ಆದಷ್ಟು ಬೇಗ ಡಿವೋರ್ಸ್ ಕೊಟ್ಟುಬಿಡು ಎಂದು ಝೆಂಡೇ ಹೇಳಿದ್ದಾನೆ. ಈ ಮಾತಿನಿಂದ ಆರ್ಯ ಈಗ ಆತಂಕಕ್ಕೆ ಒಳಗಾಗಿದ್ದಾನೆ.

ತಾನು ಅಂದುಕೊಂಡಿದ್ದಕ್ಕಿಂತ ಇದು ಕಷ್ಟವಾದ ಕಲಸ. ಅನುಗೆ ಡಿವೋರ್ಸ್ ಕೊಟ್ಟರೆ ಸಮಸ್ಯೆ ಆಗುತ್ತದೆ ಎಂದು ಯೋಚಿಸಿದ್ದಾನೆ. ಹೀಗಾಗಿ ಅನು ಜೊತೆಗೆ ಮಾತನಾಡಲು ಮುಂದಾಗಿದ್ದಾನೆ. ಅನುಗೆ ಆರ್ಯ ದೂರಾಗುತ್ತಿರುವ ನೋವು ಒಂದುಕಡೆಯಾದರೆ, ತಾನು ಆರ್ಯನಿಂದ ದೂರ ಇರುವುದೇ ಸರಿ ಎಂದು ಯೋಚಿಸಿದ್ದಾಳೆ. ಇದೇ ಸಂದರ್ಭದಲ್ಲಿ ಆರಾಧನಾ ಆರ್ಯನ ಮೇಲೆ ಮನಸಿಟ್ಟಿರುವುದನ್ನು ತಿಳಿದುಕೊಂಡ ಅನು ಮನಸ್ಸಿನಲ್ಲಿ ಬೇರೆಯ ವಿಚಾರಗಳೇ ಓಡುತ್ತಿದೆ.

Jothe jotheyali Serial 10th May episode written update

ಹೀಗಾಗಿ ಅನು ನೇರವಾಗಿ ಆರಾಧನಾಳನ್ನು ಪ್ರಶ್ನೆ ಮಾಡಿದ್ದಾಳೆ. ನೀವು ಆರ್ಯನಲ್ಲಿ ವಿಶ್ವಾಸ್ ದೇಸಾಯಿ ಅವರನ್ನು ನೋಡುತ್ತಿದ್ದೀರಾ ಎಂದು ಕೇಳುತ್ತಾಳೆ. ಆರಾಧನಾ ಕೂಡ ನೇರವಾಗಿ ಹೌದು ಎಂದು ಹೇಳುತ್ತಾಳೆ. ಆರ್ಯನಿಗೋಸ್ಕರ ನೀವು ಇಷ್ಟು ದಿನ ನಮ್ಮ ಮನೆಯಲ್ಲಿ ಇದ್ದದ್ದು ಹೌದಲ್ವಾ ಎಂದು ಕೇಳಿದ ಪ್ರಶ್ನೆಗೂ ಆರಾಧನಾ ಹೌದು ಎಂದು ಸರಾಗವಾಗಿ ಉತ್ತರ ನೀಡಿದ್ದಾಳೆ. ಈ ಮಾತುಗಳನ್ನು ಕೇಳಿದ ಅನುಗೆ ತನ್ನ ಅನುಮಾನಗಳು ಕ್ಲಿಯರ್ ಆಗಿವೆ. ಈಗ ಅನು ಯಾವ ನಿರ್ಧರ ತೆಗೆದುಕೊಳ್ಳುತ್ತಾಳೋ ಗೊತ್ತಿಲ್ಲ.

ವಠಾರಕ್ಕೆ ಬಂದ ಅನು

ಇದೇ ಸಂದರ್ಭದಲ್ಲಿ ಮೀರಾ ಕೂಡ ಆರ್ಯನ ಜೊತೆಗೆ ಮಾತನಾಡಿದ್ದು, ಆದಷ್ಟು ಬೇಗನೇ ಅನು ಬಳಿ ಮಾತನಾಡುವಂತೆ ಹೇಳಿದ್ದಾಳೆ. ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡಿರುವ ಆರ್ಯ ಅನುಳನ್ನು ಮಾತನಾಡಬೇಕಿದೆ ಎಂದು ಕೇಳಿದ್ದಾನೆ. ಇದಕ್ಕೆ ಅನು ಸಂಜೆ ಸಿಗುತ್ತೇನನೆ ಎಂದು ಹೇಳಿದ್ದಾಳೆ. ಇನ್ನು ವಠಾರಕ್ಕೆ ಬಂದ ಅನು ತನ್ನ ತಂದೆಯ ಬಳಿಗೆ ಮಾತನಾಡುತ್ತಾಳೆ.

