ಕೊನೆಗೂ ವಿಶ್ವಾಸ್ ಸತ್ತಿರುವ ವಿಚಾರವನ್ನು ತಿಳಿದುಕೊಂಡ ಝೇಂಡೇ ಮುಂದೇನು ಮಾಡಬಹುದು..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ಅನು ಮನೆಯಲ್ಲಿ ಬಟ್ಟೆಯನ್ನು ಬದಲಾಯಿಸಿಕೊಳ್ಳುತ್ತಾನೆ. ಆದರೆ ಸಂಜುಗೆ ಪಂಚೆಯನ್ನು ಮ್ಯಾನೇಜ್‌ ಮಾಡಲು ಬರುವುದಿಲ್ಲ. ಪಂಚೆಯಲ್ಲಿ ಓಡಾಡಲು ಒದ್ದಾಡುತ್ತಿರುತ್ತಾನೆ.

ಇದನ್ನು ಗಮನಿಸುವ ಅನು, ಸುಬ್ಬು ಹಾಗೂ ಪುಷ್ಪಾ ಮೂವರು ಕೂಡ ಆರ್ಯವರ್ಧನ್‌ನನ್ನು ನೆನಪು ಮಾಡಿಕೊಳ್ಳುತ್ತಾರೆ. ಯಾಕೆಂದರೆ ಆರ್ಯ ಕೂಡ ಪಂಚೆಯನ್ನು ಉಟ್ಟು ಹೀಗೆ ನಡೆದುಕೊಂಡಿರುತ್ತಾನೆ. ಇದರಿಂದ ಆರ್ಯನನ್ನ ನೆನೆದು ಎಲ್ಲರೂ ನೊಂದುಕೊಳ್ಳುತ್ತಾರೆ.

ಇನ್ನು ಬಟ್ಟೆಯನ್ನು ಒಗೆದುಕೊಡುತ್ತೀನಿ ಎಂದು ಪುಷ್ಪಾ ಹೇಳಿದರೆ ಸಂಜು ಕೇಳುವುದಿಲ್ಲ. ಕೊನೆಗೆ ಪುಷ್ಪಾ ಬಟ್ಟೆಯನ್ನು ಒಗೆದು ತಂದು ಕೊಟ್ಟ ಮೇಲೆ ಸಂಜು ಅದನ್ನು ಧರಿಸಿಕೊಂಡು ನಿಮಗೆಲ್ಲರಿಗೂ ತೊಂದರೆ ಕೊಟ್ಟೆ ಕ್ಷಮಿಸಿ ಎಂದು ಹೇಳಿ ಹೊರಡುತ್ತಾನೆ.

 ಸಂಜು ಹಿಂದೆ ಬಿದ್ದ ಝೇಂಡೇ

ಸಂಜು ಹಿಂದೆ ಬಿದ್ದ ಝೇಂಡೇ

ಇತ್ತ ಮೀರಾ, ಸಂಜು ಬಗ್ಗೆ ಕೆಲ ಮಾಹಿತಿಗಳನ್ನು ಕಲೆ ಹಾಕಿರುತ್ತಾಳೆ. ಸಂಜು ಓದಿದ ಕಾಲೇಜು. ಆತ ಓದುವಾಗ ಟಾಪರ್ ಆಗಿದ್ದ ಹಾಗೂ ಆಗಲೇ ಬಿಸಿನೆಸ್ ಬಗ್ಗೆ ತುಂಬಾ ಮಾಹಿತಿ ಹೊಂದಿದ್ದ. ನಂತರ ಮದುವೆಯಾಗಿ ಫಾರಿನ್‌ನಲ್ಲಿ ಸ್ವಂತ ಕಂಪನಿ ಆರಂಭಿಸಿ ಸಕ್ಸಸ್ ಆಗಿ ಕೊನೆಗೆ ಕೋವಿಡ್‌ನಿಂದ ಲಾಸ್ ಮಾಡಿಕೊಂಡ ವಿಚಾರ ಹಾಗೂ ಸೂಸೈಡ್ ಮಾಡಿಕೊಂಡ ವಿಚಾರವನ್ನೂ ಕಲೆ ಹಾಕಿರುತ್ತಾಳೆ. ಇದೆಲ್ಲವನ್ನೂ ಝೇಂಡೇಗೂ ಹೇಳುತ್ತಾಳೆ. ಝೇಂಡೇ ಇದಕ್ಕಿಂದಂತೆ ಆತ ಇಲ್ಲಿಗೆ ಯಾಕೆ ಬಂದಿದ್ದಾನೆ ಎಂಬ ವಿಚಾರವನ್ನು ತಿಳಿಯಬೇಕು. ಇದೆಲ್ಲಾ ಬೇಡ ಎಂದು ಹೇಳಿ ಝೇಂಡೇ ವಿಶ್ವಾಸ್ ಅಡ್ಮಿಟ್ ಆಗಿದ್ದ ಆಸ್ಪತ್ರೆಗೆ ಹೋಗುತ್ತಾನೆ. ಅಲ್ಲಿ ವಿಚಾರಿಸಿದ ಝೇಂಡೇಗೆ ವಿಶ್ವಾಸ್ ಸತ್ತಿರುವ ವಿಚಾರ ಗೊತ್ತಾಗುತ್ತದೆ. ಆದರೆ, ಆಸ್ಪತ್ರೆಯಲ್ಲಿ ಯಾವ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ ಎನ್ನುತ್ತಾರೆ.

