ಮನೆಗೆ ಬಂದ ಜೋಗ್ತವ್ವ ಅನು ಬಗ್ಗೆ ಪುಷ್ಪಾ ಬಳಿ ಹೇಳಿದ್ದೇನು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ಮನೆಗೆ ಬಂದಿದ್ದಾಳೆ. ಸಂಜು, ವಿಶ್ವಾಸ್ ದೇಸಾಯಿ ಎಂದು ತಿಳಿದು ಅನು ಅವನ ಪತ್ನಿ ಆರಾಧನಾಳನ್ನು ಕರೆಸಿದ್ದಾಳೆ. ಆದರೆ ಆರಾಧನಾ ಬಂದಿದ್ದಕ್ಕೆ ಸಂಜುಗೆ ಬೇಸರವಾಗಿದೆ.

ಆರಾಧನಾ, ಸಂಜುನನ್ನು ನೋಡಿ ತುಂಬಾ ಖುಷಿ ಪಡುತ್ತಾಳೆ. ಅನು, ಆರಾಧನಾಳಿಗೆ ಸಂಜುಗೆ ಅಪಘಾತವಾಗಿದ್ದ ವಿಚಾರವನ್ನೂ ಹೇಳಿರುತ್ತಾಳೆ. ಹಾಗಾಗಿ ಸಂಜುಗೆ ಏನೂ ನೆನಪಿಲ್ಲ ಎಂಬುದು ತಿಳಿದಿರುತ್ತದೆ.

ಸಂಜು, ಆರಾಧನಾಳನ್ನು ಅವಾಯ್ಡ್ ಮಾಡುವ ಸಲುವಾಗಿ ರಾತ್ರಿಯೆಲ್ಲಾ ರೀಡಿಂಗ್ ರೂಮ್‌ನಲ್ಲಿ ಮಲಗಿರುತ್ತಾನೆ. ಇದನ್ನು ಗಮನಿಸಿದ ಅನುಗೆ ಅನುಮಾನ ಶುರುವಾಗುತ್ತದೆ. ಆರಾಧನಾಳಿಗೂ ಸಂಜು ನಡವಳಿಕೆ ಬೇಸರ ತರುತ್ತದೆ.

ಹೆದರಿ ಕುಳಿತ ಪ್ರಿಯದರ್ಶಿನಿ

ಹೆದರಿ ಕುಳಿತ ಪ್ರಿಯದರ್ಶಿನಿ

ಊರಿಂದ ಸತ್ಯ ಹೇಳಬೇಕೆಂದು ಬಂದ ಪ್ರಿಯದರ್ಶಿನಿಗೆ ದೊಡ್ಡ ಶಾಕ್ ಕಾದಿತ್ತು. ಮನೆಗೆ ಆರಾಧನಾ ಬಂದಿರುವುದನ್ನು ತಿಳಿದ ಪ್ರಿಯದರ್ಶಿನಿ ರೂಮಿಗೆ ಹೋಗುತ್ತಾಳೆ. ಆರಾಧನಾಗೆ ಹಾಗೂ ಆರ್ಯನ ಮನೆಯವರಿಗೆ ಮುಖ ತೋರಿಸಲಾಗದೇ ಒಳಗೊಳಗೆ ಒದ್ದಾಡುತ್ತಿರುತ್ತಾಳೆ. ಪ್ರಭು ದೇಸಾಯಿ ಮನೆಯವರೆಲ್ಲರನ್ನೂ ಆಕೆಗೆ ಪ್ರಯಾಣ ಮಾಡಿರುವುದಕ್ಕೆ ಸುಸ್ತಾಗಿದೆ ಎಂದು ಹೇಳಿ ಸಂಬಾಳಿಸುತ್ತಿರುತ್ತಾನೆ. ಇನ್ನು ಆರಾಧನಾ ಅತ್ತೆ ತನ್ನನ್ನು ಮಾತನಾಡಿಸಿಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾಳೆ. ಪ್ರಿಯದರ್ಶಿನಿಗೆ ಟೀ ಕೊಡಲು ಹೋದರೆ ಬಾಗಿಲು ತೆಗೆಯದೇ ಅಳುತ್ತಿರುತ್ತಾಳೆ. ಇದರಿಂದ ಅನು ಗಾಬರಿಯಾಗುತ್ತಾಳೆ. ಇದೇ ವೇಳೆಗೆ ಪ್ರಭು ದೇಸಾಯಿ ಬಂದು ಆಕೆಗೆ ಸಂಜು ಹೊರಟು ಹೋಗುತ್ತಾನೆ ಎಂದು ನೊಂದುಕೊಂಡಿದ್ದಾಳೆ ಎಂದು ಹೇಳಿ ಪರಿಸ್ಥಿತಿಯನ್ನು ನಿಭಾಯಿಸುತ್ತಾನೆ.

