ಅನುಳನ್ನು ನಾನೇ ಮದುವೆಯಾಗಬೇಕಿತ್ತು ಎಂದು ಸಂಪತ್ ಹೇಳಿದ್ಯಾಕೆ..?
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಗೆ ಶಾಸ್ತ್ರ ಮಾಡುವ ಸಲುವಾಗಿ ಪುಷ್ಪಾ ಅನುಳನ್ನು ಸಿಂಗಾರ ಮಾಡುತ್ತಿರುತ್ತಾಳೆ. ಅನು ಬೇಸರದಲ್ಲೇ ಸುಮ್ಮನೆ ಕುಳಿತಿರುತ್ತಾಳೆ. ಆಗ ಪುಷ್ಪಾ ಕುಂಕುಮ ಹಚ್ಚಲು ಹೋಗಿ ಸುಮ್ಮನಾಗುತ್ತಾಳೆ.
ಇದನ್ನು ಗಮನಿಸುವ ಅನು, ಯಾಕಮ್ಮ ಸುಮ್ಮನಾದೆ ನನಗೆ ಕುಂಕುಮ ಇಡಿ. ನನ್ನ ಆರ್ಯ ಸರ್ ಸತ್ತಿಲ್ಲ. ಅವರು ಬದುಕಿದ್ದಾರೆ. ನಾನು ಖುಷಿಯಿಂದ ಕುಂಕುಮವನ್ನು ಅವರ ಹೆಸರಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳುತ್ತಾಳೆ.
ಅನುಗೆ ಶಾಸ್ತ್ರ ಮಾಡುವ ಸಲುವಾಗಿ ವರ್ಧನ್ ಮನೆಯವರು ವಠಾರಕ್ಕೆ ಹೊರಟಿದ್ದಾರೆ. ಆದರೆ ಸಂಜು ತನಗೆ ತಲೆನೋವು ಎಂದು ಹೇಳಿ ಮನೆಯಲ್ಲೇ ಉಳಿದುಕೊಳ್ಳುತ್ತಾನೆ. ಇದರಿಂದ ಮಾನ್ಸಿ ಮನದಲ್ಲೇ ಅನುಮಾನವನ್ನು ವ್ಯಕ್ತಪಡಿಸುತ್ತಾಳೆ.

ಆರಾಧನಾ ಫೊನ್ ರಿಸೀವ್ ಮಾಡಿದ ಸಂಜು
ಸಂಜುಗೆ ಅನು ಮೇಲೆ ತನಗೆ ಗೊತ್ತಿಲ್ಲದ ಹಾಗೆ ಯಾವುದೋ ಸೆಳೆತವಿರುತ್ತದೆ. ಈ ಬಗ್ಗೆ ಮನೆಯಲ್ಲಿ ಒಬ್ಬನೇ ಮಾತನಾಡುವ ಸಂಜು, ನನಗೆ ಯಾಕೆ ಅನು ಅವರು ಎಂದರೆ ಹೀಗಾಗುತ್ತದೆ. ಅವರು ಈಗಾಗಲೇ ಮದುವೆಯಾಗಿದ್ದಾರೆ. ಗರ್ಭಿಣಿಯಾಗಿದ್ದಾರೆ. ನಾನು ಆದಷ್ಟು ಅವರಿಂದ ದೂರವಿರಬೇಕು ಎಂದು ಹೇಳಿಕೊಳ್ಳುತ್ತಿರುತ್ತಾನೆ. ಅಷ್ಟರೊಳಗೆ ಹೊಸಮನಿ ಅಜ್ಜಯ್ಯ ಫೋನ್ ತೆಗೆದುಕೊಂಡು ಸಂಜು ಬಳಿ ಬಂದು ನಿಮಗೆ ಫೋನ್ ಬರುತ್ತಿದೆ. ಆಗಲಿಂದ ನಿಮ್ಮ ಹೆಂಡತಿ ಆರಾಧನಾ ಅವರು ತುಂಬಾ ಸಲ ಫೋನ್ ಮಾಡಿದ್ದಾರೆ ಎಂದು ಹೇಳುತ್ತಾರೆ. ಸಂಜು ನನ್ನ ಹೆಂಡತಿನಾ ಎಂದು ನಂಬರ್ ನೋಡಿ ಫೋನ್ ರಿಸೀವ್ ಮಾಡುತ್ತಾರೆ. ಅತ್ತಲಿಂದ ಆರಾಧನಾ ಅವರು ಮಾತನಾಡಿ, ನಮ್ಮ ಪ್ರಾಬ್ಲಮ್ ಗಳೆಲ್ಲವೂ ಸಾಲ್ವ್ ಆಗಿದೆ. ಇನ್ನೇನು ವರಿ ಇಲ್ಲ ಎಂದು ಹೇಳುತ್ತಾರೆ. ಆದರೆ ಸಂಜು ಫೋನ್ ಅನ್ನು ಕಟ್ ಮಾಡಿ ಬಿಡುತ್ತಾನೆ.

