Jothe Jotheyali: ಮನೆಯಿಂದ ಎಸ್ಕೇಪ್ ಆಗಿ ಝೇಂಡೆನೇ ಅನುಗೆ ಆಕ್ಸಿಡೆಂಟ್ ಮಾಡಿಸಿದ್ದಾನಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ, ಹರ್ಷನಿಗೆ ಏನೋ ಆಗಿದೆ ಎಂದು ಮನೆಯಿಂದ ಓಡೋಡಿ ಬರುತ್ತಾಳೆ. ಕೆಲಸದಾಕೆ ವೇಷದಲ್ಲಿದ್ದ ಮಾನ್ಸಿ ಇದ್ದಕ್ಕದ್ದ ಹಾಗೆ ಓಡಿ ಬಂದಿದ್ದನ್ನು ನೋಡಿ ಮೀರಾ ಗಾಬರಿಯಾಗುತ್ತಾಳೆ. ಹರ್ಷನನ್ನು ನೋಡಿದ ಕೂಡಲೇ ಮಾನ್ಸಿ ತಬ್ಬಿಕೊಂಡು ಮಾತನಾಡಿಸುತ್ತಾಳೆ. ನಿನಗೇನು ಆಗಿಲ್ಲ ಅಲ್ವಾ ಎಂದು ಕಾಳಜಿ ವಹಿಸುತ್ತಾಳೆ. ಹರ್ಷ ತನಗೇನು ಆಗಿಲ್ಲ ಎಂದು ಹೇಳುತ್ತಾನೆ.

ಮೀರಾ ಈ ದೃಶ್ಯವನ್ನು ನೋಡಿ ಬೇಸರ ಮಾಡಿಕೊಳ್ಳುತ್ತಾಳೆ. ಪ್ರತಿಯೊಬ್ಬರಿಗೂ ಕಾಳಜಿ ತೋರಿಸುವವರು ಒಬ್ಬರು ಇರಬೇಕು. ಒಂಟಿಯಾಗಿರಬಾರದು ಎಂದು ಮನದಲ್ಲೇ ಆಲೋಚಿಸುತ್ತಾಳೆ. ಇತ್ತ ಶಾರದಾ ದೇವಿ ಸಂಜೀವಿನಿ ಅನ್ನು ಪ್ರಶ್ನೆ ಮಾಡುತ್ತಾಳೆ. ಅನುಗೆ ಆಕ್ಸಿಡೆಂಟ್ ಆಗುವುದು ನಿನಗೆ ಮೊದಲೇ ಹೇಗೆ ಗೊತ್ತಾಯ್ತು. ನೀನು ಮತ್ತು ಆರಾಧನಾ ಇಬ್ಬರು ಅನು ಬಗ್ಗೆ ಮಾತನಾಡಿದ್ದು ನಿಜಾನಾ..? ಎಂದು ಪ್ರಶ್ನೆ ಮಾಡುತ್ತಾಳೆ.

Jothe Jotheyali Serial 14th April episode written update

ಸಂಜೀವಿನಿ ಮಾತ್ರ ಶಾರದಾಳ ಮನಸ್ಸನ್ನು ಡೈವರ್ಟ್ ಮಾಡುವ ಸಲುವಾಗಿ, ನಿಮ್ಮ ಮನೆಯ ಸೊಸೆ ಮಾನ್ಸಿ ಮನೆ ಕೆಲಸದವಳ ವೇಷದಲ್ಲಿ ಇದ್ದದ್ದು ಏಕೆ..? ಅಂತಹದ್ದು ಈ ಮನೆಗೆ ಏನಾಗಿದೆ ಎಂದು ಮರು ಪ್ರಶ್ನೆ ಮಾಡುತ್ತಾಳೆ. ಶಾರದಾ ದೇವಿ, ಆ ವಿಚಾರವನ್ನು ಬಿಡು. ಮೊದಲು ನಾನು ಕೇಳಿದ್ದಕ್ಕೆ ಉತ್ತರ ಕೊಡು ಎಂದು ಹೇಳುತ್ತಾಳೆ. ಆದರೆ, ಸಂಜೀವಿನಿ ಇದಕ್ಕೆ ಉತ್ತರ ನೀಡಲು ಬಯಸುವುದಿಲ್ಲ. ಏನೇನೋ ಹೇಳಿ ಸಮಜಾಯಿಶಿ ನೀಡಲು ಯತ್ನಿಸುತ್ತಾಳೆ.

ಶಾರದಾ ನನ್ನ ಮನೆಯ ಸೊಸೆಯನ್ನು ನಾನು ವಿಚಾರಿಸಿಕೊಳ್ಳುತ್ತೇನೆ. ನೀನು ಅನವಶ್ಯಕವಾದ ವಿಚಾರಗಳಿಗೆ ತಲೆ ಹಾಕಬೇಡ ಎಂದು ಹೇಳುತ್ತಾಳೆ. ಆಸ್ಪತ್ರೆಯಲ್ಲಿ ವೈದ್ಯರು ಅನು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳುತ್ತಾರೆ. ಅನುಗೆ ಸ್ವಲ್ಪ ಶಾಕ್ ಆಗಿದೆ. ಹೆಚ್ಚು ಮಾತನಾಡಿಸಬೇಡಿ. ತೊಂದರೆ ಕೊಡಬೇಡಿ ಎಂದು ಹೇಳುತ್ತಾರೆ.