ಅಮೇರಿಕಾಗೆ ಬರಲ್ಲ ಎಂದ ಸಂಜು

ಅಮೇರಿಕಾಗೆ ಬರಲ್ಲ ಎಂದ ಸಂಜು

ಸಂಜು ಆದಷ್ಟೂ ಆರಾಧನಾಳಿಂದ ದೂರ ಇರಲು ಪ್ರಯತ್ನಿಸುತ್ತಿದ್ದಾನೆ. ಆರಾಧನಾ ನಾವು ಅಮೆರಿಕಾಗೆ ಹೋಗೋಣ ಎಂದು ಹೇಳುತ್ತಾಳೆ. ಆದರೆ ಸಂಜು ಇಲ್ಲ ನಾನು ಈಗಲೇ ಬರೋದಿಲ್ಲ. ನನ್ನ ಟ್ರೀಟ್ ಮೆಂಟ್ ನಡೆಯುತ್ತಿದೆ. ಜೊತೆಗೆ ಆಫೀಸಿನಲ್ಲಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಬರೋದಿಲ್ಲ ಎನ್ನುತ್ತಾನೆ. ಈ ಮಾತನ್ನು ಕೇಳಿದ ಆರಾಧನಾ ಕೋಪ ಮಾಡಿಕೊಳ್ಳುತ್ತಾಳೆ. ಅಲ್ಲಿ ನನ್ನೊಬ್ಬಳನ್ನೆ ಬಿಟ್ಟು, ಆಫೀಸ್‌ನಲ್ಲಿ ಎಲ್ಲಾ ಹಾಗೆ ಬಿಟ್ಟು ಬಂದಾಗ ಅರ್ಧ ಅನ್ನಿಸಲಿಲ್ವಾ ಎಂದು ಜಗಳ ಮಾಡುತ್ತಾಳೆ. ಆದರೆ ಸಂಜು ಇದಕ್ಕೇನು ಮಾತನಾಡದೇ ಆಫೀಸಿಗೆ ಹೊರಟು ಬಿಡುತ್ತಾನೆ.

ಅನು ಮೇಲೆ ಆರಾಧನಾ ಬೇಸರ

ಅನು ಮೇಲೆ ಆರಾಧನಾ ಬೇಸರ

ಇತ್ತ ಅನು ಕೂಡ ಆರಾಧನಾಳಿಗೆ ನೀವಿಬ್ಬರೂ ಇನ್ನೂ ಸ್ವಲ್ಪ ದಿನ ಇಲ್ಲೇ ಇರಿ ಎಂದು ಹೇಳುತ್ತಾಳೆ. ಈ ಮಾತಿನಿಂದ ಆರಾಧನಾ ಬೇಸರದಲ್ಲಿ ಮಾತನಾಡುತ್ತಾಳೆ. ನಾನು ನಿಮ್ಮ ಮಾತನ್ನು ನಂಬಿಕೊಂಡು ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ನನ್ನ ಗಂಡನನ್ನು ನನ್ನ ಜೊತೆಗೆ ಕಳಿಸಿಕೊಡಿ ಎಂದು ಕೈ ಮುಗಿದು ಕೇಳುತ್ತಾಳೆ. ಆಗ ಅನು ನೀವು ಸ್ವಲ್ಪ ದಿನ ಇಲ್ಲೇ ಇರಿ. ಪ್ರಿಯದರ್ಶಿನಿ ಅವರು ನೀವು ಸಂಜುನ ಕರೆದುಕೊಂಡು ಹೋಗುತ್ತೀರಾ ಎಂದು ನೊಂದುಕೊಂಡಿದ್ದಾರೆ. ಸ್ವಲ್ಪ ದಿನ ಅವರಿಗೂ ಸಮಾಧಾನವಾಗುವವರೆಗೂ ನೀವು ಇಲ್ಲೇ ಇರುವುದು ಸೂಕ್ತ ಎಂದು ಹೇಳುತ್ತಾಳೆ.

ಜೋಗ್ತವ್ವನ ಮಾತಿಗೆ ಪುಷ್ಪಾ ಶಾಕ್

ಜೋಗ್ತವ್ವನ ಮಾತಿಗೆ ಪುಷ್ಪಾ ಶಾಕ್

ಇತ್ತ ಪುಷ್ಪಾ ಮನೆಗೆ ಜೋಗ್ತವ್ವ ಬಂದಿದ್ದಾಳೆ. ಜೋಗ್ತವ್ವ ಬಂದು, ನಿನ್ನ ಮಗಳಿಗೆ ಹೇಳು. ಅವಳ ಸೌಭಾಗ್ಯವನ್ನು ಕಳೆದುಕೊಳ್ಳಬೇಡ ಅಂತ. ಈಗ ಅವಳಿಗೆ ಮತ್ತೆ ರಾಜಯೋಗ ಬಂದಿದೆ. ಈಗ ಅವಳು ಕಣ್ಮುಚ್ಚಿ ಕುಳಿತರೆ, ಎಲ್ಲವನ್ನೂ ಕಳೆದುಕೊಳ್ಳುತ್ತಾಳೆ ಎಂದು ಹೇಳುತ್ತಾಳೆ. ಜೋಗ್ತವ್ವ ಮಾತುಗಳನ್ನು ಕೇಳಿದ ಪುಷ್ಪಾ ಶಾಕ್ ಆಗುತ್ತಾಳೆ. ಹಾಗಾದರೆ ಅನುಗೆ ಸಂಜು ಯಾರೆಂದು ಪ್ರಿಯದರ್ಶಿನಿ ಹೇಳೋದೇ ಇಲ್ವಾ..? ಸತ್ಯ ಮುಚ್ಚಿಟ್ಟು ಮುಂದೆ ಸಾಗುತ್ತಾರಾ..?

More from Filmibeat

English summary
jothe jotheyali Serial 10th november Episode Written Update. sanju avoids aradhana and refuses to go to foreign. Aradhana is worried about sanju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X