Jothe Jotheyali: ಎಲ್ಲಾ ಗೊತ್ತಿದ್ದೂ ನಾಟಕ ಮಾಡುತ್ತಿರುವ ಆರ್ಯ: ಝೇಂಡೇಗಾಗಿ ಹೆಂಡತಿಯನ್ನೇ ಬಿಡುತ್ತಾನಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಬ್ಬು, ಅನುಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಆದರೆ, ಇದು ಅನುಗೆ ಇಷ್ಟವಿಲ್ಲ.
ಅನು ಅಷ್ಟೇ ಅಲ್ಲದೇ ಮನೆಯಲ್ಲಿ ಯಾರೂ ಅನುಳನ್ನು ಕಳಿಸಲು ತಯಾರಿಲ್ಲ. ಸುಬ್ಬು ಮಾತ್ರ ತನ್ನ ಮಗಳು ಇನ್ನು ಈ ಮನೆಯಲ್ಲಿ ಕಷ್ಟ ಅನುಭವಿಸುವುದು ಬೇಡ ಎಂದು ನಿರ್ಧಾರ ಮಾಡಿದ್ದಾನೆ.
ಆರ್ಯನನ್ನು ತನ್ನ ಮಗಳನ್ನು ಕರೆದುಕೊಂಡು ಹೋಗಬಹುದೇ ಎಂದು ಪರ್ಮಿಷನ್ ಕೇಳುತ್ತಾನೆ. ಇದಕ್ಕೆ ಆರ್ಯ ನಿಮ್ಮ ಮಗಳು ನೀವು ಕರೆದುಕೊಂಡು ಹೋಗಿ ಎಂದು ಸುಲಭವಾಗಿ ಹೇಳುತ್ತಾನೆ.

ಬುದ್ಧಿ ಹೇಳಿದ ಶಾರದಾ
ಅನುಗೆ ಆರ್ಯನ ಮಾತುಗಳು ತುಂಬಾ ಹರ್ಟ್ ಆಗುತ್ತವೆ. ಕೊನೆಯ ಬಾರಿಗೆ ಆರ್ಯ ಸರ್ ಹೇಳಿದಂತೆ ನಾನು ಇಲ್ಲೇ ಇರುವುದಾ ಇಲ್ಲಾ ಅಪ್ಪನ ಮನೆಗೆ ಹೋಗುವುದಾ ಎಂದು ಕೇಳುತ್ತಾಳೆ. ಆಗ ಆರ್ಯ ಉತ್ತರಿಸುವ ಮುನ್ನವೇ ಶಾರದಾ ದೇವಿ ಮಾತನಾಡುತ್ತಾರೆ. ಅನು ನಿಮ್ಮ ಮಗಳು ಹೇಗೋ ಹಾಗೆಯೇ ನಮ್ಮ ಮನೆಯ ಮಗಳು ಹೌದು. ನಾವ್ಯಾರೂ ಅನುಳನ್ನು ಕಳಿಸುವುದಕ್ಕೆ ಬಯಸೊಲ್ಲ. ಅವಳು ಇಲ್ಲೇ ಇರಲಿ ಎಂದು ಹೇಳುತ್ತಾಳೆ. ಆದರೆ, ಈ ಮಾತಿಗೆ ಒಪ್ಪದ ಸುಬ್ಬು ಇಲ್ಲ ಅನು ನನ್ನ ಮಗಳು ನನ್ನ ಜೊತೆಗೆ ಬರುತ್ತಾಳೆ ಎನ್ನುತ್ತಾನೆ.

ಸುಬ್ಬುಗೆ ಎದೆನೋವು
ಅಲ್ಲದೇ, ಅನು ಕೂಡ ಇದಕ್ಕೆ ಒಪ್ಪಿದ್ದಾಳೆ. ಅವಳು ನನ್ನ ಜೊತೆಗೆ ಬರುತ್ತಾಳೆ ಎಂದು ಹೇಳುವಾಗ ಸುಬ್ಬುಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಮನೆಯಲ್ಲಿ ಎಲ್ಲರೂ ಗಾಬರಿಯಾಗುತ್ತಾರೆ. ಸುಬ್ಬು ಸುಧಾರಿಸಿಕೊಳ್ಳುವಾಗ ಆರ್ಯ ಮಾತನಾಡುತ್ತಾನೆ. ಯಾರು ಏನೇ ಹೇಳಿದರೂ ಸುಬ್ಬು ಜೊತೆಗೆ ಅನುಳನ್ನು ಕಳಿಸಿಕೊಡುವುದಕ್ಕೆ ನನ್ನ ಒಮ್ಮತವಿದೆ. ಅನು ಹಾಗೂ ಸುಬ್ಬು ಹೊರಡುವುದಕ್ಕೆ ವ್ಯವಸ್ಥೆ ಮಾಡಿ ಎಂದು ಹೇಳಿ ಮೇಲೆ ಹೊರಟು ಬಿಡುತ್ತಾನೆ. ಇದರಿಂದ ಪುಷ್ಪಾ, ಶಾರದಾ, ಹರ್ಷ, ಮಾನ್ಸಿ ಎಲ್ಲರೂ ಒಂದು ಕ್ಷಣ ಶಾಕ್ ಆಗುತ್ತಾರೆ. ಏನು ಮಾಡುವುದು ಎಂದೇ ತಿಳಿಯುವುದಿಲ್ಲ.