Jothe Jotheyali Serial 14th April episode written update

ವೈದ್ಯರು ಹೋದ ಮೇಲೆ ಮಾನ್ಸಿ, ಮೀರಾ ಹಾಗೂ ಹರ್ಷ ಖುಷಿ ಪಡುತ್ತಾರೆ. ನಂತರ ಅತ್ತಿಗೆ ಆರೋಗ್ಯದ ಬಗ್ಗೆ ವಿಚಾರಿಸಿದೆವು. ಆದರೆ, ಮಗು ಬಗ್ಗೆ ವಿಚಾರಿಸಲಿಲ್ಲ. ಅನು ಅತ್ತಿಗೆ ಹೊಟ್ಟೆಯಲ್ಲಿರುವ ಮಗು ಕ್ಷೇಮವಾಗಿದೆಯಾ ಎಂದು ವೈದ್ಯರನ್ನು ಕೇಳಬೇಕು ಎನ್ನುತ್ತಾನೆ. ಆಗ ಮೀರಾ ಹಾಗೂ ಮಾನ್ಸಿ ಏನೂ ಆಗಿರುವುದಿಲ್ಲ. ಹಾಗೇನಾದರೂ ಇದ್ದಿದ್ದರೆ, ವೈದ್ಯರು ಹೇಳಿರುತ್ತಿದ್ದರು ಎಂದು ಸಮಾಧಾನ ಮಾಡುತ್ತಾರೆ.

ಇತ್ತ ವಠಾರದಲ್ಲಿ ಪುಷ್ಪಾ ಹಾಗೂ ಸುಬ್ಬು ಗಾಬರಿಯಾಗಿರುತ್ತಾರೆ. ಮೊದಲೇ ಜೋಗ್ತವ್ವ ಅನು ಹಾಗೂ ಮಗುವಿಗೂ ಅಪಾಯವಿದೆ. ಮಗಳು ಹಾಗೂ ಮೊಮ್ಮಗುವನ್ನು ಕಾಪಾಡಿಕೊ ಎಂದು ಜೋಗ್ತವ್ವ ಹೇಳಿರುತ್ತಾಳೆ. ಈ ಆತಂಕದಲ್ಲೇ ಇರುವಾಗಲೇ ಈಗ ಅನುಗೆ ಆಕ್ಸಿಡೆಂಟ್ ಆಗಿದೆ. ಇದರಿಂದ ಪುಷ್ಪಾ ಇನ್ನಷ್ಟು ಗಾಬರಿಯಾಗಿದ್ದಾಳೆ. ಹೀಗಾಗಿ ಸುಬ್ಬು ಮತ್ತು ಪುಷ್ಪಾ ಆಸ್ಪತ್ರೆಗೆ ಹೊರಟಿದ್ದಾಳೆ.

Jothe Jotheyali Serial 14th April episode written update

ಸುಬ್ಬು, ಪುಷ್ಪಾಗೆ ರಮ್ಯಾ ಹಾಗೂ ಸಂಪತ್ ಎದುರಾಗಿದ್ದು, ಇಬ್ಬರಿಗೂ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿದು ಸಂಪತ್ ತನ್ನಿಂದಲೇ ಇದೆಲ್ಲಾ ಆಗಿದೆ ಎಂದು ಬೇಸರ ಪಟ್ಟುಕೊಂಡಿದ್ದಾನೆ. ಅನುಗೆ ರಮ್ಯಾ ಮದುವೆ ಬಗ್ಗೆ ಫೋನ್ ನಲ್ಲಿ ಮೆಸೇಜ್ ಮಾಡಿದ್ದಕ್ಕೆ ಅನು ಬೇಗ ಹೊರಟು ಬಂದಿದ್ದಾಳೆ. ಹಾಗಾಗಿ ಈ ಅಪಘಾತವಾಗಿದೆ ಎಂದು ಗಾಬರಿಯಾಗಿದ್ದಾನೆ.

ಇನ್ನು ಝೇಂಡೇ ಅನ್ನು ಕೂಡಿ ಹಾಕಿದ್ದ ರೂಮಿನಲ್ಲಿ ಇರುವುದಿಲ್ಲ. ಈ ಬಗ್ಗೆ ಹೊಸಮನಿ, ಶಾರದಾ ದೇವಿಗೂ ಹಾಗೂ ಸಂಜೀವಿನಿಗೂ ಹೇಳುತ್ತಾನೆ. ಝೇಂಡೇ ಅನುಗೆ ಅಪಘಾತವನ್ನು ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಹಾಗಾದರೆ, ಅನು ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ಯಾ? ಮುಂದೆ ಅನು ಪರಿಸ್ಥಿತಿ ಏನು ಎಂಬ ಕುತೂಹಲ ಮೂಡಿದೆ.

More from Filmibeat

English summary
Jothe Jotheyali Serial 14th April episode written update. Here Is details About Jhende escapes from house and makes accident for anu. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X