ಮಾನ್ಸಿ ಮಂದಾಗೆ ಕರೆ ಮಾಡಿ ಕೇಳಿದ್ದೇನು..?
ಮಾನ್ಸಿ ವಠಾರಕ್ಕೆ ಹೋದ ಮೇಲೆ ಮಂದಾಗೆ ಕರೆ ಮಾಡಿ ಸಂಜು ಏನು ಮಾಡುತ್ತಿದ್ದಾನೆ ಎಂದು ವಿಚಾರಿಸುತ್ತಾಳೆ. ಆಗ ಮಂದಾ ಆರಾಧನಾ ಅವರ ಫೊನ್ ಬಂದಿತ್ತು. ಅವರ ಜೊತೆಗೆ ಮಾತನಾಡುತ್ತಿದ್ದರು ಎಂದು ಹೇಳುತ್ತಾಳೆ. ಆಗ ಮಾನ್ಸಿ ಇದೇನು ಹೆಂಡತಿ ಬಗ್ಗೆ ಕೇಳಿದ್ದಕ್ಕೆ ತನಗೇನು ಗೊತ್ತಿಲ್ಲ ಎಂಬಂತೆ ನಟಿಸಿದ ಸಂಜು, ನಾವ್ಯಾರು ಮನೆಯಲ್ಲಿ ಇಲ್ಲ ಅಂತ ಆರಾಧನಾ ಅವರ ಬಳಿ ಮಾತನಾಡಿದ್ದು ಹೇಗೆ ಎಂದು ಹರ್ಷನ ಬಳಿ ಮಾತನಾಡುತ್ತಾಳೆ.

ಅನು ಖುಷಿಯಾಗಿಲ್ಲ ಪಾಪ ಎಂದ ಸಂಪತ್
ಇತ್ತ ಸಂಪತ್ ಖುಷಿಯಿಂದ ಅನು ಮನೆಯವರನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾನೆ. ತುಂಬಾನೆ ಖುಷಿಯಲ್ಲಿರುತ್ತಾನೆ. ರಮ್ಯ ಎಲ್ಲರೂ ಅನು ಪರಿಸ್ಥಿತಿ ಹೀಗಾಯ್ತಲ್ಲ ಅಂತ ಬೇಸರದಲ್ಲಿದ್ದರೆ, ಸಂಪತ್ ಖುಷಿಯಾಗಿರುವುದನ್ನು ನೋಡಿ ಅವನಿಗೆ ಬುದ್ದಿ ಹೇಳುತ್ತಾಳೆ. ಆದರೆ ಸಂಪತ್ ಅವಳು ಈ ವಠಾರದಲ್ಲಿದ್ದಾಗಲೇ ಖುಷಿಯಾಗಿದ್ದಳು. ಅವಳು ನನ್ನನ್ನು ಮದುವೆಯಾಗಿದ್ದರೆ ಚೆನ್ನಾಗಿರುತ್ತಿತ್ತು. ನಾನು ಅವಳನ್ನು ತುಂಬಾ ಖುಷಿಯಾಗಿ ನೋಡಿಕೊಳ್ಳುತ್ತಿದ್ದೆ ಎಂದು ಮಾತನಾಡುತ್ತಾನೆ. ರಮ್ಯ ಸಂಪತ್ ನನ್ನು ತಡೆಯುತ್ತಾಳೆ. ಹಾಗೆಲ್ಲಾ ಮಾತನಾಡಬೇಡ ಎಂದು ಹೇಳುತ್ತಾಳೆ. ಅಷ್ಟರಲ್ಲಿ ವರ್ಧನ್ ಮನೆಯವರು ವಠಾರಕ್ಕೆ ಬರುತ್ತಾರೆ.

ಸಂಜು ಯಾಕೆ ವಠಾರಕ್ಕೆ ಬಂದ..?
ಇನ್ನು ವಠಾರದಲ್ಲಿ ಶಾಸ್ತ್ರ ಮಾಡುವಾಗ ಅನುಗೆ ಅರಿಶಿಣ ಕುಂಕುಮ ಇಡಬೇಕಾ ಎಂದು ಪ್ರಶ್ನೆ ಏಳುತ್ತದೆ. ಆಗ ಪ್ರಿಯದರ್ಶಿನಿ, ಹಾಗ್ಯಾಕೆ ಹೇಳುತ್ತೀರಾ ನನ್ನ ಮಗ ಸಿಗೋದಕ್ಕೆ ನಾನು 40 ವರ್ಷ ಕಾಯಬೇಕಾಯ್ತು. ಆರ್ಯ ಎಲ್ಲೂ ಹೋಗಿಲ್ಲ ಬಂದೇ ಬರುತ್ತಾನೆ. ಖುಷಿಯಿಂದ ಅನು ಅರಿಶಿಣ ಕುಂಕುಮ ಇಟ್ಟುಕೊಳ್ಳಬಹುದು ಎನ್ನುತ್ತಾಳೆ. ಅದೇ ಸಮಯಕ್ಕೆ ಸಂಜು ಅಲ್ಲಿಗೆ ಬರುತ್ತಾನೆ. ಇದರಿಂದ ಅನು ಏನ್ ಅಂದುಕೊಳ್ಳುತ್ತಾಳೋ..? ಇಲ್ಲ ಮಾನ್ಸಿ ಜಗಳವಾಡುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











