Jothe Jotheyali: ಅನು ಸಿರಿಮನೆ ಬರೆದ ಆ ಪತ್ರ ತಲುಪಿದ್ದು ಯಾರಿಗೆ..?
ಅನು ಹಾಗೂ ಆರ್ಯವರ್ಧನ್ ಮತ್ತೆ ಒಂದಾಗುವ ಕಾಲ ಬಂದಿದೆ. ಶಾರದಾ ದೇವಿ, ಮಾನ್ಸಿ, ಮೀರಾ ಎಲ್ಲರೂ ಸೇರಿಕೊಂಡು ಅನು ಮತ್ತು ಆರ್ಯನನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅನು ಮತ್ತು ಆರ್ಯನಿಗೂ ಕೂಡ ಒಬ್ಬರನ್ನೊಬ್ಬರು ಬಿಟ್ಟಿರುವುದು ಬಹಳ ಕಷ್ಟವಾಗುತ್ತಿದೆ. ಹಾಗಾಗಿ ಈಗ ಇಬ್ಬರೂ ಕೂಡ ಭೇಟಿ ಮಾಡಬೇಕು ಎಂದು ಒದ್ದಾಡುತ್ತಿದ್ದಾರೆ.
ಇದೆಲ್ಲದರ ನಡುವೆಯೇ, ಝೇಂಡೇ ಆದಷ್ಟು ಬೇಗ ಅನು ಮತ್ತು ಆರ್ಯನನ್ನು ದೂರ ಮಾಡಬೇಕು ಎಂದು ನಿರ್ಧಾರಿಸಿದ್ದಾನೆ. ಆದರೆ ಯಾರ ನಿರೀಕ್ಷೆ ಹುಸಿಯಾಗುತ್ತದೋ ಗೊತ್ತಿಲ್ಲ. ಅನುಗಾಗಿ ಆರ್ಯ ಕಾಯುತ್ತಾ ಪಾರ್ಕ್‌ನಲ್ಲಿ ನಿಂತಿರುತ್ತಾನೆ. ಇದೇ ವೇಳೆಗೆ ಝೇಂಡೇ ಬರುತ್ತಾನೆ. ಝೇಂಡೇ ಅನ್ನು ನೋಡಿದ ಆರ್ಯ ಗಾಬರಿಯಾಗುತ್ತಾನೆ. ಏನು ಮಾಡುವುದು ಎಂದು ತಿಳಿಯದೇ ಮನದಲ್ಲೇ ಒದ್ದಾಡುತ್ತಿರುತ್ತಾನೆ. ಝೇಂಡೇ ಕೂಲ್ ಆಗಿ ಮಾತನಾಡಿಸುತ್ತಾನೆ.