 ಆರ್ಯ ಸರ್ ನೆನೆಪಾಗುತ್ತಾರೆ ಎಂದ ಅನು

ಆರ್ಯ ಸರ್ ನೆನೆಪಾಗುತ್ತಾರೆ ಎಂದ ಅನು

ಇನ್ನು ಅನು ಸಂಜು ಮನೆಯಿಂದ ಹೊರ ಹೋದ ಮೇಲೆ ಎದ್ದು ಕೂರುತ್ತಾಳೆ. ಯಾಕೆ ಹೀಗಂತೀಯಾ ಪಾಪ ಅವರು ಎಂದು ಪುಷ್ಪಾ ಹೇಳುತ್ತಾಳೆ. ಆಗ ಅನು ಇಲ್ಲ ಅಮ್ಮ ಅವರನ್ನ ನೋಡಿದರೆ ನನಗೆ ಆರ್ಯ ಸರ್ ನೆನಪಾಗುತ್ತಾರೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಆರ್ಯ ಸರ್ ಕೂಡ ಹೀಗೆ ಅತಿಯಾಗಿ ಕಾಳಜಿ ತೋರಿಸುತ್ತಿದ್ದರು. ನಾನು ಕಾರಿನಲ್ಲಿ ಕೂರಲು ಕೂಡ ಆರ್ ಸರ್ ಡೋರ್ ಓಪನ್ ಮಾಡುತ್ತಿದ್ದರು. ಅದೇ ರೀತಿ ಇವರು ಮಾಡುತ್ತಾರೆ. ನನಗೆ ಆಗ ಎಷ್ಟು ಬೇಜಾರು ಆಗುತ್ತೆ ಗೊತ್ತಾ ಎಂದು ಅನು ಹೇಳಿದ್ದನ್ನು ಕೇಳಿ ಪುಷ್ಪಾ ಬೇಸರ ಮಾಡಿಕೊಳ್ಳುತ್ತಾಳೆ.

 ಸಂಜುನ ಆಫೀಸಿಗೆ ಕಳಿಸಲು ಮುಂದಾದ ಶಾರದಾ

ಸಂಜುನ ಆಫೀಸಿಗೆ ಕಳಿಸಲು ಮುಂದಾದ ಶಾರದಾ

ಪ್ರಭು ದೇಸಾಯಿ ನಾನು ಊರಿಗೆ ಹೋಗಬೇಕು ಎಂದು ಶಾರದಾ ಬಳಿ ಹೇಳುತ್ತಾನೆ. ಆಗ ಶಾರದಾ ಅನು ಮನೆಯಲ್ಲಿ ಶಾಸ್ತ್ರವೊಂದು ನಡೆಯುವುದಿದೆ. ಅದು ನಡೆದ ಮೇಲೆ ಹೋಗಿ ಎಂದು ಹೇಳುತ್ತಾಳೆ. ಆಗ ಪ್ರಭು ದೇಸಾಯಿ ಅವರು ನನ್ನ ಮಗ ಮನೆಯಲ್ಲಿ ಸುಮ್ಮನೆ ಕೂತು ಗೋಡೆಯನ್ನು ನೋಡುತ್ತಿರುತ್ತಾನೆ. ನಿಮ್ಮ ಆಫೀಸಿನಲ್ಲಿ ಅವನಿಗೆ ಕೆಲಸವೇನಾದರೂ ಕೊಟ್ಟರೆ, ಸ್ವಲ್ಪ ಅವನಿಗೂ ಒಳ್ಳೆಯದು ಎಂದು ಹೇಳುತ್ತಾನೆ. ಅದಕ್ಕೆ ಶಾರದ ಸರಿ ಎಂದು ಹೇಳುತ್ತಾಳೆ.

 ಸಂಜುಗೆ ಬಂದ ಆ ಫೋನ್ ಕರೆ ಯಾವುದು..?

ಸಂಜುಗೆ ಬಂದ ಆ ಫೋನ್ ಕರೆ ಯಾವುದು..?

ಶಾರದಾ ಪುಷ್ಪಾಳಿಗೆ ಫೋನ್ ಮಾಡಿ ಅನುಗೆ ಶಾಸ್ತ್ರ ಬೇಗ ಮಾಡಬೇಕು ಎಂದು ಹೇಳುತ್ತಾಳೆ. ಆಗ ಪುಷ್ಪಾ ಇಷ್ಟು ಬೇಗನಾ ಎಂದು ಕೇಳಿದ್ದಕ್ಕೆ ಜೋಗ್ತವ್ವನೇ ಹೇಳಿದ್ದಾಳೆ. ಶಾಸ್ತ್ರಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಹೇಳುತ್ತಾಳೆ. ಇನ್ನು ಸಂಜುಗೆ ಆರಾಧನಾ ಫೋನ್ ಮಾಡುತ್ತಾಳೆ. ಸಂಜು ಯಾರಿದು ಗೊತ್ತಿಲ್ಲ ಎಂದು ಫೋನ್ ರಿಸೀವ್ ಮಾಡಿದರೆ, ಅತ್ತಲಿಂದ ಆರಾಧನ ಮಾತನಾಡುತ್ತಾಳೆ. ಅದೇನು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

More from Filmibeat

English summary
Jothe Jotheyali Serial 11th october Episode Written Update. Jhende started to investigate about sanju background. When he goes to hospital he finds that sanju is dead.ಝೇಂಡೇ, ಸಂಜು ಹಿಂದೆ ಬಿದ್ದಿದ್ದು, ವಿಶ್ವಾಸ್ ದಾಖಲಾಗಿದ್ದ ಆಸ್ಪತ್ರೆಗೆ ಹೋಗಿ ವಿಚಾರಿಸಿದ್ದಾನೆ. ಆಗ ವಿಶ್ವಾಸ್ ಸತ್ತಿರುವ ವಿಚಾರ ತಿಳಿದು ಝೇಂಡೇ ಶಾಕ್ ಆಗಿದ್ದಾನೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X