ಕೋಪ ಮಾಡಿಕೊಂಡಿರುವ ಪುಷ್ಪಾ
ಇನ್ನು ಆರಾಧನಾ, ಸುಬ್ಬುಗೆ ಬುದ್ಧಿ ಹೇಳುತ್ತಾಳೆ. ಗಂಡನನ್ನು ಕಳೆದುಕೊಂಡು ನಾನು ಪಡಬಾರದಾ ಕಷ್ಟವನ್ನು ಪಡುತ್ತಿದ್ದೇನೆ. ಅನು, ತನ್ನ ಗಂಡ ಇಲ್ಲ ಎಂದು ಇಷ್ಟು ದಿನ ಕಷ್ಟಪಟ್ಟಿದ್ದೇ ಸಾಕು. ಇನ್ನಾದರೂ ಅವಳ ಗಂಡನ ಜೊತೆಗೆ ಇರಲಿ. ನೀವು ನಿಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುವುದು ಸರಿಯಲ್ಲ ಎಂದು ಹೇಳುತ್ತಾಳೆ. ಆದರೆ ಸುಬ್ಬು ಇದಕ್ಕೆಲ್ಲಾ ಏನನ್ನೂ ಮಾತನಾಡುವುದಿಲ್ಲ. ಶಾರದಾ, ಮಾನ್ಸಿ ಎಲ್ಲರೂ ಸುಬ್ಬುಗೆ ಬುದ್ಧಿ ಹೇಳುತ್ತಿರುತ್ತಾರೆ. ಆದರೆ, ಪುಷ್ಪಾ ಮಾತ್ರ ಕೋಪ ಮಾಡಿಕೊಳ್ಳುತ್ತಾಳೆ.

ಬೇಕಂತಲೇ ನಾಟಕ ಮಾಡುತ್ತಿರುವ ಆರ್ಯ
ಇತ್ತ ಆರ್ಯನಿಗೆ ಮೀರಾ ಕಾಲ್ ಮಾಡುತ್ತಾಳೆ. ಆಫೀಸಿಗೆ ಬರುವುದಕ್ಕೆ ಆಗುತ್ತಾ ಎಂದು ಕೇಳುತ್ತಾಳೆ. ಅದಕ್ಕೆ ಆರ್ಯ ಹ್ಞೂಂ ಎಂದು ಹೇಳಿ ಆಫೀಸಿಗೆ ಹೊರಡುತ್ತಾನೆ. ಅನು, ಆರ್ಯ ಆಫೀಸಿಗೆ ಹೋಗುವುದನ್ನು ನೋಡಿ ಅಳುತ್ತಾಳೆ. ಅಪ್ಪನ ಜೊತೆಗೆ ಹೋಗಲು ಒಪ್ಪುವ ಅನು ರೂಮಿಗೆ ಹೋಗಿ ತನ್ನ ಹಳೆಯ ನೆನಪುಗಳನ್ನು ನೆನಪು ಮಾಡಿಕೊಂಡು ಅಳುತ್ತಿರುತ್ತಾಳೆ. ಇತ್ತ ಆರ್ಯ, ಅನು ನೀನು ನನ್ನ ಜೊತೆಗಿದ್ದರೆ ನಾನು ಝೇಂಡೇ ಜೊತೆಗೆ ಇರಲು ಆಗುವುದಿಲ್ಲ. ನನ್ನ ಜೊತೆಗೆ ಬಂದಾಗಿನಿಂದ ನೀನು ಸುಖವಾಗಿಲ್ಲ. ಹಾಗಾಗಿ ನೀನು ವಠಾರಕ್ಕೆ ಹೋಗು ಎಂದು ನೊಂದುಕೊಂಡು ಒಬ್ಬನೇ ಬೇಸರ ಮಾಡಿಕೊಳ್ಳುತ್ತಾನೆ.


Click it and Unblock the Notifications











