Jothe Jotheyali: ಅನುಗೆ ಆಕ್ಸಿಡೆಂಟ್ ಆಗಿದ್ದು, ಇದಕ್ಕೆ ಸಂಜೀವಿನಿನೇ ಕಾರಣಾನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜೀವಿನಿ ಭಾವನಾಳನ್ನು ಪದೇ ಪದೇ ಹರ್ಷನ ಬಗ್ಗೆ ಕಾಳಜಿ ವಹಿಸುವಂತೆ ಹೇಳುತ್ತಿರುತ್ತಾಳೆ. ಭಾವನಾಳಿಗೆ ಇದು ಇಷ್ಟವಿಲ್ಲದಿದ್ದರೂ ಕೂಡ ಹರ್ಷನ ಮೇಲಿನ ಪ್ರೀತಿಗಾಗಿ ಮಾಡುತ್ತಿರುತ್ತಾಳೆ. ಇನ್ನು ಸಂಜೀವಿನಿ ಹಾಗೂ ಝೇಂಡೇ ಮಧ್ಯರಾತ್ರಿಯಲ್ಲಿ ಯಾವುದೋ ವಿಚಾರವಾಗಿ ಭೇಟಿಯಾಗಿ ಮಾತನಾಡುತ್ತಿರುತ್ತಾರೆ. ಇದನ್ನು ವೇಷ ಮರೆಸಿಕೊಂಡಿರುವ ಮಾನ್ಸಿ ನೋಡಿ ಶಾಕ್ ಆಗುತ್ತಾಳೆ.
ಮಾನ್ಸಿಗೆ ಸಂಜೀವಿನಿ ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಈ ಮನೆಗೆ ಬಂದಿದ್ದಾಳೆ ಎಂಬುದು ಕನ್ಫರ್ಮ್ ಆಗಿದೆ. ಹೀಗಾಗಿ ಮೀರಾಳನ್ನುಭೇಟಿ ಮಾಡಲು ಮುಂದಾಗಿದ್ದಾಳೆ. ಮೀರಾಳಿಗೆ ಮಾನ್ಸಿ ಅಪರೂಪಕ್ಕೆ ಫೋನ್ ಮಾಡಿ ಮೀಟ್ ಮಾಡಲು ಬಯಸಿರುವುದು ಶಾಕ್ ಆಗಿದೆ. ಆದರೂ ಮೀರಾಳನ್ನು ಭೇಟಿ ಮಾಡಿ ಒಪ್ಪಿಕೊಂಡಿದ್ದಾಳೆ. ಇಬ್ಬರೂ ಕೂಡ ಭೇಟಿ ಕೂಡ ಮಾಡಿದ್ದಾರೆ.

ಈ ವೇಳೆ ಮಾನ್ಸಿ ಮನೆಯಲ್ಲಿ ಬೇಡದವರೆಲ್ಲಾ ಬಂದಿದ್ದಾರೆ. ಇವರೆಲ್ಲಾ ಸೇರಿಕೊಂಡು ಏನು ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅನು ಮನೆಯಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಾಳೆ. ಹಾಗಾಗಿ ಮೀರಾಳಿಗೆ ಏನಾದರೂ ಮಾಡಿ ಅನುಳನ್ನು ವಾಪಸ್ ಕರೆಸಿಕೋ. ಆದರೆ, ಆರ್ಯ ಭಾವ ಬರಬಾರದು. ಈ ಸಂದರ್ಭದಲ್ಲಿ ಅನು ಇರಬೇಕು ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಮೀರಾ ಕೂಡ ನನಗೂ ಈ ಕಂಪನಿ ಮರ್ಜಿಂಗ್ ಒಪ್ಪಂದ ಇಷ್ಟವಿಲ್ಲ. ಆದರೆ, ಬೇರೆ ದಾರಿ ಇಲ್ಲ. ಆರ್ಯ ಸರ್ ಹೇಳಿದ ಹಾಗೆ ನಡೆಯುತ್ತಿದೆ ಎಂದು ಹೇಳುತ್ತಾಳೆ.
ಇತ್ತ ಶಾರದಾ ದೇವಿ ಮನೆಯಲ್ಲಿ ಮಕ್ಕಳು ಇರಬೇಕು. ಬಿದ್ದು ಎಷ್ಟು ದಿನ ಆಯ್ತು. ನನ್ನ ಬಗ್ಗೆ ವಿಚಾರಿಸಿಕೊಳ್ಳುವವರೂ ಯಾರೂ ಇಲ್ಲ. ಅದೇ ಮಕ್ಕಳು ಮನೆಯಲ್ಲಿ ಇದ್ದಿದ್ದರೆ, ಸ್ಕ್ಯಾನಿಂಗ್, ಎಕ್ಸರೇ ಅಂತ ಟ್ರೀಟ್ ಮೆಂಟ್ ಕೊಡಿಸುತ್ತಿದ್ದರು. ಅನು ಇದ್ದಿದ್ದರೆ, ಸದಾ ನನ್ನ ಹಿಂದೆಯೇ ಇರುತ್ತಿದ್ದಳು. ಮಾನ್ಸಿ ಅಂತೂ ಮಾಮ್ ಇನ್ ಲಾ ಅಂತ ಏನಾದರೂ ಒಂದು ಹೇಳುತ್ತಿದ್ದಳು ಎಂದು ಬೇಸರ ಮಾಡಿಕೊಂಡಿರುತ್ತಾಳೆ. ಇದೇ ವೇಳೆಗೆ ಮಾನ್ಸಿ ಮನೆಯಲ್ಲಿ ಶಾರದಾ ದೇವಿಗೆ ಊಟ ಕೊಡಲು ಹೋಗುತ್ತಾಳೆ. ಬಾಯಿ ತಪ್ಪಿ ಮಾಮ್ ಇನ್ ಲಾ ಎಂದು ಕರೆಯುತ್ತಾಳೆ. ಆಗ ಮಾನ್ಸಿ ಅಲ್ಲಿಂದ ದೂರ ಹೋಗುತ್ತಾಳೆ.