ನಿನಗೆ ಅನು ಇಲ್ಲದೇ ಇರಲು ಕಷ್ಟವಾಗುತ್ತಿದೆಯಾ. ಒಬ್ಬನೆ ಯಾಕೆ ಹೀಗೆ ಅಲೆದಾಡುತ್ತೀಯಾ. ಅನು ನೆನಪಲ್ಲಿ ಇದ್ದಷ್ಟೂ ನಿನಗೆ ಸಮಸ್ಯೆ. ಅದಕ್ಕೆ ಅವಳಿಗೆ ಡಿವೋರ್ಸ್ ಕೊಟ್ಟುಬಿಡು ಎಂದು ಬಲವಂತ ಮಾಡುತ್ತಾನೆ. ಈ ಮಾತುಗಳನ್ನು ಕೇಳುವ ಆರ್ಯನಿಗೆ ಕೋಪ ಬರುತ್ತದೆ. ನನ್ನ ಯಾಕೆ ಫಾಲೋ ಮಾಡುತ್ತಿದ್ದೀಯಾ..? ನಿನಗೆ ನನ್ನ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ ಅಲ್ವಾ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೂ ಝೇಂಡೇ ಸಮಾಧಾನವಾಗಿ ಉತ್ತರಿಸಿ ಮನೆಗೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗುತ್ತಾನೆ.
ಅಂಗಡಿಯನ್ನು ವಾಪಸ್ ಪಡೆದ ಸುಬ್ಬು
ಇನ್ನು ಸುಬ್ಬು ತನ್ನ ಅಂಗಡಿಯನ್ನು ಬಿಡಿಸಿಕೊಳ್ಳಲು ತಯಾರಾಗುತ್ತಾನೆ. ಈ ವೇಳೆಗೆ ಸೀರೆ ವಿಚಾರವಾಗಿ ಮನೆಯಲ್ಲಿ ಕೆಲ ಸಮಯ ಚರ್ಚೆ ನಡೆಯುತ್ತದೆ. ಬಳಿಕ ಪುಷ್ಪಾ ಹಾಗೂ ಸುಬ್ಬು ಬಹಳ ಖುಷಿಯಿಂದ ತಮ್ಮ ಸೀರೆ ಅಂಗಡಿಯನ್ನು ಖರೀದಿಸಲು ಹೊರಡುತ್ತಾನೆ. ಸುಬ್ಬು ಮಾಡಿದ್ದ ಸಾಲದ ಹಣವನ್ನು ಹಿಂದಿರುಗಿಸಿ ತನ್ನ ಅಂಗಡಿಯ ಕೀ ಗಳನ್ನು ಪಡೆಯುತ್ತಾನೆ. ಆಗ ಕೆಲ ಸಮಯ ಸುಬ್ಬು ಮತ್ತು ಪುಷ್ಪಾ ಇಬ್ಬರೂ ಎಮೋಷನಲ್ ಆಗುತ್ತಾರೆ.
ಪಾರ್ಟಿಗೆ ಸಿದ್ಧತೆ ಮಾಡಿಕೊಂಡ ಮೀರಾ
ಇತ್ತ ಮೀರಾ ಪಾರ್ಟಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿರುತ್ತಾಳೆ. ಆರ್ಯ ಸರ್ ಮೀರಾಳಿಗೆ ಫೋನ್ ಮಾಡಿ ಝೇಂಡೇ ತನ್ನನ್ನು ಹಿಡಿದಿಟ್ಟಿದ್ದಾನೆ. ಅನುಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ತನ್ನ ಆತಂಕವನ್ನು ಹೇಳಿಕೊಳ್ಳುತ್ತಾನೆ. ಆದರೆ, ಮೀರಾ ಏನೂ ಸಮಸ್ಯೆ ಆಗುವುದಿಲ್ಲ. ನಿಮ್ಮನ್ನ ಮತ್ತು ಅನುಳನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಈ ಮಾತಿನಿಂದ ಆರ್ಯನಿಗೆ ಸಮಾಧಾನವಾಗುತ್ತದೆ. ಇನ್ನು ಶಾರದಾ ಹಾಗೂ ಮಾನ್ಸಿ ಕೂಡ ಪಾರ್ಟಿಯಲ್ಲಿ ಅನು ಮತ್ತು ಆರ್ಯ ಒಂದಾಗುತ್ತಾರೆ ಎಂಬ ಖುಷಿಯಲ್ಲಿದ್ದಾರೆ.

ಅನು ಕೊಟ್ಟ ಪತ್ರದಲ್ಲಿ ಏನಿತ್ತು
ಆರ್ಯ ಹಾಗೂ ಅನು ಇಬ್ಬರೂ ಒಬ್ಬರನ್ನೊಬ್ಬರು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಝೇಂಡೇ ಕೈಯಲ್ಲಿ ಆರ್ಯ ಸರ್ ಸಿಕ್ಕಿ ಬಿದ್ದಿದ್ದಾರೆ ಎಂಬುದನ್ನು ತಿಳಿದ ಅನು ಬೇಕಂತಲೇ ಒಂದು ಪತ್ರವನ್ನು ಬರೆದು ಅದನ್ನು ಆರ್ಯನಿಗೆ ತಲುಪಿಸಲು ಹೇಳುತ್ತಾಳೆ. ಆದರೆ ಆ ಪತ್ರವನ್ನು ಝೇಂಡೇ ಪಡೆಯುತ್ತಾನೆ. ಈ ವಿಚಾರ ತಿಳಿದ ಅನು ಖುಷಿ ಪಡುತ್ತಾಳೆ. ಈ ಪತ್ರ ಝೇಂಡೇ ಓದಬೇಕು ಎಂದೇ ನಾನು ಕಳಿಸಿದ್ದು, ಇದರಿಂದ ನನಗೆ ಒಳ್ಳೆಯದೇ ಆಗುತ್ತೆ ಎಂದು ಅಂದು ಕೊಳ್ಳುತ್ತಾಳೆ. ಝೇಂಡೇ ಈ ಪತ್ರವನ್ನು ತಾನೇ ಓದಬೇಕು ಎಂದು ತೀರ್ಮಾನಿಸಿದ್ದಾನೆ. ಆ ಪತ್ರದಲ್ಲಿ ಏನಿದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಮೂಡಿದೆ.


Click it and Unblock the Notifications