ಫೋಸ್ಟ್ ಆಫೀಸಿನಲ್ಲಿ ಇಟ್ಟ ಹಣ ಮೆಚ್ಯುರಿಟಿಯಾಗುತ್ತಿದೆ. ಈಗ ನಾಲ್ಕು ಲಕ್ಷ ಹಣ ಉಳಿತಾಯವಾಗಿದೆ. ಇದನ್ನು ಕೊಟ್ಟು ನಿಮ್ಮ ಅಂಗಡಿಯನ್ನು ವಾಪಸ್ ಪಡೆಯಿರಿ. ಆಗ ನೀವು ಬಾಸ್ ರೀತಿ ಇರಬಹುದು ಎಂದು ಹೇಳುತ್ತಾಳೆ. ಇದಕ್ಕೆ ಸುಬ್ಬು ಕೂಡ ತಲೆಯಾಡಿಸಿದ್ದಾರೆ. ಇನ್ನು ಆರಾಧನಾ ಅಷ್ಟೆಲ್ಲಾ ಆದರೂ ಮನೆಗೆ ವಾಪಸ್ ತಿರುಗಿ ಬಂದಿದ್ದಾಳೆ. ಇದನ್ನು ನೋಡಿದ ಮಾನ್ಸಿ ಹೊರಟೆ ಎಂದವರು ಮತ್ತೆ ಬಂದಿದ್ದೇಕೆ ಎಂದು ಪ್ರಶ್ನಿಸುತ್ತಾಳೆ.

Jothe jotheyali Serial 10th May episode written update

ಆರಾಧನಾಗೆ ಮಾನ್ಸಿ ಬುದ್ಧಿವಾದ

ಬಳಿಕ ಮಾನ್ಸಿ ನಿಮ್ಮ ಮನಸ್ಸಿನಲ್ಲಿರುವ ಆಸೆ ಯಾವತ್ತಿಗೂ ನೆರವೇರುವುದಿಲ್ಲ. ನಿಮಗೆ ಯಾವುದೇ ಕಾರಣಕ್ಕೂ ಆರ್ಯ ಸಿಗುವುದಿಲ್ಲ. ಅನು ಮತ್ತು ಆರ್ಯನನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಈ ಪರಿಸ್ಥಿತಿಗೆ ಅನು ಕಾರಣ ಅಲ್ಲ. ನಿಮಗೆ ಅನು ಪರಿಹಾರ ಕೊಡಬೇಕಾಗಿಲ್ಲ. ಸತ್ಯವನ್ನು ಅರಿತುಕೊಂಡರೆ ನಿಮಗೆ ಒಳ್ಳೆಯದು, ಗೆಸ್ಟ್ ಆಗಿ ಮನೆಗೆ ಬಂದ ನೀವು, ಗೆಸ್ಟ್ ಆಗಿ ಹೋದರೆ ಒಳ್ಳೆಯದು ಎಂದು ಮಾನ್ಸಿ ಬುದ್ಧಿವಾದ ಹೇಳುತ್ತಾಳೆ. ಇದನ್ನು ಕೇಳಿದ ಆರಾಧನಾಳಿಗೆ ಬೇಸರವಾಗುತ್ತದೆ.

ಅನು ಬಳಿ ಚರ್ಚಿಸಲು ಮುಂದಾದ ಆರ್ಯ

ಇತ್ತ ಆರ್ಯ, ಅನುಗೋಸ್ಕರ ಕಾಯುತ್ತಿರುತ್ತಾನೆ. ಪಾರ್ಕ್‌ನಲ್ಲಿ ಡೆಕೊರೇಷನ್ ಮಾಡಿಕೊಂಡು ಆರ್ಯ ಕನಸು ಕಾಣುತ್ತಿರುತ್ತಾನೆ. ಅನು ಬಂದಂತೆ, ತನ್ನ ಪ್ರೀತಿಯನ್ನು ಒಪ್ಪಿಕೊಂಡಂತೆ ಕನಸು ಕಾಣುತ್ತಿರುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಝೇಂಡೇ ಅಲ್ಲಿಗೆ ಬರುತ್ತಾನೆ. ಝೇಂಡೇ ಬಂದಿರುವುದನ್ನು ನೋಡಿದ ಆರ್ಯನಿಗೆ ಗಾಬರಿಯಾಗುತ್ತದೆ.

More from Filmibeat

English summary
Jothe Jotheyali Serial 10th May episode written update. Her is detials about Anu tells her father to give money and buy his shop back. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X