ಆರಾಧನಾ ಮನೆಗೆ ಬಂದು ಸಂಜೀವಿನಿ ಬಳಿ ಅನು ಮನೆಗೆ ಬರೋದಿಲ್ಲ ಎಂದು ಹೇಳಿದೆ. ಅನು ಅಮೆರಿಕಾದಿಂದ ವಾಪಸ್ ಬಂದಾಯಿತು ಎಂದು ಹೇಳುತ್ತಾಳೆ. ಇದೇ ವೇಳೆಗೆ ಶಾರದಾ ಬರುತ್ತಾಳೆ. ಆಗ ಮಾನ್ಸಿ ಸಂಜೀವಿನಿ ಮತ್ತು ಆರಾಧನಾ ಮಾತನಾಡಿದ್ದನ್ನು ಹೇಳುತ್ತಾಳೆ. ಇದೇ ವೇಳೆಗೆ ಮನೆಯಲ್ಲಿ ಹರ್ಷ ಇರುವುದಿಲ್ಲ. ಹರ್ಷ ಅನುಳನ್ನು ಏರ್ ಪೋರ್ಟ್‌ನಿಂದ ಪಿಕ್ ಮಾಡಲು ಹೋಗಿರುತ್ತಾನೆ.
ಅನು ಮತ್ತು ಹರ್ಷ ವಾಪಸ್ ಬರುತ್ತಾ, ಈ ಮರ್ಜಿಂಗ್‌ನಲ್ಲಿ ಸಮಸ್ಯೆ ಇದೆ ಬಾವ. ಇದರಿಂದ ನಮ್ಮ ಕಂಪನಿಗೆ ಸಮಸ್ಯೆ ಆಗುತ್ತದೆ. ಇದರ ಬಗ್ಗೆ ಬಹಳಷ್ಟು ಡೌಟ್ ಬಂತು. ಹಾಗಾಗಿ ವಾಪಸ್ ಬರಬೇಕಾಯ್ತು ಎಂದು ಹೇಳುತ್ತಾಳೆ. ದಾರಿ ಮಧ್ಯೆ ಆಕ್ಸಿಡೆಂಟ್ ಆಗುತ್ತದೆ. ಅಪಘಾತದಲ್ಲಿ ಅನುಗೆ ಜೋರಾಗಿ ಏಟು ಬೀಳುತ್ತದೆ. ಅನುಳನ್ನು ಹರ್ಷ ಆಸ್ಪತ್ರೆಗೆ ದಾಖಲಿಸುತ್ತಾನೆ. ಮೀರಾಗೆ ಆಸ್ಪತ್ರೆಗೆ ಬರಲು ಹೇಳುತ್ತಾನೆ.

ಮೀರಾ ಈ ವಿಚಾರವನ್ನು ಮನೆಗೆ ಫೋನ್ ಮಾಡಿ ಹೇಳುತ್ತಾಳೆ. ಗೀತಾ ಮನೆಯವರಿಗೆ ಬಂದು ಹರ್ಷ ಸರ್ ಹಾಗೂ ಅನುಗೆ ಆಕ್ಸಿಡೆಂಟ್ ಆಗಿದೆ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಕೂಡಲೇ ಮಾನ್ಸಿ ಮಾಸ್ಕ್ ಹಾಗೂ ಕನ್ನಡಕ ತೆಗೆದು ಓಡುತ್ತಾಳೆ. ಮಾಲಿನಿ ವೇಷದಲ್ಲಿ ಮಾನ್ಸಿ ಇದ್ದಳು ಎಂಬುದನ್ನು ತಿಳಿದ ಮನೆಯವರು ಶಾಕ್ ಆಗುತ್ತಾರೆ.


Click it and Unblock the Notifications











